ಅಯೋಧ್ಯೆಯಲ್ಲಿ ಅದಮ್ಯಚೇತನ: ಭಕ್ತರಿಗೆ ಪ್ರಸಾದ ರೂಪದಲ್ಲಿ ಆಹಾರ ನೀಡುತ್ತಿದೆ ಬೆಂಗಳೂರಿನ ಸಂಸ್ಥೆ

ಅಯೋಧ್ಯೆಯ ಧವನ್​ ಕುಂಡ್ ಅಹಿರಾನ ಮಾರ್ಗ್​ನ ವಿಜಯರಾಮ್ ಭಟ್ಕಮಲ್ ಆಶ್ರಮದಲ್ಲಿ ಆಹಾರ ವಿತರಣೆ ನಡೆಯುತ್ತಿದೆ. ಅಯೋಧ್ಯೆಗೆ ತೆರಳುತ್ತಿರುವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಸೇವೆಯನ್ನು ಪಡೆದುಕೊಳ್ಳಬೇಕು ಎಂದು ಅದಮ್ಯಚೇತನ ಸಂಸ್ಥೆ ಮನವಿ ಮಾಡಿದೆ.

ಅಯೋಧ್ಯೆಯಲ್ಲಿ ಅದಮ್ಯಚೇತನ: ಭಕ್ತರಿಗೆ ಪ್ರಸಾದ ರೂಪದಲ್ಲಿ ಆಹಾರ ನೀಡುತ್ತಿದೆ ಬೆಂಗಳೂರಿನ ಸಂಸ್ಥೆ
ಅಯೋಧ್ಯೆಯಲ್ಲಿ ಅದಮ್ಯಚೇತನ (ಚಿತ್ರ ಕೃಪೆ: ತೇಜಸ್ವಿನಿ ಅನಂತ ಕುಮಾರ್ ಫೇಸ್​ಬುಕ್ ಪೋಸ್ಟ್)
Follow us
Ganapathi Sharma
| Updated By: ಡಾ. ಭಾಸ್ಕರ ಹೆಗಡೆ

Updated on:Jan 27, 2024 | 1:20 PM

ಬೆಂಗಳೂರು, ಜನವರಿ 27: ಅಯೋಧ್ಯೆಯ ರಾಮ ಮಂದಿರಕ್ಕೂ (Ayodhya Ram Mandir) ಕರ್ನಾಟಕಕ್ಕೂ ಹಲವಾರು ರೀತಿಯ ನಂಟಿರುವುದು ರಾಮ ಲಲ್ಲಾ ಪ್ರಾಣ ಪ್ರತಿಷ್ಠೆಯ ಸಂಭ್ರಮದ ವೇಳೆ ಬೆಳಕಿಗೆ ಬಂದಿದೆ. ರಾಮ ಮಂದಿರ ಉದ್ಘಾಟನೆಯಾದ ಮರು ದಿನದಿಂದಲೇ ಬಾಲ ರಾಮನ ದರ್ಶನಕ್ಕೆ ಭಕ್ತ ಸಾಗರವೇ ಹರಿದುಬರುತ್ತಿದೆ. ಇದೀಗ ರಾಮ ಮಂದಿರಕ್ಕೆ ಬರುವ ಭಕ್ತರಿಗೆ ಬೆಂಗಳೂರಿನ ಅದಮ್ಯಚೇತನ ಸ್ವಯಂಸೇವಾ ಸಂಸ್ಥೆ (Adamya Chetana) ಪ್ರಸಾದ ರೂಪದಲ್ಲಿ ಆಹಾರವನ್ನು ನೀಡುವ ವ್ಯವಸ್ಥೆ ಮಾಡಿದೆ. ಒಂದು ತಿಂಗಳ ಮಟ್ಟಿಗೆ ರಾಮ ಮಂದಿರಕ್ಕೆ ಬರುವ ಭಕ್ತರಿಗೆ ಮೂರೂ ಹೊತ್ತು ಆಹಾರ ಪ್ರಸಾದ ನೀಡಲಾಗುತ್ತದೆ ಎಂದು ಸಂಸ್ಥೆಯ ಮುಖ್ಯಸ್ಥೆ ತೇಜಸ್ವಿನಿ ಅನಂತ ಕುಮಾರ್ ‘ಟಿವಿ9 ಡಿಜಿಟಲ್​’ಗೆ ತಿಳಿಸಿದ್ದಾರೆ.

ಕೇಂದ್ರದ ಮಾಜಿ ಸಚಿವ ಅನಂತಕುಮಾರ್ ಅವರ ಪತ್ನಿಯಾಗಿರುವ ತೇಜಸ್ವಿನಿ ಅನಂತಕುಮಾರ್ ಸದ್ಯ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಅನಂತಕುಮಾರ್ ಅವರು ರಾಮ ಮಂದಿರಕ್ಕಾಗಿ ಹೋರಾಡಿದವರಲ್ಲಿ ಪ್ರಮುಖರಾಗಿದ್ದು, ಪ್ರಭಾವಿ ರಾಜಕಾರಣಿಯಾಗಿಯೂ ಇದ್ದವರು.

ಆಹಾರ ಪ್ರಸಾದ ವಿತರಣೆ, ಸಮಯದ ವಿವರ

ಬೆಳಗ್ಗೆ 9.30 ರಿಂದ ಮಧ್ಯಾಹ್ನ 12ರ ವರೆಗೆ ಇಡ್ಲಿ, ಸಾಂಬಾರ್​​ ವಿತರಣೆ ಮಾಡಲಾಗುತ್ತದೆ. 12ರ ನಂತರ 3 ಗಂಟೆ ವರೆಗೆ ಬಿಸಿಬೇಳೆ ಬಾತ್ / ಪೊಂಗಲ್ ಹಾಗೂ ಸಿಹಿ ತಿಂಡಿ ವಿತರಣೆ ಮಾಡಲಾಗುತ್ತದೆ ಎಂದು ಅದಮ್ಯಚೇತನ ಸಂಸ್ಥೆ ತಿಳಿಸಿದೆ.

ಅಯೋಧ್ಯೆಯ ಧವನ್​ ಕುಂಡ್ ಅಹಿರಾನ ಮಾರ್ಗ್​ನ ವಿಜಯರಾಮ್ ಭಟ್ಕಮಲ್ ಆಶ್ರಮದಲ್ಲಿ ಆಹಾರ ವಿತರಣೆ ನಡೆಯುತ್ತಿದೆ. ಅಯೋಧ್ಯೆಗೆ ತೆರಳುತ್ತಿರುವ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಸೇವೆಯನ್ನು ಪಡೆದುಕೊಳ್ಳಬೇಕು ಎಂದು ಅದಮ್ಯಚೇತನ ಸಂಸ್ಥೆ ಮನವಿ ಮಾಡಿದೆ.

ಇನ್ನು, ಅನ್ನದಾನ ಸೇವೆ ಒದಗಿಸುತ್ತಿರುವ ಬಗ್ಗೆ ತೇಜಸ್ವಿನಿ ಅನಂತಕುಮಾರ್ ಅವರು ಫೇಸ್​ಬುಕ್​​ನಲ್ಲಿಯೂ ಮಾಹಿತಿ ಹಂಚಿಕೊಂಡಿದ್ದಾರೆ. ‘ಪುಣ್ಯಭೂಮಿ ಭಾರತದ ದೇವಭೂಮಿ ಅಯೋಧ್ಯೆಯಲ್ಲಿ ಅದಮ್ಯ ಚೇತನಕ್ಕೆ ಅನ್ನದಾನದ ಸೇವೆಯ ಸೌಭಾಗ್ಯ ದೊರೆತಿದೆ. ಶ್ರೀ ರಾಮ ಜಯ ರಾಮ ಜೈ ಜೈ ರಾಮ’ ಎಂದು ಅವರು ಸಂದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಗವಿಮಠದ ಜಾತ್ರೆಯ ರಥಬೀದಿಯಲ್ಲಿ ರಾಮಜಪ; ರಂಗೋಲಿಯಲ್ಲಿ ಅರಳಿದ ರಾಮ ಮಂದಿರ

ಬೆಂಗಳೂರಿನಲ್ಲಿಯೂ ನಿತ್ಯ ಅನ್ನದಾನ

ಅದಮ್ಯಚೇತನ ಸಂಸ್ಥೆ ಬೆಂಗಳೂರಿನಲ್ಲಿ ಪ್ರತಿನಿತ್ಯ ನೂರಾರು ಶಾಲಾ ಮಕ್ಕಳಿಗೆ ಉತ್ತಮವಾದ ಆಹಾರ ಪ್ರಸಾದವನ್ನು ವಿತರಣೆ ಮಾಡುತ್ತಿದೆ. ಕಳೆದ ಹಲವಾರು ವರ್ಷಗಳಿಂದ ಸಂಸ್ಥೆ ಅನ್ನದಾನ ಮಾಡಿಕೊಂಡು ಬರುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:38 pm, Sat, 27 January 24