ಹೈದರಾಬಾದ್: ನೆರೆಯ ಹೈದರಾಬಾದಿನಲ್ಲಿ ನಗರ ಸಂಚಾರಿ ಮೆಟ್ರೋ ರೈಲು ಇನ್ನುಮುಂದೆ 6 ನಿಮಿಷ ವೇಗವಾಗಿ ಚಲಿಸಲಿದೆ! ಇದರೊಂದಿಗೆ ಹೈದರಾಬಾದ್ ಮೆಟ್ರೋ ರೈಲು ಇನ್ನು ಗರಿಷ್ಠ ಸಾಮರ್ಥ್ಯದೊಂದಿಗೆ ಗರಿಷ್ಠ ವೇಗದಲ್ಲಿ ಸಂಚರಿಸಲಿದೆ. ಅಂದರೆ ಪ್ರಸ್ತುತ ಗಂಟೆಗೆ 70 ಕಿಮೀ ವೇಗದಲ್ಲಿ ಸಂಚರಿಸುತ್ತಿದ್ದು, ಮುಂದೆ 80 KMPH ನಲ್ಲಿ ಓಡಲಿದೆ. ಇದಕ್ಕೆ ಅಗತ್ಯವಿರುವ ಸುರಕ್ಷಾ ಪ್ರಮಾಣ ಪತ್ರವನ್ನು ಮೆಟ್ರೋ ಸುರಕ್ಷಾ ನಿಗಮ (Commissioner for Metro Rail Safety -CMRS) ನೀಡಿದೆ. ಅಂದಹಾಗೆ ಹೈದರಾಬಾದಿನಲ್ಲಿ ನಗರ ಸಂಚಾರಿ ಮೆಟ್ರೋ ರೈಲು ಉಸ್ತುವಾರಿಯನ್ನು L&T Metro Rail Hyderabad Limited (L&TMRHL) ನಿಭಾಯಿಸುತ್ತಿದೆ (Hyderabad Metro Rail Full Speed).
ಈ ಸಂಬಂಧ ಎಲ್ ಅಂಡ್ ಟಿ ಸಂಸ್ಥೆಯು ತನ್ನ Metro Rail system ನಲ್ಲಿ ಕೆಲವೊಂದು ಮಾರ್ಪಾಡುಗಳನ್ನು ಮಾಡಿಕೊಂಡಿದ್ದು, ತನ್ನ ಸಾಮರ್ಥ್ಯವನ್ನು ಮತ್ತಷ್ಟು ಮೊನಚುಗೊಳಿಸಿದೆ. ರೈಲ್ವೆ ಸಿಗ್ನಲಿಂಗ್ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಮಾಡಿಕೊಂಡಿದ್ದು, ಸಂಚಾರ ವೇಗಕ್ಕೆ ಒತ್ತು ಕೊಟ್ಟಿದೆ. ಕಂಪ್ಯೂಟರ್ ಸಾಫ್ಟ್ವೇರ್ನಲ್ಲಿ ಆಧುನಿಕತೆ ಅಳವಡಿಸಿಕೊಂಡಿದೆ ಎಲ್ ಅಂಡ್ ಟಿ ಸಂಸ್ಥೆ. ಕಳೆದ ತಿಂಗಳು ಪ್ರಾಯೋಗಿಕ ಸಂಚಾರದ ನಂತರ ಹೈದರಾಬಾದ್ ಮೆಟ್ರೋ ರೈಲು ಪೂರ್ಣ ವೇಗಕ್ಕೆ ಅನುಮೋದನೆ ನೀಡಲಾಗಿದೆ.
ಇದರಿಂದ ಮುಖ್ಯವಾಗಿ ಅಮೂಲ್ಯ ಸಮಯ ಉಳಿತಾಯವಾಗುತ್ತದೆ. ರೈಲು ಪ್ರಯಾಣಿಕರ ಸಮಯ ಉಳಿತಾಯವಾಗುವುದರ ಜೊತೆಗೆ ಸಂಸ್ಥೆಯ ಸಾಮರ್ಥ್ಯ ಹೆಚ್ಚಾಗಲಿದೆ. ವಿವಿಧ ಸಂಚಾರ ಮಾರ್ಗಗಳಿಗೆ ಅನುಗುಣವಾಗಿ ಹೈದರಾಬಾದ್ ಮೆಟ್ರೋ ರೈಲು ಸಂಚಾರ ಸಮಯ ಇನ್ನುಮುಂದೆ 6 ನಿಮಿಷ, 4 ನಿಮಿಷ ಮತ್ತು 2 ನಿಮಿಷ ತಗ್ಗಲಿದೆ.
ಇದನ್ನೂ ಓದಿ:
K Annamalai: ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ನಾಯಕ ಅಣ್ಣಾಮಲೈಗೆ ವೈ ಶ್ರೇಣಿ ಭದ್ರತೆ, ಅವರಿಗಿದ್ದ ಭೀತಿ ಏನು?
ಇದನ್ನೂ ಓದಿ:
Digital Discount Days: ಡಿಜಿಟಲ್ ಡಿಸ್ಕೌಂಟ್ ಡೇಸ್ ಧಮಾಕಾ! ರಿಲಯನ್ಸ್ ಡಿಜಿಟಲ್ನಿಂದ ಭಾರೀ ರಿಯಾಯಿತಿ! ವಿವರ ಇಲ್ಲಿದೆ