ಜಿ7 ಶೃಂಗಸಭೆ: ಮೂರನೇ ಬಾರಿಗೆ ಮೋದಿ ಪ್ರಧಾನಿಯಾದ ಬಳಿಕ ಇಟಲಿಗೆ ಮೊದಲ ಭೇಟಿ

G7 Summit in Italy: ಪ್ರಧಾನಿ ನರೇಂದ್ರ ಮೋದಿ ಇಟಲಿ ಪ್ರವಾಸಕ್ಕೆ ತೆರಳಿದ್ದಾರೆ, ಅಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜೂನ್ 14ರ ಸಂಜೆ ಭಾರತಕ್ಕೆ ಹಿಂದಿರುಗಲಿದ್ದಾರೆ. ಜಿ7 ಶೃಂಗಸಭೆಗೂ ಮುನ್ನ ಇಟಲಿಯಲ್ಲಿ ಖಲಿಸ್ತಾನಿ ಉಗ್ರರು ನೀಚ ಕೃತ್ಯವೆಸಗಿದ್ದಾರೆ, ಮಹಾತ್ಮಗಾಂಧಿ ಪ್ರತಿಮೆಯನ್ನು ಒಡೆದು, ಖಲಿಸ್ತಾನಿ ಪರ ಘೋಷಣೆಯ ಬರಹಗಳನ್ನೂ ಬರೆದಿದ್ದಾರೆ.

ಜಿ7 ಶೃಂಗಸಭೆ: ಮೂರನೇ ಬಾರಿಗೆ ಮೋದಿ ಪ್ರಧಾನಿಯಾದ ಬಳಿಕ ಇಟಲಿಗೆ ಮೊದಲ ಭೇಟಿ
ನರೇಂದ್ರ ಮೋದಿ

Updated on: Jun 13, 2024 | 10:46 AM

ಮೂರನೇ ಬಾರಿಗೆ ನರೇಂದ್ರ ಮೋದಿ(Narendra Modi) ಪ್ರಧಾನಿಯಾದ ಬಳಿಕ ಇಟಲಿಗೆ ಮೊದಲ ಬಾರಿಗೆ ಭೇಟಿ ನೀಡಲಿದ್ದಾರೆ. ಅಲ್ಲಿ ನಡೆಯಲಿರುವ ಜಿ7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದೆ. ಪ್ರಧಾನಿ ಮೋದಿ ಮೂರನೇ ಅವಧಿಗೆ ಪ್ರಧಾನಿಯಾದ ಬಳಿಕ ಹೋಗುತ್ತಿರುವ ಮೊದಲ ವಿದೇಶ ಪ್ರವಾಸವೂ ಇದಾಗಿದೆ.

ಉನ್ನತ ಮಟ್ಟದ ನಿಯೋಗದೊಂದಿಗೆ ಜೂನ್ 14 ರಂದು ನಡೆಯಲಿರುವ ಶೃಂಗಸಭೆಯ ಸಂಪರ್ಕ ಅಧಿವೇಶನದಲ್ಲಿ ಪಾಲ್ಗೊಳ್ಳಲು ಮೋದಿ ಗುರುವಾರ ಇಟಲಿಗೆ ತೆರಳಿದರು. ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧ ಮತ್ತು ಗಾಜಾದಲ್ಲಿನ ಸಂಘರ್ಷವು ಜೂನ್ 13 ರಿಂದ 15 ರವರೆಗೆ ಇಟಲಿಯ ಅಪುಲಿಯಾ ಪ್ರದೇಶದ ಐಷಾರಾಮಿ ರೆಸಾರ್ಟ್ ಬೊರ್ಗೊ ಎಗ್ನಾಜಿಯಾದಲ್ಲಿ ನಡೆಯಲಿರುವ ಜಿ-7 ಶೃಂಗಸಭೆಯಲ್ಲಿ ಪ್ರಾಬಲ್ಯ ಸಾಧಿಸುವ ಸಾಧ್ಯತೆಯಿದೆ.

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರೊಂದಿಗೆ ಮೋದಿ ದ್ವಿಪಕ್ಷೀಯ ಸಭೆ ನಡೆಸುವ ನಿರೀಕ್ಷೆಯಿದೆ ಎಂದು ಕ್ವಾತ್ರಾ ಹೇಳಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಪ್ರಧಾನಿ ಯಾವುದೇ ದ್ವಿಪಕ್ಷೀಯ ಸಭೆ ನಡೆಸುತ್ತಾರೆಯೇ ಎಂಬ ಪ್ರಶ್ನೆಗೆ, ಕ್ವಾತ್ರಾ ನೇರ ಉತ್ತರವನ್ನು ನೀಡಲಿಲ್ಲ ಮತ್ತು ಮೋದಿ ಅವರ ವೇಳಾಪಟ್ಟಿಯನ್ನು ಇನ್ನೂ ನಿರ್ಧರಿಸಲಾಗುತ್ತಿದೆ ಎಂದು ಹೇಳಿದರು.

ಮತ್ತಷ್ಟು ಓದಿ: ಜೂ. 18ಕ್ಕೆ ಪ್ರಧಾನಿ ಮೋದಿ ವಾರಾಣಸಿಗೆ ಭೇಟಿ; ರೈತರ ಸಮಾವೇಶದಲ್ಲಿ ಕಿಸಾನ್ ಸಮ್ಮಾನ್ ನಿಧಿ ಕಂತು ಬಿಡುಗಡೆ

ಜಿ7 ಶೃಂಗಸಭೆಗೂ ಮುನ್ನ ಇಟಲಿಯಲ್ಲಿ ಖಲಿಸ್ತಾನಿ ಉಗ್ರರು ನೀಚ ಕೃತ್ಯವೆಸಗಿದ್ದಾರೆ, ಮಹಾತ್ಮಗಾಂಧಿ ಪ್ರತಿಮೆಯನ್ನು ಒಡೆದು, ಖಲಿಸ್ತಾನಿ ಪರ ಘೋಷಣೆಯ ಬರಹಗಳನ್ನೂ ಬರೆದಿದ್ದಾರೆ. ಪ್ರತಿಮೆಯನ್ನು ದುರಸ್ತಿ ಮಾಡಲಾಗಿದೆ. ಮೋದಿ ಜೂನ್ 14ರ ಸಂಜೆ ಭಾರತಕ್ಕೆ ಮರಳಲಿದ್ದಾರೆ.

ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ಹಿರೋಷಿಮಾದಲ್ಲಿ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದ್ದರು, ಅವರು ಶೃಂಗಸಭೆಯ ಸಮಯದಲ್ಲಿ ಝೆಲೆನ್ಸ್ಕಿ ಹಾಗೂ ವಿಶ್ವ ನಾಯಕರ ಜತೆ ಸಂವಾದ ನಡೆಸಿದ್ದರು. ಜಿ7 ಅಮೆರಿಕ, ಬ್ರಿಟನ್, ಫ್ರಾನ್ಸ್​, ಇಟಲಿ, ಜರ್ಮನಿ, ಕೆನಡಾ ಹಾಗೂ ಜಪಾನ್​ನ್ನು ಒಳಗೊಂಡಿದೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್, ಫ್ರಾನ್ಸ್​ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್, ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ, ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, ರಷ್ಯಾ ಆಕ್ರಮಣದ ಕುರಿತು ಅಧಿವೇಶನದಲ್ಲಿ ಚರ್ಚಿಸುವ ಸಾಧ್ಯತೆ ಇದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ