ಬಂಧಿತ ಎಲ್‌ಇಟಿ ಉಗ್ರರ ಪೈಕಿ ಓರ್ವ ಮಾಜಿ ಬಿಜೆಪಿ ವ್ಯಕ್ತಿ, ಜಮ್ಮು ಕಾಶ್ಮೀರದ ರಾಜಕೀಯ ವಲಯಗಳಲ್ಲಿ ಗದ್ದಲ
ಬಂಧಿತ ಎಲ್‌ಇಟಿ ಉಗ್ರರ ಪೈಕಿ ಓರ್ವ ಮಾಜಿ ಬಿಜೆಪಿ ವ್ಯಕ್ತಿ ಎಂದು ತಿಳಿದುಬಂದಿದ್ದು, ಇದು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ವಲಯದಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದೆ.
ಲಷ್ಕರ್-ಎ-ತೊಯ್ಬಾ (LET) ಯ ಇಬ್ಬರು ಶಸ್ತ್ರಸಜ್ಜಿತ ಉಗ್ರಗಾಮಿಗಳನ್ನು ಭಾನುವಾರ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ತುಕ್ಸಾನ್ ಧೋಕ್ ಗ್ರಾಮದ ನಿವಾಸಿಗಳು ಹೆಡೆಮುರಿ ಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದರು. ಈ ಪೈಕಿ ಓರ್ವ ಮಾಜಿ ಬಿಜೆಪಿ (BJP) ವ್ಯಕ್ತಿ ಎಂದು ತಿಳಿದುಬಂದಿದ್ದು, ಜಮ್ಮು ಕಾಶ್ಮೀರದ ರಾಜಕೀಯ ವಲಯದಲ್ಲಿ ಭಾರಿ ಗದ್ದಲಕ್ಕೆ ಕಾರಣವಾಗಿದೆ. ತಾಲಿಬ್ ಹುಸೇನ್ ಶಾ ಜಮ್ಮು ಪ್ರಾಂತ್ಯದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಐಟಿ ಮತ್ತು ಸಾಮಾಜಿಕ ಮಾಧ್ಯಮ ಸೆಲ್‌ನ ಮುಖ್ಯಸ್ಥರಾಗಿದ್ದರು ಎಂದು ಹೇಳಲಾಗಿದೆ.
ಈ ಬಗ್ಗೆ ಇಂಡಿಯನ್ ಎಕ್ಸ್ಪ್ರೆಸ್ನೊಂದಿಗೆ ಮಾತನಾಡಿದ ಬಿಜೆಪಿ ಜಮ್ಮು ಮತ್ತು ಕಾಶ್ಮೀರದ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಶೇಖ್ ಬಶೀರ್, ಡ್ರಾಜ್‌ನ ತಾಲಿಬ್ ಷಾ, ಕೊಟ್ರಂಕಾ (ರಾಜೌರಿ) ಸ್ವಲ್ಪ ಸಮಯದಿಂದ ಪಕ್ಷದೊಂದಿಗೆ ಕೆಲಸ ಮಾಡುತ್ತಿದ್ದು, ಅವರನ್ನು ಮೇ 9 ರಂದು ಅಲ್ಪಸಂಖ್ಯಾತ ಮೋರ್ಚಾದ ಐಟಿ ಮತ್ತು ಸಾಮಾಜಿಕ ಮಾಧ್ಯಮ ಸೆಲ್‌ನ ಉಸ್ತುವಾರಿ ವಹಿಸಲಾಯಿತು. ಆದರೆ ಅವರು ಯಾವುದೇ ಮೋರ್ಚಾ ಸಭೆಗಳಿಗೆ ಹಾಜರಾಗಲಿಲ್ಲ. ಮೇ 27ರಂದು ಅವರೇ ಪಕ್ಷದ ಸ್ಥಾನ ಹಾಗೂ ಸಂಘಟನೆಯನ್ನು ತೊರೆದಿದ್ದರು ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದಲ್ಲಿಇಬ್ಬರು ಲಷ್ಕರ್ ಉಗ್ರರನ್ನು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು
ಜಮ್ಮು ಕಾಶ್ಮೀರದ ಬಿಜೆಪಿ ಅಧ್ಯಕ್ಷ ರವೀಂದರ್ ರೈನಾ, ಡ್ರಾಜ್‌ನ ತಾಲಿಬ್ ಷಾ ಪಕ್ಷದ ಪ್ರಾಥಮಿಕ ಸದಸ್ಯರಾಗಿಲ್ಲ ಎಂದಿದ್ದಾರೆ. ಆತನ ಫೇಸ್ಬುಕ್ನಲ್ಲಿ ತಮ್ಮ ಫೋಟೋಗಳನ್ನು ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ರವೀಂದರ್, ಪಕ್ಷದ ನಾಯಕರ ವಿಶ್ವಾಸಗಿಟ್ಟಿಸಿಕೊಳ್ಳಲು ಮತ್ತು ಪಕ್ಷದ ಕಾರ್ಯಕರ್ತರಂತೆ ತೋರಿಸಿಕೊಳ್ಳಲು ಭಯೋತ್ಪಾದಕ ಗುಂಪುಗಳ ತಂತ್ರ ಇದು ಎಂದು ಹೇಳಿದ್ದಾರೆ.
ಎಲ್‌ಇಟಿ ಉಗ್ರರರಾದ ರಾಜೌರಿಯ ದ್ರಾಜ್ ಗ್ರಾಮದ ತಾಲಿಬ್ ಹುಸೇನ್ ಶಾ ಮತ್ತು ಪುಲ್ವಾಮಾದಿಂದ ಫೈಝಲ್ ಅಹ್ಮದ್ ದಾರ್ ಸುಳಿವು ಕೊಟ್ಟವರಿಗೆ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು 5 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದರು. ಅದರಂತೆ ಗ್ರಾಮಸ್ಥರೇ ಇಬ್ಬರು ಉಗ್ರರನ್ನು ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಂಧಿತರಿಂದ ಎರಡು ಎಕೆ-47 ರೈಫಲ್‌ಗಳು, ಏಳು ಗ್ರೆನೇಡ್‌ಗಳು, ಒಂದು ಪಿಸ್ತೂಲ್ ಮತ್ತು ಅಪಾರ ಪ್ರಮಾಣದ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ.\
ಇದನ್ನೂ ಓದಿ: ಧಾರವಾಡ: ಡೀಸೆಲ್ ಟ್ಯಾಂಕರ್ ಪಲ್ಟಿಯಾಗಿ ಟ್ಯಾಂಕರ್‌ನಲ್ಲಿದ್ದ ಓರ್ವ ಸಾವು
ಪೊಲೀಸರ ಪ್ರಕಾರ, ಬಂಧಿತ ಉಗ್ರರ ಚಲನವಲನಗಳನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಅವರನ್ನು ಹಿಡಿದಿದ್ದಾರೆ. ಅಲ್ಲದೆ ಮಾಹೋರ್ ತಹಸಿಲ್‌ನಲ್ಲಿರುವ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವ ಮೊದಲು ಉಗ್ರರ ಕೈಯಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಹಗ್ಗಗಳಿಂದ ಕಟ್ಟಿಹಾಕಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಮಂಗಳವಾರ ಪೊಲೀಸರು ಮತ್ತು ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆಯಲ್ಲಿ ದ್ರಾಜ್‌ನ ಮೊಹಮ್ಮದ್ ಶಬೀರ್ ಮತ್ತು ಮೊಹಮ್ಮದ್ ಸಾದಿಕ್ ಎಂಬ ಇಬ್ಬರು ಸಹಚರರನ್ನು ಬಂಧಿಸಿದ ನಂತರ ಪರಾರಿಯಾಗಿದ್ದ ಷಾನನ್ನು ಸ್ವಯಂ-ಘೋಷಿತ ಎಲ್‌ಇಟಿ ಕಮಾಂಡರ್ ಎಂದು ಪೊಲೀಸರು ವಿವರಿಸಿದ್ದಾರೆ. ಪೊಲೀಸ್ ಡಿಜಿಪಿ ದಿಲ್ಬಾಗ್ ಸಿಂಗ್ ಅವರು ಕೂಡ ಉಗ್ರರ ಸುಳಿವು ನೀಡಿದ ತುಕ್ಸಾನ್ ಧೋಕ್ ನಿವಾಸಿಗಳಿಗೆ 2 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದರು.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ 5 ವರ್ಷದ ಮಗಳ ಕೆನ್ನೆ, ಎದೆ ಭಾಗ ಕಚ್ಚಿ ವಿಕೃತಿ ಮೆರೆದ ತಂದೆ ಪೊಲೀಸರ ವಶಕ್ಕೆ
Published On - 7:18 am, Mon, 4 July 22