ದೆಹಲಿ: ಆಲಿಕಲ್ಲು ಮಳೆಯಿಂದಾಗಿ ಸಂಚಾರ ದಟ್ಟಣೆ; ಗಾಳಿ ಮಳೆಗೆ ಮರಗಳು ಧರಾಶಾಹಿ

| Updated By: ರಶ್ಮಿ ಕಲ್ಲಕಟ್ಟ

Updated on: May 30, 2022 | 9:00 PM

ಆಲಿಕಲ್ಲು ಮಳೆಯಿಂದಾಗಿ ಸಂಚಾರ ದಟ್ಟಣೆ  ಮಾತ್ರವಲ್ಲದೆ  ಹೆಚ್ಚಿನ ಸಂಖ್ಯೆಯ ಮರಗಳು ಉರುಳಿವೆ. ಮನೆಗಳು ಮತ್ತು ಕಾರುಗಳಿಗೂ ಹಾನಿಯಾಗಿವೆ. ಈ ಮಳೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದ ಮೇಲೆ  ಪರಿಣಾಮ  ಬೀರಿದೆ.

ದೆಹಲಿ: ಆಲಿಕಲ್ಲು ಮಳೆಯಿಂದಾಗಿ ಸಂಚಾರ ದಟ್ಟಣೆ; ಗಾಳಿ ಮಳೆಗೆ ಮರಗಳು ಧರಾಶಾಹಿ
ದೆಹಲಿಯಲ್ಲಿ ಭಾರೀ ಮಳೆ
Follow us on

ದೆಹಲಿ: ದೆಹಲಿ (Delhi) ನಿವಾಸಿಗಳು ಸೋಮವಾರ ಸಂಜೆ ಸುರಿದ ಆಲಿಕಲ್ಲು ಮಳೆಯ (hailstorm) ಅವಾಂತರ ಬಗ್ಗೆ ಟ್ವೀಟ್ ಮಾಡಿದ್ದಾರೆ.  ಮಳೆಯೊಂದಿಗೆ ಮಂಜುಗಡ್ಡೆಯ ತುಣುಕುಗಳು ಬೀಳುತ್ತಲೇ ಇದ್ದುದರಿಂದ ವಾಹನ ಸವಾರರಿಗೆ ವಾಹನ ಚಲಾಯಿಸಲು ಕಷ್ಟವಾಯಿತು. ಇದರಿಂದಾಗಿ ಸಂಚಾರ ದಟ್ಟಣೆಯುಂಟಾಗಿದೆ. ವಿಮಾನ ನಿಲ್ದಾಣದ ಬಳಿಯ ಪಲಮ್ ಅಬ್ಸರ್ವೇಟರಿಯಲ್ಲಿನ ರೀಡಿಂಗ್ ಪ್ರಕಾರ ಮತ್ತು ದಕ್ಷಿಣ ದೆಹಲಿಯ ಸಫ್ದಾರ್ಜುಂಗ್‌ನಲ್ಲಿ 16 ಡಿಗ್ರಿ ಸೆಲ್ಸಿಯಸ್ ತಾಪಮಾನವು 13 ಡಿಗ್ರಿ ಸೆಲ್ಸಿಯಸ್​ಗೆ   ತೀವ್ರವಾಗಿ ಕುಸಿಯಿತು. “ಸಂಜೆ 4.20 ಮತ್ತು ಸಂಜೆ 5.40 ರ ನಡುವೆ, ಉಷ್ಣತೆಯು ಸಫ್ದಾರ್ಜಂಗ್‌ನಲ್ಲಿ 40 ಡಿಗ್ರಿ ಸೆಲ್ಸಿಯಸ್‌ನಿಂದ 25 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಿತು” ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ. ಕಳೆದ ಕೆಲವು ದಿನಗಳಿಂದ ತೀವ್ರ ಬಿಸಿಗಾಳಿ ಇತ್ತು, ಇದ್ದಕ್ಕಿದ್ದಂತೆ ಮೋಡ ಆವರಿಸಿ ಕತ್ತಲೆಯಾಗಿ ಸಂಜೆ 4: 20 ರ ಸುಮಾರಿಗೆ ಆಲಿಕಲ್ಲು ಮಳೆ (Heavy Rain) ಶುರುವಾಯಿತು. ಪತ್ರಕರ್ತ ಹೆಮಂತ್ ರಾಜೌರಾ, ಕೆಂಪು ಕಾರಿನ ಫೋಟೋವೊಂದನ್ನು ಟ್ವೀಟ್ ಮಾಡಿದ್ದು, ಕಾರಿನ ಮುಂಭಾಗದ ವಿಂಡ್ ಷೀಲ್ಡ್ ಮೇಲೆ ದೊಡ್ಡದಾದ ಲೋಹದ ತುಂಡು ಬಿದ್ದು ಡ್ರೈವರ್ ಸೀಟಿನ ಭಾಗವನ್ನು ಸೀಳಿ ಒಳಹೊಕ್ಕಿರುವುದನ್ನು ಇದರಲ್ಲಿ ಕಾಣಬಹುದು. ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋದ ಸಲೀಮ್ ಅಹ್ಮದ್ ಜೋರಾಗಿ ಬೀಸುತ್ತಿರುವ ಗಾಳಿಗೆ ಮರಗಳು ಅಲುಗಾಡುತ್ತಿರುವ ವಿಡಿಯೊವನ್ನು ಟ್ವೀಟ್ ಮಾಡಿದ್ದು ಸುಪ್ರೀಂಕೋರ್ಟ್ ವಕೀಲ ಪಲ್ಲವಿ ಪ್ರತಾಪ್ ಅವರು ಆಲಿಕಲ್ಲು ಮಳೆಯ ವಿಡಿಯೊವೊಂದನ್ನು ಟ್ವೀಟ್ ಮಾಡಿದ್ದಾರೆ.


ಆಲಿಕಲ್ಲು ಮಳೆಯಿಂದಾಗಿ ಸಂಚಾರ ದಟ್ಟಣೆ  ಮಾತ್ರವಲ್ಲದೆ  ಹೆಚ್ಚಿನ ಸಂಖ್ಯೆಯ ಮರಗಳು ಉರುಳಿವೆ. ಮನೆಗಳು ಮತ್ತು ಕಾರುಗಳಿಗೂ ಹಾನಿಯಾಗಿವೆ. ಈ ಮಳೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟದ ಮೇಲೆ  ಪರಿಣಾಮ  ಬೀರಿದೆ.


ಇದಕ್ಕೂ ಮೊದಲು, ದೆಹಲಿಯ ಪ್ರಾದೇಶಿಕ ಹವಾಮಾನ ಮುನ್ಸೂಚನೆ ಕೇಂದ್ರ (ಆರ್‌ಡಬ್ಲ್ಯುಎಫ್‌ಸಿ) ಗುಡುಗು ಮತ್ತು ಗಂಟೆಗೆ 30-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು ಪಶ್ಚಿಮ, ವಾಯುವ್ಯ, ದಕ್ಷಿಣ,ನೈಋತ್ಯ ದೆಹಲಿಯ ಪಕ್ಕದ ಪ್ರದೇಶಗಳಲ್ಲಿ ಮಳೆಯಾಗಲಿದೆ ಎಂದು ಹೇಳಿತ್ತು


ರೋಹ್ತಾಕ್, ಭಿವಾನಿ, ಚಾರ್ಖಿ, ದಾದ್ರಿ, ಮಾತಾನ್ಹೇಲ್, ಝಜ್ಜರ್, ಫರುಖ್ನಗರ, ಕೊಸ್ಲಿ, ಸೊಹಾನಾ, ರೀವಾರಿ, ಪಾಲ್ವಾಲ್, ಬವಾಲ್ ಹತ್ರಾಸ್ (ಯುಪಿ), ಭಿವಾರಿ (ರಾಜಸ್ಥಾನ)ದಲ್ಲಿಯೂ   ಮಧ್ಯಮ ತೀವ್ರತೆಯ ಮಳೆ ಮತ್ತು  ಗಾಳಿ  ಇರಲಿದೆ ಎಂದು  ಹವಾಮಾನ ಇಲಾಖೆ ತಿಳಿಸಿದೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 8:59 pm, Mon, 30 May 22