ನವದೆಹಲಿ: ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಬೂಸ್ಟರ್ ಡೋಸ್ ಲಸಿಕೆ ನೀಡಲು ಒಪ್ಪಿಗೆ ನೀಡಿದೆ. ಜುಲೈ 15 ರಿಂದ ಉಚಿತ ಬೂಸ್ಟರ್ ಡೋಸ್ ಕೊರೊನಾ ಲಸಿಕೆ ನೀಡಲಾಗುವುದು. ಆಜಾದಿ ಕಾ ಅಮೃತ ಮಹೋತ್ಸವದ ಪ್ರಯುಕ್ತ ಉಚಿತ ಬೂಸ್ಟರ್ ಡೋಸ್ ನೀಡಲಾಗುವುದು. ಇಲ್ಲಿಯವರೆಗೆ, 18-59 ವಯೋಮಾನದ 77 ಕೋಟಿ ಜನರಿಗೆ ನೀಡುವ ಗುರಿಯನ್ನು ಹೊಂದಿದೆ. 60 ಮತ್ತು ಅದಕ್ಕಿಂತ ಮೇಲ್ಪಪಟ್ಟವರಿಗೆ ಅಂದಾಜು 16 ಕೋಟಿ ಅರ್ಹ ಜನರಿಗೆ ಸುಮಾರು 26 ಪ್ರತಿಶತ ಮತ್ತು ಆರೋಗ್ಯ ಮತ್ತು ಮುಂಚೂಣಿಯ ಕಾರ್ಯಕರ್ತರು ಬೂಸ್ಟರ್ ಡೋಸ್ ಅನ್ನು ಸ್ವೀಕರಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಸುಮಾರಷ್ಟು ಜನ ಒಂಬತ್ತು ತಿಂಗಳ ಹಿಂದೆ ಎರಡನೇ ಡೋಸ್ ಅನ್ನು ಪಡೆದಿದ್ದಾರೆ. ICMR (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಮತ್ತು ಇತರ ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳಲ್ಲಿನ ಅಧ್ಯಯನಗಳು ಪ್ರಾಥಮಿಕ ವ್ಯಾಕ್ಸಿನೇಷನ್ ಆರು ತಿಂಗಳ ನಂತರ ಎರಡೂ ಡೋಸ್ ಗಳು ಕೋವಿಡ್-19ನ ಅಪಾಯವನ್ನು ಕಡಿಮೆ ಮಾಡುವುದು ಎಂದು ಸೂಚಿಸಿವೆ. ಬೂಸ್ಟರ್ ನೀಡುವುದರಿಂದ ಕೊರೊನಾದಿಂದ ಇನ್ನಷ್ಟು ರಕ್ಷಣೆಯನ್ನು ಮಾಡುವುದು ಎಂದು ಹೇಳಿದ್ದಾರೆ.
As part of #AzadiKaAmritMahotsav celebrations, free COVID-19 Precaution Dose will be administered to all the citizens above 18 years of age at Government vaccination centres, from 15th July 2022 till the next 75 days.
I thank PM @NarendraModi Ji for this decision. pic.twitter.com/cCMmpLeWHN
— Dr Mansukh Mandaviya (@mansukhmandviya) July 13, 2022
ಆದ್ದರಿಂದ ಸರ್ಕಾರವು 75 ದಿನಗಳ ಕಾಲ ವಿಶೇಷ ಆಂದೋಲನವನ್ನು ಪ್ರಾರಂಭಿಸಲು ಯೋಜಿಸುತ್ತಿದೆ, ಈ ಅವಧಿಯಲ್ಲಿ 18 ರಿಂದ 59 ವರ್ಷ ವಯಸ್ಸಿನ ವ್ಯಕ್ತಿಗಳಿಗೆ ಜುಲೈ 15 ರಿಂದ ಸರ್ಕಾರಿ ಲಸಿಕಾ ಕೇಂದ್ರಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಬೂಸ್ಟರ್ ಡೋಸ್ ನ್ನು ನೀಡಲಾಗುವುದು ಎಂದು ಹೇಳಿದ್ದಾರೆ.
ಕೇಂದ್ರ ಆರೋಗ್ಯ ಸಚಿವಾಲಯವು ಕಳೆದ ವಾರ ಎಲ್ಲಾ ಫಲಾನುಭವಿಗಳಿಗೆ COVID-19 ಲಸಿಕೆಯ ಎರಡನೇ ಮತ್ತು ಮುನ್ನೆಚ್ಚರಿಕೆಯ ಡೋಸ್ ನಡುವಿನ ಅಂತರವನ್ನು ಒಂಬತ್ತರಿಂದ ಆರು ತಿಂಗಳವರೆಗೆ ಕಡಿಮೆ ಮಾಡಿದೆ. ವ್ಯಾಕ್ಸಿನೇಷನ್ ವೇಗವನ್ನು ಹೆಚ್ಚಿಸಲು ಮತ್ತು ಬೂಸ್ಟರ್ ಶಾಟ್‌ಗಳನ್ನು ಉತ್ತೇಜಿಸಲು, ಸರ್ಕಾರವು ಜೂನ್ 1 ರಂದು ದೇಶದ್ಯಾಂತ ‘ಹರ್ ಘರ್ ದಸ್ತಕ್ ಅಭಿಯಾನ 2.0’ ನ ಎರಡನೇ ಸುತ್ತನ್ನು ಪ್ರಾರಂಭಿಸಿತು. ಎರಡು ತಿಂಗಳ ಕಾರ್ಯಕ್ರಮವು ಪ್ರಸ್ತುತ ನಡೆಯುತ್ತಿದೆ.
Published On - 4:53 pm, Wed, 13 July 22