ಪೆಟ್ರೋಲ್ ಬೆಲೆ ತುಟ್ಟಿಯಾಯ್ತು ಅಂತಾ ವಿದ್ಯುತ್ ಇಲಾಖೆಯ ಈ ನೌಕರ ತನ್ನ ಕರ್ತವ್ಯ ನಿಭಾಯಿಸಲು ಏನು ಮಾಡಿದ್ದಾರೆ ನೋಡಿ!
ತೈಲ ಬೆಲೆ ಏರಿಕೆ ನಿಯಂತ್ರಿಸದಿರುವುದನ್ನು ಪ್ರತಿಭಟಿಸಿದಂತೆಯೂ ಇರುತ್ತದೆ ಎಂದು ಸೀದಾ ಕುದುರೆಯೇರಿ ವಿದ್ಯುತ್ ಬಿಲ್ ವಿತರಣೆ ಕಾರ್ಯಕ್ಕೆ ಮುಂದಾಗಿದ್ದಾರೆ. ಹಳ್ಳಿಯಿಂದ ಹಳ್ಳಿಗೆ ತೆರಳಿ, ವಿದ್ಯುತ್ ಬಿಲ್ ಪಾವತಿ ಕಾರ್ಯವನ್ನೂ ಪೂರ್ಣಗೊಳಿಸಿಕೊಂಡು ಬಂದಿದ್ದಾರೆ. ಒಟ್ಟಿನಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಬೆಲೆಗಳು ತುಟ್ಟಿಯಾಗಿದ್ದು ಜನಸಾಮಾನ್ಯರು ಹೈರಾಣಗೊಂಡಿದ್ದಾರೆ.
ಶಿವಹರ (ಬಿಹಾರ): ದೇಶದಲ್ಲಿ ಇಂಧನ ಬೆಲೆ ಗಗನಕ್ಕೇರಿ ಯಾವುದೋ ಕಾಲವಾಯ್ತು ಬಿಡಿ. ಆತಂಕದ ವಿಚಾರವೆಂದರೆ ಪೆಟ್ರೋಲ್ ಬೆಲೆ ಇಳಿಕೆ ಎಂಬುದು ಗಗನಕುಸುಮವಾಗಿದ್ದು, ಅದು ಗ್ರಾಹಕರ ಕೈಗೆ ಸಿಗದೆ ಎತ್ತರೆತ್ತರಕ್ಕೆ ಆಕಾಶದಲ್ಲಿ ಗಿರಕಿ ಹೊಡೆಯುತ್ತಿದೆ. ಪರಿಸ್ಥಿತಿ ಹೀಗಿರುವಾಗ ಜನಸಾಮಾನ್ಯರು ನಾನಾ ರೂದಲ್ಲಿ ತಮ್ಮಾಕ್ರೋಶವನ್ನು ಹೊರಹಾಕುತ್ತಿದ್ದಾರೆ. ಕೆಲವು ಸೈರಿಸಿಕೊಂಡು ಹೇಗೋ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಇನ್ನು ಕೆಲವರು ಉದ್ಯೋಗನಿಮಿತ್ತಂ ಅನಿವಾರ್ಯವಾಗಿ ವಾಹನ ಬಳಸಬೇಕಾಗಿದ್ದು, ತೈಲದ ಮೇಲೆ ಅವಲಂಬಿತರಾಗಿದ್ದಾರೆ. ಉತ್ತರ ಭಾರತದ ಬಿಹಾರದಲ್ಲಿ ವಿದ್ಯುತ್ ಇಲಾಖೆಯ ಈ ನೌಕರ ತನ್ನ ಕರ್ತವ್ಯ ನಿಭಾಯಿಸಲು ಏನು ಮಾಡಿದ್ದಾರೆ ನೋಡಿ!
ಆತ ಬಿಹಾರ ರಾಜ್ಯದಲ್ಲಿ ವಿದ್ಯುತ್ ಇಲಾಖೆಯ ನೌಕರ. ತಮ್ಮ ಇಲಾಖೆಯ ವತಿಯಿಂದ ಗ್ರಾಹಕರಿಗೆ ವಿದ್ಯುತ್ ಬಿಲ್ ಕೊಡುವುದು ಅವರ ಕರ್ತವ್ಯ. ಆದರೆ ಪೆಟ್ರೋಲ್ ಬೆಲೆ ಹೆಚ್ಚಾಗುತ್ತಿದ್ದು, ವಾಹನವನ್ನು ಅವಲಂಬಿಸುವುದು ದುಬಾರಿ ಆಗಿದೆ. ಹಾಗಾಗಿ ತೈಲ ಬೆಲೆ ಏರಿಕೆ ನಿಯಂತ್ರಿಸದಿರುವುದನ್ನು ಪ್ರತಿಭಟಿಸಿದಂತೆಯೂ ಇರುತ್ತದೆ ಎಂದು ಸೀದಾ ಕುದುರೆಯೇರಿ ವಿದ್ಯುತ್ ಬಿಲ್ ವಿತರಣೆ ಕಾರ್ಯಕ್ಕೆ ಮುಂದಾಗಿದ್ದಾರೆ. ಹಳ್ಳಿಯಿಂದ ಹಳ್ಳಿಗೆ ತೆರಳಿ, ವಿದ್ಯುತ್ ಬಿಲ್ ಪಾವತಿ ಕಾರ್ಯವನ್ನೂ ಪೂರ್ಣಗೊಳಿಸಿಕೊಂಡು ಬಂದಿದ್ದಾರೆ. ಒಟ್ಟಿನಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅನಿಲ ಬೆಲೆಗಳು ತುಟ್ಟಿಯಾಗಿದ್ದು ಜನಸಾಮಾನ್ಯರು ಹೈರಾಣಗೊಂಡಿದ್ದಾರೆ.
ಬಿಹಾರ ರಾಜ್ಯದ ಶಿವಹರ ಜಿಲ್ಲೆಯ ಬಿಷಣಪುರ್ ಕಿಶನದೇವ್ ಗ್ರಾಮದ ಅಭಿಜೀತ್ ತಿವಾರಿ ದಿನಾ ಬೆಳಗ್ಗೆ ತನ್ನ ಗ್ರಾಮದಿಂದ ಹೊರಟು ಸುತ್ತಮುತ್ತಲ ಗ್ರಾಮದ ವಿದ್ಯುತ್ ಗ್ರಾಹಕರಿಂದ ವಿದ್ಯುತ್ ಶುಲ್ಕ ಸಂಗ್ರಹಸಿಕೊಂಡು ಅದನ್ನು ಇಲಾಖೆಗೆ ಕಟ್ಟಿ ಬರುವ ಕಾಯಕ ಮಾಡುತ್ತಿದ್ದಾರೆ. ಆದರೆ ಇದಕ್ಕಾಗಿ ಅವರು ಇದುವರೆಗೂ ದ್ವಿಚಕ್ರ ವಾಹನ ಬಳಸುತ್ತಿದ್ದರಾದರೂ ಈಗ ತೈಲ ಬೆಲೆಗಳು ಏರಿಕೆಯಾಗಿರುವುದರಿಂದ ಅನಿವಾರ್ಯವಾಗಿ ವಾಹನ ಬಳಕೆಯನ್ನ ನಿಲ್ಲಿಸಿಬಿಟ್ಟಿದ್ದಾರೆ. ಅದರ ಬದಲು ಕುದುರೆಯೇರಿ ಗ್ರಾಮಗಳಿಗೆ ತಲುಪುತ್ತಿದ್ದಾರೆ. ಅಂದಹಾಗೆ ದಿನಗೂಲಿ ನೌಕರರನಾಗಿ ಅಭಿಜೀತ್ ತಿವಾರಿ ಬಿಹಾರದ ವಿದ್ಯತ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತಿದ್ದಾರೆ.
ಇದನ್ನೂ ಓದಿ:
Galaxy M33 5G: 6000mAh ಬ್ಯಾಟರಿ, 50MP ಕ್ಯಾಮೆರಾ: ಭಾರತಕ್ಕೆ ಕಾಲಿಟ್ಟ ಬಜೆಟ್ ಬೆಲೆಯ ಗ್ಯಾಲಕ್ಸಿ M33 5G
One Plus 10 Pro: 66,999 ರೂ. ಬೆಲೆಯ ಹೊಸ ಒನ್ಪ್ಲಸ್ 10 ಪ್ರೊ ಫೋನ್ ಖರೀದಿಸಬಹುದೇ?
Published On - 6:24 pm, Sat, 2 April 22