AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರದ ಹಸಿವಿನ ದುರಾಸೆಯ ಜನರು ಭಾರತವನ್ನು ಒಡೆಯಲು ಬಯಸುತ್ತಾರೆ: ಗುಜರಾತ್‌ನಲ್ಲಿ ಪ್ರಧಾನಿ ಮೋದಿ

ಅಧಿಕಾರದ ಹಸಿವಿನ ಈ ದುರಾಸೆಯ ಜನರು ಭಾರತವನ್ನು ತುಂಡು ಮಾಡಲು ಬಯಸುತ್ತಾರೆ. ಈ ಜನರು ಒಟ್ಟಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಮರಳಿ ತರುತ್ತೇವೆ ಅಥವಾ ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಸಂವಿಧಾನಗಳು ಮತ್ತು ಎರಡು ಕಾನೂನುಗಳ ನಿಯಮವನ್ನು ಮತ್ತೆ ಜಾರಿಗೆ ತರಲು ಬಯಸುತ್ತಾರೆ ಎಂದು ಹೇಳುತ್ತಿದ್ದಾರೆ ಎಂದು ಮೋದಿ ವಿಪಕ್ಷಗಳ ವಿರುದ್ಧ ದಾಳಿ ಮಾಡಿದ್ದಾರೆ.

ಅಧಿಕಾರದ ಹಸಿವಿನ ದುರಾಸೆಯ ಜನರು ಭಾರತವನ್ನು ಒಡೆಯಲು ಬಯಸುತ್ತಾರೆ: ಗುಜರಾತ್‌ನಲ್ಲಿ ಪ್ರಧಾನಿ ಮೋದಿ
ನರೇಂದ್ರ ಮೋದಿ
ರಶ್ಮಿ ಕಲ್ಲಕಟ್ಟ
|

Updated on: Sep 16, 2024 | 7:17 PM

Share

ಅಹಮದಾಬಾದ್‌ ಸೆಪ್ಟೆಂಬರ್ 16: “ನಕಾರಾತ್ಮಕತೆಯಿಂದ ತುಂಬಿರುವ” ಕೆಲವರು ದೇಶದ ಏಕತೆ ಮತ್ತು ಸಮಗ್ರತೆಯ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಭಾರತದಲ್ಲಿ ನಂಬಿಕೆ ಹೆಚ್ಚಾದಾಗ, ನಮ್ಮ ರಫ್ತು ಹೆಚ್ಚಾಗುತ್ತದೆ. ದೇಶಕ್ಕೆ ಹೆಚ್ಚಿನ ಹೂಡಿಕೆ ಬರುತ್ತದೆ. ಭಾರತದಲ್ಲಿ ನಂಬಿಕೆ ಹೆಚ್ಚಾದಾಗ ವಿದೇಶಿ ಹೂಡಿಕೆದಾರರು ತಮ್ಮ ಹಣವನ್ನು ಭಾರತದಲ್ಲಿ ಹೂಡಿಕೆ ಮಾಡುತ್ತಾರೆ. ಅವರು ಕಾರ್ಖಾನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಒಂದೆಡೆ, ದೇಶದ ಪ್ರತಿಯೊಬ್ಬ ಪ್ರಜೆಯೂ ಇಡೀ ವಿಶ್ವದಲ್ಲಿ ಭಾರತದ ಬ್ರಾಂಡ್ ಅಂಬಾಸಿಡರ್ ಆಗಲು ಬಯಸುತ್ತಾನೆ ಮತ್ತು ತನ್ನ ದೇಶವನ್ನು ಮುಂದಕ್ಕೆ ಕೊಂಡೊಯ್ಯಲು ತೊಡಗಿದ್ದಾನೆ, ”ಎಂದು ಅಹಮದಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೋದಿ ಹೇಳಿದ್ದಾರೆ.

ಮತ್ತೊಂದೆಡೆ, ಅದೇ ದೇಶದಲ್ಲಿ ನಕಾರಾತ್ಮಕತೆಯಿಂದ ತುಂಬಿರುವ ಕೆಲವರು ಇದಕ್ಕೆ ವಿರುದ್ಧವಾಗಿ ಮಾಡುತ್ತಿದ್ದಾರೆ. ಈ ಜನರು ದೇಶದ ಏಕತೆಯ ಮೇಲೆ ದಾಳಿ ಮಾಡುತ್ತಿದ್ದಾರೆ. ಅಧಿಕಾರದ ಹಸಿವಿನ ಈ ದುರಾಸೆಯ ಜನರು ಭಾರತವನ್ನು ತುಂಡು ಮಾಡಲು ಬಯಸುತ್ತಾರೆ. ಈ ಜನರು ಒಟ್ಟಾಗಿ ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ಮರಳಿ ತರುತ್ತೇವೆ ಅಥವಾ ಜಮ್ಮು ಮತ್ತು ಕಾಶ್ಮೀರದಲ್ಲಿ ಎರಡು ಸಂವಿಧಾನಗಳು ಮತ್ತು ಎರಡು ಕಾನೂನುಗಳ ನಿಯಮವನ್ನು ಮತ್ತೆ ಜಾರಿಗೆ ತರಲು ಬಯಸುತ್ತಾರೆ ಎಂದು ಹೇಳುತ್ತಿದ್ದಾರೆ.

“ನಕಾರಾತ್ಮಕತೆಯಿಂದ ತುಂಬಿರುವ ಜನರು ಭಾರತವನ್ನು ದೂಷಿಸಲು ಯಾವುದೇ ಅವಕಾಶವನ್ನು ಬಿಡುವುದಿಲ್ಲ, ಅದಕ್ಕಾಗಿಯೇ ಈ ಜನರು ನಿರಂತರವಾಗಿ ಗುಜರಾತ್ ಅನ್ನು ಗುರಿಯಾಗಿಸುತ್ತಿದ್ದಾರೆ. ಹೀಗಾಗಿ ಅವರ ಬಗ್ಗೆ ಗುಜರಾತ್ ಎಚ್ಚರಿಕೆ ವಹಿಸಬೇಕು. ಅವರ ಮೇಲೂ ನಿಗಾ ಇಡಬೇಕಿದೆ. ಅಭಿವೃದ್ಧಿ ಪಥದಲ್ಲಿರುವ ಭಾರತ ಅಂತಹ ಶಕ್ತಿಗಳ ವಿರುದ್ಧ ಪ್ರಬಲ ಹೋರಾಟ ನಡೆಸಲಿದೆ. ಭಾರತಕ್ಕೆ ಈಗ ವ್ಯರ್ಥ ಮಾಡಲು ಸಮಯವಿಲ್ಲ, ನಾವು ಭಾರತದ ಅಭಿವೃದ್ಧಿಯನ್ನು ಹೆಚ್ಚಿಸಬೇಕು ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಘನತೆಯ ಜೀವನವನ್ನು ನೀಡಬೇಕು. ಇದರಲ್ಲಿ ಗುಜರಾತ್ ಕೂಡ ಮುಂಚೂಣಿಯಲ್ಲಿದೆ ಎಂದು ನನಗೆ ತಿಳಿದಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿಗೆ ನಾಳೆ 74 ವರ್ಷ; ಬಿಜೆಪಿಯಿಂದ ಎಲ್ಲೆಲ್ಲಿ, ಏನೇನು ಕಾರ್ಯಕ್ರಮ?

‘ದೇಶಕ್ಕೆ ಸುವರ್ಣ ಕಾಲ’: ಪ್ರಧಾನಿ ಮೋದಿ

ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ, ಪ್ರಸ್ತುತ ಅವಧಿ “ದೇಶಕ್ಕೆ ಸುವರ್ಣ ಕಾಲ” ಎಂದು ಹೇಳಿದ್ದಾರೆ.  ಮುಂದಿನ 25 ವರ್ಷಗಳಲ್ಲಿ ನಾವು ಭಾರತವನ್ನು ಅಭಿವೃದ್ಧಿ ಪಡಿಸಬೇಕಾಗಿದೆ. ಈ ಗುರಿಯಲ್ಲಿ ಗುಜರಾತ್ ನಿರ್ಣಾಯಕ ಪಾತ್ರ ವಹಿಸಲಿದೆ. ಗುಜರಾತ್ ಇಂದು ಬೃಹತ್ ಉತ್ಪಾದನಾ ಕೇಂದ್ರವಾಗುತ್ತಿದೆ. ಇದು ದೇಶದ ಅತ್ಯಂತ ಉತ್ತಮ ಸಂಪರ್ಕ ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದೆ. ಭಾರತದಲ್ಲಿ ತಯಾರಿಸಿದ ಮೊದಲ ಸಾರಿಗೆ ವಿಮಾನ C295 ಅನ್ನು ಗುಜರಾತ್ ಉಡುಗೊರೆಯಾಗಿ ನೀಡುವ ದಿನ ದೂರವಿಲ್ಲ ಎಂದು ಮೋದಿ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ