ಮುಂಬೈ: ಮುಂಬೈ (Mumbai) ಸಮೀಪದ ರಸ್ತೆಯೊಂದರಲ್ಲಿ ಇಂದು (ಸೋಮವಾರ) ಹಗಲು ಹೊತ್ತಿನಲ್ಲಿ ಗುಂಡಿನ ದಾಳಿ(Heavy Firing) ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಎತ್ತಿನಗಾಡಿ ಓಟದ ಸ್ಪರ್ಧೆಯಲ್ಲಿ ಎರಡು ಗುಂಪುಗಳು ಜಗಳವಾಡಿದ ನಂತರ ಸುಮಾರು 15-20 ಸುತ್ತು ಗುಂಡು ಹಾರಿಸಲಾಗಿದೆ. ಯಾವುದೇ ಗಾಯಗಳ ಬಗ್ಗೆ ವರದಿಯಾಗಿಲ್ಲ. ಘಟನೆಯ ಸಮಯದಲ್ಲಿ ಚಿತ್ರೀಕರಿಸಲಾದ ವಿಡಿಯೊ ಕ್ಲಿಪ್‌ನಲ್ಲಿ, ಕೆಲವು ವ್ಯಕ್ತಿಗಳು ಮುಖ್ಯ ರಸ್ತೆಯಿಂದ ನಿಲ್ಲಿಸಿದ ವಾಹನಗಳ ಸುತ್ತಲೂ ನಿಂತಿರುವುದನ್ನು ಕಾಣಬಹುದು, ಇತರ ವಾಹನಗಳು ಹಾದು ಹೋಗುತ್ತಿರುವಾಗಲೂ ಎದುರಿನಿಂದ ಏಕಾಏಕಿ ಗುಂಡು ಹಾರಿಸಲಾಗುತ್ತದೆ.ಗುಂಡಿನ ದಾಳಿ ಮುಂದುವರಿದಂತೆ, ಕೆಲವರು ರಕ್ಷಣೆ ಪಡೆಯಲು ಓಡುತ್ತಿರುವುದನ್ನು ಕಾಣಬಹುದು. ಕೆಲವರು ಅಲ್ಲಿ ನಿಂತಿದ್ದ ಕಾರುಗಳ ಹಿಂದೆ ಅಡಗಿಕೊಳ್ಳಲು ಪ್ರಯತ್ನಿಸುತ್ತಿರುವುದೂ ಕಾಣಿಸುತ್ತದೆ.
firing in ambernath near mumbai
During the meeting organized for the race of bullock carts, bullets fired
Pandharinath Phadke and controversial Rahul Patil have been fighting for many days over bullock cart race
Firing was done due to this struggle
video viral @MumbaiPolice pic.twitter.com/XpgTEtpfHX— BHARAT GHANDAT (@BHARATGHANDAT2) November 13, 2022
ವರದಿಗಳ ಪ್ರಕಾರ, ಅಂಬರನಾಥ್‌ನಲ್ಲಿ ನಡೆದ ಎತ್ತಿನಗಾಡಿ ಓಟದ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.. ವಾದ-ವಿವಾದದ ನಂತರ, ಇಬ್ಬರು ವ್ಯಕ್ತಿಗಳ ಗುಂಪುಗಳು ಹೊಡೆದಾಟ ನಡೆಸಿ ಗುಂಡು ಹಾರಾಟ ನಡೆಸಿವೆ.ಸ್ಥಳಕ್ಕೆ ಶಿವಾಜಿನಗರ ಠಾಣೆಯ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಎನ್ ಡಿಟಿವಿ ವರದಿ ಮಾಡಿದೆ.