AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಹಾರ: ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ನಿವಾಸದ ಎದುರು ಗುಂಡಿನ ದಾಳಿ

ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಮತ್ತು ಸಚಿವ ಅಶೋಕ್ ಚೌಧರಿ ಅವರ ನಿವಾಸದ ಬಳಿ ಇಂದು (ಜೂನ್ 19) ಗುಂಡಿನ ದಾಳಿ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ನಿಲ್ದಾಣ ಪೊಲೀಸ್ ಠಾಣೆ ವ್ಯಾಪ್ತಿಯ ವಿಐಪಿ ಕೌಶಲ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ರಾಹುಲ್ ಎಂಬಾತನ ಮೇಲೆ ಗುಂಡು ಹಾರಿಸಿದ್ದಾರೆ, ದಾಳಿಕೋರರಿಬ್ಬರು ಬೈಕ್​​ನಲ್ಲಿ ಬಂದಿದ್ದರು. ದಾಳಿಯ ಬಳಿಕ ರಾಹುಲ್ ಬಳಿ ಇದ್ದ 400 ರೂ. ಕೂಡ ಕಸಿದುಕೊಂಡು ಪರಾರಿಯಾಗಿದ್ದಾರೆ. ಅವರನ್ನು ಬಂಧಿಸಲು ಪೊಲೀಸರು ಯತ್ನಿಸುತ್ತಿದ್ದಾರೆ. ಕೇವಲ ಈ ಇಬ್ಬರ ಮನೆ ಮಾತ್ರವಲ್ಲದೆ ಅಲ್ಲೇ ಆಸುಪಾಸಿನಲ್ಲಿ ಹಲವು ಅಧಿಕಾರಿಗಳು ಹಾಗೂ ನ್ಯಾಯಮೂರ್ತಿಗಳ ಮನೆಗಳು ಕೂಡ ಇವೆ.

ಬಿಹಾರ: ಆರ್​ಜೆಡಿ ನಾಯಕ ತೇಜಸ್ವಿ ಯಾದವ್ ನಿವಾಸದ ಎದುರು ಗುಂಡಿನ ದಾಳಿ
ಪೊಲೀಸ್
ನಯನಾ ರಾಜೀವ್
|

Updated on: Jun 19, 2025 | 2:16 PM

Share

ಪಾಟ್ನಾ, ಜೂನ್ 19: ಆರ್​ಜೆಡಿ ನಾಯಕ ತೇಜಸ್ವಿ ಯಾದವ್(Tejashwi Yadav) ನಿವಾಸದೆದುರು ಗುಂಡಿನ ದಾಳಿ ನಡೆದಿದೆ. ಸಚಿವ ಅಶೋಕ್ ಚೌಧರಿ ಹಾಗೂ ತೇಜಸ್ವಿ ಯಾದವ್ ಮನೆ ಅಕ್ಕಪಕ್ಕದಲ್ಲೇ ಇದೆ. ಗೇಟ್ ಬಳಿ ಯುವಕನ ಮೇಲೆ ಗುಂಡು ಹಾರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ದುಷ್ಕರ್ಮಿಗಳು ರಾಹುಲ್ ಎಂಬಾತನ ಮೇಲೆ ಗುಂಡು ಹಾರಿಸಿದ್ದಾರೆ, ದಾಳಿಕೋರರಿಬ್ಬರು ಬೈಕ್​​ನಲ್ಲಿ ಬಂದಿದ್ದರು.

ದಾಳಿಯ ಬಳಿಕ ರಾಹುಲ್ ಬಳಿ ಇದ್ದ 400 ರೂ. ಕೂಡ ಕಸಿದುಕೊಂಡು ಪರಾರಿಯಾಗಿದ್ದಾರೆ. ಅವರನ್ನು ಬಂಧಿಸಲು ಪೊಲೀಸರು ಯತ್ನಿಸುತ್ತಿದ್ದಾರೆ. ಕೇವಲ ಈ ಇಬ್ಬರ ಮನೆ ಮಾತ್ರವಲ್ಲದೆ ಅಲ್ಲೇ ಆಸುಪಾಸಿನಲ್ಲಿ ಹಲವು ಅಧಿಕಾರಿಗಳು ಹಾಗೂ ನ್ಯಾಯಮೂರ್ತಿಗಳ ಮನೆಗಳು ಕೂಡ ಇವೆ.

ಅಪಾಚೆ ಬೈಕ್‌ನಲ್ಲಿ ಹೋಗುತ್ತಿದ್ದ ದುಷ್ಕರ್ಮಿಗಳು ಅವನನ್ನು ತಳ್ಳಿ, ಬೀಳುವಂತೆ ಮಾಡಿದ್ದರು. ಗಲಾಟೆಯ ಸಮಯದಲ್ಲಿ, ಗುಂಡು ಹಾರಿಸಲಾಗಿತ್ತು. ಇಂದು ಪಾಟ್ನಾದಲ್ಲಿ ಹೊಸ ಎಸ್‌ಎಸ್‌ಪಿ ಕಾರ್ತಿಕೇಯ ಶರ್ಮಾ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಈ ಹೊತ್ತಲ್ಲೇ ಇಂತಹ ಘಟನೆ ನಡೆದಿದೆ. ಕೆಲ ದಿನಗ ಹಿಂದೆ ಅಲಮ್‌ಗಂಜ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಮಹಿಳೆ ಮತ್ತು ಆಕೆಯ ಮಗಳನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.ಮಹಿಳೆಯ ಪತಿ ಗಂಭೀರವಾಗಿ ಗಾಯಗೊಂಡಿದ್ದರು.

ಮತ್ತಷ್ಟು ಓದಿ: Tej Pratap: ಹಿರಿಯ ಮಗನನ್ನು ಆರ್​​ಜೆಡಿ ಪಕ್ಷದಿಂದ ಉಚ್ಛಾಟಿಸಿದ ಲಾಲೂ ಪ್ರಸಾದ್ ಯಾದವ್; ಕುಟುಂಬದಿಂದಲೂ ಹೊರಕ್ಕೆ

ಈ  ಘಟನೆ ನಗರದ ಅರ್ಫಾಬಾದ್ ಕಾಲುವೆಯ ಬಳಿ ನಡೆದಿದೆ. ಅಪರಾಧ ಎಸಗಿದ ನಂತರ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಇದಲ್ಲದೆ, ಜೂನ್ 13 ರಂದು, ಪಾಟ್ನಾ ಪಕ್ಕದ ದಾನಾಪುರದಲ್ಲಿ ಹಗಲಿನಲ್ಲೇ ಯುವಕನೊಬ್ಬನನ್ನು ಗುಂಡಿಕ್ಕಿ ಕೊಂದಿದ್ದರು. ನ್ಯೂ ಗೋಸಾಯಿ ಟೋಲಾ ಗೋಲಾ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಯುವಕ ಶ್ರವಣ್ ಕುಮಾರ್ ತನ್ನ ಮನೆಯ ಬಳಿ ನಿಂತಿದ್ದ.

ಅಷ್ಟರಲ್ಲಿ, ದಾಳಿಕೋರರು ಅಲ್ಲಿಗೆ ಬಂದು ಅವನ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದರು. ಗುಂಡೇಟಿನಿಂದ ಶ್ರವಣ್ ಗಂಭೀರವಾಗಿ ಗಾಯಗೊಂಡಿದ್ದರು. ಸ್ಥಳೀಯರು ಅವರನ್ನು ಹತ್ತಿರದ ಖಾಸಗಿ ನರ್ಸಿಂಗ್ ಹೋಂಗೆ ದಾಖಲಿಸಿದರು. ಆದರೆ ಚಿಕಿತ್ಸೆಯ ಸಮಯದಲ್ಲಿ ಅವರು ಸಾವನ್ನಪ್ಪಿದ್ದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ