ಸರ್ಕಾರಿ ಕಚೇರಿಯಲ್ಲಿ ಬಯೋಮೆಟ್ರಿಕ್​ ಸೇವೆ ರದ್ದತಿಗೆ ಕೇಳಿ ಬಂತು ಆಗ್ರಹ!

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Dec 04, 2020 | 6:36 PM

ಕೊರೊನಾ ವೈರಸ್ ಹರಡುವಿಕೆ ಹೆಚ್ಚಿದ ನಂತರದಲ್ಲಿ ಅದನ್ನು ನಿಯಂತ್ರಿಸಲು ಸರ್ಕಾರ ಹರಸಾಹಸ ಪಡುತ್ತಿದೆ. ಸಾಕಷ್ಟು ಸಂಸ್ಥೆಗಳು ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿವೆ. ಇನ್ನು ಅನೇಕ ಸಂಸ್ಥೆಗಳು ಬಯೋ ಮೆಟ್ರಿಕ್ ವ್ಯವಸ್ಥೆ​ ರದ್ದು ಗೊಳಿಸಿವೆ.

ಸರ್ಕಾರಿ ಕಚೇರಿಯಲ್ಲಿ ಬಯೋಮೆಟ್ರಿಕ್​ ಸೇವೆ ರದ್ದತಿಗೆ ಕೇಳಿ ಬಂತು ಆಗ್ರಹ!
ಸಾಂದರ್ಭಿಕ ಚಿತ್ರ ಚಿತ್ರ ಕೃಪೆ: (PTI)
Follow us on

ಪಣಜಿ: ಕೊರೊನಾ ವೈರಸ್​ ನಿಯಂತ್ರಣಕ್ಕೆ ಬರದ ಕಾರಣ ಸರ್ಕಾರಿ ಕಚೇರಿಯಲ್ಲಿ ಬಯೋಮೆಟ್ರಿಕ್​ ಸೇವೆಯನ್ನು ರದ್ದು ಮಾಡುವಂತೆ ಗೋವಾ ಫಾರ್ವರ್ಡ್​ ಪಕ್ಷ ಸರ್ಕಾರಕ್ಕೆ ಆಗ್ರಹಿಸಿದೆ. ಈ ಬಗ್ಗೆ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎನ್ನುವ ಕುತೂಹಲ ಮೂಡಿದೆ.

ಮಾಪುಸಾದಲ್ಲಿರುವ ಸರ್ಕಾರಿ ಕಚೇರಿಯ ನೌಕರರೊಬ್ಬರು ಕೊರೊನಾದಿಂದ ಮೃತಪಟ್ಟಿದ್ದರು. ಈ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಇನ್ನೂ 12 ಜನರಿಗೆ ಕೊರೊನಾ ಪಾಸಿಟಿವ್​ ಕಾಣಿಸಿಕೊಂಡಿತ್ತು. ಹೀಗಾಗಿ, ಬಯೋಮೆಟ್ರಿಕ್​ ಮೂಲಕ ಹಾಜರಾತಿ ಹಾಕುವ ಕ್ರಮವನ್ನು ರದ್ದು ಮಾಡಿ ಎಂದು ಆಗ್ರಹಿಸಿರುವ ಫಾರ್ವರ್ಡ್​ ಪಕ್ಷದ ಸಂಯೋಜಕ ಜಾನ್​ ನಜರೆತ್ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.

ಕೊರೊನಾ ವೈರಸ್ ಸೋಂಕು ಹರಡುವುದು ಹೆಚ್ಚಾದ ನಂತರದಲ್ಲಿ ಅದನ್ನು ನಿಯಂತ್ರಿಸಲು ಸರ್ಕಾರ ಹರಸಾಹಸ ಪಡುತ್ತಿದೆ. ಸಾಕಷ್ಟು ಸಂಸ್ಥೆಗಳು ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿವೆ. ಇನ್ನು ಅನೇಕ ಸಂಸ್ಥೆಗಳು ಬಯೋಮೆಟ್ರಿಕ್ ವ್ಯವಸ್ಥೆ​ ರದ್ದುಗೊಳಿಸಿವೆ. ಈಗ ಗೋವಾ ಸರ್ಕಾರ ಯಾವ ರೀತಿಯ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಕೊರೊನಾ ಕಾಲದಲ್ಲೂ ಡಬಲ್​ ಸಂಬಳ: ಇದು ಹೇಗೆ ಸಾಧ್ಯ?