Shri Lanka: 54 ವರ್ಷಗಳ ನಂತರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮರು ಉದ್ಘಾಟನೆ; ಮಾಲ್ಡೀವ್ಸ್ನಿಂದ ಬಂತೊಂದು ಫ್ಲೈಟ್
ಸದ್ಯ ವಾರದಲ್ಲಿ ಮೂರು ಮಾಲ್ಡೀವ್ ವಿಮಾನ ಇಲ್ಲಿಂದ ಹಾರಾಡಲಿದೆ. ಇವು 50 ಆಸನಗಳನ್ನೊಳಗೊಂಡ ಫ್ಲೈಟ್ಗಳು. ಇನ್ನು ಕೆಲವೇ ದಿನಗಳಲ್ಲಿ ವಿಮಾನಗಳ ಸಂಖ್ಯೆಯನ್ನು 5ಕ್ಕೆ ಏರಿಸಲಾಗುವುದು ಎಂದೂ ಸ್ಥಳೀಯ ವಾಯುಯಾನ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.
ಕೊಲಂಬೊ: ಶ್ರೀಲಂಕಾದ (Sri Lanka) ಹಳೇ ಮತ್ತು ಮೊದಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇಂದು ಮತ್ತೊಮ್ಮೆ ಮರು ಉದ್ಘಾಟನೆ ಮಾಡಲಾಯಿತು. ಬರೋಬ್ಬರಿ 54 ವರ್ಷಗಳ ನಂತರ ಇಲ್ಲಿ ಒಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲ್ಯಾಂಡ್ ಆಗುವ ಮೂಲಕ, ಈ ವಿಮಾನ ನಿಲ್ದಾಣ ಮತ್ತೊಮ್ಮೆ ಕಾರ್ಯಾಚರಣೆ ಶುರುಮಾಡಿದೆ. ಅಂದಹಾಗೇ ಇದೀಗ ಮರು ಉದ್ಘಾಟನೆಗೊಂಡ ವಿಮಾನ ರತ್ಮಲಾನಾ ಅಂತಾರಾಷ್ಟ್ರೀಯ ಏರ್ಪೋರ್ಟ್ (Ratmalana International Airport). ಇಂದು ಮಾಲ್ಡೀವ್ಸ್ನಿಂದ ಬಂದ ವಿಮಾನ ಇಲ್ಲಿ ಲ್ಯಾಂಡ್ ಆಯಿತು.
ಸದ್ಯ ವಾರದಲ್ಲಿ ಮೂರು ಮಾಲ್ಡೀವ್ ವಿಮಾನ ಇಲ್ಲಿಂದ ಹಾರಾಡಲಿದೆ. ಇವು 50 ಆಸನಗಳನ್ನೊಳಗೊಂಡ ಫ್ಲೈಟ್ಗಳು. ಇನ್ನು ಕೆಲವೇ ದಿನಗಳಲ್ಲಿ ವಿಮಾನಗಳ ಸಂಖ್ಯೆಯನ್ನು 5ಕ್ಕೆ ಏರಿಸಲಾಗುವುದು ಎಂದೂ ಸ್ಥಳೀಯ ವಾಯುಯಾನ ಅಧಿಕಾರಿಗಳು ತಿಳಿಸಿದ್ದಾರೆ. ಈ ರತ್ಮಲಾನಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶ್ರೀಲಂಕಾದ ಮೊದಲ ಮತ್ತು ಹಳೇ ವಿಮಾನ ನಿಲ್ದಾಣ. ಆದರೆ ಸುಮಾರು 1960ರ ಹೊತ್ತಿಗೆ ಕಟುನಾಯಕೆ ಎಂಬಲ್ಲಿ ಬಂದಾರಾನಾಯಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣವಾದ ಬಳಿಕ ಇದು ದೇಶೀಯ ನಿಲ್ದಾಣವಾಗಿ ಬದಲಾಗಿತ್ತು.
ರತ್ಮಲಾನಾ ಏರ್ಪೋರ್ಟ್ನ್ನು 1938ರಲ್ಲಿ ನಿರ್ಮಾಣ ಮಾಡಲಾಗಿದೆ. ಆಗ ಇಡೀ ಶ್ರೀಲಂಕಾದಲ್ಲಿದ್ದ ಏಕೈಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದಾಗಿತ್ತು. ಇನ್ನು ಮುಂದೆ ಕೂಡ ಬಂದಾರಾನಾಯಕೆ ಏರ್ಪೋರ್ಟ್ ಮುಖ್ಯ ಏರ್ಪೋರ್ಟ್ ಆಗಿರಲಿದ್ದು, ರತ್ಮಲಾನಾ ವಿಮಾನ ನಿಲ್ದಾಣವೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮುಂದುವರಿಯಲಿದೆ.
ಇದನ್ನೂ ಓದಿ: ತುಮಕೂರು: ಏಪ್ರಿಲ್ 14ರ ಅಂಬೇಡ್ಕರ್ ಜಯಂತಿ ಪ್ರಯುಕ್ತ ಬಿಜೆಪಿ ಮುಖಂಡರಿಂದ ದಲಿತರ ಮನೆಯಲ್ಲಿ ಸಹಪಂಕ್ತಿ ಭೋಜನ
Published On - 6:52 pm, Sun, 27 March 22