ನೆರೆದೇಶ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು, ಭಾರತಕ್ಕೆ ಬರುತ್ತಿರುವ ನಿರಾಶ್ರಿತರ ಹಿಂಡು: ಇಲ್ಲಿದೆ ನೀವು ತಿಳಿಯಬೇಕಾದ 10 ಬೆಳವಣಿಗೆಗಳು

ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಭಾರತದ ಮೇಲೆಯೂ ಪರಿಣಾಮ ಬೀರಲು ಆರಂಭಿಸಿದೆ. ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ನೀವು ತಿಳಿಯಬೇಕಾದ 10 ಅಂಶಗಳಿವು.

ನೆರೆದೇಶ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು, ಭಾರತಕ್ಕೆ ಬರುತ್ತಿರುವ ನಿರಾಶ್ರಿತರ ಹಿಂಡು: ಇಲ್ಲಿದೆ ನೀವು ತಿಳಿಯಬೇಕಾದ 10 ಬೆಳವಣಿಗೆಗಳು
ಭಾರತಕ್ಕೆ ಬರುತ್ತಿರುವ ಶ್ರೀಲಂಕಾದ ನಿರಾಶ್ರಿತರು
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 24, 2022 | 8:35 AM

ದೆಹಲಿ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ಬಿಗಡಾಯಿಸಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿದೆ. ಹಣ ಕೊಡುತ್ತೇವೆ ಎಂದರೂ ಪೆಟ್ರೋಲ್-ಡೀಸೆಲ್ ಸಿಗುತ್ತಿಲ್ಲ. ಅತ್ಯಗತ್ಯ ವಸ್ತುಗಳ ಕೊರತೆಯಿಂದಾಗಿ ಜನರು ಹಲವು ದಿನಗಳಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಶ್ರೀಲಂಕಾದಿಂದ ದೊಡ್ಡ ಸಂಖ್ಯೆಯ ಜನರು ನಿರಾಶ್ರಿತರಾಗಿ ಭಾರತಕ್ಕೆ ವಲಸೆ ಬರುತ್ತಿದ್ದಾರೆ. ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಭಾರತದ ಮೇಲೆಯೂ ಪರಿಣಾಮ ಬೀರಲು ಆರಂಭಿಸಿದೆ. ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ನೀವು ತಿಳಿಯಬೇಕಾದ 10 ಅಂಶಗಳಿವು.

  1. ಭಾರತದ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ಶ್ರೀಲಂಕಾದಿಂದ ಬಂದಿದ್ದ 6 ನಿರಾಶ್ರಿತರನ್ನು ರಕ್ಷಿಸಿದ್ದರು. ಮೂವರು ಮಕ್ಕಳೊಂದಿಗೆ ಭಾರತಕ್ಕೆ ಬಂದಿದ್ದ ಇವರು ಶ್ರೀಲಂಕಾದ ಉತ್ತರ ಪ್ರಾಂತ್ಯದಲ್ಲಿರುವ ಜಾಫ್ನಾ ಮೂಲದವರು. ನಿರುದ್ಯೋಗ ಮತ್ತು ಹಸಿವಿನಿಂದ ಕಂಗೆಟ್ಟು ಭಾರತದ ಆಶ್ರಯ ಕೋರಿದ್ದಾರೆ. ತಮಿಳುನಾಡಿನ ರಾಮೇಶ್ವರಂ ಸಮೀಪದ ದ್ವೀಪವೊಂದಕ್ಕೆ ಬಂದಿದ್ದ ಇವರನ್ನು ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ ರಕ್ಷಿಸಿದ್ದರು.
  2. ಪೆಟ್ರೋಲ್ ವಿತರಣೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಶ್ರೀಲಂಕಾ ಸರ್ಕಾರವು ಸೇನೆಗೆ ಆದೇಶಿಸಿದೆ. ಪೆಟ್ರೋಲ್ ಬಂಕ್​ಗಳಿಗೆ ಸೇನೆಯನ್ನು ನಿಯೋಜಿಸಲಾಗಿದೆ. ಪೆಟ್ರೋಲ್ ಬಂಕ್​ಗಳ ಎದುರು ಸಾವಿರಾರು ಬೈಕ್ ಸವಾರರು ಸರದಿಯಲ್ಲಿ ನಿಂತಿದ್ದಾರೆ.
  3. ಪೆಟ್ರೋಲ್ ಖರೀದಿಗೆಂದು ಸರದಿಯಲ್ಲಿ ನಿಂತಿದ್ದ ಮೂವರು ಹಿರಿಯ ನಾಗರಿಕರು ಶನಿವಾರ ಮೃತಪಟ್ಟಿದ್ದರು. ದೇಶದ ವಿದೇಶ ಮೀಸಲು ನಿಧಿ ನಿರ್ವಹಣೆಯಲ್ಲಿ ಗಂಭೀರ ಲೋಪಗಳಾದ ಕಾರಣ ಪೆಟ್ರೋಲಿಯಂ ದರಗಳು ಆಗಸಕ್ಕೇರಿವೆ. ಹಣದುಬ್ಬರ ಮತ್ತು ಅತ್ಯಗತ್ಯ ವಸ್ತುಗಳ ಬೆಲೆಗಳೂ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿವೆ.
  4. ಕಾಗದಗಳ ಕೊರತೆಯಿಂದಾಗಿ ಎಲ್ಲ ಪರೀಕ್ಷೆಗಳನ್ನೂ ದ್ವೀಪರಾಷ್ಟ್ರ ಶ್ರೀಲಂಕಾ ಅನಿರ್ದಿಷ್ಟಾವಧಿಗೆ ರದ್ದುಪಡಿಸಿದೆ. ಇದು ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ವಿಶ್ಲೇಷಿಸಲಾಗಿದೆ.
  5. ವಿದೇಶಿ ಮೀಸಲು ನಿಧಿಯು ಅಪಾಯಕಾರಿ ಮಟ್ಟಕ್ಕೆ ಕುಸಿದಿರುವುದೇ ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿಗೆ ಮುಖ್ಯ ಕಾರಣ. ಇದರಿಂದಾಗಿ ವ್ಯಾಪಾರಿಗಳು ಇತರ ದೇಶಗಳಿಂದ ಆಮದು ಮಾಡಿಕೊಂಡ ಉತ್ಪನ್ನಗಳಿಗೆ ಹಣ ಪಾವತಿ ಮಾಡಲು ಆಗುತ್ತಿಲ್ಲ. ದೇಶದ ಪ್ರಮುಖ ಆರ್ಥಿಕ ಮೂಲವಾಗಿರುವ ಪ್ರವಾಸೋದ್ಯಮ ವಲಯವು ಕೊವಿಡ್ ಕಾರಣದಿಂದ ತೀವ್ರ ಹಿನ್ನಡೆ ಅನುಭವಿಸಿತ್ತು. ಮೂಲಸೌಕರ್ಯ ಯೋಜನೆಗಳಿಗೆ ಹಣ ಹೊಂದಿಸಲು ಚೀನಾದಿಂದ ದೊಡ್ಡಮಟ್ಟದಲ್ಲಿ ಸಾಲ ಪಡೆದುಕೊಂಡಿದ್ದು ಸಹ ಶ್ರೀಲಂಕಾದ ಇಂದಿನ ಬಿಕ್ಕಟ್ಟಿಗೆ ಮುಖ್ಯ ಕಾರಣವಾಗಿದೆ.
  6. ಈಸ್ಟರ್ ಹಬ್ಬದ ವೇಳೆ 2019ರಲ್ಲಿ ಶ್ರೀಲಂಕಾ ರಾಜಧಾನಿ ಕೊಲಂಬೋದಲ್ಲಿ ಸರಣಿ ಬಾಂಬ್​ ಸ್ಫೋಟ ಸಂಭವಿಸಿತ್ತು. ಅಲ್ಲಿಂದಾಚೆಗೆ ಶ್ರೀಲಂಕಾಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಯಿತು. ಕೊವಿಡ್ ಪಿಡುಗು ಈ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿತು.
  7. ಅತ್ಯಗತ್ಯ ವಸ್ತುಗಳಿಗಾಗಿ ಶ್ರೀಲಂಕಾ ವಿದೇಶಗಳನ್ನು ಅವಲಂಬಿಸಿದೆ. ಸ್ವಾವಲಂಬನೆಗೆ ಕ್ರಮ ತೆಗೆದುಕೊಳ್ಳದಿರುವುದೂ ಸಹ ಇಂದಿನ ಬಿಕ್ಕಟ್ಟಿಗೆ ಕಾರಣ. ಸಕ್ಕರೆ, ಧಾನ್ಯಗಳು, ಬೇಳೆಕಾಳುಗಳು ಮತ್ತು ಔಷಧಿಗಳನ್ನೂ ಶ್ರೀಲಂಕಾ ಇತರ ದೇಶಗಳಿಂದ ತರಿಸಿಕೊಳ್ಳುತ್ತಿದೆ. ವಿದೇಶಿ ಮೀಸಲು ನಿಧಿಯ ಮೇಲಿನ ಒತ್ತಡ ಹೆಚ್ಚಾಗಲು ಈ ಅಂಶವೂ ಮುಖ್ಯ ಕಾರಣ ಎನಿಸಿದೆ.
  8. ಚೀನಾದಿಂದ ಶ್ರೀಲಂಕಾ ದೊಡ್ಡಮಟ್ಟದಲ್ಲಿ ಸಾಲ ಪಡೆದುಕೊಂಡಿದೆ. ಕೊವಿಡ್ ಹಿನ್ನೆಲೆಯಲ್ಲಿ ಸಂಭವಿಸಿದ ಆರ್ಥಿಕ ಹಿಂಜರಿತದಿಂದಾಗಿ ದೇಶ ಬಿಕ್ಕಟ್ಟಿಲ್ಲಿದೆ. ಈ ಸಾಲದ ಮರುಪಾವತಿ ಅವಧಿಯನ್ನು ಮರುಹೊಂದಾಣಿಕೆ ಮಾಡಿಕೊಡುವಂತೆ ಶ್ರೀಲಂಕಾ ಸರ್ಕಾರ ಚೀನಾ ಸರ್ಕಾರವನ್ನು ವಿನಂತಿಸಿತ್ತು. ಆದರೆ ಈ ಬೇಡಿಕೆಗೆ ಚೀನಾ ಒಪ್ಪಿರಲಿಲ್ಲ.
  9. ಭಾರತ ಸರ್ಕಾರವು ಶ್ರೀಲಂಕಾಕ್ಕೆ 1 ಶತಕೋಟಿ ಅಮೆರಿಕನ್ ಡಾಲರ್ ಮೊತ್ತದ ಸಾಲದ ನೆರವು ಘೋಷಿಸಿತ್ತು. ಈ ಹಣವನ್ನು ಆಹಾರ, ಔಷಧ ಮತ್ತು ಇತರ ಅತ್ಯಗತ್ಯ ವಸ್ತುಗಳ ಖರೀದಿಗೆ ಬಳಸಬೇಕು ಎಂದು ಸೂಚಿಸಿತ್ತು. ಶ್ರೀಲಂಕಾದ ಹಣಕಾಸು ಸಚಿವರ ವಿನಂತಿ ಮೇಲೆಗೆ 5 ಕೋಟಿ ಅಮೆರಿಕನ್ ಡಾಲರ್ ಸಾಲವನ್ನು ಪೆಟ್ರೋಲಿಯಂ ಉತ್ಪನ್ನಗಳ ಖರೀದಿಗಾಗಿ ಹೆಚ್ಚುವರಿಯಾಗಿ ನೀಡಿತು.
  10. ಬಿಕ್ಕಟ್ಟಿನಿಂದ ಹೊರಬರಲು ವಿಶ್ವ ಹಣಕಾಸು ನಿಧಿಯ ಸಹಾಯ ಕೋರುವುದಾಗಿ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ ಹೇಳಿದ್ದಾರೆ. ಸಾಲ ಮರುಪಾವತಿಗಾಗಿ ಶ್ರೀಲಂಕಾಕ್ಕೆ ಈ ವರ್ಷ 6.9 ಶತಕೋಟಿ ರೂಪಾಯಿ ಮೊತ್ತದಷ್ಟು ಹಣ ಬೇಕಿದೆ. ಈ ಮೊತ್ತವನ್ನು ಮರುಹೊಂದಾಣಿಕೆ ಮಾಡಿಕೊಡಲು ಅಧ್ಯಕ್ಷ ಗೊಟಬಯ ರಾಜಪಕ್ಸ ವಿನಂತಿಸಿದ್ದಾರೆ.

ಇದನ್ನೂ ಓದಿ: ಮುದ್ರಣ ಕಾಗದದ ಕೊರತೆ: ಲಕ್ಷಾಂತರ ಶಾಲಾ ವಿದ್ಯಾರ್ಥಿಗಳ ಪರೀಕ್ಷೆ ರದ್ದುಗೊಳಿಸಿದ ಶ್ರೀಲಂಕಾ

ಇದನ್ನೂ ಓದಿ: State Bank Of India: ಸ್ಟೇಟ್​ ಬ್ಯಾಂಕ್​ ಆಫ್ ಇಂಡಿಯಾದಿಂದ ಶ್ರೀಲಂಕಾಗೆ 7613 ಕೋಟಿ ರೂಪಾಯಿ ಸಾಲ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್