ಗುಜರಾತ್: ಸೇನಾಧಿಕಾರಿ ಮನೆಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದವ ನಟ ಶಾರೂಖ್ ಖಾನ್ ಮನೆಗೂ ನುಗ್ಗಿದ್ದನಂತೆ!
ಗುಜರಾತ್ನಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ರಾಮ್ ಸ್ವರೂಪ್ ಕುಶ್ವಾಹ ಕಳೆದ ಎರಡು ವರ್ಷಗಳ ಹಿಂದೆ ಬಾಲಿವುಡ್ ನಟ ಶಾರೂಖ್ ಖಾನ್ ಮನೆಗೂ ನುಗ್ಗಿದ್ದ ಎನ್ನುವ ವಿಚಾರ ಬಹಿರಂಗಗೊಂಡಿದೆ. ನಾಲ್ಕು ದಿನಗಳ ಹಿಂದೆ ಮನೆಗೆ ನುಗ್ಗಿ 2.74 ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಕದ್ದ ಆರೋಪದ ಮೇಲೆ ಗುಜರಾತ್ ಪೊಲೀಸರು ರಾಮ್ ಸ್ವರೂಪ್ ಕುಶ್ವಾಹ ಮತ್ತು ಮಿನ್ಹಾಜ್ ಸಿಂಧಾನನ್ನು ಬಂಧಿಸಿದ್ದರು.

ಗುಜರಾತ್ನಲ್ಲಿ ಸೇನಾ ಅಧಿಕಾರಿಯೊಬ್ಬರ ಮನೆಯಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದ ವ್ಯಕ್ತಿ 2023ರಲ್ಲಿ ಮುಂಬೈನಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಮನೆ ‘ಮನ್ನತ್’ಗೂ ನುಗ್ಗಿದ್ದ ಎನ್ನುವ ವಿಚಾರ ವ್ಯಕ್ತಿಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಗುಜರಾತ್ನ ಭರೂಚ್ನಲ್ಲಿ ವ್ಯಕ್ತಿಯನ್ನು ಬಂಧಿಸಲಾಗಿದೆ. ನಾಲ್ಕು ದಿನಗಳ ಹಿಂದೆ ಮನೆಗೆ ನುಗ್ಗಿ 2.74 ಲಕ್ಷ ರೂ.ಗೂ ಅಧಿಕ ಮೌಲ್ಯದ ಚಿನ್ನ ಹಾಗೂ ಬೆಳ್ಳಿ ವಸ್ತುಗಳನ್ನು ಕದ್ದ ಆರೋಪದ ಮೇಲೆ ಗುಜರಾತ್ ಪೊಲೀಸರು ರಾಮ್ ಸ್ವರೂಪ್ ಕುಶ್ವಾಹ ಮತ್ತು ಮಿನ್ಹಾಜ್ ಸಿಂಧಾನನ್ನು ಬಂಧಿಸಿದ್ದರು.
ವಿಚಾರಣೆ ಸಮಯದಲ್ಲಿ ಕುಶ್ವಾಹ ಮಾರ್ಚ್ 2023ರಲ್ಲಿ ಭದ್ರತೆಯನ್ನು ಉಲ್ಲಂಘಿಸಿ ಬಾಲುವುಡ್ ನಟ ಶಾರೂಖ್ ಖಾನ್ ಮನೆಗೆ ಅತಿಕ್ರಮಣವಾಗಿ ಪ್ರವೇಶಿಸಿರುವುದನ್ನು ಒಪ್ಪಿಕೊಂಡಿದ್ದಾನೆ. ನಟನ ಭದ್ರತಾ ಸಿಬ್ಬಂದಿ ಹಾಗೂ ಅವರೊಂದಿಗಿದ್ದ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿತ್ತು.
ಪೊಲೀಸರ ಮಾಹಿತಿ ಪ್ರಕಾರ, ಕುಶ್ವಾಹ ಹಾಗೂ ಸಿಂಧಾ ಸಾಕಷ್ಟು ಕಡೆ ಕಳ್ಳತನ ಮಾಡಿದ್ದಾರೆ. ಭರೂಚ್ನಲ್ಲಿ ಅವರ ವಿರುದ್ಧ ಮೂರು ಕಳ್ಳತನ ಪ್ರಕರಣಗಳು ದಾಖಲಾಗಿವೆ. ಅವರು ಅದೇ ಸೊಸೈಟಿಯಲ್ಲಿ ವಾಸಿಸುವ ಸೇನಾಧಿಕಾರಿ ಸಿರಾಜ್ ಮೆಹ್ತಾ ಅವರ ಮನೆಯನ್ನು ಗುರಿಯಾಗಿಸಿಕೊಂಡಿದ್ದರು. ಪೊಲೀಸರು ಅವರ ಬಳಿಯಿಂದ 2.74 ಲಕ್ಷ ರೂ. ಮೌಲ್ಯದ ಕದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಇವರಿಬ್ಬರ ಅಪರಾಧ ಚಟುವಟಿಕೆಗಳ ವ್ಯಾಪ್ತಿ ಎಷ್ಟಿದೆ ಮತ್ತು ಇದಕ್ಕೂ ಮೊದಲು ಅವರು ಎಷ್ಟು ಕಳ್ಳತನಗಳನ್ನು ಮಾಡಿರಬಹುದು ಎಂಬುದರ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಟ ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ
2024ರಲ್ಲಿ ಬೈಕ್ ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಸಲ್ಮಾನ್ ಮನೆ ಹೊರಗೆ 5 ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದರು. ಇದಾದ ಬಳಿಕ ಆರೋಪಿಗಳಿಬ್ಬರೂ ಗುರುತು ಸಿಗದಂತೆ ಮೂರು ಬಾರಿ ಬಟ್ಟೆ ಬದಲಾಯಿಸಿದ್ದರು. ಅವರ ಬಳಿ 40 ಗುಂಡುಗಳಿವೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು. ಸಲ್ಮಾನ್ ಖಾನ್ ಮನೆಯ ಹೊರಗೆ ನಡೆದ ಗುಂಡಿನ ದಾಳಿಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಅವರ ಸಹೋದರ ಅನ್ಮೋಲ್ ಹೊತ್ತಿದ್ದರು. ಗುಂಡಿನ ದಾಳಿಯ ಆರೋಪಿ ಅನುಜ್(Anuj) ಪೊಲೀಸ್ ಕಸ್ಟಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿತ್ತು. ಆರೋಪಿಯ ಹೆಸರು ಅನುಜ್ ಥಾಪನ್, ಸಲ್ಮಾನ್ ಮನೆ ಮೇಲೆ ಗುಂಡು ಹಾರಿಸಿದ ಶೂಟರ್‌ಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸಿದ ಆರೋಪ ಅನುಜ್ಮೇಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ