ಮದುವೆ ಮನೆಯ ಊಟದಲ್ಲಿ ಮೀನಿಲ್ಲ ಎಂದು ವಧುವಿನ ಕಡೆಯವರ ಮೇಲೆ ಹಲ್ಲೆ, 6 ಮಂದಿಗೆ ಗಾಯ
ಊಟದಲ್ಲಿ ಮೀನು ಇಲ್ಲ ಎಂದು ಆರೋಪಿಸಿ ವರನೊಬ್ಬ ವಧು ಹಾಗೂ ಆಕೆಯ ತಂದೆ-ತಾಯಿಗೆ ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಮದುವೆ ಮನೆಯ ಊಟದಲ್ಲಿ ಮೀನು ಇಲ್ಲ ಎಂದು ವರನ ಕಡೆಯವರು ವಧುವಿನ ಮನೆಯವರ ಮೇಲೆ ಹಲ್ಲೆ ನಡೆಸಿದ್ದು, 6 ಮಂದಿ ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ವರನನ್ನು ಅಭಿಷೇಕ್ ಶರ್ಮಾ ಎಂದು ಗುರುತಿಸಲಾಗಿದೆ, ಸುಷ್ಮಾ ಎಂಬುವವರನ್ನು ಮದುವೆಯಾಗಲು ಡಿಯೋರಿಯಾದ ಆನಂದ್ ನಗರಕ್ಕೆ ಬಂದಿದ್ದರು.
ವರಮಾಲೆ ಬಳಿಕ ವರನ ಕಡೆಯವರಿಗೆ ಊಟಕ್ಕೆ ಸಿದ್ಧತೆ ಮಾಡಲಾಗಿತ್ತು, ಪನೀರ್, ಪಲಾವ್ ಸೇರಿದಂತೆ ಸಸ್ಯಾಹಾರಿ ಭಕ್ಷ್ಯಗಳಿದ್ದವು ಆದರೆ ಮಾಂಸಾಹಾರ ಯಾಕಿಲ್ಲ ಎಂದು ಪ್ರಶ್ನೆ ಮಾಡಿದ್ದರು. ಬಳಿಕ ಗಲಾಟೆ ಮಿತಿ ಮೀರಿ ವರನ ಕಡೆಯವರು ವಧುವಿನ ಕಡೆಯವರಿಗೆ ಥಳಿಸಿದ್ದಾರೆ.
ಹುಡುಗಿಯ ತಂದೆ ವರ ಮತ್ತು ಅವನ ಕೆಲವು ಸಹಚರರ ವಿರುದ್ಧ ಎಫ್‌ಐಆರ್ ಕೂಡ ದಾಖಲಿಸಿದ್ದಾರೆ. ಕೆಲವರನ್ನು ಬಂಧಿಸಲಾಗಿದೆ. ಈ ಇಡೀ ವಿವಾದವು ಕ್ಷುಲ್ಲಕ ವಿಷಯಕ್ಕೆ ಪ್ರಾರಂಭವಾಗಿತ್ತು. ಊಟಕ್ಕೆ ಏನಿದೆ ಎಂದು ವರ ಕೇಳಿದ್ದಾನೆ ಬಳಿಕ ಮೆನು ಬಗ್ಗೆ ಕೇಳಿ ಬಳಿಕ ಮಾಂಸಾಹಾರವಿಲ್ಲ ಎಂದು ಗಲಾಟೆ ಮಾಡಿದ್ದಾನೆ ಎಂದು ವಧುವಿನ ತಾಯಿ ಮೀರಾ ಶರ್ಮಾ ತಿಳಿಸಿದ್ದಾರೆ. ವರ ವಧುವಿನ ತಂದೆ-ತಾಯಿಗೆ ಕಪಾಳಮೋಕ್ಷ ಮಾಡಿದ್ದಾನೆ.
ಮತ್ತಷ್ಟು ಓದಿ: Viral Video: ಮದುವೆ ಮಂಟಪದಿಂದ ವರನನ್ನು ಒದ್ದು ಹೊರ ಹಾಕಿದ ವಧು; ವಿಡಿಯೋ ವೈರಲ್
ಪೊಲೀಸರು ಬರುವ ಮುನ್ನವೇ ವರ ಸೇರಿದಂತೆ ಹಲವರು ಮದುವೆಯಾಗದೆ ಸ್ಥಳದಿಂದ ತೆರಳಿದ್ದರು.ಪೊಲೀಸರು ಕೆಲವರನ್ನು ವಶಕ್ಕೆ ಪಡೆದು ಠಾಣೆಗೆ ಬಂದರು. ಮದ್ಯದ ಅಮಲಿನಲ್ಲಿ ವರ ಊಟದ ವಿಚಾರದಲ್ಲಿ ಜಗಳವಾಡಿದ್ದಾನೆ ಎಂದು ಪೊಲೀಸ್ ಠಾಣೆ ಪ್ರಭಾರಿ ರಾಜೇಶ್ ಪಾಂಡೆ ತಿಳಿಸಿದ್ದಾರೆ. ವಧುವಿಗೆ ಕಪಾಳಮೋಕ್ಷ ಮಾಡಿರುವ ಬಗ್ಗೆಯೂ ಮಾಹಿತಿ ಬಂದಿದೆ ಎಂದು ತಿಳಿಸಿದರು.
ವಧುವಿನ ತಂದೆ ದಿನೇಶ್ ಶರ್ಮಾ ಅವರ ದೂರಿನ ಆಧಾರದ ಮೇಲೆ ವರ ಅಭಿಷೇಕ್ ಶರ್ಮಾ, ಸುರೇಂದ್ರ ಶರ್ಮಾ, ರಾಮ್ ಪ್ರವೇಶ್ ಶರ್ಮಾ, ರಾಜ್‌ಕುಮಾರ್ ಮತ್ತು ಕೆಲವು ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ