ದೆಹಲಿ ಫೆಬ್ರವರಿ 24: ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬಗ್ಗೆ ಕೇಳಿದಾಗ ಗೂಗಲ್ ಎಐ (Google’s AI) ವೇದಿಕೆ ಜೆಮಿನಿ (Gemini) ವಿವಾದಾತ್ಮಕ ಪ್ರತಿಕ್ರಿಯೆ ನೀಡಿದ್ದು ಇದನ್ನು ಕೇಂದ್ರ ಸರ್ಕಾರ ತೀವ್ರವಾಗಿ ಖಂಡಿಸಿತ್ತು. ಕೇಂದ್ರ ಸರ್ಕಾರದ ಟೀಕೆಗೆ ಪ್ರತಿಕ್ರಿಯಿಸಿದ ಟೆಕ್ ದೈತ್ಯ ಗೂಗಲ್, ಸಮಸ್ಯೆಯನ್ನು ಒಪ್ಪಿಕೊಂಡಿದ್ದು, ಚಾಟ್‌ಬಾಟ್ ಯಾವಾಗಲೂ ಪ್ರಸ್ತುತ ಘಟನೆಗಳು ಮತ್ತು ರಾಜಕೀಯ ವ್ಯಕ್ತಿಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ವಿಶ್ವಾಸಾರ್ಹ ಉತ್ತರಗಳನ್ನು ನೀಡುವುದಿಲ್ಲ ಎಂದು ಹೇಳಿದೆ. AI ನ ಪ್ರತಿಕ್ರಿಯೆಯು ಐಟಿ ನಿಯಮಗಳು ಮತ್ತು ಕೆಲವು ಕ್ರಿಮಿನಲ್ ಕೋಡ್ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಎಕ್ಸ್‌ನಲ್ಲಿ ಪಿಎಂ ಮೋದಿ ಬಗ್ಗೆ ಕೇಳಲಾದ ಪ್ರಶ್ನೆಗೆ ಜೆಮಿನಿಯ ಪ್ರತಿಕ್ರಿಯೆಯ ಸ್ಕ್ರೀನ್‌ಶಾಟ್‌ಗಳನ್ನು ಬಳಕೆದಾರರು ಹಂಚಿಕೊಂಡ ನಂತರ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಕಳವಳ ವ್ಯಕ್ತಪಡಿಸಿದ್ದರು. ಎಐನ ಪ್ರತಿಕ್ರಿಯೆಯು ಐಟಿ ನಿಯಮಗಳು ಮತ್ತು ಕೆಲವು ಕ್ರಿಮಿನಲ್ ಕೋಡ್ ನಿಬಂಧನೆಗಳನ್ನು ಉಲ್ಲಂಘಿಸಿದೆ ಎಂದು ಚಂದ್ರಶೇಖರ್ ಹೇಳಿದ್ದು, ತಮ್ಮ ಪೋಸ್ಟ್‌ನಲ್ಲಿ ಗೂಗಲ್ ಮತ್ತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವನ್ನು ಟ್ಯಾಗ್ ಮಾಡಿದ್ದಾರೆ.
These are direct violations of Rule 3(1)(b) of Intermediary Rules (IT rules) of the IT act and violations of several provisions of the Criminal code. @GoogleAI @GoogleIndia @GoI_MeitY https://t.co/9Jk0flkamN
— Rajeev Chandrasekhar 🇮🇳 (@Rajeev_GoI) February 23, 2024
ಜೆಮಿನಿಯ ಪ್ರತಿಕ್ರಿಯೆಯು ಐಟಿ ಕಾಯಿದೆಯ ಇಂಟರ್ ಮೀಡಿಯರಿ ನಿಯಮಗಳ (ಐಟಿ ನಿಯಮಗಳು) ನಿಯಮ 3(1)(ಬಿ) ಅನ್ನು ಉಲ್ಲಂಘಿಸುತ್ತದೆ ಚಂದ್ರಶೇಖರ್ ಅವರು X ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಸ್ಕ್ರೀನ್‌ಶಾಟ್‌ಗಳನ್ನು ಪೋಸ್ಟ್ ಮಾಡಿದ ಬಳಕೆದಾರರ ಪ್ರಕಾರ, ಮೋದಿ ಪ್ರಶ್ನೆಗೆ ಜೆಮಿನಿ ತನ್ನ ಪ್ರತಿಕ್ರಿಯೆಯಲ್ಲಿ ಪಕ್ಷಪಾತವನ್ನು ತೋರಿಸಿದೆ. ಯುಎಸ್ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಯ ಬಗ್ಗೆ ಇದೇ ರೀತಿಯ ಪ್ರಶ್ನೆಗಳನ್ನು ಕೇಳಿದಾಗಲೂ ಅದು ಸ್ಪಷ್ಟ ಉತ್ತರವನ್ನು ನೀಡಲು ವಿಫಲವಾಗಿದೆ.
ಇಮೇಲ್ ಮೂಲಕ ಹೇಳಿಕೆ ನೀಡಿರುವ ಗೂಗಲ್ ವಕ್ತಾರರು ಸಮಸ್ಯೆಯನ್ನು ಪರಿಹರಿಸಲು ಅವರು ತ್ವರಿತ ಕಾರ್ಯ ನಿರ್ವಹಿಸಿದ್ದಾರೆ ಎಂದು ಹೇಳಿದ್ದಾರೆ. ಜೆಮಿನಿಯನ್ನು ಪ್ರಾಥಮಿಕವಾಗಿ ಸೃಜನಶೀಲತೆ ಮತ್ತು ಉತ್ಪಾದಕತೆಯ ಸಾಧನವಾಗಿ ವಿನ್ಯಾಸಗೊಳಿಸಲಾಗಿದೆ. ವಿಶೇಷವಾಗಿ ಪ್ರಸ್ತುತ ಘಟನೆಗಳು ಅಥವಾ ರಾಜಕೀಯ ವಿಷಯಗಳಿಗೆ ಸಂಬಂಧಿಸಿದ ವಿಷಯಗಳು ವಿಶ್ವಾಸಾರ್ಹವಾಗಿರುವುದಿಲ್ಲ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ: ಪ್ರಧಾನಿ ಮೋದಿ ಕುರಿತು ಎಐ ಜೆಮಿನಿ ತಾರತಮ್ಯದ ಉತ್ತರ; ಗೂಗಲ್ಗೆ ನೋಟಿಸ್ ನೀಡಲು ಕೇಂದ್ರ ಚಿಂತನೆ
ಇಮೇಲ್ ಹೇಳಿಕೆಯಲ್ಲಿ, Google ವಕ್ತಾರರು ಈ ರೀಕಿ ಹೇಳಿದ್ದಾರೆ: “ಈ ಸಮಸ್ಯೆಯನ್ನು ಪರಿಹರಿಸಲು ನಾವು ತ್ವರಿತವಾಗಿ ಕೆಲಸ ಮಾಡಿದ್ದೇವೆ.” ಜೆಮಿನಿಯನ್ನು ಸೃಜನಶೀಲತೆ ಮತ್ತು ಉತ್ಪಾದಕತೆಯ ಸಾಧನವಾಗಿ ನಿರ್ಮಿಸಲಾಗಿದೆ. ಅದು ಯಾವಾಗಲೂ ವಿಶ್ವಾಸಾರ್ಹವಾಗಿರುವುದಿಲ್ಲ, ವಿಶೇಷವಾಗಿ ಪ್ರಸ್ತುತ ಘಟನೆಗಳು, ರಾಜಕೀಯ ವಿಷಯಗಳು ಅಥವಾ ಅಪ್ಡೇಟ್ ಆಗುವ ಸುದ್ದಿಗಳ ಕುರಿತು ಪ್ರತಿಕ್ರಿಯಿಸುವಾಗ ಎಲ್ಲವೂ ಸರಿಯಾಗಿರಬೇಕೆಂದೇನಿಲ್ಲ ಎಂದು ಹೇಳಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ