ನವಜಾತ ಶಿಶುವಿಗೆ ಎದೆಹಾಲು ಉಣಿಸಿ ರಕ್ಷಿಸಿದ ಮಹಿಳಾ ಪೊಲೀಸ್ ಅಧಿಕಾರಿ, ಶ್ಲಾಘಿಸಿದ ಹೈಕೋರ್ಟ್
ಮಹಿಳಾ ಪೊಲೀಸ್ ಅಧಿಕಾರಿ ಕಾಣೆಯಾಗಿದ್ದ ಮಗುವಿಗೆ ಎದೆ ಹಾಲು ನೀಡಿ ರಕ್ಷಿಸಿದ ಘಟನೆ ಅಕ್ಟೋಬರ್ 22ರಂದು ಕೇರಳದ ಕೋಝಿಕೋಡ್‌ನಲ್ಲಿ ನಡೆದಿದೆ.
ಕೋಝಿಕೋಡ್: ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಕಾಣೆಯಾಗಿದ್ದ ಮಗುವಿಗೆ ಎದೆ ಹಾಲು ನೀಡಿ ರಕ್ಷಿಸಿದ ಘಟನೆ ಅಕ್ಟೋಬರ್ 22ರಂದು ಕೇರಳದ ಕೋಝಿಕೋಡ್‌ನಲ್ಲಿ ನಡೆದಿದೆ. ಚೆವಾಯೂರ್ ಪೊಲೀಸ್ ಠಾಣೆಗೆ 22 ವರ್ಷದ ಮಹಿಳೆಯೊಬ್ಬರು ಹೆರಿಗೆಯಾದ 12 ದಿನಗಳ ನಂತರ ತನ್ನ ಮಗು ಕಾಣೆಯಾಗಿದೆ ಎಂದು ದೂರು ನೀಡಿದ್ದರು. ತನ್ನ ಪತಿಯೇ ಮಗುವನ್ನು ಅಪಹರಿಸಿದ್ದಾರೆ ಎಂದು ಮಗುವಿನ ತಾಯಿ ಹೇಳಿದ್ದಾರೆ.
ಪೊಲೀಸರು ವಿಚಾರಣೆ ನಡೆಸಿ ಪತ್ತೆ ಮಾಡುವ ಕಾರ್ಯಚರಣೆಯಲ್ಲಿ ಯಶಸ್ವಿಯಾಗಿ ವಯನಾಡಿನ ಸುಲ್ತಾನ್ ಬತ್ತೇರಿಯಲ್ಲಿ ಮಗುವನ್ನು ಪತ್ತೆ ಮಾಡಿದ್ದಾರೆ. ಮಗುವ ಇರುವ ಸ್ಥಳಕ್ಕೆ ಸಿವಿಲ್ ಪೊಲೀಸ್ ಅಧಿಕಾರಿ ರಮ್ಯಾ ಎಂಆರ್ ತಂಡದೊಂದಿಗೆ ಬಂದಿದ್ದಾರೆ. ಆದರೆ ಈ ಸಮಯದಲ್ಲಿ ಮಗುವಿಗೆ ದೇಹದಲ್ಲಿ ಸೆಕ್ಕರೆ ಮಟ್ಟ ಕಡಿಮೆ ಇದೆ ಎಂದು ಮಗುವಿಗೆ ತಾಯಿಯ ಎದೆ ಹಾಲು ಬೇಕಿದೆ ಎಂದು ವೈದ್ಯರು ಹೇಳಿದರೆ, ಈ ಕಾರಣಕ್ಕೆ ಪೊಲೀಸ್ ಅಧಿಕಾರಿ ರಮ್ಯಾ ಎಂಆರ್ ತನ್ನ ಎದೆ ಹಾಲು ನೀಡಿದ್ದಾರೆ. ಈ ಕಾರ್ಯಕ್ಕೆ ರಮ್ಯಾ ಅವರನ್ನು ರಾಜ್ಯ ಪೊಲೀಸ್ ಮುಖ್ಯಸ್ಥ ಅನಿಲ್ ಕಾಂತ್ ಅವರು ಗೌರವಿಸಿದ್ದಾರೆ. ಹೈಕೋರ್ಟ್ ನ್ಯಾಯಾಧೀಶ ದೇವನ್ ರಾಮಚಂದ್ರನ್ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಮಗು ವಯನಾಡಿನ ಸುಲ್ತಾನ್ ಬತ್ತೇರಿಯಲ್ಲಿ ಪತ್ತೆಯಾಗಿದೆ. ತಕ್ಷಣ ಮಗುವನ್ನು ಕಂಡು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಮಗುವಿನ ದೇಹದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗಿದೆ ಎಂದು ವೈದ್ಯರು ಹೇಳಿದರು. ತಕ್ಷಣ ನಾನು ಹಾಲುಣಿಸುವ ತಾಯಿ ಸರ್ ಎಂದು ವೈದ್ಯರಿಗೆ ಹೇಳಿದ್ದೇನೆ, ಮಗುವಿಗೆ ನಾನು ಸ್ವಲ್ಪ ಎದೆ ಹಾಲು ನೀಡಬಹುದೇ ಎಂದು ವೈದರು ಬಳಿ ಕೇಳಿದೆ ಅದಕ್ಕೆ ವೈದ್ಯರು ಒಪ್ಪಿದ್ದಾರೆ ಎಂದು ರಮ್ಯಾ ಹೇಳಿದ್ದಾರೆ. ಆದರೆ ವೈಯಕ್ತಿಯವಾಗಿ ಯಾವುದೇ ಮಾಹಿತಿಯನ್ನು ಪೊಲೀಸ್ ಅಧಿಕಾರಿ ನೀಡರಲಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: ‘ಒಪ್ಪಿಗೆ ಇಲ್ಲದೆ ವರಾಹ ರೂಪಂ.. ಹಾಡನ್ನು ಬಳಸುವಂತಿಲ್ಲ’; ಕೇರಳ ಕೋರ್ಟ್ ಆದೇಶ
ಮಗುವಿನ ತಾಯಿಗೆ ಹೆರಿಗೆಯಾಗಿ ಕೇವಲ 12 ದಿನಗಳು ಕಳೆದಿದ್ದರಿಂದ ಮತ್ತು ಪ್ರಯಾಣಿಸಲು ಸಾಧ್ಯವಾಗದಷ್ಟು ದುರ್ಬಲರಾಗಿದ್ದರಿಂದ ಮಗುವಿನ ತಾಯಿಯು ಪೊಲೀಸ್ ದೂರು ನೀಡಲು ವಯನಾಡ್‌ಗೆ ಹೋಗಲು ಸಾಧ್ಯವಾಗಲಿಲ್ಲ. ಹೆರಿಗೆಯ ನಂತರ, ಆಕೆ ಚೇತರಿಸಿಗೊಂಡ ನಂತರ ತನ್ನ ಮನೆಗೆ ಹೋಗಬೇಕೆಂದು ಹೇಳಿದ್ದಾರೆ. ಆದರೆ ಗಂಡನ ಮನೆಯವರು ಮಗುವನ್ನು ನಿನ್ನ ಜೊತೆಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಮಗುವನ್ನು ಅವರೇ ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ. ಈ ಬಗ್ಗೆ ಪೊಲೀಸರು ಮಗುವನ್ನು ಎಲ್ಲಿಗೆ ಕರೆದುಕೊಂಡು ಹೋಗಿದ್ದಾರೆ ಎಂದು ಕೇಳಿದ್ದಾರೆ. ನನಗೆ ಗೊತ್ತಿಲ್ಲ ಎಂದು ಆಕೆ ಹೇಳಿದ್ದಾಳೆ. ಪೊಲೀಸರು ಆಕೆ ದೂರಿನ ಪ್ರಕಾರ ಗಂಡನ ಮನೆಗೆ ಹೋದಾಗ ಬೀಗ ಹಾಕಿದ್ದಾರೆ. ಅವರ ಫೋನ್ ಕೂಡ ಸ್ವಿಚ್ ಆಫ್ ಆಗಿತ್ತು ಎಂದು ಚೆವಾಯೂರ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಶೆಬೀಬ್ ರಹಮಾನ್ ಹೇಳಿದ್ದಾರೆ.
ಈ ಬಗ್ಗೆ ತನಿಖೆ ಆರಂಭಿಸಿದ ನಮ್ಮ ಪೊಲೀಸ್ ಇಲಾಖೆ ಆಕೆ ಗಂಡನ ಸಂಬಂಧಿಕರ ಬಳಿ ಹೋದರು ಯಾವುದೇ ಪ್ರಯೋಜನವಾಗಲಿಲ್ಲ. ಮಧ್ಯಾಹ್ನದ ನಂತರ, ನಾವು ಆಕೆಯ ಗಂಡನ ಫೋನ್‌ನ ಟವರ್ ಸ್ಥಳದಲ್ಲಿ ಪತ್ತೆ ಮಾಡಬಹುದು ಎಂದು ಹೇಳಿದ್ದಾರೆ. ಈ ಫೋನ್‌ನ ಟವರ್ ಸುಲ್ತಾನ್ ಬತ್ತೇರಿಯಲ್ಲಿದ್ದು, ನಾವು ವಯನಾಡ್ ಪೊಲೀಸರಿಗೆ ಈ ಬಗ್ಗೆ ಸಂದೇಶ ನೀಡಿದ್ದೇವೆ. ಹೀಗಾಗಿಯೇ ಮಗು ಪತ್ತೆಯಾಗಿದೆ ಎಂದು ಎಸ್‌ಐ ಶೆಬೀಬ್ ಹೇಳಿದ್ದಾರೆ.
ಮಗುವನ್ನು ಸುರಕ್ಷಿತವಾಗಿ ತಾಯಿಯ ಬಳಿಗೆ ನೀಡಲಾಗಿದೆ. ಕೋಝಿಕ್ಕೋಡ್‌ನ ಮಂಜೇರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ನಂತರದಲ್ಲಿ ಈ ಕಾರ್ಯಕ್ಕೆ ರಮ್ಯಾ ಅವರನ್ನು ಅನಿಲ್ ಕಾಂತ್ ಅವರು ಸನ್ಮಾನಿಸಿ, ಪ್ರಶಂಸಾ ಪತ್ರವನ್ನು ನೀಡಿದರು. ರಮ್ಯಾ ಅವರ ಕರುಣೆಯ ಕಾರ್ಯವನ್ನು ಗಮನಿಸಿದ ಹೈಕೋರ್ಟ್ ನ್ಯಾಯಾಧೀಶ ದೇವನ್ ರಾಮಚಂದ್ರನ್ ಅವರು ಅನಿಲ್ ಕಾಂತ್ ಅವರಿಗೆ ಪತ್ರ ಬರೆದು, ಅವರ ಈ ಸಾಧನೆಯನ್ನು ಶ್ಲಾಘಿಸಿದ್ದಾರೆ.