Viral Video: ಟ್ರ್ಯಾಕ್ನಲ್ಲಿ ಓಡುವ ಬದಲು ಮಾಲ್ ಒಳಗೆ ಜಾಗಿಂಗ್ ಮಾಡಿದ ಯುವಕ
ಮಿತಿ ಮೀರಿದ ವಾಯು ಮಾಲಿನ್ಯ, ವಾಹನಗಳ ಕಿರಿಕಿರಿ, ಧೂಳು, ಹೊಗೆ ಜಾಗಿಂಗ್ ಹಾಗಿರಲಿ ವಾಕಿಂಗ್ ಮಾಡುವುದೂ ಮುಂಬೈನಲ್ಲಿ ಕಷ್ಟಕರವಾಗಿದೆ. ಹೀಗಾಗಿ ವ್ಯಕ್ತಿಯೊಬ್ಬರು ಮಾಲ್ ಒಳಗೆ ಬಂದು ಜಾಗಿಂಗ್ ಮಾಡಿರುವ ವಿಡಿಯೋ ವೈರಲ್ ಆಗಿದೆ. ಈ ವೈರಲ್ ಕ್ಲಿಪ್ ಅನ್ನು ಭವಿನ್ ಪಾರ್ಮರ್ ಎಂಬುವವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.ಅದರಲ್ಲಿ ಟಿ ಶರ್ಟ್ ಹಾಗೂ ಟ್ರ್ಯಾಕ್ ಪ್ಯಾಂಟ್ ಮತ್ತು ಸ್ಪೋರ್ಟ್ಸ್ ಶೂ ಧರಿಸಿರುವ ಯುವಕ ಮಾಲ್ ಅನ್ನು ತನ್ನ ಪರ್ಸನಲ್ ಜಾಗಿಂಗ್ ಟ್ರ್ಯಾಕ್ ಆಗಿ ಪರಿವರ್ತಿಸಿಕೊಂಡಿರುವುದನ್ನು ಕಾಣಬಹುದು.

ಮುಂಬೈ, ಜನವರಿ 07: ಯುವಕನೊಬ್ಬ ಟ್ರ್ಯಾಕ್ನಲ್ಲಿ ಓಡುವ ಬದಲು ಮಾಲ್ ಅನ್ನೇ ಪರ್ಸನಲ್ ಟ್ರ್ಯಾಕ್ ಆಗಿ ಮಾಡಿಕೊಂಡು ಜಾಗಿಂಗ್(Jogging) ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೆಹಲಿಯಷ್ಟಲ್ಲದಿದ್ದರೂ ಮುಂಬೈನಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾಯು ಗುಣಮಟ್ಟ ಸೂಚ್ಯಂಕ(AQI)200ರ ಗಡಿ ದಾಟಿದೆ. ಹೀಗಾಗಿ ಯುವಕನೊಬ್ಬ ಟ್ರ್ಯಾಕ್ನಲ್ಲಿ ಓಡುವ ಬದಲು ಮಾಲ್ನಲ್ಲಿ ಜಾಗಿಂಗ್ ಮಾಡಿರುವ ವಿಡಿಯೋ ವೈರಲ್ ಆಗಿದೆ.
ಈ ವೈರಲ್ ಕ್ಲಿಪ್ ಅನ್ನು ಭವಿನ್ ಪಾರ್ಮರ್ ಎಂಬುವವರು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.ಅದರಲ್ಲಿ ಟಿ ಶರ್ಟ್ ಹಾಗೂ ಟ್ರ್ಯಾಕ್ ಪ್ಯಾಂಟ್ ಮತ್ತು ಸ್ಪೋರ್ಟ್ಸ್ ಶೂ ಧರಿಸಿರುವ ಯುವಕ ಮಾಲ್ ಅನ್ನು ತನ್ನ ಪರ್ಸನಲ್ ಜಾಗಿಂಗ್ ಟ್ರ್ಯಾಕ್ ಆಗಿ ಪರಿವರ್ತಿಸಿಕೊಂಡಿರುವುದನ್ನು ಕಾಣಬಹುದು. ಮಾಲ್ನಲ್ಲಿ ಜಾಗಿಂಗ್ ಮಾಡಿದರೆ ಒಳಗೆ ಗಾಳಿಯೂ ಶುದ್ಧವಾಗಿರುತ್ತದೆ, ಅಕ್ಕ ಪಕ್ಕದ ಜಾಗ ಕೂಡ ಶುಚಿಯಾಗಿರುತ್ತದೆ.
ಎಸಿ ಇರುವ ಕಾರಣ ಯಾವುದೇ ಸಮಸ್ಯೆ ಇರುವುದಿಲ್ಲ. ಈ ವಿಡಿಯೋವನ್ನು ಜನವರಿ 05ರಂದು ಪೋಸ್ಟ್ ಮಾಡಲಾಗಿದೆ. ಆನ್ಲೈನ್ನಲ್ಲಿ ಒಳ್ಳೆಯ ಅಟೆನ್ಷನ್ ಪಡೆದಿದೆ. 2.94 ಲಕ್ಷ ವೀಕ್ಷಣೆಯನ್ನು ಪಡೆದಿದೆ. 6,600 ಲೈಕ್ಸ್ಗಳನ್ನು ಪಡೆದಿದೆ.
ಮತ್ತಷ್ಟು ಒದಿ: ಜಾಗಿಂಗ್, ವ್ಯಾಯಾಮ ಶುರು ಮಾಡುವ ಮುನ್ನ ಈ 10 ಟೆಸ್ಟ್ಗಳನ್ನು ಮಾಡಿಸಲು ಮರೆಯದಿರಿ
ಕಳಪೆ ಗಾಳಿಯಿಂದ ರಕ್ಷಿಸಿಕೊಳ್ಳಲು ಇದು ಒಳ್ಳೆಯ ಪ್ಲ್ಯಾನ್ ಎಂದು ನೆಟ್ಟಿಗರು ಖುಷಿ ಪಟ್ಟಿದ್ದಾರೆ. ಜನವರಿ 7 ರ ಮುಂಜಾನೆ ನಗರದ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 332 ಕ್ಕೆ ತಲುಪಿದ್ದು, ಇದನ್ನು ‘ತೀವ್ರ’ ವರ್ಗಕ್ಕೆ ಸೇರಿದೆ. ಮಕ್ಕಳು, ಹಿರಿಯ ನಾಗರಿಕರು, ಉಸಿರಾಟ, ಹೃದಯ ಸಂಬಂಧಿ ಕಾಯಿಲೆಯಿಂದ ನರಳುವಂತಾಗಿದೆ.
View this post on Instagram
ಮೆಟ್ರೋ ರೈಲು ಕಾರಿಡಾರ್‌ಗಳು, ಫ್ಲೈಓವರ್‌ಗಳು, ಕರಾವಳಿ ರಸ್ತೆ ವಿಸ್ತರಣೆಗಳು ಮತ್ತು ರಸ್ತೆ ಅಗಲೀಕರಣ ಕಾಮಗಾರಿಗಳಂತಹ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿಗಳು ಧೂಳಿನ ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸಿವೆ. ತ್ವರಿತ ಖಾಸಗಿ ರಿಯಲ್ ಎಸ್ಟೇಟ್ ನಿರ್ಮಾಣವು ಮಾಲಿನ್ಯಕಾರಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ. ವಾಹನಗಳಿಂದ ಹೊರಸೂಸುವ ಹೊಗೆ, ವಿಶೇಷವಾಗಿ ಗರಿಷ್ಠ ಸಂಚಾರ ಸಮಯದಲ್ಲಿ, ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತಲೇ ಇರುತ್ತದೆ, ಇದರಿಂದಾಗಿ ಗಾಳಿಯ ಗುಣಮಟ್ಟ ನಿರ್ವಹಣೆ ನಗರಕ್ಕೆ ದೊಡ್ಡ ಸವಾಲಾಗಿದೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:10 am, Wed, 7 January 26
