AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೆಹರು ದೇಶ ವಿಭಜನೆ ಮಾಡಿದ ಉದಾರವಾದಿ, ಆದರೆ ಮಹಾತ್ಮ ಗಾಂಧಿ ಏನು ಮಾಡಿದರು: ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ

ಗಾಂಧಿ ಅವರಲ್ಲಿ ದೌರ್ಬಲ್ಯಗಳು ಇವೆ, ಒಳ್ಳೆಯ ಗುಣಗಳು ಇವೆ. ನಾವು ದೌರ್ಬಲ್ಯಗಳನ್ನು ಒಪ್ಪಿಕೊಳ್ಳಬೇಕು. ಮಹಾತ್ಮ ಗಾಂಧಿ, ನೆಹರು ಬಗ್ಗೆ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನೆಹರು ದೇಶ ವಿಭಜನೆ ಮಾಡಿದ ಉದಾರವಾದಿ, ಆದರೆ ಮಹಾತ್ಮ ಗಾಂಧಿ ಏನು ಮಾಡಿದರು: ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ
ಶಾಸಕ ಸಿ.ಟಿ. ರವಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: May 30, 2022 | 1:26 PM

ನವದೆಹಲಿ: ನೆಹರು ಅವರು ದೇಶ ವಿಭಜನೆ ಮಾಡಿದ ಉದಾರವಾದಿ. ದೇಶ ವಿಭಜನೆ ತಡೆಯಲು ಮಹಾತ್ಮ ಗಾಂಧಿ ಏನು ಮಾಡಿದರು ಎಂದು ನವದೆಹಲಿಯಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಿಗೆ ಏನು ಸಿಕ್ಕಿತು. ಅತ್ಯಾಚಾರ, ಮತಾಂತರ ಬಿಟ್ಟು ಬೇರೆ ಏನು ಸಿಕ್ಕಿದೆ. ಭಾರತೀಯ ಸೇನೆಯಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಾಗಿದ್ದರೆ, ಇಂದು ಕಾಶ್ಮೀರ, ದೆಹಲಿ ಯಾವುದೂ ಉಳಿಯುತ್ತಿರಲಿಲ್ಲ. ಹೀಗಾಗಿಯೇ ಸೇನೆಗೆ ಸೇರುವಂತೆ ಸಾವರ್ಕರ್​ ಕರೆ ನೀಡಿದರು. ಗಾಂಧಿ ಅವರಲ್ಲಿ ದೌರ್ಬಲ್ಯಗಳು ಇವೆ, ಒಳ್ಳೆಯ ಗುಣಗಳು ಇವೆ. ನಾವು ದೌರ್ಬಲ್ಯಗಳನ್ನು ಒಪ್ಪಿಕೊಳ್ಳಬೇಕು ಎಂದು ಸಿ.ಟಿ. ರವಿ ಹೇಳಿದರು. 2ನೇ ವಿಶ್ವಯುದ್ಧದ ಬಳಿಕ ಬ್ರಿಟಿಷರು ಸಾಮರ್ಥ್ಯ ಕಳೆದುಕೊಂಡರು. ಸ್ವಾತಂತ್ರ್ಯಕ್ಕಾಗಿ ಹೋರಾಡದ ದೇಶಗಳಿಗೂ ಸ್ವಾತಂತ್ರ್ಯ ನೀಡಿದರು. ಗಾಂಧಿ ಜನಸಮೂಹ, ಕ್ರಾಂತಿಕಾರಿಗಳು ಬ್ರಿಟಿಷರ ಎದೆ ನಡುಗಿಸಿದರು. ಎಲ್ಲರ ಹೋರಾಟದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದರು.

ಇದನ್ನೂ ಓದಿ: ಮದುವೆಯಲ್ಲಿ ಹೂವಿನ ಹಾರದ ಬದಲು ಹಾವಿನ ಹಾರ ಹಾಕಿದ ವಧು ವರ !! ವಿಡಿಯೋ ವೈರಲ್

ಸಿದ್ದರಾಮಯ್ಯ ಅಂತ ನೀವ್ಯಾಕೆ ಹೆಸರಿಟ್ಟುಕೊಂಡಿದ್ದೀರಿ?

ಆರ್ಯ-ದ್ರಾವಿಡರ ಬಗ್ಗೆ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದು, ಉತ್ತರ ಹಾಗೂ ದಕ್ಷಿಣದವರ ಡಿಎನ್‌ಎ ಒಂದೇ ಇದೆ. ಐರಿಷ್ ಪಾದ್ರಿ ಇಂಥಾದೊಂದು ವಾದ ಮಂಡನೆ ಮಾಡಿದ್ದರು. ಶ್ರೀರಾಮ ಆರ್ಯನೋ..? ದ್ರಾವಿಡನೋ? ಸಿದ್ದರಾಮಯ್ಯ ಅಂತ ನೀವ್ಯಾಕೆ ಹೆಸರಿಟ್ಟುಕೊಂಡಿದ್ದೀರಿ ಎಂದು ಸಿ.ಟಿ.ರವಿ ಪ್ರಶ್ನಿಸಿದರು. ಯಾವ ಆಧಾರ ಇಟ್ಟುಕೊಂಡು ವಾದ ಮಾಡುತ್ತಿದ್ದಾರೆ. ದೇಶದ ಎಲ್ಲ ಭಾಷೆಗಳಿಗೆ ಸಂಸ್ಕೃತ ತಾಯಿ ಭಾಷೆ. ಸಿದ್ದರಾಮಯ್ಯನವರದು ಅರೆಬರೆ ತಿಳಿವಳಿಕೆ, ಎಡಬಿಡಂಗಿತನ ತೋರುತ್ತಿದ್ದಾರೆ. ಒಡೆದು ಆಳುವ ಕಾಂಗ್ರೆಸ್ ಪಕ್ಷದ ಬಣ್ಣ ಮತ್ತೆ ಬಯಲಾಗಿದೆ. ಉತ್ತರ, ದಕ್ಷಿಣದಲ್ಲಿ ಶಿವ & ವಿಷ್ಣುವನ್ನು ಪೂಜಿಸುತ್ತಾರೆ. ರಾಮ, ಶಿವ, ಕೃಷ್ಣ ಕಪ್ಪು ಅವರನ್ನು ಯಾರಿಗೆ ಹೋಲಿಕೆ ಮಾಡುತ್ತೀರಿ? ಕರ್ನಾಟಕದ ಮರ್ಯಾದೆ ಕಳೆಯುವ ಕೆಲಸ ಮಾಡಬೇಡಿ. ಯಾವುದೋ ಮೆಂಟಲ್ ಗಿರಾಕಿ ಅಂತಾ ಜನರು ಹೇಳುತ್ತಾರೆ. ಯಾರೋ ತಲೆ ತಿರುಕರು ಹೇಳಿಕೊಟ್ಟಿದ್ದನ್ನು ಹೇಳಬೇಡಿ. ಆರ್​ಎಸ್​ಎಸ್ ಸಂಸ್ಕಾರ ಕೊಡುವ ಕೆಲಸ ಮಾಡುತ್ತೆ ಎಂದು ಸಿ.ಟಿ.ರವಿ ಹೇಳಿದರು.

ಶ್ರೀರಾಮ್-ಅಂಜನಾದ್ರಿ ವಾದ

ಶ್ರೀರಾಮ್ ಥೈಲ್ಯಾಂಡ್​ನಲ್ಲಿ ಹುಟ್ಟಿದ ಎನ್ನುವ ವಾದ ಇದೆ. ಆದರೆ ಇತಿಹಾಸ ಆಯೋಧ್ಯೆಯಲ್ಲಿ ಹುಟ್ಟಿದ ಎನ್ನುವುದು ಸತ್ಯ ಎಂದು ಹೇಳಿದರು. ಆಂಜನೇಯ ಕೊಪ್ಪಳ ಜಿಲ್ಲೆಯ ಅಂಜನಾದ್ರಿಯಲ್ಲಿ ಜನಿಸಿದ್ದಾನೆ. ಆಯಾ ಕಾಲಘಟ್ಟದಲ್ಲಿ ಒಂದೊಂದು ಒಂದು ಉಲ್ಲೇಖಗಳಿದೆ. ಜನ ಮಾನಸದಲ್ಲಿ ಯಾವುದು ಹೆಚ್ಚು ಉಳಿದಿದೆ ಎಂಬುದು ಮುಖ್ಯ ಎಂದು ನವದೆಹಲಿಯಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿಕೆ ನೀಡಿದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.