ನಕಲಿ ಗಾಂಧಿಗಳ ಈ ನಕಲಿ ಸತ್ಯಾಗ್ರಹವನ್ನು ನೋಡಿದರೆ ಗಾಂಧೀಜಿ ನಾಚಿಕೆಪಡುತ್ತಾರೆ: ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ
ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಜಾಮೀನಿನ ಮೇಲೆ ಇದ್ದಾರೆ. ರಾಹುಲ್ ಗಾಂಧಿ ನಾಳೆ ಇಡಿ ಮುಂದೆ ಹಾಜರಾಗಬೇಕು. ಆದರೆ ಕಾಂಗ್ರೆಸ್ ದೊಡ್ಡ ನಾಟಕ ಮಾಡುತ್ತಿದೆ. ಅವರು ತಮ್ಮ ನಾಯಕರನ್ನೆಲ್ಲ ದೆಹಲಿಗೆ ಕರೆಸುತ್ತಿದ್ದಾರೆ.
ದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ (National Herald case) ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಜಾರಿ ನಿರ್ದೇಶನಾಲಯದ (Enforcement directorate) ಮುಂದೆ ನಾಳೆ ಹಾಜರಾಗಲಿದ್ದು, ಕಾಂಗ್ರೆಸ್ ನಾಯಕರು ಭಾನುವಾರ ದೇಶಾದ್ಯಂತ ಸುದ್ದಿಗೋಷ್ಠಿ ನಡೆಸುತ್ತಿದ್ದಂತೆ ಬಿಜೆಪಿ ವಾಗ್ದಾಳಿ ಆರಂಭಿಸಿದೆ. “ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಇಬ್ಬರೂ ಜಾಮೀನಿನ ಮೇಲೆ ಇದ್ದಾರೆ. ರಾಹುಲ್ ಗಾಂಧಿ ನಾಳೆ ಇಡಿ ಮುಂದೆ ಹಾಜರಾಗಬೇಕು. ಆದರೆ ಕಾಂಗ್ರೆಸ್ ದೊಡ್ಡ ನಾಟಕ ಮಾಡುತ್ತಿದೆ. ಅವರು ತಮ್ಮ ನಾಯಕರನ್ನೆಲ್ಲ ದೆಹಲಿಗೆ ಕರೆಸುತ್ತಿದ್ದಾರೆ. ಇದರಿಂದ ಏನು ಪ್ರಯೋಜನ? ದಿಗ್ವಿಜಯ ಸಿಂಗ್ ಅವರಂತಹ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರೆ ಏನಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ (Sambit Patra) ಹೇಳಿದ್ದಾರೆ. ಯಾಕೆ ಈ ಪತ್ರಿಕಾಗೋಷ್ಠಿಯ ನಾಟಕ? ಇಡಿ ಮುಂದೆ ನಿಮ್ಮನ್ನು ಹಾಜರುಪಡಿಸಿ ಮತ್ತು ತಪ್ಪನ್ನು ಒಪ್ಪಿಕೊಳ್ಳಿ. ಇದೇನು ಸತ್ಯಾಗ್ರಹ? ನಕಲಿ ಗಾಂಧಿಗಳ ಈ ನಕಲಿ ಸತ್ಯಾಗ್ರಹವನ್ನು ನೋಡಿದರೆ ಗಾಂಧೀಜಿ ನಾಚಿಕೆಪಡುತ್ತಾರೆ. ರಾಹುಲ್ ಜೀ, ನಿಯಮದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಬೇಡಿ. ಇದು ಕಾನೂನು ಸಮಸ್ಯೆಯೇ ಹೊರತು ರಾಜಕೀಯ ವಿಚಾರವಲ್ಲ ಎಂದು ಸಂಬಿತ್ ಪಾತ್ರ ಹೇಳಿದ್ದಾರೆ. ಕೇಂದ್ರೀಯ ಸಂಸ್ಥೆಗಳ ದುರುಪಯೋಗದ ವಿರುದ್ಧ ದೆಹಲಿಯ ಇಡಿ ಕೇಂದ್ರ ಕಚೇರಿಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸತ್ಯಾಗ್ರಹ ನಡೆಸುವಂತೆ ಕಾಂಗ್ರೆಸ್ ತನ್ನ ಎಲ್ಲಾ ಉನ್ನತ ನಾಯಕರು ಮತ್ತು ಸಂಸದರನ್ನು ಕೇಳಿಕೊಂಡಿದೆ.
ಜೂನ್ 2 ರಂದು ರಾಹುಲ್ ಗಾಂಧಿ ಅವರಿಗೆ ಇಡಿ ಸಮನ್ಸ್ ನೀಡಿತ್ತು, ಆದರೆ ಆ ಸಮಯದಲ್ಲಿ ಅವರು ದೇಶದಲ್ಲಿ ಇಲ್ಲದ ಕಾರಣ ಕಾಂಗ್ರೆಸ್ ನಾಯಕರು ಹೊಸ ದಿನಾಂಕವನ್ನು ಕೋರಿದರು. ಕೊವಿಡ್‌ನಿಂದಾಗಿ ಜೂನ್ 8 ರ ಹಿಂದಿನ ದಿನಾಂಕಕ್ಕೆ ಹಾಜರಾಗದೇ ಇದ್ದ ಕಾರಣ ಸೋನಿಯಾ ಗಾಂಧಿ ಅವರಿಗೆ ಜೂನ್ 23 ರಂದು ಹೊಸ ಸಮನ್ಸ್ ನೀಡಲಾಗಿದೆ.
ಗುಜರಾತ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ‘ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ನಷ್ಟವಾಗುತ್ತಿದ್ದಂತೆ ಕಾಂಗ್ರೆಸ್ ಹಲವು ಕಂತುಗಳಲ್ಲಿ ₹90 ಕೋಟಿ ಸಾಲ ನೀಡಿದೆ, ರಾಜಕೀಯ ಪಕ್ಷ ಪತ್ರಿಕೆಗೆ ಸಾಲ ಕೊಡಬಾರದು ಎಂಬ ಕಾನೂನು ಈ ದೇಶದಲ್ಲಿ ಇಲ್ಲ. ಸಾಲವನ್ನು ನಂತರ ಈಕ್ವಿಟಿ ಷೇರುಗಳಾಗಿ ಪರಿವರ್ತಿಸಲಾಯಿತು ಮತ್ತು ಲಾಭರಹಿತ ಕಂಪನಿ ‘ಯಂಗ್ ಇಂಡಿಯಾ’ ಅನ್ನು ರಚಿಸಲಾಯಿತ. ಅದರ ಮಂಡಳಿಯ ಸದಸ್ಯರಲ್ಲಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಇದ್ದಾರೆ ಎಂದು ಖೇರಾ ಹೇಳಿದರು. ಆದರೆ ಪ್ರಧಾನಿ ಮೋದಿ ಅವರು ಶೀರ್ಷಿಕೆಯಲ್ಲಿ ರಾರಾಜಿಸುವುದಕ್ಕಾಗಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಗೆ ಇಡಿ ನೋಟಿಸ್ ಕಳುಹಿಸಲಾಗಿದೆ.
ಕಾನೂನುಬಾಹಿರ ಚಟುವಟಿಕೆ ಅಲ್ಲವೇ ಅಲ್ಲ. ಇದರ ಹೊರತಾಗಿಯೂ, ರಾಜಕೀಯ ದ್ವೇಷದಿಂದ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ಇಡಿ ನೋಟಿಸ್ ನೀಡಿತು ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 4:03 pm, Sun, 12 June 22