AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಫೋನ್ ನೋಡಿ ಬದಲಾಯ್ತು ಡೆಲಿವರಿ ಬಾಯ್​ನ ನಿಯತ್ತು: 10 ಐಫೋನ್​ಗಳನ್ನು ಕದ್ದು, ನಕಲಿ ಮೊಬೈಲ್​ಗಳನ್ನಿಟ್ಟು​ ಸಿಕ್ಕಿಬಿದ್ದ

10 ಐಫೋನ್​ಗಳನ್ನು ಡೆಲಿವರಿ ಮಾಡಲು ಡೆಲಿವರಿ ಎಕ್ಸಿಕ್ಯೂಟಿವ್ ಲಲಿತ್​ಗೆ ನೀಡಲಾಗಿತ್ತು. ಐಫೋನ್(iPhone) ​ಗಳನ್ನು ನೋಡಿದ ಬಳಿಕ ಅವರ ನಿಯತ್ತು ಬದಲಾಗಿತ್ತು.

ಐಫೋನ್ ನೋಡಿ ಬದಲಾಯ್ತು ಡೆಲಿವರಿ ಬಾಯ್​ನ ನಿಯತ್ತು: 10 ಐಫೋನ್​ಗಳನ್ನು ಕದ್ದು, ನಕಲಿ ಮೊಬೈಲ್​ಗಳನ್ನಿಟ್ಟು​  ಸಿಕ್ಕಿಬಿದ್ದ
ಐಫೋನ್
ನಯನಾ ರಾಜೀವ್
|

Updated on: Apr 28, 2023 | 7:59 AM

Share

10 ಐಫೋನ್​ಗಳನ್ನು ಡೆಲಿವರಿ ಮಾಡಲು ಡೆಲಿವರಿ ಎಕ್ಸಿಕ್ಯೂಟಿವ್ ಲಲಿತ್​ಗೆ ನೀಡಲಾಗಿತ್ತು. ಐಫೋನ್(iPhone) ​ಗಳನ್ನು ನೋಡಿದ ಬಳಿಕ ಅವರ ನಿಯತ್ತು ಬದಲಾಗಿತ್ತು. ಅಸಲಿ ಐಫೋನ್ ಬದಲಿಗೆ ನಕಲಿ ಐಫೋನ್​ಗಳನ್ನು ಡೆಲಿವರಿ ಮಾಡಿದ್ದ. ಇತ್ತ ಕಂಪನಿಯ ಬಳಿ ಗ್ರಾಹಕರು ಆರ್ಡರ್​ ಕ್ಯಾನ್ಸಲ್ ಮಾಡಿದ್ದಾರೆ ಎಂದು ಐಫೋನ್ ಬಾಕ್ಸ್​ಗಳನ್ನು ಕಂಪನಿಗೆ ಹಿಂದಿರುಗಿಸಿದ್ದ, ಬಳಿಕ ಅದರಲ್ಲಿರುವುದು ಕೂಡ ನಕಲಿ ಐಫೋನ್​ಗಳು ಎಂಬುದು ಗೊತ್ತಾಗಿದೆ.

ಅಸಲಿಗೆ ನಡೆದದ್ದೇನು? ಡೆಲಿವರಿ ಬಾಯ್ ಓರ್ವನ ಮೇಲೆ 10 ಐಫೋನ್​ಗಳನ್ನು ಕದ್ದಿರುವ ಆರೋಪ ಹೊರಿಸಲಾಗಿದೆ. ಮಾರ್ಚ್​ 27 ರಂದು ಡೆಲಿವರಿ ಎಕ್ಸಿಕ್ಯೂಟಿವ್ ಲಲಿತ್ 10 ಐಫೋನ್​ಗಳು ಮತ್ತು ಏರ್​ಪಾಡ್​ಗಳನ್ನು ಒಳಗೊಂಡಿರುವ ಪಾರ್ಸೆಲ್​ ಒಂದನ್ನು ಡೆಲಿವರಿ ಮಾಡಲು ತೆರಳಿದ್ದರು.

ರಾತ್ರಿ ಹತ್ತು ಗಂಟೆಗೆ ಲಲಿತ್ ಸಹೋದರ ಮನೋಜ್ ತನ್ವಾರ್ ಅವರು ಮೊಬೈಲ್​ಗಳನ್ನು ವಾಪಸ್ ನೀಡಿ ಗ್ರಾಹಕರ ಸಂಪರ್ಕಿಸಲು ಸಾಧ್ಯವಾಗಿಲ್ಲ ಹಾಗಾಗಿ ಫೋನ್​ಗಳು ವಾಪಸ್ ಬಂದಿವೆ ಎಂದು ಸುಳ್ಳು ಹೇಳಿದ್ದ. ಅಸಲಿಗೆ ಗ್ರಾಹಕರಿಗೆ ಕೊಟ್ಟಿದ್ದು ಹಾಗೂ ಕಂಪನಿಗೆ ಮರಳಿಸಿದ್ದು ಎರಡೂ ಕೂಡ ನಕಲಿಯಾಗಿತ್ತು ಎಂದು ರವಿ ದೂರಿನಲ್ಲಿ ತಿಳಿಸಿದ್ದಾರೆ.

ಮತ್ತಷ್ಟು ಓದಿ: ಚೀನಾ ಒಡೆತನದ ಪಿಜನ್ ಎಜುಕೇಶನ್ ಟೆಕ್ನಾಲಜಿ ಇಂಡಿಯಾ ಕಂಪೆನಿ‌ ಮೇಲೆ ಇಡಿ ದಾಳಿ

ಅತ್ತ ಪಾರ್ಸೆಲ್ ಸ್ವೀಕರಿಸಿದ್ದ ಗ್ರಾಹಕರು ಕೂಡ ಆರ್ಡರ್​ ಅನ್ನು ಕ್ಯಾನ್ಸಲ್ ಮಾಡಿದ್ದರು. ಲಲಿತ್ ವಿರುದ್ಧ ಸೆಕ್ಷನ್ 420 , 408 ಅಡಿಯಲ್ಲಿ ಬಿಲಾಸ್​ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ