Satyendar Jain ಅಕ್ರಮ ಹಣ ವರ್ಗಾವಣೆ ಪ್ರಕರಣ: ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್​​​ ಬಂಧನ

ಹವಾಲಾ ಮೂಲಕ ಪಡೆದ ಹಣವನ್ನು ಭೂಮಿ ಖರೀದಿಸಲು ಅಥವಾ ದೆಹಲಿಯಲ್ಲಿ ಕೃಷಿ ಭೂಮಿ ಖರೀದಿಸಲು ಪಡೆದ ಸಾಲ ತೀರಿಸಲು ಬಳಸಲಾಗಿತ್ತು ಎಂದು ಇಡಿ  ಹೇಳಿದೆ.

Satyendar Jain ಅಕ್ರಮ ಹಣ ವರ್ಗಾವಣೆ ಪ್ರಕರಣ: ದೆಹಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್​​​ ಬಂಧನ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:May 30, 2022 | 8:20 PM

ದೆಹಲಿ: ಕೊಲ್ಕತ್ತಾ ಮೂಲದ ಕಂಪನಿಗೆ ಹವಾಲ ಹಣ ವರ್ಗಾವಣೆ ಮಾಡಿದ ಆರೋಪದಲ್ಲಿ ದೆಹಲಿಯ ಆರೋಗ್ಯ  ಸಚಿವ (Delhi Health Minister) ಮತ್ತು ಆಮ್ ಆದ್ಮಿಪಕ್ಷದ ನಾಯಕ ಸತ್ಯೇಂದರ್  ಜೈನ್ (Satyendar jain) ಅವರನ್ನು ಜಾರಿ ನಿರ್ದೇಶನಾಲಯ (Enforcement Directorate)  ಸೋಮವಾರ ಬಂಧಿಸಿದೆ. ಸಿಬಿಐ ನೋಂದಾಯಿಸಿದ ಎಫ್‌ಐಆರ್‌ನ ಆಧಾರದ ಮೇಲೆ ಜಾರಿ ನಿರ್ದೇಶನಾಲಯ ಸತ್ಯೇಂದರ್ ಕುಮಾರ್ ಜೈನ್ ಮತ್ತು ಇತರರ ವಿರುದ್ಧ  ಐಪಿಸಿ ಸೆಕ್ಷನ್ 109, ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(2) ಮತ್ತು13(1) (e) ಅಡಿಯಲ್ಲಿ ಪ್ರಕರಣ ದಾಖಲಿಸಿದೆ. ಏಪ್ರಿಲ್ ತಿಂಗಳಲ್ಲಿ ಜಾರಿ ನಿರ್ದೇಶನಾಲಯ (ಇಡಿ), ಜೈನ್ ಮತ್ತು ಕುಟುಂಬದ ಒಡೆತನದಲ್ಲಿರುವ ಐದು ಸಂಸ್ಥೆಗಳ  4.81 ಕೋಟಿ ರೂ. ಮೊತ್ತದ ಸ್ಥಿರಾಸ್ಥಿ ಮುಟ್ಟುಗೋಲು  ಹಾಕಿದ್ದು ಅಕ್ರಮ ಹಣ ವ್ಯವಹಾರ  ತಡೆ ಕಾಯ್ದೆ ಅಡಿಯಲ್ಲಿ ಮೂವರು ಮಹಿಳೆಯರನ್ನು ತನಿಖೆಗೊಳಪಡಿಸಿತ್ತು. ಹಿರಿಯ ಇಡಿ ಅಧಿಕಾರಿಯೊಬ್ಬರು ಈ ಭೂಮಿ ಅಕಿನ್ಚಾನ್ ಡೆವಲಪರ್ಸ್ ಪ್ರೈ. ಲಿಮಿಟೆಡ್, ಇಂಡೋ ಮೆಟಲ್ ಇಂಪೆಕ್ಸ್ ಪ್ರೈವೇಟ್ ಲಿಮಿಟೆಡ್, ಪರಿಯಾಸ್ ಇನ್ಫೋಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್, ಮಂಗ್ಲಾಯತನ್ ಪ್ರಾಜೆಕ್ಟ್ಸ್ ಪ್ರೈ. ಲಿಮಿಟೆಡ್, ಜೆ.ಜೆ. ಆದರ್ಶ ಎಸ್ಟೇಟ್ ಪ್ರೈ. ಲಿಮಿಟೆಡ್ ಮತ್ತು ಮೂವರು ಮಹಿಳೆಯರಾದ ಸ್ವಾತಿ ಜೈನ್, ಸುಶಿಲಾ ಜೈನ್ ಮತ್ತು ಇಂದೂ ಜೈನ್ ಗೆ ಸೇರಿದ್ದು ಎಂದು ಹೇಳಿದ್ದಾರೆ.

2015-16ರ ಅವಧಿಯಲ್ಲಿ ಜೈನ್ ಸಾರ್ವಜನಿಕ ಸೇವಕರಾಗಿದ್ದಾಗ ಈ ಕಂಪನಿಗಳು ಅವರಿಂದ ಲಾಭದಾಯಕವಾಗಿ  ನಿಯಂತ್ರಿಸಲ್ಪಡುತ್ತಿತ್ತು. ಹವಾಲಾ ಮೂಲಕ ಪಡೆದ ಹಣವನ್ನು ಭೂಮಿ ಖರೀದಿಸಲು ಅಥವಾ ದೆಹಲಿಯಲ್ಲಿ ಕೃಷಿ ಭೂಮಿ ಖರೀದಿಸಲು ಪಡೆದ ಸಾಲ ತೀರಿಸಲು ಬಳಸಲಾಗಿತ್ತು ಎಂದು ಇಡಿ  ಹೇಳಿದೆ.

ಇದನ್ನೂ ಓದಿ
Image
ಸಿಧು ಮೂಸೆ ವಾಲಾ ಹತ್ಯೆ ಪ್ರಕರಣ: ದೆಹಲಿಯ ತಿಹಾರ್ ಜೈಲಿನಲ್ಲಿ ಶೋಧ, ಉತ್ತರಾಖಂಡದಲ್ಲಿ 6 ಶಂಕಿತರ ಬಂಧನ
Image
ದೇಶದ 81 ಉಷ್ಣ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಕಡಿಮೆ ಮಾಡಲು ಕೇಂದ್ರ ಸರ್ಕಾರ ನಿರ್ಧಾರ, ಯಾಕೀ ನಿರ್ಧಾರ?
Image
ದೊಡ್ಡ ವಂಚಕನಿಗೂ ಮೋಹನ್​ಲಾಲ್​​ಗೂ ನಂಟು? ಸ್ಟಾರ್​ ನಟನಿ​ಗೆ ಬಂತು ಇಡಿ ನೋಟಿಸ್
Image
ಬ್ಯಾಂಕ್ ಹಣ ಅಕ್ರಮ ವರ್ಗಾವಣೆ ಪ್ರಕರಣ: ಜಮ್ಮು ಕಾಶ್ಮೀರದ ಮಾಜಿ ಸಿಎಂ ಒಮರ್ ಅಬ್ದುಲ್ಲಾ ವಿಚಾರಣೆ ನಡೆಸಿದ ಇಡಿ

ಫೆಬ್ರವರಿಯಲ್ಲಿ ಕೇಜ್ರಿವಾಲ್ ಅವರು ಪಂಜಾಬ್ ವಿಧಾನಸಭಾ ಚುನಾವಣೆಗೆ ಸ್ವಲ್ಪ ಮುಂಚೆ ಇಡಿ ಸತ್ಯೇಂದರ್  ಜೈನ್ ಅವರನ್ನು ಬಂಧಿಸಲಿದೆ ಎಂದು ನಮಗೆ ತಿಳಿದುಬಂದಿದೆ. ಬಿಜೆಪಿ ಚುನಾವಣೆಯಲ್ಲಿ ಸೋಲಲಿದೆ ಎಂಬ ಕಾರಣದಿಂದ ಅವರು ಎಎಪಿಯನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದರು.

ಸತ್ಯೇಂದರ್ ಮೇಲೆ ಹೊರಿಸಿದ್ದು ಸುಳ್ಳು ಆರೋಪ:  ದೆಹಲಿ ಉಪಮುಖ್ಯಮಂತ್ರಿ ಮನೀಶ್  ಸಿಸೋಡಿಯಾ

ಎಂಟು ವರ್ಷಗಳಿಂದ ಸತ್ಯೇಂದರ್ ಜೈನ್ ವಿರುದ್ಧ  ಸುಳ್ಳು ಪ್ರಕರಣಗಳು ನಡೆಯುತ್ತಿವೆ.  ಇಡಿ ಹಲವಾರು ಬಾರಿ ಅವರನ್ನು ಕರೆಸಿತ್ತು. ಇಡಿಗೆ ಏನೂ ಸಿಗಲಿಲ್ಲ. ಇದೀಗ ಮತ್ತೆ ಶುರು ಮಾಡಿದೆ. ಸತ್ಯೇಂದರ್  ಹಿಮಾಚಲ ಪ್ರದೇಶದ ಚುನಾವಣೆ ಉಸ್ತುವಾರಿ ವಹಿಸಿದ್ದಾರೆ. ಈ  ಪ್ರಕರಣ ಸುಳ್ಳು ಆಗಿರುವ ಕಾರಣ ಅವರು ಕೆಲವೇ ದಿನಗಳಲ್ಲಿ  ಹೊರಬರಲಿದ್ದಾರೆ ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್  ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 7:32 pm, Mon, 30 May 22

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್