K Annamalai: ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ನಾಯಕ ಅಣ್ಣಾಮಲೈಗೆ ವೈ ಶ್ರೇಣಿ ಭದ್ರತೆ, ಅವರಿಗಿದ್ದ ಭೀತಿ ಏನು?

ಕೇಂದ್ರ ಗೃಹ ಸಚಿವಾಲಯವು ಅಣ್ಣಾಮಲೈಗೆ ಭದ್ರತೆಯ ಆತಂಕವಿದೆ ಎಂದು ಈ ಏರ್ಪಾಡು ಮಾಡಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸಶಸ್ತ್ರ ಅಧಿಕಾರಿಗಳು ಮತ್ತು ತಮಿಳುನಾಡು ಪೊಲೀಸ್ ಇಲಾಖೆಯ ಅಧಿಕಾರಿಗಳು ದಿನದ 24 ಗಂಟೆಯೂ ಅಣ್ಣಾಮಲೈಗೆ ರಕ್ಷಣೆ ಒದಗಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.

K Annamalai: ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ನಾಯಕ ಅಣ್ಣಾಮಲೈಗೆ ವೈ ಶ್ರೇಣಿ ಭದ್ರತೆ, ಅವರಿಗಿದ್ದ ಭೀತಿ ಏನು?
ಮಾಜಿ ಐಪಿಎಸ್, ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈಗೆ ವೈ ಶ್ರೇಣಿ ಭದ್ರತೆ, ಅವರಿಗಿದ್ದ ಭೀತಿ ಏನು?
Follow us
TV9 Web
| Updated By: ಸಾಧು ಶ್ರೀನಾಥ್​

Updated on:Apr 02, 2022 | 4:49 PM

ಚೆನ್ನೈ/ ನವದೆಹಲಿ: ಖಾಕಿ ಸಮಸವಸ್ತ್ರ ಕಳಚಿಟ್ಟು, ಬಿಳಿ ರಾಜಕೀಯ ಬಟ್ಟೆ ಧರಿಸಿರುವ ಮಾಜಿ ಐಪಿಎಸ್ ಅಧಿಕಾರಿ, ಕರ್ನಾಟಕದ ಸಿಂಗಂ ಖ್ಯಾತಿಯ ಕೆ. ಅಣ್ಣಾಮಲೈಗೆ (K Annamalai) ತಕ್ಷಣದಿಂದ ಜಾರೊಗೆ ಬರುವಂತೆ ವೈ ಶ್ರೇಣಿ ಭದ್ರತೆ ಕಲ್ಪಿಸಲಾಗಿದೆ (Y category CRPF security). ಇದು ತಮಿಳುನಾಡು ಸರ್ಕಾರ ಪ್ರಸ್ತುತ ಅಣ್ಣಾಮಲೈಗೆ ಒದಗಿಸುತ್ತಿರುವ ಭದ್ರತೆಗಿಂತ ಹೆಚ್ಚಿನದ್ದಾಗಿದೆ (Tamil Nadu BJP president). ಕೇಂದ್ರ ಗೃಹ ಸಚಿವಾಲಯವು ಅಣ್ಣಾಮಲೈಗೆ ಭದ್ರತೆಯ ಆತಂಕವಿದೆ ಎಂದು ಈ ಏರ್ಪಾಡು ಮಾಡಿದೆ. ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (Central Reserve Police Force -CRPF) ಸಶಸ್ತ್ರ ಅಧಿಕಾರಿಗಳು ಮತ್ತು ತಮಿಳುನಾಡು ಪೊಲೀಸ್ ಇಲಾಖೆಯ ಅಧಿಕಾರಿಗಳು ದಿನದ 24 ಗಂಟೆಯೂ ಅಣ್ಣಾಮಲೈಗೆ ರಕ್ಷಣೆ ಒದಗಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಕೆ ಅಣ್ಣಾಮಲೈಗೆ ಇದ್ದ ಭೀತಿ ಏನು?: ಕೆ ಅಣ್ಣಾಮಲೈಗೆ ಎದುರಾಗಿದ್ದ ಭದ್ರತಾ ಭೀತಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿದ ಬಳಿಕ ಕೇಂದ್ರ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಗುಪ್ತಚರ ಇಲಾಖೆ ಪೊಲೀಸ್ ಹುದ್ದೆ ತೊರೆದು, ರಾಷ್ಟ್ರೀಯ ಪಕ್ಷದ ಜೊತೆ ರಾಜಕೀಯದಲ್ಲಿ ಗುರುತಿಸಿಕೊಂಡ ಅಣ್ಣಾಮಲೈ ಜೀವಕ್ಕೆ ಅಪಾಯವಿದೆ ಎಂಬುದು ಮನವರಿಕೆಯಾಗಿತ್ತು ಎಂದು ಮೂಲಗಳು ತಿಳಿಸಿವೆ.

ಕಳೆದ ತಿಂಗಳು ಪೆಟ್ರೋಲ್ ತುಂಬಿದ ಬಾಟಲ್​ಗಳನ್ನು ಚೆನ್ನೈನಲ್ಲಿರುವ ಬಿಜೆಪಿ ರಾಜ್ಯ ಕಚೇರಿ ಕಮಲಾಲಯಂ (Kamalalayam) ಒಳಗೆ ಫೆಬ್ರವರಿ 10ರ ನಡುರಾತ್ರಿ ಎಸೆಯಲಾಗಿತ್ತು. ಆ ಪ್ರಕರಣದಲ್ಲಿ ರಾಜ್ಯ ಪೊಲೀಸರು ಓರ್ವನನ್ನು ಬಂಧಿಸಿದ್ದರು. ತಮಿಳುನಾಡು ಗುಪ್ತಚರ ಇಲಾಖೆ ಅಧಿಕಾರಿಗಳು ತಮ್ಮ ಮೊಬೈಲ್ ಫೋನ್​ ಕದ್ದಾಲಿಸುತ್ತಿದ್ದಾರೆ ಎಂದು ಅಣ್ಣಾಮಲೈ ದೂರಿದ್ದರು.

ಅದಕ್ಕೂ ಮುನ್ನ ಸ್ವತಃ ರಾಜ್ಯ ಸರ್ಕಾರವು ಅಣ್ಣಾಮಲೈಗೆ ನೀಡಿರುವ ಭದ್ರತೆಯ ಬಗ್ಗೆ ಕೂಲಂಕಷ ಅಧ್ಯಯನ ನಡೆಸಿ, ಅರಿಗೆ ನೀಡಿರುವ ಭದ್ರತೆಯನ್ನು ಮೊಟಕುಗೊಳಿಸಬಹುದು ಎಂದಿತ್ತು. ಅದರಂತೆ ಭದ್ರತಾ ಅಧಿಕಾರಿಗಳ ಸಂಖ್ಯೆಯನ್ನು ಕಡಿತಗೊಳಿಸಲಾಗಿತ್ತು.

Also Read:   BJP Office Attacked: ತಮಿಳುನಾಡು ಬಿಜೆಪಿ ಕೇಂದ್ರ ಕಚೇರಿ ‘ಕಮಲಾಲಯಂ’ ಮೇಲೆ ಪೆಟ್ರೋಲ್ ಬಾಂಬ್​ ದಾಳಿ​

Published On - 4:29 pm, Sat, 2 April 22