HD Deve Gowda Speech: ನೀವು ಪ್ರಧಾನಿಯಾದರೆ ಕಾಂಗ್ರೆಸ್ ಸಹಿಸಿಕೊಳ್ಳುತ್ತದೆಯೇ: ಖರ್ಗೆಗೆ ದೇವೇಗೌಡ ಪ್ರಶ್ನೆ
ಎಚ್ ಡಿ ದೇವೇಗೌಡ: ಖರ್ಗೆ ಪ್ರಾಮಾಣಿಕ ವ್ಯಕ್ತಿ, ಮನಮೋಹನ್ ಸಿಂಗ್ ಪ್ರಾಮಾಣಿಕ ವ್ಯಕ್ತಿ, ಆದರೆ ಕಾಂಗ್ರೆಸ್ ತನ್ನ ಪಕ್ಷವನ್ನು ದುರ್ಬಲಗೊಳಿಸುತ್ತದೆ. ಖರ್ಗೆ ಸಿಎಂ ಆಗಬೇಕು ಅಂತ ಆಸೆ ಇತ್ತು, ನನ್ನ ಸ್ವಂತ ಮಗನಲ್ಲ ಎಂದು ರಾಜ್ಯಸಭೆಯಲ್ಲಿ ಮಾತನಾಡಿದ ಎಚ್.ಡಿ ದೇವೇಗೌಡ ಹೇಳಿದ್ದಾರೆ. ಆಮೇಲೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆವರತ್ತ ತಿರುಗಿದ ಗೌಡರು, ನೀವು ಪ್ರಧಾನಿಯಾದರೆ ಕಾಂಗ್ರೆಸ್ ಸಹಿಸಿಕೊಳ್ಳುತ್ತದೆಯೇ ಎಂದು ಕೇಳಿದ್ದಾರೆ.
ದೆಹಲಿ ಫೆಬ್ರುವರಿ 08: ನೀವು ಪ್ರಧಾನಿಯಾದರೆ ಕಾಂಗ್ರೆಸ್ (Congress) ಸಹಿಸಿಕೊಳ್ಳುತ್ತದೆಯೇ ಎಂದು ರಾಜ್ಯಸಭೆಯಲ್ಲಿ (Rajyasabha) ಮಾತನಾಡಿದ ಎಚ್.ಡಿ. ದೇವೇಗೌಡ (HD Deve Gowda) ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರಲ್ಲಿ ಕೇಳಿದ್ದಾರೆ. ನಾನು ಸೋತರೆ ನಾನೇ ಹಿಂದೆ ಸರಿಯುತ್ತಾರೆ ಎಂದಿದ್ದಾರೆ ಖರ್ಗೆ. ಅವರಿಗೆ ನಾನು ಆಭಾರಿ ಎಂದು ದೇವೇಗೌಡರು ಹೇಳಿದ್ದಾರೆ. ಖರ್ಗೆ ಪ್ರಾಮಾಣಿಕ ವ್ಯಕ್ತಿ, ಮನಮೋಹನ್ ಸಿಂಗ್ ಅಪ್ಪಟ ಪ್ರಾಮಾಣಿಕ ವ್ಯಕ್ತಿ, ಆದರೆ ಕಾಂಗ್ರೆಸ್ ತನ್ನ ಪಕ್ಷವನ್ನು ದುರ್ಬಲಗೊಳಿಸುತ್ತದೆ. ಖರ್ಗೆ ಅವರು ಉನ್ನತ ಸ್ಥಾನಕ್ಕೆ ಬಂದರೆ ಅವರು ಸಹಿಸಿಕೊಳ್ಳುತ್ತಾರೆಯೇ? ಖರ್ಗೆ ಸಿಎಂ ಆಗಬೇಕು ಅಂತ ಆಸೆ ಇತ್ತು, ನನ್ನ ಸ್ವಂತ ಮಗನಲ್ಲ ಎಂದು ಹೇಳಿದ ದೇವೇಗೌಡ, ನೀವು ಪ್ರಧಾನಿಯಾದರೆ ಕಾಂಗ್ರೆಸ್ ಸಹಿಸಿಕೊಳ್ಳುತ್ತದೆಯೇ ಎಂದು ಖರ್ಗೆ ಅವರಲ್ಲಿ ಪ್ರಶ್ನಿಸಿದ್ದಾರೆ.
1991 ರಲ್ಲಿ ದೇಶವನ್ನು ಉಳಿಸಲು ಮನಮೋಹನ್ ಸಿಂಗ್ ಏನು ಮಾಡಿದ್ದಾರೆ ಎಂಬುದರ ಬಗ್ಗೆ ನಾನು ಸಾಕಷ್ಟು ಮಾತನಾಡಬಲ್ಲೆ ಎಂದಿದ್ದಾರೆ ದೇವೇಗೌಡ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಗುರುವಾರ (ಫೆಬ್ರವರಿ 8) ಸಂಸತ್ತಿನಲ್ಲಿ ಮಾತನಾಡುತ್ತಾ, ಮಾಜಿ ಪ್ರಧಾನಿ ದೇವೇಗೌಡರು ಖರ್ಗೆಯವರ ಪಕ್ಷಕ್ಕೆ ಹಣಕಾಸಿನ ನೆರವು ಕೊರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು ಎಂದಿದ್ದಾರೆ. “ನಿಮಗೆ ಆರ್ಥಿಕವಾಗಿ ಬೆಂಬಲ ನೀಡಲು ಯಾರೂ ಇಲ್ಲ, ನನ್ನ ಮೈತ್ರಿಗೆ ಯಾರು ಬೆಂಬಲ ನೀಡುತ್ತಾರೆ?” ಎಂದು ದೇವೇಗೌಡ ನನ್ನಲ್ಲಿ ಹೇಳಿದ್ದರು ಎಂದಿದ್ದಾರೆ ಖರ್ಗೆ. “ಮೋದಿ ಮತ್ತು ದೇವೇಗೌಡರ ಪ್ರೇಮಕ್ಕೆ ಈಗ ಸ್ವಲ್ಪ ತಡವಾಗಿದೆ” ಎಂದ ಖರ್ಗೆ, ದೇವೇಗೌಡ ಮತ್ತು ಬಿಜೆಪಿ ಮೈತ್ರಿ ಬಗ್ಗೆ ಚರ್ಚಿಸಿದರು.
ಕರ್ನಾಟಕದ 28 ಲೋಕಸಭಾ ಸ್ಥಾನಗಳಿಗೆ ಜೆಡಿಎಸ್ ಮತ್ತು ಬಿಜೆಪಿ ಸೀಟು ಹಂಚಿಕೆ ಸೂತ್ರವನ್ನು ಘೋಷಿಸುವ ನಿರೀಕ್ಷೆಯಿರುವುದರಿಂದ ಖರ್ಗೆ ಅವರ ಹೇಳಿಕೆಗಳು ಸಂಸತ್ತಿನಲ್ಲಿ ನಡೆಯುತ್ತಿರುವ ಚರ್ಚೆಗಳಿಗೆ ಅನಿರೀಕ್ಷಿತ ತಿರುವು ನೀಡಿವೆ.
ರಾಜ್ಯಸಭೆಯಲ್ಲಿ ನಿವೃತ್ತ ಸಂಸದರಿಗೆ ವಿದಾಯ ಹೇಳಿದ ಪಿಎಂ ಮೋದಿ
ರಾಜ್ಯಸಭೆಯಲ್ಲಿ ನಿವೃತ್ತಿಯಾಗುತ್ತಿರುವ ಸದಸ್ಯರಿಗೆ ವಿದಾಯ ಹೇಳುವ ಸಂದರ್ಭದಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಸದ, ದೇಶಕ್ಕೆ ನೀಡಿದ ಕೊಡುಗೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದರು.
डॉ. मनमोहन सिंह 6 बार अपने मूल्यवान विचारों से बहुत बड़ा योगदान दिया है। वैचारिक मतभेद बहुत अल्पकालीन होता है, लेकिन इतने लंबे अर्से तक इस सदन का मार्गदर्शन किया है, देश का मार्गदर्शन किया है। भविष्य में उनकी चर्चा जरूर होगी। @narendramodi#BudgetSession2024 @PMOIndia pic.twitter.com/T1I0PIxrIK
— SansadTV (@sansad_tv) February 8, 2024
ಪ್ರಜಾಪ್ರಭುತ್ವವನ್ನು ಬಲಪಡಿಸಲು ಮನಮೋಹನ್ ಸಿಂಗ್ ಅವರು ಗಾಲಿಕುರ್ಚಿಯ ಮೇಲೆ ರಾಜ್ಯಸಭೆಯಲ್ಲಿ ಮತ ಚಲಾಯಿಸಲು ಬಂದಿದ್ದರು ಎಂದಿದ್ದಾರೆ ಮೋದಿ . 58 ರಾಜ್ಯಸಭಾ ಸಂಸದರು 2024 ಜುಲೈನಲ್ಲಿ ನಿವೃತ್ತರಾಗಲಿದ್ದಾರೆ. ಗುರುವಾರ, ರಾಜ್ಯಸಭೆಯ ಉಪಾಧ್ಯಕ್ಷ ಹರಿವಂಶ್ ಅವರು ಸದನದ 58 ಸಂಸದರ ಅಧಿಕಾರಾವಧಿಯು ಜುಲೈ 2024 ರಲ್ಲಿ ಕೊನೆಗೊಳ್ಳಲಿದೆ ಎಂದು ತಿಳಿಸಿದರು.
ಇದನ್ನೂ ಓದಿ:ಯಾವ ಸರ್ಕಾರದ ಅವಧಿಯಲ್ಲಿ ಆರ್ಥಿಕತೆ ಉತ್ತಮವಾಗಿತ್ತು, ಬಿಜೆಪಿಯ ಶ್ವೇತ ಪತ್ರದ ವಿರುದ್ಧ ಕಾಂಗ್ರೆಸ್ನ ಕಪ್ಪು ಪತ್ರ
ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತು
ಮನಮೋಹನ್ ಸಿಂಗ್ ಒಳ್ಳೆಯ ಕೆಲಸ ಮಾಡಿದ್ದಾರೆ. ಪ್ರಧಾನಿ ಅವರ ಬಗ್ಗೆ ಅವರ ಮಾತುಗಳಿಗಾಗಿ ನಾನು ಧನ್ಯವಾದ ಹೇಳುತ್ತೇನೆ. ಹೀಗೆಯೇ ಇರಬೇಕು. ಒಳ್ಳೆಯ ಕೆಲಸವನ್ನು ಮೆಚ್ಚಿ, ಕೆಟ್ಟದ್ದನ್ನು ಟೀಕಿಸಿ ಎಂದಿದ್ದಾರೆ. ಅದೇ ವೇಳೆ ರಾಜ್ಯಸಭೆಯಲ್ಲಿ ದೇಶಕ್ಕೆ ಸಂಬಂಧಿಸಿದ ನಿರ್ಣಾಯಕ ವಿಷಯಗಳ ಬಗ್ಗೆ ಹೆಚ್ಚಿನ ಚರ್ಚೆಗಳನ್ನು ನಡೆಸುವಂತೆ ಖರ್ಗೆ ಸದನವನ್ನು ಒತ್ತಾಯಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:22 pm, Thu, 8 February 24