ಮರಾಠ ಮೀಸಲಾತಿಗೆ ಒಪ್ಪಿಗೆ ನೀಡಿದ ಸರ್ಕಾರ: 14 ವರ್ಷಗಳ ಹೋರಾಟ ಅಂತ್ಯ, ಮನೋಜ್ ಜಾರಂಗೆ ಯಾರು? ಹೋರಾಟ ಹೇಗಿತ್ತು?

ಮರಾಠ ಕೋಟಾಕ್ಕಾಗಿ ನಿರಂತರವಾಗಿ ಪ್ರತಿಭಟನೆ ಮಾಡಿದ ಮನೋಜ್ ಜಾರಂಗೆ ಪಾಟೀಲ್ ಅವರಿಗೆ ಕೊನೆಗೂ ಜಯ ಸಿಕ್ಕಿದೆ. ಮನೋಜ್ ಅವರು ಎತ್ತಿದ್ದ ಎಲ್ಲ ಬೇಡಿಕೆಗಳನ್ನು ಅಂಗೀಕರಿಸಿ, ಸುಗ್ರೀವಾಜ್ಞೆ ಹೊರಡಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಇವರ ನಿರಂತರ ಹೋರಾಟದ ಫಲವಾಗಿ ಅವರು ಎತ್ತಿರುವ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಹೇಳಿದೆ.

ಮರಾಠ ಮೀಸಲಾತಿಗೆ ಒಪ್ಪಿಗೆ ನೀಡಿದ ಸರ್ಕಾರ: 14 ವರ್ಷಗಳ ಹೋರಾಟ ಅಂತ್ಯ, ಮನೋಜ್ ಜಾರಂಗೆ ಯಾರು? ಹೋರಾಟ ಹೇಗಿತ್ತು?
Follow us
ಅಕ್ಷಯ್​ ಪಲ್ಲಮಜಲು​​
|

Updated on: Jan 27, 2024 | 10:39 AM

ಮುಂಬೈ, ಜ.27: ಮರಾಠ ಕೋಟಾಕ್ಕಾಗಿ ನಿರಂತರವಾಗಿ ಪ್ರತಿಭಟನೆ ಮಾಡಿದ ಮನೋಜ್ ಜಾರಂಗೆ ಪಾಟೀಲ್ ಅವರಿಗೆ ಕೊನೆಗೂ ಜಯ ಸಿಕ್ಕಿದೆ. ಮನೋಜ್ ಅವರು ಎತ್ತಿದ್ದ ಎಲ್ಲ ಬೇಡಿಕೆಗಳನ್ನು ಅಂಗೀಕರಿಸಿ, ಸುಗ್ರೀವಾಜ್ಞೆ ಹೊರಡಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಇವರ ನಿರಂತರ ಹೋರಾಟದ ಫಲವಾಗಿ ಅವರು ಎತ್ತಿರುವ ಎಲ್ಲ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಹೇಳಿದೆ. ಇದೀಗ ಮನೋಜ್ ತಮ್ಮ ಉಪವಾಸ ಮತ್ತು ಆಂದೋಲನವನ್ನು ಹಿಂಪಡೆಯಲು ಮುಂದಾಗಿದ್ದಾರೆ.

ಮನೋಜ್ ಜಾರಂಗೆ ಪಾಟೀಲ್ ಅವರು ಇತರ ಹಿಂದುಳಿದ ವರ್ಗಗಳ (OBC) ಅಡಿಯಲ್ಲಿ ತನ್ನ (ಮರಾಠ ಕೋಟಾ) ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ನೀಡಬೇಕು ಎಂಬ ಒತ್ತಾಯವನ್ನು ಮಾಡಿ ನೆನ್ನೆ(ಜ.26) ಮುಂಬೈನಲ್ಲಿ ಪ್ರತಿಭಟನೆ ಮಾಡುವ ಪ್ಲಾನ್​​​​ ಹಾಕಿಕೊಂಡಿದ್ದರು. ಇದಕ್ಕಾಗಿ ದೊಡ್ಡ ಮಟ್ಟದಲ್ಲಿ ಜನರನ್ನು ಸೇರಿಸುವ ಕಾರ್ಯ ನಡೆದಿತ್ತು. ಆದರೆ ಪ್ರತಿಭಟನೆ ಮುಂಬೈ ಒಳಗೆ ಬರುವ ಮುನ್ನವೇ ಸರ್ಕಾರ ಅವರ ಎಲ್ಲ ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂಬ ಭರವಸೆಯನ್ನು ನೀಡಿದೆ. ಸುಗ್ರೀವಾಜ್ಞೆ ಹೊರಡಿಸಿದೆ.

ಮನೋಜ್ ಜಾರಂಗೆ ಪಾಟೀಲ್ ಅವರು ಮರಾಠ ಸಮುದಾಯಕ್ಕೆ ಒಬಿಸಿ ಅಡಿಯಲ್ಲಿ ಮೀಸಲಾತಿ ಬೇಕು ಎಂಬುದು ಅವರ ಪ್ರಮುಖ ಹೋರಾಟವಾಗಿತ್ತು. ಆದರೆ ಈ ಬೇಡಿಕೆಯನ್ನು ಸರ್ಕಾರ ಈಡೇರಿಸಬಾರದು ಎಂಬುದು ಕಾನೂನು ತಜ್ಞರು, ಖ್ಯಾತ ನ್ಯಾಯಶಾಸ್ತ್ರಜ್ಞರು, ಸಮಾಜದ ದೊಡ್ಡ ಮುಖಂಡರು, ಸಾಮಾಜಿಕ ಕಾರ್ಯಕರ್ತರು ಒತ್ತಡವನ್ನು ಹಾಕಿದ್ದರು. ಇದರ ಜತೆಗೆ ಒಬಿಸಿ ಸಮುದಾಯದ ಮುಖಂಡರು ಕೂಡ ಇದಕ್ಕೆ ಒತ್ತಡವನ್ನು ಹಾಕಿದರು.

ಉಚಿತ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ನೇಮಕಾತಿ ಸಿಗಬೇಕು

ನಾವು ಈ ಪ್ರತಿಭಟನೆಯಿಂದ ತುಂಬಾ ನೋವು ತಿಂದಿದ್ದೇವೆ. ನಮಗೂ ಒಬಿಸಿ ಅಡಿಯಲ್ಲಿ ಮೀಸಲಾತಿಬೇಕು, ನಮ್ಮ ಮಕ್ಕಳಿಗೂ ಒಳ್ಳೆಯ ಶಿಕ್ಷಣ ಸಿಗಬೇಕು. ಉಚಿತ ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗ ನೇಮಕಾತಿ ಸಿಗಬೇಕು ಅದಕ್ಕಾಗಿ ನಮಗೂ ಒಬಿಸಿ ಅಡಿಯಲ್ಲಿ ಮೀಸಲಾತಿ ನೀಡಿ ಎಂದು ಪ್ರತಿಭಟನೆಯನ್ನು ಮಾಡಲಾಗಿತ್ತು.

ಎಲ್ಲವನ್ನು ತಾಳ್ಮೆಯಿಂದ ಸಹಿಸಿಕೊಂಡಿದ್ದೇವೆ:

ನಮ್ಮ ಸಮುದಾಯ ಮೇಲೆ ಹಲವು ದಾಳಿಗಳು ನಡೆದಿದೆ. ಇಂದಿಗೂ ನಡೆಯುತ್ತಿದೆ. ಪ್ರತಿಭಟನೆ ಹಂತದಲ್ಲೂ ನಮ್ಮನ್ನು ಅವಮಾನಿಸಲಾಗಿತ್ತು. ನಮ್ಮ ಮೇಲೆ ಅನೇಕ ಕೇಸ್​​ಗಳನ್ನು ಹಾಕಿದ್ರು, ರಾಜಕೀಯವಾಗಿ ಒತ್ತಡಗಳು ಬಂದಿತ್ತು. ಆದರೆ ನಾವು ಯಾವುದಕ್ಕೂ ಕೋಪದಿಂದ ಉತ್ತರಿಸಿಲ್ಲ. ಎಲ್ಲವನ್ನು ತಾಳ್ಮೆಯಿಂದ ಸಹಿಸಿಕೊಂಡಿದ್ದೇವೆ.

ಇದನ್ನೂ ಓದಿ: ಮರಾಠಾ ಮೀಸಲಾತಿ: ಮುಂಬೈ ಕಡೆಗೆ ಮೆರವಣಿಗೆ ಹೊರಡುತ್ತಿದ್ದಂತೆ ಮನೋಜ್ ಜಾರಂಗೆ ಬೇಡಿಕೆಗಳಿಗೆ ಒಪ್ಪಿದ ಮಹಾರಾಷ್ಟ್ರ ಸರ್ಕಾರ

ನಮ್ಮ ಚಳವಳಿ ಮುಗಿದಿಲ್ಲ

ನಮ್ಮ ಚಳವಳಿ ಮುಗಿದಿಲ್ಲ, ಸರ್ಕಾರ ಭರವಸೆ ನೀಡಿದೆ ಅಷ್ಟೇ. ಈ ಬಗ್ಗೆ ಈಗಾಗಲೇ ಸರ್ಕಾರ ನಮ್ಮ ಜತೆಗೆ ಮಾತನಾಡಿದೆ. ಆದರೆ ಆ ಭರವಸೆ ಕಾನೂನು ರೂಪಕ್ಕೆ ಬರುವವರೆಗೆ ಸಮಾಧಾನವಿಲ್ಲ. ಒಂದು ವೇಳೆ ಸರ್ಕಾರ ಉಲ್ಟಾ ಹೊಡೆದರೆ ಮತ್ತೆ ಈ ಚಳವಳಿ ಮುಂದುವರಿಯುವುದು ಎಂದು ಹೇಳಿದ್ದಾರೆ.

ಚಳುವಳಿ ಯಾವಾಗ ಪ್ರಾರಂಭವಾಯಿತು?

ಮನೋಜ್ ಜಾರಂಗೆ ಪಾಟೀಲ್ ಅವರು 2011 ರಿಂದ ಮರಾಠ ಸಮುದಾಯಕ್ಕೆ ಒಬಿಸಿ ಅಡಿಯಲ್ಲಿ ಮೀಸಲಾತಿ ನೀಡಬೇಕು ಎಂಬ ಒತ್ತಾಯವನ್ನು ಮಾಡಿದರು. ಅಲ್ಲಿಂದ ಮೀಸಲಾತಿ ಚಳವಳಿಯಲ್ಲಿ ಸಕ್ರಿಯರಾದರು. ಈ ವಿಚಾರವಾಗಿ 2014ರಲ್ಲಿ ಛತ್ರಪತಿ ಸಂಭಾಜಿನಗರದಲ್ಲಿ ವಿಭಾಗೀಯ ಕಮಿಷನರೇಟ್ ಎದುರು ಧರಣಿ ನಡೆಸಿದ್ದರು. ನಂತರ, 2015ರಿಂದ 2023ವರೆಗೆ ನಡುವೆ 30 ಕ್ಕೂ ಹೆಚ್ಚು ಆಂದೋಲನಗಳನ್ನು ಮಾಡಿದ್ದಾರೆ.

ಸಮುದಾಯ ಮೀಸಲಾತಿಗಾಗಿ ಭೂಮಿ ಮಾರಾಟ

ಮನೋಜ್ ಜಾರಂಗೆ ಪಾಟೀಲ್ ಬೀಡ್ ಜಿಲ್ಲೆಯ ಮೋಟೋರಿ ಗ್ರಾಮದ ನಿವಾಸಿ. ಅವರು ತಮ್ಮ ಸಮುದಾಯ ಮೀಸಲಾತಿಗಾಗಿ ತಮ್ಮ ಮನೆಯನ್ನು ಮಾರಾಟ ಮಾಡಿದ್ದಾರೆ. ಜೀವನ ನಡೆಸಲು ಹೋಟೆಲ್ ಒಂದರಲ್ಲಿ ಕೆಲಸ ಮಾಡಲು ಆರಂಭಿಸಿದರು. ತಮ್ಮ ಚಳುವಳಿಯನ್ನು ಮಾಡಲು ಒಂದು ಸಂಘಟನೆ ಬೇಕು ಎಂದು ಮರಾಠಾ ಚಳವಳಿಯನ್ನು ಸ್ಥಾಪಿಸಿದರು. ಇದಕ್ಕಾಗಿ ತಮ್ಮ ಭೂಮಿಯನ್ನು ಮಾರಾಟ ಮಾಡಿದರು. ಮರಾಠ ಸಮುದಾಯದ ಮೀಸಲಾತಿಗಾಗಿ ಹಲವು ಪಾದಯಾತ್ರೆಗಳು ನಡೆದಿವೆ. ನಿರಂತರ ಉಪವಾಸ ಮಾಡಿದರು. ರಸ್ತೆ ಪ್ರತಿಭಟನೆ, ಹೀಗೆ ಅನೇಕ ಆಂದೋಲವನ್ನು ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ