Handloom Saree: ಈ ಸೀರೆಯನ್ನು ಮಡಿಚಿ, ಬೆಂಕಿ ಪೊಟ್ಟಣದೊಳಗೆ ಪ್ಯಾಕ್ ಮಾಡಬಹುದು!

ಮ್ಯಾಚ್‌ ಬಾಕ್ಸ್‌(ಬೆಂಕಿಪೊಟ್ಟಣದಲ್ಲಿ)ನಲ್ಲಿ ಹೊಂದಿಕೊಳ್ಳುವ ಕೈಯಿಂದ ನೇಯ್ದ ಸೀರೆಯನ್ನು ತಯಾರಿಸಲು ಆರು ದಿನಗಳು ಬೇಕಾಗುತ್ತದೆ. ಕೈಯಿಂದ ನೇಯ್ದ ಸೀರೆಗೆ 12,000 ರೂ., ಯಂತ್ರ ಬಳಸಿ ತಯಾರಿಸಿದ ಸೀರೆಗೆ 8,000 ರೂ. ನಿಗದಿಪಡಿಸಲಾಗಿದೆ.

Handloom Saree: ಈ ಸೀರೆಯನ್ನು ಮಡಿಚಿ, ಬೆಂಕಿ ಪೊಟ್ಟಣದೊಳಗೆ ಪ್ಯಾಕ್ ಮಾಡಬಹುದು!
ಬೆಂಕಿಪೊಟ್ಟಣದೊಳಗೆ ಸೇರುವ ಸೀರೆ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jan 12, 2022 | 5:53 PM

ಹೈದರಾಬಾದ್: ತೆಲಂಗಾಣದ ಕೈಮಗ್ಗ ನೇಕಾರರೊಬ್ಬರು (Handloom Weaver) ಬೆಂಕಿಪೊಟ್ಟಣದ ಒಳಗೆ ಸೇರಿಕೊಳ್ಳುವಂತಹ ಸೀರೆಯನ್ನು ನೇಯ್ದಿದ್ದಾರೆ. ಈ ವಿಭಿನ್ನವಾದ ಸೀರೆಯ ಫೋಟೋ, ವಿಡಿಯೋಗಳು ಭಾರೀ ವೈರಲ್ ಆಗುತ್ತಿವೆ. ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯ ನಲ್ಲ ವಿಜಯ್ ಎಂಬ ನೇಕಾರ ಈ ಸೀರೆಯನ್ನು ನೇಯ್ದಿದ್ದಾರೆ.

ಮಂಗಳವಾರ ತೆಲಂಗಾಣ ಸಚಿವರಾದ ಕೆ.ಟಿ ರಾಮರಾವ್, ಪಿ. ಸಬಿತಾ ಇಂದ್ರ ರೆಡ್ಡಿ, ವಿ. ಶ್ರೀನಿವಾಸ್ ಗೌಡ ಮತ್ತು ಎರ್ರಾಬೆಲ್ಲಿ ದಯಾಕರ್ ರಾವ್ ಅವರ ಮುಂದೆ ಈ ಬೆಂಕಿಪೊಟ್ಟಣದೊಳಗಿನ ಸೀರೆಯನ್ನು ಪ್ರದರ್ಶಿಸಲಾಯಿತು. ಪ್ರತಿಭಾವಂತ ಯುವ ನೇಕಾರರನ್ನು ಶ್ಲಾಘಿಸಿದ ಸಚಿವರು, ಸೀರೆ ನೇಯಲು ಬಳಸಿದ ವಸ್ತು ಮತ್ತು ನೇಯ್ಗೆಯ ಪ್ರಕ್ರಿಯೆಯ ಬಗ್ಗೆ ವಿಚಾರಿಸಿದರು.

ಬೆಂಕಿ ಪೊಟ್ಟಣದೊಳಗೆ ಸೇರಿಕೊಳ್ಳುವ ಸೀರೆಯ ಬಗ್ಗೆ ಕೇಳಿದ್ದೆವು. ಆದರೆ, ಇದೇ ಮೊದಲ ಬಾರಿಗೆ ನೋಡುತ್ತಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ವಿಜಯ್ ನೇಯ್ದಿರುವ ಹೊಸ ಬಗೆಯ ಸೀರೆಗೆ ಬೇಕಾದ ಎಲ್ಲ ಸಹಾಯವನ್ನೂ ಮಾಡುತ್ತೇನೆ ಎಂದು ಸಚಿವರು ಭರವಸೆ ನೀಡಿದ್ದಾರೆ.

ಮ್ಯಾಚ್‌ ಬಾಕ್ಸ್‌(ಬೆಂಕಿಪೊಟ್ಟಣದಲ್ಲಿ)ನಲ್ಲಿ ಹೊಂದಿಕೊಳ್ಳುವ ಕೈಯಿಂದ ನೇಯ್ದ ಸೀರೆಯನ್ನು ತಯಾರಿಸಲು ಆರು ದಿನಗಳು ಬೇಕಾಗುತ್ತದೆ. ಸೀರೆಯನ್ನು ತಯಾರಿಸಲು ಯಂತ್ರವನ್ನು ಬಳಸಿದರೆ, ಪ್ರಕ್ರಿಯೆಯು ಮೂರು ದಿನಗಳನ್ನು ತೆಗೆದುಕೊಳ್ಳುತ್ತದೆ. ಕೈಯಿಂದ ನೇಯ್ದ ಸೀರೆಗೆ 12,000 ರೂ., ಯಂತ್ರ ಬಳಸಿ ತಯಾರಿಸಿದ ಸೀರೆಗೆ 8,000 ರೂ. ನಿಗದಿಪಡಿಸಲಾಗಿದೆ.

ಬೆಂಕಿಪೊಟ್ಟಣದೊಳಗೆ ಪ್ಯಾಕ್ ಮಾಡಬಹುದಾದ ಸೀರೆ ನೇಯ್ದ ನೇಕಾರರು

ಇತ್ತೀಚಿನ ದಿನಗಳಲ್ಲಿ ಸಿರ್ಸಿಲ್ಲಾದ ಕೈಮಗ್ಗ ಕ್ಷೇತ್ರವು ಹಲವು ಬದಲಾವಣೆಗಳನ್ನು ಕಂಡಿದೆ ಎಂದು ವಿಜಯ್ ಸಚಿವರಿಗೆ ತಿಳಿಸಿದ್ದಾರೆ. ಹಾಗೇ, ರಾಜ್ಯ ಸರ್ಕಾರ ನೀಡಿದ ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಸಿರ್ಸಿಲ್ಲದ ನೇಕಾರರು ಅತ್ಯಾಧುನಿಕ ತಂತ್ರಜ್ಞಾನ ಮತ್ತು ಆಧುನಿಕ ಉಪಕರಣಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.

ವಿಜಯ್ ನೇಯ್ದ ಸೀರೆಯನ್ನು ಈ ಹಿಂದೆ 2017ರಲ್ಲಿ ವಿಶ್ವ ತೆಲುಗು ಸಮ್ಮೇಳನದಲ್ಲಿ ಪ್ರದರ್ಶಿಸಲಾಗಿತ್ತು. 2015ರಲ್ಲಿ ಭಾರತಕ್ಕೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಅವರ ಪತ್ನಿ ಮಿಶೆಲ್ ಒಬಾಮಾ ಬಂದಿದ್ದಾಗ ಅವರಿಗೆ ಸೂಪರ್ ಫೈನ್ ರೇಷ್ಮೆಯಿಂದ ಮಾಡಿದ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು.

ಇದನ್ನೂ ಓದಿ: Sanya Malhotra: ಶೂಟಿಂಗ್​ ಸೆಟ್​ನಿಂದ ‘ಕದ್ದ’ ಸೀರೆಯನ್ನು ಫ್ರೆಂಡ್ ಮದುವೆಗೆ ಉಟ್ಟುಕೊಂಡು ಹೋಗಿದ್ದ ಖ್ಯಾತ ನಟಿ!

Rashmika Mandanna: ಕಡುಕಪ್ಪು ಸೀರೆಯುಟ್ಟು ರಶ್ಮಿಕಾ ಮಸ್ತ್ ಫೋಟೋಶೂಟ್; ನಟಿಯ ಸ್ಟೈಲ್​ಗೆ ಫ್ಯಾನ್ಸ್ ಫಿದಾ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್