ತಮಿಳುನಾಡು: ಕಲ್ಲಕುರಿಚಿಯಲ್ಲಿ ಹೀಲಿಯಂ ಸಿಲಂಡರ್ ಸ್ಫೋಟ, ಮಹಿಳೆ ಸಾವು, 18 ಮಂದಿಗೆ ಗಾಯ
ಕಲ್ಲಕುರಿಚಿ ಜಿಲ್ಲೆಯ ಮನಲೂರ್ಪೆಟ್ಟೈನಲ್ಲಿ ಸೋಮವಾರ ರಾತ್ರಿ ಬಲೂನ್‌ಗಳಿಗೆ ಹೀಲಿಯಂ ಅನಿಲ ತುಂಬಲು ಬಳಸುವ ಸಿಲಿಂಡರ್ ಸ್ಫೋಟಗೊಂಡು 50 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಕನಿಷ್ಠ 12 ಜನರು ಗಾಯಗೊಂಡಿದ್ದಾರೆ.ತಮಿಳು ಹಬ್ಬ ಪೊಂಗಲ್ ಅನ್ನು ಸಾಮಾನ್ಯವಾಗಿ ಒಂದು ವಾರದವರೆಗೆ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಅದೇ ರೀತಿ, ಈ ವರ್ಷ, ಪೊಂಗಲ್ ಮತ್ತು ಮಟ್ಟು ಪೊಂಗಲ್ ಅನ್ನು ಆಚರಿಸುವ ಜನರು ತಮ್ಮ ಕುಟುಂಬಗಳೊಂದಿಗೆ ಮೂರನೇ ದಿನವಾದ ಕನುಮ್ ಪೊಂಗಲ್ ಅನ್ನು ಕೂಡ ಸಂತೋಷದಿಂದ ಆಚರಿಸಿದರು.

ಚೆನ್ನೈ, ಜನವರಿ 20: ಹೀಲಿಯಂ ಸಿಲಿಂಡರ್(Helium Cylinder )ಸ್ಫೋಟಗೊಂಡು ಓರ್ವ ಮಹಿಳೆ ಸಾವನ್ನಪ್ಪಿದ್ದು, 18 ಮಂದಿ ಗಾಯಗೊಂಡಿರುವ ಘಟನೆ ತಮಿಳುನಾಡಿನ ಕಲ್ಲಕುರಿಚಿಯಲ್ಲಿ ಸೋಮವಾರ ನಡೆದಿದೆ. ಕಲ್ಲಕುರಿಚಿ ಜಿಲ್ಲೆಯ ಮನಲೂರ್ಪೆಟ್ಟೈನಲ್ಲಿ ನಡೆದ ತೆನ್ಪೆನ್ನೈ ನದಿ ಉತ್ಸವದ ಸಂದರ್ಭದಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ. ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಮೃತರ ಕುಟುಂಬ ಸದಸ್ಯರಿಗೆ ಸಂತಾಪ ಸೂಚಿಸಿದ್ದಾರೆ. ಬಲೂನ್‌ಗಳಲ್ಲಿ ಗಾಳಿ ತುಂಬಲು ಬಳಸುವ ಹೀಲಿಯಂ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ.
ನದಿ ಉತ್ಸವ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಮತ್ತು ಗಾಯಗೊಂಡ ಎಲ್ಲರಿಗೂ ರಾಜ್ಯ ಸರ್ಕಾರವು ತಕ್ಷಣವೇ ಸೂಕ್ತ ಪರಿಹಾರವನ್ನು ನೀಡಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದರು. ತಮಿಳು ಹಬ್ಬ ಪೊಂಗಲ್ ಅನ್ನು ಸಾಮಾನ್ಯವಾಗಿ ಒಂದು ವಾರದವರೆಗೆ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ. ಅದೇ ರೀತಿ, ಈ ವರ್ಷ, ಪೊಂಗಲ್ ಮತ್ತು ಮಟ್ಟು ಪೊಂಗಲ್ ಅನ್ನು ಆಚರಿಸುವ ಜನರು ತಮ್ಮ ಕುಟುಂಬಗಳೊಂದಿಗೆ ಮೂರನೇ ದಿನವಾದ ಕನುಮ್ ಪೊಂಗಲ್ ಅನ್ನು ಕೂಡ ಸಂತೋಷದಿಂದ ಆಚರಿಸಿದ್ದರು.
ಕಲ್ಲಕುರಿಚಿ ಜಿಲ್ಲಾಧಿಕಾರಿ ಪ್ರಶಾಂತ್ ಕೂಡ ಸ್ಥಳಕ್ಕೆ ಆಗಮಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಮತ್ತು ಸಿಲಿಂಡರ್ ಸ್ಫೋಟಗೊಂಡ ಸ್ಥಳವನ್ನು ವಿಧಿವಿಜ್ಞಾನ ತಂಡ ಪರಿಶೀಲಿಸುತ್ತಿದೆ. ಮೃತರನ್ನು ಕಲಾ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ತಿರುವಣ್ಣಾಮಲೈ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮತ್ತಷ್ಟು ಓದಿ: ಮೈಸೂರು ಸ್ಫೋಟ ಪ್ರಕರಣ: ಮುಂದುವರೆದ ಸಾವಿನ ಸರಣಿ, ಮರ್ತೋವ ಮಹಿಳೆ ಸಾವು
ರಾತ್ರಿ 7.30 ರ ಸುಮಾರಿಗೆ ಸಿಲಿಂಡರ್ ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟದ ಪರಿಣಾಮ ಕಲಾಳ ಕಾಲುಗಳು ತುಂಡಾಗಿದ್ದವು. ಗಾಯಗೊಂಡವರಲ್ಲಿ ಕೆಲವರು ರಸ್ತೆಯಲ್ಲಿ ಬಿದ್ದಿರುವುದು ಕಂಡುಬಂದಿದ್ದು, ಅವರನ್ನು ತಕ್ಷಣವೇ ತಿರುವಣ್ಣಾಮಲೈಗೆ ಕರೆದೊಯ್ಯಲಾಯಿತು. ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್. ಅರವಿಂದ್, ಗಾಯಗೊಂಡವರಲ್ಲಿ ಆರು ಮಂದಿಯನ್ನು ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ ದಾಖಲಿಸಲಾಗಿದೆ ಎಂದು ಹೇಳಿದರು.
ವಿಡಿಯೋ
#WATCH तमिलनाडु | कल्लाकुरिची जिले के मनालूरपेट्टई में थेनपेन्नई नदी महोत्सव के दौरान हीलियम सिलेंडर फटने से एक की मौत हो गई और करीब 18 घायल हैं: तिरुवन्नामलाई के जिला कलेक्टर, के. थारपगराज
(वीडियो घटनास्थल से है) pic.twitter.com/1Gc5MYfKlj
— ANI_HindiNews (@AHindinews) January 19, 2026
ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಂತರ ಜಿಲ್ಲಾಧಿಕಾರಿ ಎಂ.ಎಸ್. ಪ್ರಶಾಂತ್ ಸುದ್ದಿಗಾರರೊಂದಿಗೆ ಮಾತನಾಡಿ, ಇಲ್ಲಿಯವರೆಗೆ ಒಂದು ಸಾವು ದೃಢಪಟ್ಟಿದೆ. ಒಬ್ಬ ಬಾಲಕ ಮತ್ತು ಸಿಲಿಂಡರ್ ನಿರ್ವಹಿಸಿದ ವ್ಯಕ್ತಿಯ ಸ್ಥಿತಿ ಗಂಭೀರವಾಗಿದೆ. ಸ್ಫೋಟಕ್ಕೆ ಕಾರಣವನ್ನು ತನಿಖೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
