ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ: 10 ಮಂದಿ ಸಾವು, ಲಾತೂರ್‌ನಲ್ಲಿ ರಕ್ಷಣಾ ಕಾರ್ಯಾಚರಣೆಗೆ ಬೋಟ್, ಹೆಲಿಕಾಪ್ಟರ್ ನಿಯೋಜನೆ
Maharashtra Rains: ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಕಳೆದ 48 ಗಂಟೆಗಳಲ್ಲಿ ಭಾರೀ ಮಳೆ ಮತ್ತು ಪ್ರವಾಹದಲ್ಲಿ 10 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಎಂಟು ಜಿಲ್ಲೆಗಳಾದ ಔರಂಗಾಬಾದ್, ಲಾತೂರ್, ಉಸ್ಮಾನಾಬಾದ್, ಪರಭಾನಿ, ನಾಂದೇಡ್, ಬೀಡ್, ಜಲ್ನಾ ಮತ್ತು ಹಿಂಗೋಲಿ ಸೇರಿದಂತೆ ಈ ಪ್ರದೇಶದಲ್ಲಿ ಮಳೆಯ ಅಬ್ಬರಕ್ಕೆ 200 ಕ್ಕೂ ಹೆಚ್ಚು ಜಾನುವಾರುಗಳು ಕೊಚ್ಚಿ ಹೋಗಿವೆ
ಲಾತೂರ್: ಮಹಾರಾಷ್ಟ್ರದ ಲಾತೂರ್ನ ಲ್ಲಿ ದಿನವಿಡೀ ಭಾರೀ ಮಳೆಯಾಗುತ್ತಿದ್ದಂತೆ ಬ್ಯಾರೇಜ್‌ಗಳು, ಹಳ್ಳಿಗಳು ಮತ್ತು ನದಿಯ ದಡದಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ತಂಡ, ಹೆಲಿಕಾಪ್ಟರ್ ಮತ್ತು ದೋಣಿಗಳನ್ನು ನಿಯೋಜಿಸಿದೆ. ಸರ್ಸಾ ಹಳ್ಳಿಯ ಮಂಜರಾ ನದಿಯ ದಡದಲ್ಲಿ ಸಿಲುಕಿದ್ದ 40 ರಲ್ಲಿ 25 ಜನರನ್ನು ದೋಣಿಗಳ ಮೂಲಕ ರಕ್ಷಿಸಲಾಗಿದೆ, ಉಳಿದ 15 ಜನರನ್ನು ಸುರಕ್ಷಿತವಾಗಿ ತಲುಪಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೇನಾಪುರ ತಹಸಿಲ್‌ನ ದಿಗೋಲ್ ದೇಶಮುಖ ಪ್ರದೇಶದಲ್ಲಿ ನದಿ ಪಾತ್ರದಲ್ಲಿ ಸಿಲುಕಿದ್ದ ಮೂವರನ್ನು ರಕ್ಷಿಸಲಾಗಿದೆ ಎಂದು ಅವರು ಹೇಳಿದರು.
ರಾಜ್ಯದ ನೀರಾವರಿ ಇಲಾಖೆಯ ಮೂವರು ಉದ್ಯೋಗಿಗಳು ಘನಸರಗಾಂವ್ ಗ್ರಾಮ ಬ್ಯಾರೇಜ್‌ನಲ್ಲಿ ಸಿಲುಕಿಕೊಂಡಿದ್ದು, ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ತಂಡ ಹಾಗೂ ಒಂದು ಹೆಲಿಕಾಪ್ಟರ್ ಅನ್ನು ರಕ್ಷಣಾ ಕಾರ್ಯದಲ್ಲಿ ತರಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಸಾಕೇಬ್ ಉಸ್ಮಾನಿ ತಿಳಿಸಿದ್ದಾರೆ.
ಲಾತೂರಿನಲ್ಲಿ 6 ರಲ್ಲಿ 10 ತಹಸಿಲ್‌ಗಳು ಮತ್ತು 60 ಕಂದಾಯ ಮಂಡಲಗಳಲ್ಲಿ 30 ಭಾರೀ ಮಳೆಯಾಗಿದ್ದು, ಹೊಳೆಗಳು ಮತ್ತು ನದಿಗಳಲ್ಲಿ ಪ್ರವಾಹವಾಗಿದೆ. ಕೆಹ್ ತಹಸಿಲ್‌ನ ಧನೇಗಾಂವ್‌ನಲ್ಲಿ ಅಣೆಕಟ್ಟಿನ 18 ಗೇಟ್ ತೆರೆದು 70,845.30 ಕ್ಯೂಸೆಕ್ ನೀರನ್ನು ಬಿಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲಾತೂರ್ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ ಗುಡುಗು ಸಹಿತ 66.09 ಮಿಲಿಮೀಟರ್ ಭಾರೀ ಮಳೆಯಾಗಿದೆ. ಲಾತೂರ್, ಉದಗಿರ್, ಅಹ್ಮದ್ ಪುರ್, ಚಕೂರ್, ಜಲ್ಕೋಟ್ ಮತ್ತು ಔಸಾ ತಹಸೀಲ್ ಗಳಲ್ಲಿ ಹಲವು ಗ್ರಾಮಗಳು ಸಂಪರ್ಕ ಕಡಿತಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಈ ಕಂದಾಯ ಮಂಡಲಗಳಲ್ಲಿ 65 ಮಿಮೀ ಮಳೆಯಾಗಿದೆ ಎಂದು ಅವರು ಹೇಳಿದರು,ಈ ಮಳೆಗಾಲದಲ್ಲಿ ಲಾತೂರ್ ಜಿಲ್ಲೆಯಲ್ಲಿ ಈಗ ಒಟ್ಟು ಮಳೆ 906 ಮಿಮೀ ತಲುಪಿದೆ, ಇದು ವಾರ್ಷಿಕ ಸರಾಸರಿ ಶೇಕಡಾ 109 ರಷ್ಟಿದೆ.
ತಾಂಡುಲ್ಜಾ ಮತ್ತು ಮುರುದ್ ಕಂದಾಯ ಮಂಡಲಗಳಲ್ಲಿ ಅತಿ ಹೆಚ್ಚು, 127.8 ಮಿಮೀ, ಮಳೆಯಾಗಿದ್ದು, ತೊಂಡಾರ್‌ನಲ್ಲಿ 103 ಮಿಮೀ ಮತ್ತು ಚಕೂರ್‌ನಲ್ಲಿ 101.3 ಮಳೆಯಾಗಿದೆ ಎಂದು ಅವರು ಹೇಳಿದರು. ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮಹಾರಾಷ್ಟ್ರದಲ್ಲಿ ಭಾರೀ ಮಳೆಗೆ 10 ಸಾವು ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಕಳೆದ 48 ಗಂಟೆಗಳಲ್ಲಿ ಭಾರೀ ಮಳೆ ಮತ್ತು ಪ್ರವಾಹದಲ್ಲಿ 10 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಎಂಟು ಜಿಲ್ಲೆಗಳಾದ ಔರಂಗಾಬಾದ್, ಲಾತೂರ್, ಉಸ್ಮಾನಾಬಾದ್, ಪರಭಾನಿ, ನಾಂದೇಡ್, ಬೀಡ್, ಜಲ್ನಾ ಮತ್ತು ಹಿಂಗೋಲಿ ಸೇರಿದಂತೆ ಈ ಪ್ರದೇಶದಲ್ಲಿ ಮಳೆಯ ಅಬ್ಬರಕ್ಕೆ 200 ಕ್ಕೂ ಹೆಚ್ಚು ಜಾನುವಾರುಗಳು ಕೊಚ್ಚಿ ಹೋಗಿವೆ ಮತ್ತು ಹಲವಾರು ಮನೆಗಳು ಹಾನಿಗೊಳಗಾಗಿವೆ.
ಕಳೆದ 48 ಗಂಟೆಗಳಲ್ಲಿ ಈ ಪ್ರದೇಶದ ಆರು ಜಿಲ್ಲೆಗಳಿಂದ 10 ಸಾವುಗಳು ವರದಿಯಾಗಿವೆ, ಇದರಲ್ಲಿ ಬೀಡ್‌ನಲ್ಲಿ ಮೂರು, ಉಸ್ಮಾನಾಬಾದ್ ಮತ್ತು ಪರ್ಭಾನಿಯಲ್ಲಿ ತಲಾ ಎರಡು, ಮತ್ತು ಜಲ್ನಾ, ನಾಂದೇಡ್ ಮತ್ತು ಲಾತೂರ್‌ನಲ್ಲಿ ತಲಾ ಒಂದು ಸಾವು ಸಂಭವಿಸಿದೆ
ಮಂಗಳವಾರ ಮಧ್ಯಾಹ್ನದವರೆಗೆ ಔರಂಗಾಬಾದ್ ಮತ್ತು ಹಿಂಗೋಲಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ 60 ದೊಡ್ಡ ಪ್ರಾಣಿಗಳು ಸೇರಿದಂತೆ ಒಟ್ಟು 205 ಪ್ರಾಣಿಗಳು ಕೊಚ್ಚಿ ಹೋಗಿವೆ ಎಂದು ಪ್ರಕಟಣೆ ತಿಳಿಸಿದೆ.
ಅಲ್ಲದೆ, ಈ ಪ್ರದೇಶದಲ್ಲಿ ಸುರಿದ ಭಾರೀ ಮಳೆಯಿಂದಾಗಿ 25 ಗುಡಿಸಲು ಸೇರಿದಂತೆ 28 ಮನೆಗಳು ಸಹ ಹಾನಿಗೀಡಾಗಿವೆ. ಹಾನಿಗೊಳಗಾದ ಮನೆಗಳಲ್ಲಿ 11 ಔರಂಗಾಬಾದ್‌ನಲ್ಲಿ, 12 ಬೀಡ್‌ನಲ್ಲಿ ಮತ್ತು ಐದು ಜಲ್ನಾದಲ್ಲಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಡೀ ಮರಾಠವಾಡ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿಗಳು ತುಂಬಿ ಹರಿಯುತ್ತಿರುವುದರಿಂದ ಹಲವು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರೀ ಮಳೆ ಮತ್ತು ಪ್ರವಾಹವು ಈ ಪ್ರದೇಶದ ಹಲವಾರು ಎಕರೆ ಕೃಷಿ ಭೂಮಿಯಲ್ಲಿ ಬೆಳೆಗಳನ್ನು ಹಾನಿಗೊಳಿಸಿದೆ ಎಂದು ಅವರು ಹೇಳಿದರು.
“ನಿನ್ನೆಯಿಂದ ಜಲಸಂಪನ್ಮೂಲ ಇಲಾಖೆ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ನಾವು ಹಾನಿಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದೇವೆ” ಎಂದು ರಾಜ್ಯ ಜಲ ಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಬೀಡ್ ನಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಆಡಳಿತವು ಜನರಿಗೆ ಸಾಧ್ಯವಿರುವ ಎಲ್ಲ ಪರಿಹಾರವನ್ನು ನೀಡುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಸಿಧು ರಾಜೀನಾಮೆ ಬಗ್ಗೆ ನನಗೆ ಮಾಹಿತಿ ಇರಲಿಲ್ಲ: ಪಂಜಾಬ್ ಸಿಎಂ ಚರಣ್ಜಿತ್ ಸಿಂಗ್ ಚನ್ನಿ
(Heavy rain in Maharashtra NDRF team a helicopter and boats were deployed In Latur)