AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

10 ಹೆಣ್ಣುಮಕ್ಕಳ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ

ಹರಿಯಾಣದಲ್ಲಿ ಮಹಿಳೆಯೊಬ್ಬರು 10 ಹೆಣ್ಣುಮಕ್ಕಳ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಘಟನೆ ತಾಯಿ ಮತ್ತು ಮಗುವಿನ ಆರೋಗ್ಯ, ಹಾಗೆಯೇ ಗಂಡು ಮಗು ಬೇಕೆಂಬ ಹರಿಯಾಣದ ಮನಸ್ಥಿತಿಯ ಬಗ್ಗೆ ಕಳವಳ ಮೂಡಿಸಿದೆ. ಜಿಂದ್ ಜಿಲ್ಲೆಯಲ್ಲಿ ನಡೆದ ಈ ಪ್ರಸವ ಅಪಾಯಕಾರಿಯಾಗಿದ್ದರೂ, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಗಂಡು ಮಕ್ಕಳ ಮೇಲಿನ ಆಸೆ ಮತ್ತು ಶಿಕ್ಷಣದ ಮಹತ್ವವನ್ನು ಇದು ಎತ್ತಿ ತೋರಿಸುತ್ತದೆ.

10 ಹೆಣ್ಣುಮಕ್ಕಳ ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ ಮಹಿಳೆ
ಮಹಿಳೆಯ ಕುಟುಂಬ
ನಯನಾ ರಾಜೀವ್
|

Updated on: Jan 07, 2026 | 10:03 AM

Share

ಹರಿಯಾಣ, ಜನವರಿ 07: ಹರಿಯಾಣದಲ್ಲಿ ಮಹಿಳೆಯೊಬ್ಬಳು ಹತ್ತು ಹೆಣ್ಣುಮಕ್ಕಳ ಬಳಿಕ ಇದೀಗ ಗಂಡು ಮಗು(Baby)ವಿಗೆ ಜನ್ಮ ನೀಡಿದ್ದಾರೆ. ಈ ಘಟನೆಯು ತಾಯಿ ಹಾಗೂ ಶಿಶುವಿನ ಆರೋಗ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಹಾಗೆಯೇ ಗಂಡು ಮಗು ಬೇಕೇ ಬೇಕು ಎನ್ನುವ ಮನಸ್ಥಿತಿಯ ಬಗ್ಗೆಯೂ ಕಳವಳ ಮೂಡಿದೆ. ಜಿಂದ್ ಜಿಲ್ಲೆಯ ಉಚಾನಾ ಪಟ್ಟಣದ ಓಜಾಸ್ ಆಸ್ಪತ್ರೆಯಲ್ಲಿ ಮಹಿಳೆ ತನ್ನ 11ನೇ ಮಗುವಿಗೆ ಜನ್ಮ ನೀಡಿದ್ದಾಳೆ.

ಡಾ. ನರವೀರ್ ಶಿಯೋರನ್ ಅವರ ಪ್ರಕಾರ, ಈ ಹೆರಿಗೆ ಅಪಾಯಕರವಾಗಿತ್ತು, ತಾಯಿಗೆ ಮೂರು ಯುನಿಟ್ ರಕ್ತ ಬೇಕಿತ್ತು, ಈಗ ತಾಯಿ, ಮಗು ಆರೋಗ್ಯ ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. ಜನವರಿ 3 ರಂದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರನ್ನು ಡಿಸ್ಚಾರ್ಜ್ ಮಾಡಲಾಗಿದ್ದು ಫತೇಹಾಬಾದ್ ಜಿಲ್ಲೆಯ ತನ್ನ ಹಳ್ಳಿಗೆ ಮರಳಿದ್ದಾರೆ. ದಿನಗೂಲಿ ಕಾರ್ಮಿಕರಾಗಿರುವ ತಂದೆ ಸಂಜಯ್ ಕುಮಾರ್ ಮಾತನಾಡಿ, ನಮಗೆ ಹಾಗೂ ನನ್ನ ಹೆಣ್ಣುಮಕ್ಕಳಿಗೆ ತಮ್ಮ ಬೇಕೆಂಬ ಆಸೆ ಇತ್ತು ಎಂದು ಹೇಳಿದ್ದಾರೆ.

2007ರಲ್ಲಿ ಅವರು ವಿವಾಹವಾಗಿದ್ದರು, ಹಿರಿಯ ಮಗಳು 12ನೇ ತರಗತಿ ಓದುತ್ತಿದ್ದಾಳೆ, ಉಳಿದ ಮಕ್ಕಳು ಕೂಡ ಶಾಲೆಗೆ ಹೋಗುತ್ತಿದ್ದಾರೆ. ನಮ್ಮ ಆದಾಯ ಕಡಿಮೆ ಇದ್ದರೂ ಕೂಡ ಮಕ್ಕಳಿಗೆ ಶಿಕ್ಷಣ ಕೊಡುವುದು ನಮ್ಮ ಆದ್ಯತೆ. ಏನೇ ನಡೆದರೂ ಅದು ದೇವರಿಗೆ ಬಿಟ್ಟಿದ್ದು ಮತ್ತು ನಾನು ಅದರಲ್ಲಿ ಸಂತೋಷವಾಗಿದ್ದೇನೆ ಎಂದರು.

ಮತ್ತಷ್ಟು ಓದಿ: ಗಂಡು ಮಗು ಆಸೆ: ಕನಸು ಈಡೇರದಿದ್ದಾಗ ಹೆಂಡ್ತಿ ಮಕ್ಕಳನ್ನ ಬಿಟ್ಟು ಹೋಗ್ಬಿಟ್ಟ

ಇಂದಿನ ಹುಡುಗಿಯರು ಎಲ್ಲಾ ಕ್ಷೇತ್ರಗಳಲ್ಲೂ ಯಶಸ್ಸನ್ನು ಸಾಧಿಸಲು ಸಮರ್ಥರಾಗಿದ್ದಾರೆ. ಹಾಗಾಗಿ ಹೆಣ್ಣು ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವ ನಂಬಿಕೆ ಕೂಡ ನನ್ನದು ಎಂದರು. ಶಿಶುವಿಗೆ ದಿಲ್ಖುಷ್ ಎಂದು ನಾಮಕರಣ ಮಾಡಲಾಗಿದೆ.

19 ವರ್ಷಗಳ ದೀರ್ಘ ಕಾಯುವಿಕೆಯ ನಂತರ ಮಗನ ಜನನವಾಗಿದೆ. ಹಿರಿಯ ಮಗಳು ಸರೀನಾ, ಸುಮಾರು 18 ವರ್ಷ ವಯಸ್ಸಿನವಳು.ಸರ್ಕಾರಿ ಶಾಲೆಯಲ್ಲಿ 12 ನೇ ತರಗತಿಯಲ್ಲಿ ಓದುತ್ತಾಳೆ, ನಂತರ ಅಮೃತಾ 11 ನೇ ತರಗತಿಯಲ್ಲಿ ಓದುತ್ತಿದ್ದಾಳೆ. ಶೀಲಾ 7 ನೇ ತರಗತಿಯಲ್ಲಿ, ಕಿರಣ್ 6 ನೇ ತರಗತಿಯಲ್ಲಿ, ದಿವ್ಯಾ 5 ನೇ ತರಗತಿಯಲ್ಲಿ, ಮನ್ನತ್ 3 ನೇ ತರಗತಿಯಲ್ಲಿ, ಕೃತಿಕಾ 2 ನೇ ತರಗತಿಯಲ್ಲಿ ಮತ್ತು ಅಮ್ನಿಶ್ 1 ನೇ ತರಗತಿಯಲ್ಲಿ ಓದುತ್ತಿದ್ದರೆ, ಒಂಬತ್ತನೇ ಮತ್ತು ಹತ್ತನೇ ಹೆಣ್ಣುಮಕ್ಕಳು ಲಕ್ಷ್ಮಿ ಮತ್ತು ವೈಶಾಲಿ. ವೈಶಾಲಿ ನಂತರ, ಕುಟುಂಬವು ಅಂತಿಮವಾಗಿ ಒಬ್ಬ ಮಗನನ್ನು ಸ್ವಾಗತಿಸಿದೆ.

ಹರಿಯಾಣದಲ್ಲಿ 2025 ರಲ್ಲಿ ಇದು 1,000 ಪುರುಷರಿಗೆ 923 ಮಹಿಳೆಯರಿದ್ದು ಇದು ಸುಧಾರಿಸಿದೆ, ಆದರೂ ಇದು ರಾಷ್ಟ್ರೀಯ ಸರಾಸರಿಗಿಂತ ಕಡಿಮೆಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ