- Kannada News Photo gallery Ram japa at the Rathabeedi of the Gavimath fair; Rama Mandir blooming in Rangoli koppal news
ಗವಿಮಠದ ಜಾತ್ರೆಯ ರಥಬೀದಿಯಲ್ಲಿ ರಾಮಜಪ; ರಂಗೋಲಿಯಲ್ಲಿ ಅರಳಿದ ರಾಮ ಮಂದಿರ
ದಕ್ಷಿಣದ ಕುಂಭಮೇಳ ಅಂತ ಪ್ರಸಿದ್ಧಿ ಪಡೆದಿರೋ ಕೊಪ್ಪಳ ನಗರದ ಸುಪ್ರಸಿದ್ಧ ಗವಿಮಠದ ಜಾತ್ರೆ ಆರಂಭವಾಗಿದೆ. ಹೀಗಾಗಿ ರಥ ಬೀದಿಯಲ್ಲಿ ನಾರಿಯರು ನೂರಕ್ಕೂ ಹೆಚ್ಚು ರಂಗೋಲಿಗಳನ್ನು ಬಿಡಿಸಿದ್ದು, ಈ ಬಾರಿ ರಂಗೋಲಿಯಲ್ಲಿ ರಾಮ ಮಂದಿರದ ಅನೇಕ ಚಿತ್ರಗಳು ಭಕ್ತರ ಗಮನ ಸೆಳೆಯುತ್ತಿವೆ.
Updated on:Jan 27, 2024 | 12:34 PM

ದಕ್ಷಿಣದ ಕುಂಭಮೇಳ ಅಂತ ಪ್ರಸಿದ್ಧಿ ಪಡೆದಿರೋ ಕೊಪ್ಪಳ ನಗರದ ಸುಪ್ರಸಿದ್ಧ ಗವಿಮಠದ ಜಾತ್ರೆ ಇಂದಿನಿಂದ ಆರಂಭವಾಗಿದೆ. ಇಂದು ಸಂಜೆ 5.30 ಕ್ಕೆ ಗವಿಸಿದ್ದೇಶ್ವರರ ರಥೋತ್ಸವ ಅದ್ದೂರಿಯಾಗಿ ನಡೆಯಲಿದ್ದು, ಲಕ್ಷಾಂತರ ಭಕ್ತರು ಮಠದ ರಥೋತ್ಸವ ಕ್ಕೆ ಸಾಕ್ಷಿಯಾಗಲಿದ್ದಾರೆ.

ರಥ ಬೀದಿಯಲ್ಲಿ ನಾರಿಯರು ನೂರಕ್ಕೂ ಹೆಚ್ಚು ರಂಗೋಲಿಗಳನ್ನು ಬಿಡಿಸಿದ್ದು, ಈ ಬಾರಿ ರಂಗೋಲಿಯಲ್ಲಿ ರಾಮ ಮಂದಿರದ ಅನೇಕ ಚಿತ್ರಗಳು ಭಕ್ತರ ಗಮನ ಸೆಳೆಯುತ್ತಿವೆ. ರಥಬೀದಿಯ ರಂಗೋಲಿಗಳಲ್ಲಿ ರಾಮಜಪವಾಗಿದೆ.

ಕೆಲ ದಿನಗಳ ಹಿಂದಷ್ಟೇ ರಾಮ ಮಂದಿರ ಉದ್ಘಾಟನೆಯಾಗಿದ್ದು, ಮಠದ ರಥಬೀದಿಯ ರಂಗೋಲಿಯಲ್ಲಿ ರಾಮ ಮತ್ತು ರಾಮ ಮಂದಿರದ ಚಿತ್ರಗಳು ಕಣ್ಮಣ ಸೆಳೆಯುತ್ತಿವೆ. ಮಠದ ಮೈದಾನದಲ್ಲಿ ಇಂದು ರಥೋತ್ಸವ ನಡೆಯಲಿದೆ.

ಸುತ್ತೂರು ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ರಥಸಾಗುವ ಮಾರ್ಗದಲ್ಲಿ ರಂಗೋಲಿಯನ್ನು ಹಾಕಲಾಗಿದೆ.

ಆದರೆ ಹತ್ತಕ್ಕೂ ಹೆಚ್ಚು ರಂಗೋಲಿಗಳು ರಾಮ ಮಂದಿರ, ರಾಮ, ರಾಮ ಸೀತೆಯೊಂದಿಗೆ ಇರೋ ಅನೇಕ ಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸಲಾಗಿದೆ.

ರಾಮ ಮಂದಿರದ ರಂಗೋಲಿಯನ್ನು ಹಾಕಿ, ರಂಗೋಲಿ ಕೆಳಗೆ ರಾಮನ ಗುಣಗಾನ ಮಾಡುವ ಅನೇಕ ಬರಹಗಳನ್ನು ಕೂಡಾ ಬರೆಯಲಾಗಿದೆ.

ಇನ್ನು ನಾರಿಶಕ್ತಿ, ಚಂದ್ರಯಾನ, ಕಾಯಕ ದೇವೋಭವ ಸೇರಿದಂತೆ ಅನೇಕ ಜಾಗೃತಿಯ ರಂಗೋಲಿಗಳು ಕೂಡಾ ಇದ್ದು, ಎಲ್ಲರ ಆಕರ್ಷಣೆಯನ್ನು ಹೆಚ್ಚಿಸಿವೆ.
Published On - 12:31 pm, Sat, 27 January 24



