ಮಗಳ ಕಣ್ಣಿಗೆ ಮೆಣಸಿನ ಪುಡಿ ಎರಚಿ, ಚೂರಿಯಿಂದ ಇರಿದು ಹತ್ಯೆ ಮಾಡಿದ ತಂದೆ

ಕುಡಿತದ ಚಟಕ್ಕೆ ಅಂಗಡಿಯಿಂದ ಹಣ ಕದ್ದೊಯ್ಯುತ್ತಿದ್ದ ತಂದೆಯನ್ನು ತಡೆದಿದ್ದಕ್ಕೆ, ಮಗಳನ್ನೇ ಕೊಲೆ ಮಾಡಿರುವ ಘಟನೆ ಗ್ವಾಲಿಯರ್​ನಲ್ಲಿ ನಡೆದಿದೆ. ಮಗಳ ಮೇಲೆ ಚಾಕುವಿನಿಂದ ಹಲ್ಲೆ ಮಾಡುವ ಮೊದಲು, ಆಕೆಯ ಕಣ್ಣಿಗೆ ಮೆಣಸಿನ ಪುಡಿಯನ್ನು ಎರಚಿ ಬಳಿಕ ಚೂರಿಯಿಂದ ಹಲ್ಲೆ ನಡೆಸಿದ್ದಾರೆ. ರಾಣಿಯ ತಾಯಿ ಭಗವತಿ ಬಾಯಿ ನೀಡಿರುವ ಮಾಹಿತಿ ಪ್ರಕಾರ, ಬಾದಮ್ ಸಿಂಗ್ ದಿವ್ಯಾಂಗ, ಒಂದು ಕಾಲಿನ ಸ್ವಾಧೀನವಿಲ್ಲ. ಮೊದಲು ಅವರು ಆಟೋ ಓಡಿಸುತ್ತಿದ್ದ, ಆದರೆ ಲಾಕ್‌ಡೌನ್ ಸಮಯದಲ್ಲಿ ಅಪಘಾತದ ನಂತರ, ಕಾಲು ಕಳೆದುಕೊಂಡರು ಮತ್ತು ನಂತರ ಮನೆಯಲ್ಲಿಯೇ ಇದ್ದರು.

ಮಗಳ ಕಣ್ಣಿಗೆ ಮೆಣಸಿನ ಪುಡಿ ಎರಚಿ, ಚೂರಿಯಿಂದ ಇರಿದು ಹತ್ಯೆ ಮಾಡಿದ ತಂದೆ
ಕ್ರೈಂ

Updated on: Sep 19, 2025 | 10:50 AM

ಗ್ವಾಲಿಯರ್, ಸೆಪ್ಟೆಂಬರ್ 19: ಕುಡಿತದ ಚಟ ಬಿಡುವಂತೆ ಒತ್ತಾಯಿಸಿದ್ದಕ್ಕೆ ಮಗಳ ಕಣ್ಣಿಗೆ ಮೆಣಸಿನ ಪುಡಿ ಎರಚಿ, ಚೂರಿಯಿಂದ ಇರಿದು ಹತ್ಯೆ(Murder)  ಮಾಡಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್​​ನಲ್ಲಿ ನಡೆದಿದೆ. ಗ್ವಾಲಿಯರ್‌ನ ಜನಕ್‌ಗಂಜ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಾಹಿತಿಯ ಪ್ರಕಾರ, ಆರೋಪಿಯನ್ನು ಬಾದಮ್ ಸಿಂಗ್ ಕುಶ್ವಾಹ ಎಂದು ಗುರುತಿಸಲಾಗಿದ್ದು, ಮೃತಳನ್ನು ರಾಣಿ ಕುಶ್ವಾಹ ಎಂದು ಗುರುತಿಸಲಾಗಿದೆ.

ಮಗಳ ಮೇಲೆ ಚಾಕುವಿನಿಂದ ಹಲ್ಲೆ ಮಾಡುವ ಮೊದಲು, ಆಕೆಯ ಕಣ್ಣಿಗೆ ಮೆಣಸಿನ ಪುಡಿಯನ್ನು ಎರಚಿ ಬಳಿಕ ಚೂರಿಯಿಂದ ಹಲ್ಲೆ ನಡೆಸಿದ್ದಾರೆ. ರಾಣಿಯ ತಾಯಿ ಭಗವತಿ ಬಾಯಿ ನೀಡಿರುವ ಮಾಹಿತಿ ಪ್ರಕಾರ, ಬಾದಮ್ ಸಿಂಗ್ ದಿವ್ಯಾಂಗ, ಒಂದು ಕಾಲಿನ ಸ್ವಾಧೀನವಿಲ್ಲ. ಮೊದಲು ಅವರು ಆಟೋ ಓಡಿಸುತ್ತಿದ್ದ, ಆದರೆ ಲಾಕ್‌ಡೌನ್ ಸಮಯದಲ್ಲಿ ಅಪಘಾತದ ನಂತರ, ಕಾಲು ಕಳೆದುಕೊಂಡರು ಮತ್ತು ನಂತರ ಮನೆಯಲ್ಲಿಯೇ ಇದ್ದರು.

ಮತ್ತಷ್ಟು ಓದಿ:ಬೆಳಗಾವಿ: ಹೆಂಡ್ತಿ ಜತೆ ಚಕ್ಕಂದ ಆಡಿದವನಿಗೆ ಚಟ್ಟ ಕಟ್ಟಿದ ಗಂಡ, ಮೃತನ ಸಂಬಂಧಿಕರು ಹೇಳೋದೇನು ನೋಡಿ

ಜೀವನೋಪಾಯಕ್ಕಾಗಿ ಕುಟುಂಬವು ಒಂದು ಸಣ್ಣ ದಿನಸಿ ಅಂಗಡಿಯನ್ನು ನಡೆಸಲು ಪ್ರಾರಂಭಿಸಿತು, ಅದನ್ನು ಕಿರಿಯ ಮಗಳು ನಿರ್ವಹಿಸುತ್ತಿದ್ದಳು. ಆ ವ್ಯಕ್ತಿ ಆಗಾಗ ಅಂಗಡಿಯಲ್ಲಿ ಕುಳಿತು, ನಗದು ಕೌಂಟರ್‌ನಿಂದ ಹಣವನ್ನು ತೆಗೆದುಕೊಂಡು ಮದ್ಯಕ್ಕಾಗಿ ಖರ್ಚು ಮಾಡುತ್ತಿದ್ದ. ರಾಣಿ ತನ್ನ ತಂದೆ ಅಂಗಡಿಯಿಂದ ಹಣ ತೆಗೆದುಕೊಂಡಿದ್ದನ್ನು ವಿರೋಧಿಸಿದಾಗ, ಕೋಪಗೊಂಡ ತಂದೆ ಆಕೆಯ ಕಣ್ಣಿಗೆ ಮೆಣಸಿನ ಪುಡಿ ಎಸೆದು ಇರಿದು ಕೊಂದಿದ್ದಾನೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ತಂದೆಯನ್ನು ತಕ್ಷಣ ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ, ಆಗಾಗ ನಡೆಯುತ್ತಿದ್ದ ಕೌಟುಂಬಿಕ ಕಲಹಗಳು ಮತ್ತು ತಂದೆಯ ಮದ್ಯದ ಚಟ ಈ ಅಪರಾಧಕ್ಕೆ ಕಾರಣ ಎನ್ನಲಾಗಿದೆ. ಪೊಲೀಸರು ಆರೋಪಿಯನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಮತ್ತೊಂದು ಘಟನೆ
ಮಗಳನ್ನೇ ಕೊಂದ ತಾಯಿ
ಮೂರು ವರ್ಷದ ಮಗಳನ್ನು ಕಲ್ಲು ಬೆಂಚಿನ ಮೇಲೆ ಮಲಗಿಸಿ ನಿದ್ರೆ ಬಂದ ಬಳಿಕ ಆಕೆಯನ್ನು ತಾಯಿ ಸರೋವರಕ್ಕೆ ಎಸೆದು ಕೊಲೆ ಮಾಡಿರುವ ಘಟನೆ ರಾಜಸ್ಥಾನದ ಅಜ್ಮೀರ್​ನಲ್ಲಿ ನಡೆದಿದೆ. ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಮಂಗಳವಾರ ತಡರಾತ್ರಿ ಮಹಿಳೆ ಅಜ್ಮೀರ್‌ನ ಅನಾ ಸಾಗರ್ ಸರೋವರದ ಬಳಿ ಮಗುವಿನೊಂದಿಗೆ ಹಲವು ಗಂಟೆಗಳ ಕಾಲ ಕಳೆದ ನಂತರ ತಾಯಿ ಈ ಕೃತ್ಯವೆಸಗಿದ್ದಾಳೆ.

ಆರೋಪಿಯನ್ನು ಅಂಜಲಿ ಅಲಿಯಾಸ್ ಪ್ರಿಯಾ ಸಿಂಗ್ ಎಂದು ಗುರುತಿಸಲಾಗಿದ್ದು, ಆಕೆ ಮೂಲತಃ ಉತ್ತರ ಪ್ರದೇಶದ ಬನಾರಸ್ ಜಿಲ್ಲೆಯ ಸಕುಲ್ಪುರದವಳು. ಆಕೆ ಅಜ್ಮೀರ್‌ನ ದತನಗರ ಪ್ರದೇಶದಲ್ಲಿ ಆಕ್ಲೇಶ್ ಗುಪ್ತಾ ಎಂಬ ವ್ಯಕ್ತಿಯೊಂದಿಗೆ ಲಿವ್-ಇನ್ ಸಂಬಂಧದಲ್ಲಿದ್ದಳು. ಅಂಜಲಿ ತನ್ನ ಪತಿಯಿಂದ ಬೇರ್ಪಟ್ಟಿದ್ದಳು, ಅವರಿಗೆ ಒಬ್ಬಳು ಮಗಳಿದ್ದಳು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us