ಅವರಿಗೆ ಭಾರತೀಯರ ಸಾಮರ್ಥ್ಯ ಬಗ್ಗೆ ನಂಬಿಕೆ ಇರಲಿಲ್ಲ: ನೆಹರು, ಇಂದಿರಾ ಗಾಂಧಿ ಭಾಷಣಗಳನ್ನು ಉಲ್ಲೇಖಿಸಿದ ಮೋದಿ

ನೆಹರು ಅವರು ಕೆಂಪುಕೋಟೆಯಿಂದ ಮಾಡಿದ ಭಾಷಣವನ್ನು ಉಲ್ಲೇಖಿಸಿದ ಮೋದಿ ನಾವು ಯುರೋಪಿಯನ್ನರು, ಜಪಾನಿಯರು, ಚೈನೀಸ್, ರಷ್ಯನ್ನರು ಅಥವಾ ಅಮೆರಿಕನ್ನರಂತೆ ಕಷ್ಟಪಟ್ಟು ಕೆಲಸ ಮಾಡುವುದಿಲ್ಲ ಎಂದು ನೆಹರು ಹೇಳಿದ್ದರು, ಈ ಸಮುದಾಯಗಳು ಯಾವುದೋ ಮಾಯೆಯಿಂದ ಸಮೃದ್ಧವಾಗಿವೆ ಎಂದು ಭಾವಿಸಬೇಡಿ. ಕಠಿಣ ಪರಿಶ್ರಮದಿಂದ, ಬುದ್ಧಿವಂತಿಕೆಯಿಂದ ಅವರು ಇದನ್ನು ಸಾಧಿಸಿದ್ದಾರೆ.

ಅವರಿಗೆ ಭಾರತೀಯರ ಸಾಮರ್ಥ್ಯ ಬಗ್ಗೆ ನಂಬಿಕೆ ಇರಲಿಲ್ಲ: ನೆಹರು, ಇಂದಿರಾ ಗಾಂಧಿ ಭಾಷಣಗಳನ್ನು ಉಲ್ಲೇಖಿಸಿದ ಮೋದಿ
ನೆಹರು- ಪ್ರಧಾನಿ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Feb 05, 2024 | 7:40 PM

ದೆಹಲಿ ಫೆಬ್ರುವರಿ 05: ಲೋಕಸಭೆಯಲ್ಲಿ (Lok sabha) ರಾಷ್ಟ್ರಪತಿ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆ ವೇಳೆ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi), ಮಾಜಿ ಪ್ರಧಾನಿ, ಕಾಂಗ್ರೆಸ್ ಸಿದ್ಧಾಂತವಾದಿಗಳಾದ ಜವಾಹರಲಾಲ್ ನೆಹರು(Jawaharlal Nehru) ಮತ್ತು ಇಂದಿರಾ ಗಾಂಧಿ (Indira Gandhi) ಅವರ ಭಾಷಣಗಳನ್ನು ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಕಾಂಗ್ರೆಸ್ ಎಂದಿಗೂ ಭಾರತದ ಸಾಮರ್ಥ್ಯವನ್ನು ನಂಬಲಿಲ್ಲ. ಅವರು ಯಾವಾಗಲೂ ತಮ್ಮನ್ನು ಆಡಳಿತಗಾರರು ಮತ್ತು ಜನರನ್ನು ಕೀಳು ಎಂದು ಪರಿಗಣಿಸುತ್ತಾರೆ ಎಂದಿದ್ದಾರೆ ಮೋದಿ.

ನೆಹರು ಅವರು ಕೆಂಪುಕೋಟೆಯಿಂದ ಮಾಡಿದ ಭಾಷಣವನ್ನು ಉಲ್ಲೇಖಿಸಿದ ಮೋದಿ ನಾವು ಯುರೋಪಿಯನ್ನರು, ಜಪಾನಿಯರು, ಚೈನೀಸ್, ರಷ್ಯನ್ನರು ಅಥವಾ ಅಮೆರಿಕನ್ನರಂತೆ ಕಷ್ಟಪಟ್ಟು ಕೆಲಸ ಮಾಡುವುದಿಲ್ಲ ಎಂದು ನೆಹರು ಹೇಳಿದ್ದರು, ಈ ಸಮುದಾಯಗಳು ಯಾವುದೋ ಮಾಯೆಯಿಂದ ಸಮೃದ್ಧವಾಗಿವೆ ಎಂದು ಭಾವಿಸಬೇಡಿ. ಕಠಿಣ ಪರಿಶ್ರಮದಿಂದ, ಬುದ್ಧಿವಂತಿಕೆಯಿಂದ ಅವರು ಇದನ್ನು ಸಾಧಿಸಿದ್ದಾರೆ. ಭಾರತೀಯರು ಸೋಮಾರಿಗಳು ಮತ್ತು ಮೆದುಳು ಹೊಂದಿಲ್ಲ ಎಂದು ನೆಹರು ಭಾವಿಸಿದ್ದರು. ಭಾರತೀಯರ ಸಾಮರ್ಥ್ಯವನ್ನು ಅವರು ನಂಬಲಿಲ್ಲ ಎಂದು ಇದು ತೋರಿಸುತ್ತದೆ.

ಮಾಜಿ ಪ್ರಧಾನಿ ಇಂದಿರಾಗಾಂಧಿ ಕೂಡ ಭಿನ್ನವಾಗಿ ಯೋಚಿಸಲಿಲ್ಲ. ಇಂದಿರಾ ಜೀ ಅವರು ಕೆಂಪು ಕೋಟೆಯಿಂದ ಮಾಡಿದ ಭಾಷಣದಲ್ಲಿ ಈ ರೀತಿ ಹೇಳಿದ್ದರು. ‘ದುರದೃಷ್ಟವಶಾತ್, ಒಳ್ಳೆಯ ಕೆಲಸವು ಪೂರ್ಣಗೊಳ್ಳುವ ಹಂತಕ್ಕೆ ಬಂದಾಗ ನಾವು ಆತ್ಮತೃಪ್ತಿ ಹೊಂದುವುದು ನಮ್ಮ ಅಭ್ಯಾಸವಾಗಿದೆ. ಅಡೆತಡೆಗಳು ಬಂದಾಗ ನಾವು ಭರವಸೆ ಕಳೆದುಕೊಳ್ಳುತ್ತೇವೆ. ಕೆಲವೊಮ್ಮೆ ಇಡೀ ದೇಶವೇ ಸೋಲನ್ನು ಒಪ್ಪಿಕೊಂಡಿದ್ದಾರೆ ಹಾಗೆ ತೋರುತ್ತದೆ. ಇಂದು ಕಾಂಗ್ರೆಸ್ ಅನ್ನು ನೋಡಿದರೆ, ಇಂದಿರಾ ಜೀ ದೇಶವಾಸಿಗಳನ್ನು ಕಡಿಮೆ ಅಂದಾಜು ಮಾಡಿರಬಹುದು ಎಂದು ತೋರುತ್ತದೆ. ಆದರೆ ಅವರು ಕಾಂಗ್ರೆಸ್ ಅನ್ನು ಚೆನ್ನಾಗಿ ಮೌಲ್ಯಮಾಪನ ಮಾಡಿದರು.

“ಇದು ಭಾರತೀಯರ ಬಗ್ಗೆ ಕಾಂಗ್ರೆಸ್ ಪಕ್ಷದ ರಾಜಮನೆತನದ ಚಿಂತನೆಯಾಗಿದೆ ಎಂದು ಮೋದಿ,ತಾನು ದೇಶ ಮತ್ತು ಅದರ ಜನರ ಸಾಮರ್ಥ್ಯದಲ್ಲಿ ಅಪಾರ ನಂಬಿಕೆ ಹೊಂದಿದ್ದೇನೆ ಎಂದಿದ್ದಾರೆ.

“ಕಾಂಗ್ರೆಸ್ ಸರ್ಕಾರಗಳು ಹಣದುಬ್ಬರವನ್ನು ತರುತ್ತವೆ ಎಂಬುದನ್ನು ಇತಿಹಾಸವು ಸಾಬೀತುಪಡಿಸುತ್ತದೆ” ಎಂದು ಹೇಳಿದ ಮೋದಿ, ಜವಾಹರಲಾಲ್ ನೆಹರು ಅವರ ಬರಹಗಳನ್ನು ಉಲ್ಲೇಖಿಸಿದರು. “ಕಾಂಗ್ರೆಸ್ (ಅಧಿಕಾರಕ್ಕೆ) ಬಂದಾಗಲೆಲ್ಲಾ ಅದು ಹಣದುಬ್ಬರವನ್ನು ತಂದಿದೆ. ನಮ್ಮ ಸರ್ಕಾರವು ಎರಡು ಯುದ್ಧಗಳು ಮತ್ತು ಸಾಂಕ್ರಾಮಿಕ ರೋಗದ ಹೊರತಾಗಿಯೂ ಅದನ್ನು ನಿಯಂತ್ರಿಸಿದೆ ಎಂದಿದ್ದಾರೆ ಮೋದಿ.

ಇದನ್ನೂ ಓದಿ: ಲೋಕಸಭೆಯಲ್ಲಿ ಮೋದಿ ಭಾಷಣದ ಮುಖ್ಯಾಂಶಗಳು ಇಲ್ಲಿವೆ 

ಪ್ರತಿಪಕ್ಷದ ಈ ದಯನೀಯ ಸ್ಥಿತಿ ಕಾಂಗ್ರೆಸ್ ಕಾರಣ.”ಅವರು ವಿಫಲರಾಗಿದ್ದಾರೆ. ಇತರ ಪಕ್ಷಗಳಿಗೆ ಅವಕಾಶ ನೀಡಲಿಲ್ಲ. ಅವರು ಸಂಸತ್ತು, ಪ್ರತಿಪಕ್ಷ ಮತ್ತು ದೇಶವನ್ನು ಹಾಳುಮಾಡಿದ್ದಾರೆ. ದೇಶಕ್ಕೆ ಪ್ರಬಲವಾದ ಪ್ರತಿಪಕ್ಷದ ಅಗತ್ಯವಿದೆ ಎಂದು ನಾನು ನಂಬುತ್ತೇನೆ. ದೇಶವು ಕುಟುಂಬ ರಾಜಕಾರಣ ರಾಜಕೀಯದ ಪರಿಣಾಮಗಳನ್ನು ಎದುರಿಸಿದೆ. ಕಾಂಗ್ರೆಸ್ ಕೂಡಾ ಎಂದಿದ್ದಾರೆ ಮೋದಿ.

ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದಂತಹ ಪ್ರಾದೇಶಿಕ ಪಕ್ಷಗಳ ನಡುವಿನ ಜಗಳದಲ್ಲಿ ತತ್ತರಿಸುತ್ತಿರುವ ಇಂಡಿಯಾ ಮೈತ್ರಿಕೂಟದ ವಿರುದ್ಧವೂ ಪ್ರಧಾನಿ ವಾಗ್ದಾಳಿ ನಡೆಸಿದ್ದು, “ಅವರಿಗೇ ಒಬ್ಬರನ್ನೊಬ್ಬರು ನಂಬಲು ಸಾಧ್ಯವಾಗದಿದ್ದರೆ, ಅವರು ಜನರನ್ನು ಹೇಗೆ ನಂಬುತ್ತಾರೆ”ಎಂದುಕೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:34 pm, Mon, 5 February 24