Indigo: ಟೇಕಾಫ್ ಆಗುವಾಗ ತಾಂತ್ರಿಕ ಸಮಸ್ಯೆ; ರಾಂಚಿಯಲ್ಲಿ ಇಂಡಿಗೋ ವಿಮಾನ ತುರ್ತು ಲ್ಯಾಂಡಿಂಗ್

ಇಂಡಿಗೋ ವಿಮಾನದ ಎಸಿಯಲ್ಲಿ ತೊಂದರೆ ಉಂಟಾಗಿದ್ದರಿಂದ ವಿಮಾನ ಟೇಕಾಫ್ ಆಗುತ್ತಿದ್ದಂತೆ ಅದು ಕೆಲಸ ಮಾಡುವುದನ್ನು ನಿಲ್ಲಿಸಿತು. ಆದ್ದರಿಂದ, ರಿಪೇರಿ ಕಾರ್ಯಗಳಿಗಾಗಿ ವಿಮಾನವನ್ನು ಲ್ಯಾಂಡ್ ಮಾಡಲಾಗಿದೆ.

Indigo: ಟೇಕಾಫ್ ಆಗುವಾಗ ತಾಂತ್ರಿಕ ಸಮಸ್ಯೆ; ರಾಂಚಿಯಲ್ಲಿ ಇಂಡಿಗೋ ವಿಮಾನ ತುರ್ತು ಲ್ಯಾಂಡಿಂಗ್
ಇಂಡಿಗೋ ವಿಮಾನ
Follow us
| Updated By: ಸುಷ್ಮಾ ಚಕ್ರೆ

Updated on:Apr 02, 2022 | 5:46 PM

ಕೊಲ್ಕತ್ತಾ: ಕೋಲ್ಕತ್ತಾಗೆ ಹೊರಟಿದ್ದ ವಿಮಾನವು ರಾಂಚಿ ವಿಮಾನ ನಿಲ್ದಾಣದಲ್ಲಿ (Ranchi Airport) ಟೇಕಾಫ್ ಆಗುವಾಗ ತಾಂತ್ರಿಕ ದೋಷವನ್ನು ಅನುಭವಿಸಿದ ಹಿನ್ನೆಲೆಯಲ್ಲಿ ಆ ವಿಮಾನವನ್ನು ಮತ್ತೆ ಲ್ಯಾಂಡ್ ಮಾಡಲಾಯಿತು. 72 ಆಸನಗಳಿದ್ದ ಇಂಡಿಗೋ ವಿಮಾನದಲ್ಲಿ (Indigo Flight) 62 ಪ್ರಯಾಣಿಕರಿದ್ದರು. ಈ ವಿಮಾನ ಬೆಳಗ್ಗೆ ರಾತ್ರಿ 9 ಗಂಟೆಗೆ ಟೇಕ್ ಆಫ್ ಆಗಬೇಕಿತ್ತು. ಆದರೆ, ತಾಂತ್ರಿಕ ಸಮಸ್ಯೆಯಿಂದ ಮತ್ತೆ ಲ್ಯಾಂಡ್ ಆಗಿದ್ದು, ತಡವಾಗಿ ಟೇಕಾಫ್ ಆಗಲಿದೆ ಎಂದು ಇಂಡಿಗೋ ಏರ್​ಲೈನ್ಸ್​ ಹೇಳಿದೆ.

“ವಿಮಾನದ ಹವಾನಿಯಂತ್ರಣದಲ್ಲಿ ತೊಂದರೆ ಉಂಟಾಗಿದ್ದರಿಂದ ವಿಮಾನ ಟೇಕಾಫ್ ಆಗುತ್ತಿದ್ದಂತೆ ಅದು ಕೆಲಸ ಮಾಡುವುದನ್ನು ನಿಲ್ಲಿಸಿತು. ಆದ್ದರಿಂದ, ರಿಪೇರಿ ಕಾರ್ಯಗಳಿಗಾಗಿ ವಿಮಾನವನ್ನು ಲ್ಯಾಂಡ್ ಮಾಡಲಾಗಿದೆ” ಎಂದು ರಾಂಚಿ ವಿಮಾನ ನಿಲ್ದಾಣದ ನಿರ್ದೇಶಕ ವಿನೋದ್ ಶರ್ಮಾ ಹೇಳಿದ್ದಾರೆ. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಕೂಡ ಅವರು ತಿಳಿಸಿದ್ದಾರೆ.

ನಿರಂತರ ಸ್ಥಿರ ವಿಮಾನ ಕಾರ್ಯಾಚರಣೆಗಳ ದೃಷ್ಟಿಯಿಂದ ಪೈಲಟ್‌ಗಳ ವೇತನವನ್ನು ಶೇಕಡಾ ಎಂಟು ರಷ್ಟು ಹೆಚ್ಚಿಸಲಾಗಿದೆ ಎಂದು ಇಂಡಿಗೋ ಗುರುವಾರ ಪ್ರಕಟಿಸಿತ್ತು. ಕೊವಿಡ್ ಅಟ್ಟಹಾಸ ಕಡಿಮೆಯಾಗಿದ್ದರಿಂದ ಮಾರ್ಚ್ 27ರಂದು ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನ ಸೇವೆಗಳು ಪುನರಾರಂಭಗೊಂಡಿದ್ದವು. ಕಳೆದ ವರ್ಷ ಅಕ್ಟೋಬರ್ 18ರಂದು ದೇಶದಲ್ಲಿ ಪೂರ್ಣ ನಿಯಮಿತ ದೇಶೀಯ ವಿಮಾನಗಳು ಪುನರಾರಂಭಗೊಂಡಿದ್ದವು.

ಇದನ್ನೂ ಓದಿ: ವಾಯುಮಾರ್ಗ ಮಧ್ಯದಲ್ಲಿ ಡಿಕ್ಕಿ ಹೊಡೆದ ಎರಡು ವಿಮಾನಗಳು; ಮೂವರು ಪೈಲಟ್​​ಗಳು ಮೃತಪಟ್ಟಿದ್ದಾಗಿ ವರದಿ

Shri Lanka: 54 ವರ್ಷಗಳ ನಂತರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮರು ಉದ್ಘಾಟನೆ; ಮಾಲ್ಡೀವ್ಸ್​​​ನಿಂದ ಬಂತೊಂದು ಫ್ಲೈಟ್​

Published On - 5:46 pm, Sat, 2 April 22

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ