ಮಟನ್ ಸಾಂಬಾರಿನಲ್ಲಿ ಮೂಳೆ ಸಿಗಲಿಲ್ಲ ಎಂದು ಮದುವೆಯನ್ನೇ ರದ್ದುಗೊಳಿಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಮಟನ್ನಲ್ಲಿ ಮೂಳೆ ಸಿಗಲಿಲ್ಲ ಎನ್ನುವ ಕಾರಣಕ್ಕೆ ಶುರುವಾದ ಜಗಳದಿಂದಾಗಿ ಮದುವೆ ರದ್ದುಗೊಂಡಿದೆ. ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ಘಟನೆ ನಡೆದಿದೆ, ವಧು, ವರರಿಬ್ಬರು ಒಪ್ಪಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮದುವೆಯ ದಿನವೂ ನಿಶ್ಚಯವಾಗಿತ್ತು.
ಆ ಖುಷಿಯಲ್ಲಿ ಮಾಂಸದೂಟವನ್ನು ಏರ್ಪಡಿಸಿದ್ದರು, ಮಧುಮಗನ ಕುಟುಂಬದ ಸದಸ್ಯರು ಭಾಗವಹಿಸಿದ್ದರು. ಎಲ್ಲವೂ ಸುಸೂತ್ರವಾಗಿ ನಡೆಯುತ್ತಿರುವಾಗ ಇದ್ದಕ್ಕಿದ್ದಂತೆ ಅತಿಥಿಗಳು ಮಾಂಸಾಹಾರಿ ಖಾದ್ಯ ಮಟನ್ ಸಾಂಬಾರಿನಲ್ಲಿ ಮೂಳೆ ಸಿಗಲಿಲ್ಲ ಎಂದು ಗಲಾಟೆ ಶುರು ಮಾಡಿದ್ದರು. ಇದು ಅಂತಿಮವಾಗಿ ಎರಡೂ ಪಕ್ಷಗಳ ನಡುವೆ ಜಗಳಕ್ಕೆ ಕಾರಣವಾಯಿತು.
ಸಮಸ್ಯೆ ಸ್ಥಳೀಯ ಪೊಲೀಸ್ ಠಾಣೆಗೆ ತಲುಪಿತು, ಮಾಂಸದ ವಿಚಾರಕ್ಕೆ ಸಂಬಂಧಿಸಿದಂತೆ ವರನ ಕಡೆಯವರಿಗೆ ಮನವರಿಕೆ ಮಾಡಲು ಅಧಿಕಾರಿಗಳು ಪ್ರಯತ್ನಿಸಿದರು.
ಆದರೆ, ವಧುವಿನ ಮನೆಯವರು ಮಾಂಸಾಹಾರದಲ್ಲಿ ಮೂಳೆಯನ್ನು ನೀಡದೆ ಅವಮಾನ ಮಾಡಿದ್ದಾರೆ ಎಂದು ವಾದಿಸಿದರು.
ವಧುವಿನ ಮನೆಯವರು ಈ ಬಗ್ಗೆ ಮೊದಲೇ ತಿಳಿಸಿರಲಿಲ್ಲ, ಮೂಳೆಯನ್ನು ಊಟದಲ್ಲಿ ಸೇರಿಸಲಿಲ್ಲ ಎಂದು ವಾದಿಸಿದರು.
ಕೊನೆಗೆ ಎರಡೂ ಕಡೆಯವರು ತಮ್ಮ ತಮ್ಮ ಊರುಗಳಿಗೆ ತೆರಳಿ ಮದುವೆ ರದ್ದತಿಗೆ ಕಾರಣವಾದ ವಿಚಾರವನ್ನು ನೋಡಿ ಪೊಲೀಸರು ಹಾಗೂ ಸ್ಥಳೀಯರು ಆಶ್ಚರ್ಯಚಕಿತರಾದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:26 am, Tue, 26 December 23