ಜ್ಞಾನವಾಪಿ ಮಸೀದಿ ವಿವಾದ: ಹಿಂದೂಗಳು ಸಲ್ಲಿಸಿದ್ದ ಅರ್ಜಿಯ ಸಿಂಧುತ್ವದ ಬಗ್ಗೆ ಇಂದು ವಿಚಾರಣೆ

ಜ್ಞಾನವಾಪಿ ಮಸೀದಿಯಲ್ಲಿ ಪೂಜೆ ಹಾಗೂ ಪ್ರಾರ್ಥನೆಗೆ ಅವಕಾಶ ನೀಡುವಂತೆ ಕೋರಿ ಹಿಂದೂ ಮಹಿಳೆಯರು ಸಲ್ಲಿಸಿದ ಅರ್ಜಿ ಸಿಂಧುತ್ವದ ಬಗೆಗಿನ ವಿಚಾರಣೆಯನ್ನು ಇಂದು ಜ್ಞಾನವಾಪಿ ಜಿಲ್ಲಾ ನ್ಯಾಯಾಲಯವು ನಡೆಸಲಿದೆ. ಸರ್ವೆ ವಿಡಿಯೋ ಸೋರಿಕೆ ಬಗ್ಗೆಯೂ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಜ್ಞಾನವಾಪಿ ಮಸೀದಿ ವಿವಾದ: ಹಿಂದೂಗಳು ಸಲ್ಲಿಸಿದ್ದ ಅರ್ಜಿಯ ಸಿಂಧುತ್ವದ ಬಗ್ಗೆ ಇಂದು ವಿಚಾರಣೆ
ಜ್ಞಾನವಾಪಿ ಮಸೀದಿ
Image Credit source: PTI
TV9kannada Web Team

| Edited By: Rakesh Nayak

Jul 04, 2022 | 9:05 AM

ವಾರಣಾಸಿ: ಜ್ಞಾನವಾಪಿ ಮಸೀದಿ- ವಿಶ್ವನಾಥ ದೇವಾಲಯ ವಿವಾದದ ಅರ್ಜಿಯ ವಿಚಾರಣೆಯನ್ನು ಇಂದು ವಾರಣಾಸಿಯ ಜಿಲ್ಲಾ ಕೋರ್ಟ್ ನಡೆಸಲಿದೆ. ಹಿಂದೂಗಳು ಸಲ್ಲಿಸಿದ್ದ ಅರ್ಜಿಯ ಸಿಂಧುತ್ವದ ಬಗ್ಗೆ ಜಿಲ್ಲಾ ನ್ಯಾಯಾಲಯದ ಜಡ್ಜ್ ಅಜಯ್ ಕೃಷ್ಣ ವಿಶ್ವೇಶ ಅವರ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಹಿಂದೂಗಳು ಸಲ್ಲಿಸಿದ್ದ ಅರ್ಜಿಯು ವಿಚಾರಣೆಗೆ ಯೋಗ್ಯವೇ ಅಲ್ಲವೇ ಎಂಬ ಬಗ್ಗೆ ವಿಚಾರಣೆ ನಡೆಯಲಿದೆ.

ಜ್ಞಾನವಾಪಿ ಮಸೀದಿಯ ಹಿಂಭಾಗದಲ್ಲಿ ದೇವಾಲಯದ ಕುರುಹುಗಳಿದ್ದು, ಈ ಹಿಂದೆ ಇದು ದೇವಾಲಯವಾಗಿತ್ತು, ಹೀಗಾಗಿ ಮಸೀದಿಯಲ್ಲಿ ನಿತ್ಯ ಪೂಜೆ ನಡೆಸಲು ಹಾಗೂ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಹಿಂದೂ ಮಹಿಳೆಯರು ವಾರಣಾಸಿಯ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಸಿಂಧುತ್ವದ ಬಗ್ಗೆ ವಿಚಾರಣೆ ಇಂದು ನಡೆಯಲಿದೆ.

ಇದನ್ನೂ ಓದಿ: Maharashtra Politics: ಏಕನಾಥ್ ಶಿಂಧೆಯಿಂದ ಇಂದು ವಿಶ್ವಾಸಮತ ಯಾಚನೆ; ನೂತನ ಸರ್ಕಾರಕ್ಕೆ ಸಿಗುತ್ತಾ ಬಹುಮತ?

ಹಿಂದೂಗಳು ಸಲ್ಲಿಸಿದ್ದ ಅರ್ಜಿಯ ಸಿಂಧುತ್ವದ ವಿಚಾರಣೆಯ ಜೊತೆಗೆ ಸರ್ವೇ ವಿಡಿಯೋ ಸೋರಿಕೆಯ ಬಗ್ಗೆಯೂ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಮಸೀದಿಯ ಹಿಂದೂ ದೇವಾಲಯವಾಗಿತ್ತೇ ಎಂಬಿತ್ಯಾದಿಗಳ ಮಾಹಿತಿ ಕಲೆಹಾಕಿಕೊಳ್ಳಲು ಕೋರ್ಟ್ ಆದೇಶದಂತೆ ಸರ್ವೆ ನಡೆಸಲಾಗಿತ್ತು. ಈ ವೇಳೆ ಕೋರ್ಟ್ ಕಮೀಷನರ್​ಗಳು ನಡೆಸಿದ್ದ ಸರ್ವೇಯ ವಿಡಿಯೋಗಳು ಸೋರಿಕೆಯಾಗಿವೆ. ಈ ಲೋಪದ ಬಗ್ಗೆಯೂ ಕೋರ್ಟ್​ಗೆ ಅರ್ಜಿ ಸಲ್ಲಿಕೆಯಾಗಿದ್ದು,  ಕೋರ್ಟ್ ನ ಜಡ್ಜ್ ಅಜಯ್ ಕೃಷ್ಣ ವಿಶ್ವೇಶ ಅವರಿರುವ ಪೀಠ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಇದನ್ನೂ ಓದಿ: ವಾರಣಾಸಿಯ ಮಸೀದಿ ಸರ್ವೇ ವಿಡಿಯೋ ಮಾಧ್ಯಮಗಳಿಗೆ ಸೋರಿಕೆ: ಮಸೀದಿಯ ಒಳಗೆ ಏನೇನಿದೆ? ಇಲ್ಲಿದೆ ವಿಡಿಯೋ

ವಿಡಿಯೋದಲ್ಲಿ ಮಸೀದಿಯೊಳಗಡೆ ಶಿವಲಿಂಗ ಇರುವುದು ಪತ್ತೆಯಾಗಿದೆ. ಶಿವಲಿಂಗದ ಜಾಗದಲ್ಲಿ ನೀರು ತುಂಬಿಕೊಂಡಿತ್ತು. ಈ ನೀರನ್ನು ಮೊದಲಿಗೆ ಮೋಟಾರ್ ಪಂಪ್ ಸೆಟ್ ಮೂಲಕ ಹೊರ ಹಾಕಿ ಸರ್ವೇ ನಡೆಸಲಾಗಿದೆ. ಈ ವೇಳೆ ಒಳಭಾಗದಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ. ಬಳಿಕ ಶಿವಲಿಂಗವನ್ನು ಸಂಪೂರ್ಣ ಸ್ವಚ್ಚಗೊಳಿಸಿ ಅಳತೆ ಹಾಕಲಾಗಿದೆ. ಜೊತೆಗೆ ಮಸೀದಿಯೊಳಗೆ ನಂದಿ ವಿಗ್ರಹ ಕೂಡ ಪತ್ತೆಯಾಗಿದೆ. ಶಿವಲಿಂಗದ ಕಡೆ ನಂದಿ ವಿಗ್ರಹ ಮುಖ ಮಾಡಿದೆ. ಶಿವಲಿಂಗ ಪತ್ತೆಯಾದ ಸ್ಥಳದಲ್ಲಿ ಕಳಸ ಕೂಡ ಪತ್ತೆಯಾಗಿದೆ. ದೇಗುಲದ ಮೇಲಿರುವ ಕಳಸದಂಥ ಕುರುಹು ಪತ್ತೆಯಾಗಿದೆ.

ಇದನ್ನೂ ಓದಿ: ಬಂಧಿತ ಎಲ್​ಇಟಿ ಉಗ್ರರ ಪೈಕಿ ಓರ್ವ ಮಾಜಿ ಬಿಜೆಪಿ ವ್ಯಕ್ತಿ, ಜಮ್ಮು ಕಾಶ್ಮೀರದ ರಾಜಕೀಯ ವಲಯಗಳಲ್ಲಿ ಗದ್ದಲ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada