Sign In

By signing in or creating an account, you agree with Associated Broadcasting Company's Terms & Conditions and Privacy Policy.

Sri Lanka Financial Crisis: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ಕಾಗದ ಕೊರತೆ; 2 ಪತ್ರಿಕೆಯಿಂದ ಮುದ್ರಣ ಅಮಾನತು

ಶ್ರೀಲಂಕಾದಲ್ಲಿ ವಿದೇಶೀ ವಿನಿಮಯ ಬಿಕ್ಕಟ್ಟು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಇದರಿಂದಾಗಿ ಮುದ್ರಣ ಕಾಗದದ ಕೊರತೆ ಎದುರಾಗಿ, ಎರಡು ಪತ್ರಿಕೆಗಳು ಮುದ್ರಣವನ್ನು ಅಮಾನತು ಮಾಡಿವೆ.

Sri Lanka Financial Crisis: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ಕಾರಣಕ್ಕೆ ಕಾಗದ ಕೊರತೆ; 2 ಪತ್ರಿಕೆಯಿಂದ ಮುದ್ರಣ ಅಮಾನತು
ಸಾಂಕೇತಿಕ ಚಿತ್ರ
Follow us
TV9 Web
| Updated By: Srinivas Mata

Updated on:Mar 26, 2022 | 2:54 PM

ಮುದ್ರಣ ಕಾಗದದ ಕೊರತೆ ಹಾಗೂ ಬೆಲೆ ಏರಿಕೆಯಿಂದಾಗಿ ಶ್ರೀಲಂಕಾದಲ್ಲಿ (Sr Lanka) ಶನಿವಾರದಂದು ಎರಡು ಪ್ರಮುಖ ಪತ್ರಿಕೆಗಳು ಮುದ್ರಣವನ್ನು ಅಮಾನತು ಮಾಡಿವೆ. ಶ್ರೀಲಂಕಾದಲ್ಲಿ ವಿದೇಶೀ ವಿನಿಮಯ ಬಿಕ್ಕಟ್ಟು ಬಹಳ ಕೆಟ್ಟ ಸ್ಥಿತಿಯಲ್ಲಿದೆ. ಇಂಗ್ಲಿಷ್ ದಿನಪತ್ರಿಕೆ “ದಿ ಐಲ್ಯಾಂಡ್” ಮತ್ತು ಅದರ ಸೋದರ ಸಿಂಹಳ ಪತ್ರಿಕೆ ದಿವಾಯಿನ ಮುದ್ರಣವನ್ನು ಅಮಾನತು ಮಾಡಿವೆ. ಬೆಲೆ ಏರಿಕೆ ಮತ್ತು ಮುದ್ರಣ ಕಾಗದ ಕೊರತೆ ಕಾರಣಕ್ಕೆ ಮಾಧ್ಯಮಗಳಿಗೆ ಸಂಕಷ್ಟ ಎದುರಾಗಿದೆ. “ಮುದ್ರಣ ಕಾಗದದ ಕೊರತೆಯಿಂದಾಗಿ ಮುಂದಿನ ನಿರ್ಧಾರ ತೆಗೆದುಕೊಳ್ಳುವ ತನಕ ದಿ ಐಲ್ಯಾಂಡ್​ನ ಮದ್ರಣವನ್ನು ಅಮಾನತು ಮಾಡುವುದು ಅನಿವಾರ್ಯ ಆಗಿದೆ ಎಂದು ನಮ್ಮ ಓದುಗರಿಗೆ ತಿಳಿಸುವುದಕ್ಕೆ ವಿಷಾದಿಸುತ್ತೇವೆ,” ಎಂದು ಉಪಲಿ ನ್ಯೂಸ್​ ಪೇಪರ್ ಲಿಮಿಟೆಡ್ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರವಾಸೋದ್ಯಮ ಹಾಗೂ ವಿದೇಶೀ ಕರೆನ್ಸಿಯಿಂದ ಬರುತ್ತಿದ್ದ ಆದಾಯವು ಕೊರೊನಾ ಸಮಯದಿಂದ ಬಾರದ ಕಾರಣಕ್ಕೆ ಶ್ರೀಲಂಕಾ ವಿದೇಶೀ ವಿನಿಮಯ ಬಿಕ್ಕಟ್ಟು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಅಮೆರಿಕ ಡಾಲರ್ ವಿರುದ್ಧ ಶ್ರೀಲಂಕಾದ ರೂಪಾಯಿ ಮೌಲ್ಯ ಗಣನೀಯವಾಗಿ ಕುಸಿದಿರುವುದರಿಂದ ಮುದ್ರಣ ಕಾಗದದ ಆಮದು ವೆಚ್ಚ ಗಣನೀಯವಾಗಿ ಹೆಚ್ಚಳ ಆಗಿದೆ. ದಿ ಐಲ್ಯಾಂಡ್ ದಿನಪತ್ರಿಕೆಯು 1981ರಿಂದ ಮುದ್ರಣ ಆಗುತ್ತಿದ್ದು, ಇನ್ನು ಮುಂದೆ ಇ-ಪೇಪರ್ ಆಗಿ ಕಾರ್ಯ ನಿರ್ವಹಿಸಲಿದೆ. ಶ್ರೀಲಂಕಾದಲ್ಲಿ ಗಂಭೀರವಾದ ಆರ್ಥಿಕ ಮತ್ತು ಇಂಧನ ಬಿಕ್ಕಟ್ಟು ತಲೆದೋರಿದೆ. ಇದಕ್ಕೆ ಮೂಲ ಕಾರಣ ವಿದೇಶೀ ವಿನಿಮಯ ಕೊರತೆ. ಪ್ರಮುಖ ಪದಾರ್ಥಗಳ ದಿಢೀರ್​ ಬೆಲೆ ಏರಿಕೆ, ಇಂಧನ ಕೊರತೆಯು ಪೆಟ್ರೋಲ್ ಪಂಪ್​ಗಳಲ್ಲಿ ಸರತಿಯಲ್ಲಿ ನಿಲ್ಲುವಂತೆ ಮಾಡಿದೆ. ಇದರ ಜತೆಗೆ ಗಂಟೆಗಟ್ಟಲೆ ವಿದ್ಯುತ್ ಕಡಿತ ಆಗಿದೆ.

ಬಿಕ್ಕಟ್ಟನ್ನು ತಹಬದಿಗೆ ತರುವ ನಿಟ್ಟಿನಲ್ಲಿ ಶ್ರೀಲಂಕಾ ಸರ್ಕಾರವು ಭಾರತದ ನೆರವು ಕೋರಿದೆ. ಇದರ ಜತೆಗೆ ಆರ್ಥಿಕ ನೆರವಿಗಾಗಿ ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ ಕೂಡ ಕೇಳಲಾಗಿದೆ. ಈಚೆಗೆ ಭಾರತದಿಂದ ಶ್ರೀಲಂಕಾಗೆ 100 ಕೋಟಿ ಯುಎಸ್​ಡಿ ಸಾಲ ನೀಡುವುದಾಗಿ ಘೋಷಣೆ ಮಾಡಲಾಗಿದೆ. ಇದಕ್ಕೂ ಮುನ್ನ ಫೆಬ್ರವರಿಯಲ್ಲಿ 50 ಕೋಟಿ ಡಾಲರ್ ಸಾಲದ ವಿಸ್ತರಣೆ ಮಾಡಿತ್ತು.

ಇದನ್ನೂ ಓದಿ: Sri Lanka Financial Crisis: ಆರ್ಥಿಕ ಬಿಕ್ಕಟ್ಟಿನಲ್ಲಿ ದ್ವೀಪರಾಷ್ಟ್ರ ಶ್ರೀಲಂಕಾ; ಅಕ್ಕಿ, ಹಾಲಿನ ಪುಡಿಯಿಂದ ಎಲ್ಲವೂ ಪರಮ ದುಬಾರಿ

Published On - 2:52 pm, Sat, 26 March 22