ಪೂರ್ವ ಮಾಹಿತಿ ಇಲ್ಲದೆ ಗೋ ಏರ್ ವಿಮಾನ ರದ್ದು; ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರತಿಭಟನೆ

ವಿಮಾನಯಾನ ಸಂಸ್ಥೆಯ ಇತರ ಎರಡು ವಿಮಾನಗಳಾದ ಮುಂಬೈನಿಂದ ಅಮೃತಸರ, ಮುಂಬೈನಿಂದ ಅಹಮದಾಬಾದ್ ವಿಮಾನಗಳನ್ನೂ ರದ್ದುಗೊಳಿಸಲಾಗಿದೆ. ಮುಂಬೈನಿಂದ ದೆಹಲಿ ವಿಮಾನ ಒಂದು ಗಂಟೆ ಐವತ್ತು ನಿಮಿಷ ತಡವಾಯಿತು.

ಪೂರ್ವ ಮಾಹಿತಿ ಇಲ್ಲದೆ ಗೋ ಏರ್ ವಿಮಾನ ರದ್ದು; ಮುಂಬೈ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರತಿಭಟನೆ
ಗೋ ಏರ್ ಪ್ರಯಾಣಿಕರ ಪ್ರತಿಭಟನೆ
Follow us
ರಶ್ಮಿ ಕಲ್ಲಕಟ್ಟ
|

Updated on:Apr 13, 2023 | 1:03 PM

ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai Airport) ಗೋಏರ್ (GoAir )ಮೂರು ವಿಮಾನಗಳನ್ನು ಪೂರ್ವ ಮಾಹಿತಿಯಿಲ್ಲದೆ ರದ್ದುಗೊಳಿಸಿದ ನಂತರ ಪ್ರಯಾಣಿಕರು ಅಲ್ಲಿನ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಮುಂಬೈನಿಂದ ಗೋ ಏರ್ ವಿಮಾನದಲ್ಲಿ ಗೋವಾಗೆ ಪ್ರಯಾಣಿಸಬೇಕಿದ್ದ ಪ್ರಯಾಣಿಕರಿಗೆ ವಿಮಾನವನ್ನು ರದ್ದುಗೊಳಿಸಲಾಗಿದೆ ಎಂದು ನಿಗದಿತ ಟೇಕ್ ಆಫ್‌ಗೆ ಹತ್ತು ನಿಮಿಷಗಳ ಮೊದಲು ತಿಳಿಸಲಾಗಿತ್ತು. ಇದು ಕೇಳಿದ ಕೂಡಲೇ ಸಿಟ್ಟಾದ ಪ್ರಯಾಣಿಕರು ಸಿಬ್ಬಂದಿ ಮೇಲೆ ಹರಿಹಾಯ್ದಿದ್ದಾರೆ.ಪ್ರಯಾಣಿಕರು ಚಿತ್ರೀಕರಿಸಿದ ವಿಡಿಯೊದಲ್ಲಿ ಪ್ರಯಾಣಿಕರು ಸಿಬ್ಬಂದಿಗಳ ವಿರುದ್ಧ ಸಿಟ್ಟಿಗೆದ್ದಿರುವುದು ಕಾಣುತ್ತದೆ. ಒಬ್ಬ ವ್ಯಕ್ತಿ ಸರ್, ಝೂಟ್ ಮತ್ ಬೋಲೋ ಆಪ್ ಎಂದು ಹೇಳುತ್ತಿರುವುದು ಕೇಳಿಸುತ್ತದೆ. ವಿಮಾನಯಾನ ನೌಕರರಿಗೆ ಮುಂಚಿತವಾಗಿ ಗೊತ್ತಿತ್ತು ಆದರೆ ಅವರು ಪ್ರಯಾಣಿಕರಿಗೆ ಕೊನೆಯ ಕ್ಷಣದಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಟೈಮ್ಸ್ ನೌ ವರದಿಯ ಪ್ರಕಾರ, ಈ ಪ್ರತಿಭಟನೆ ನಂತರ ಪ್ರಯಾಣಿಕರಿಗೆ ಬೆಳಿಗ್ಗೆ 6:30 ಕ್ಕೆ ಮತ್ತೊಂದು ವಿಮಾನವನ್ನು ಗೋ ಏರ್ ವ್ಯವಸ್ಥೆ ಮಾಡಿದೆ.

ವಿಮಾನಯಾನ ಸಂಸ್ಥೆಯ ಇತರ ಎರಡು ವಿಮಾನಗಳಾದ ಮುಂಬೈನಿಂದ ಅಮೃತಸರ, ಮುಂಬೈನಿಂದ ಅಹಮದಾಬಾದ್ ವಿಮಾನಗಳನ್ನೂ ರದ್ದುಗೊಳಿಸಲಾಗಿದೆ. ಮುಂಬೈನಿಂದ ದೆಹಲಿ ವಿಮಾನ ಒಂದು ಗಂಟೆ ಐವತ್ತು ನಿಮಿಷ ತಡವಾಯಿತು.

ಕೋಪಗೊಂಡ ಪ್ರಯಾಣಿಕರು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಟ್ವೀಟ್ ಮಾಡಿ, ಗೋ ಏರ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. G8-2507 ಮತ್ತೆ ವಿಳಂಬವಾಗಿದೆ, ಈಗ 2:20 ಕ್ಕೆ ಮರುಹೊಂದಿಸಲಾಗಿದೆ ನಾನು ಚಂಡೀಗಢ ವಿಮಾನ ನಿಲ್ದಾಣದಲ್ಲಿಮಗುವಿನ ಜತೆ ಸಿಕ್ಕಿಬಿದ್ದಿದ್ದೇವೆ. ವಿಮಾನಯಾನ ಸಂಸ್ಥೆಯಿಂದ ಯಾವುದೇ ಸಹಾಯ ಲಭಿಸುತ್ತಿಲ್ಲ. ಗೋ ಏರ್ ಏರ್‌ಲೈನ್ ಬಗ್ಗೆ ತನಿಖೆ ನಡೆಸಿ. ಇವರ ವಿಮಾನ ಯಾವತ್ತೂ ವಿಳಂಬವಾಗುತ್ತದೆ ಎಂದು ಪ್ರಯಾಣಿಕರೊಬ್ಬರು ಟ್ವೀಟ್ ಮಾಡಿದ್ದಾರೆ.

ಮತ್ತೊಬ್ಬ ಪ್ರಯಾಣಿಕರು ವಿಮಾನ ಸಂಖ್ಯೆ G8 197 ಗೋ ಏರ್ ಗೋವಾದಿಂದ ದೆಹಲಿಗೆ 12:35 ಕ್ಕೆ ಹೊರಡಬೇಕಿದ್ದ ವಿಮಾನ ಎಲ್ಲಾ ಪ್ರಯಾಣಿಕರೊಂದಿಗೆ ಗೋವಾ ವಿಮಾನ ನಿಲ್ದಾಣದಲ್ಲಿದೆ. ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ, ನಾವು ಕಾಯುತ್ತಿದ್ದೇವೆ. ಕನಿಷ್ಠ ಸ್ವಲ್ಪ ಮಾಹಿತಿ ನೀಡಿ ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: BBC India: BBC ವಿರುದ್ಧ ಪ್ರಕರಣ ದಾಖಲಿಸಿ ಇ.ಡಿ

ವಿಮಾನಯಾನ ಸಂಸ್ಥೆಯು ನಿಜವಾದ ನಿಗದಿತ ನಿರ್ಗಮನ ಸಮಯ ಅಥವಾ ಪರಿಷ್ಕೃತ ನಿರ್ಗಮನ ಸಮಯವನ್ನು ಮೀರಿದ ವಿಳಂಬವನ್ನು ನಿರೀಕ್ಷಿಸಿದರೆ, ಅದು ಪರಿಹಾರ ಅಥವಾ ಸೌಲಭ್ಯಗಳಿಗೆ ಜವಾಬ್ದಾರವಾಗಿರುತ್ತದೆ. ಎಕನಾಮಿಕ್ ಟೈಮ್ಸ್‌ನ ಹಳೆಯ ವರದಿಯೊಂದರ ಪ್ರಕಾರ ಆಟಮ್ ಏವಿಯೇಷನ್ ಸರ್ವೀಸಸ್‌ನ ಸಿಇಒ ಕ್ಯಾಪ್ಟನ್ ಅರ್ಚಿತ್ ಗುಪ್ತಾ ಅವರನ್ನು ಉಲ್ಲೇಖಿಸಿ,ವಿಮಾನವು 24 ಗಂಟೆಗಳಿಗಿಂತ ಕಡಿಮೆ ವಿಳಂಬವಾದರೆ, ವಿಮಾನಯಾನವು ಪ್ರಯಾಣಿಕರಿಗೆ ಊಟ ಮತ್ತು ಉಪಹಾರವನ್ನು ಒದಗಿಸಬೇಕಾಗುತ್ತದೆ. ವಿಳಂಬವು 24 ಗಂಟೆಗಳ ಮೀರಿದರೆ, ಹೋಟೆಲ್ ವಸತಿ ಮತ್ತು ಕರೆದೊಯ್ಯುವ ವ್ಯವಸ್ಥೆಯನ್ನು ಒದಗಿಸಬೇಕು ಎಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Thu, 13 April 23