ತೆಲಂಗಾಣ: ಮುಸ್ಲಿಮರ ಉಡುಗೆ ತೊಟ್ಟ ಗಣೇಶ, ಹಿಂದೂ ಭಾವನೆಗಳಿಗೆ ಧಕ್ಕೆ, ಭುಗಿಲೆದ್ದ ವಿವಾದ

ತೆಲಂಗಾಣದಲ್ಲಿ ಈ ಬಾರಿ ಗಣೇಶನ ಮೂರ್ತಿಗೆ ತೊಡಿಸಿದ್ದ ಬಟ್ಟೆಯಿಂದಾಗಿ ತೀವ್ರ ವಿವಾದ ಉಂಟಾಗಿದೆ. ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎಂದು ಆರೋಪಿಸಲಾಗಿದೆ. ಈ ಭಾರಿ ಬಾಜಿರಾವ್ ಮಸ್ತಾನಿ ಶೀರ್ಷಿಕೆಯಡಿ ಬಟ್ಟೆಯನ್ನು ಗಣೇಶನಿಗೆ ತೊಡಿಸಿದ್ದು, ಅದು ಮುಸ್ಲಿಮರ ಬಟ್ಟೆಯಂತಿದೆ ಎಂದು ಜನರು ವಿರೋಧ ವ್ಯಕ್ತಪಡಿಸಿದ್ದಾರೆ.

ತೆಲಂಗಾಣ: ಮುಸ್ಲಿಮರ ಉಡುಗೆ ತೊಟ್ಟ ಗಣೇಶ, ಹಿಂದೂ ಭಾವನೆಗಳಿಗೆ ಧಕ್ಕೆ, ಭುಗಿಲೆದ್ದ ವಿವಾದ
ಗಣೇಶ

Updated on: Sep 16, 2024 | 10:59 AM

ತೆಲಂಗಾಣದಲ್ಲಿ ಈ ಬಾರಿ ಗಣೇಶನ ಮೂರ್ತಿಗೆ ತೊಡಿಸಿದ್ದ ಬಟ್ಟೆಯಿಂದಾಗಿ ತೀವ್ರ ವಿವಾದ ಉಂಟಾಗಿದೆ. ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎಂದು ಆರೋಪಿಸಲಾಗಿದೆ. ಈ ಬಾರಿ ಬಾಜಿರಾವ್ ಮಸ್ತಾನಿ ಶೀರ್ಷಿಕೆಯಡಿ ಬಟ್ಟೆಯನ್ನು ಗಣೇಶನಿಗೆ ತೊಡಿಸಿದ್ದು, ಅದು ಮುಸ್ಲಿಮರ ಬಟ್ಟೆಯಂತಿದೆ ಎಂದು ಜನರು ವಿರೋಧ ವ್ಯಕ್ತಪಡಿಸಿದ್ದಾರೆ.

ಯಂಗ್ ಲಿಯೋಸ್ ಯೂತ್ ಅಸೋಸಿಯೇಷನ್‌ನ ಗಣೇಶನ ಪ್ರತಿಮೆಯ ಉಡುಪಿನ ಬಗ್ಗೆ ವಿವಾದ ಭುಗಿಲೆದ್ದಿದೆ. ಬಾಜಿರಾವ್ ಮಸ್ತಾನಿಯಲ್ಲಿ ನಟ ರಣವೀರ್ ಸಿಂಗ್ ಧರಿಸಿದ್ದ ಉಡುಪಿನಿಂದ ಸ್ಫೂರ್ತಿ ಪಡೆದಿದೆ.
ಸಂಘಟಕರು ತಮ್ಮ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದ್ದಾರೆ ಎಂದು ಆರೋಪಿಸಿದರು.

ನಾವು ಉದ್ದೇಶಪೂರ್ವಕವಾಗಿ ಬಾಜಿರಾವ್ ಮಸ್ತಾನಿ ಥೀಮ್ ಅನ್ನು ಆಯ್ಕೆ ಮಾಡಲಿಲ್ಲ. ದುರದೃಷ್ಟವಶಾತ್, ತಪ್ಪುಗ್ರಹಿಕೆಗೆ ಕಾರಣವಾಯಿತು.

ಮತ್ತಷ್ಟು ಓದಿ: ಮೈಸೂರು: ಕಲಾವಿದನ ಮನೆ ಮುಂದಿದ್ದ ಗಣೇಶನ ಮೂರ್ತಿ ಲಪಟಾಯಿಸಿದ ಕಳ್ಳರು!

ನಾವು ಎಂದಿಗೂ ಯಾರ ಭಾವನೆಗಳಿಗೂ ಧಕ್ಕೆ ತರುವುದಿಲ್ಲ, ಬಟ್ಟೆ ವಿನ್ಯಾಸಕಾರ ಹಾಗೂ ಕಮಿಟಿ ಸದಸ್ಯರ ನಡುವಿನ ತಪ್ಪು ಸಂವಹನ ಈ ಘಟನೆಗೆ ಕಾರಣವಾಗಿದೆ. ಗೊಂದಲದ ನಡುವೆಯೂ ಯಂಗ್ ಲಿಯೋಸ್ ಯುವಕ ಸಂಘವು ಹಬ್ಬವನ್ನು ಶಾಂತಿಯುತವಾಗಿ ನಡೆಸಲು ನಿರ್ಧರಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us