ಶ್ರೀನಗರ, ಮಾರ್ಚ್ 30: ಹಿಮಾಚಲ ಪ್ರದೇಶದ ಕುಲ್ಲುವಿನ ಗುರುದ್ವಾರ ಮಣಿಕರಣ್ ಸಾಹಿಬ್ ಬಳಿ ಇಂದು (ಭಾನುವಾರ) ಸಂಭವಿಸಿದ ಭೂಕುಸಿತದಲ್ಲಿ 6 ಜನರು ಸಾವನ್ನಪ್ಪಿದ್ದಾರೆ ಮತ್ತು ಐದು ಜನರು ಗಾಯಗೊಂಡಿದ್ದಾರೆ. “ಕುಲ್ಲುವಿನ ಮಣಿಕರಣ್ ಗುರುದ್ವಾರ ಪಾರ್ಕಿಂಗ್ ಬಳಿ ಮರಗಳು ಉರುಳಿ ಬಿದ್ದ ನಂತರ 6 ಜನರು ಸಾವನ್ನಪ್ಪಿದ್ದಾರೆ ಮತ್ತು ಐದು ಜನರು ಗಾಯಗೊಂಡಿದ್ದಾರೆ. ಜಿಲ್ಲಾಡಳಿತದ ಪೊಲೀಸರು ಮತ್ತು ರಕ್ಷಣಾ ತಂಡಗಳು ಐವರು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿವೆ” ಎಂದು ಕುಲ್ಲುವಿನ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಅಶ್ವನಿ ಕುಮಾರ್ ತಿಳಿಸಿದ್ದಾರೆ.
ಬಿರುಗಾಳಿ ಮತ್ತು ಭೂಕುಸಿತದ ನಂತರ ಗುರುದ್ವಾರದ ಎದುರಿನ ಪರ್ವತದ ಮೇಲಿದ್ದ ಮರವೊಂದು ಬುಡಸಮೇತ ಬಿದ್ದಿತು. ರಸ್ತೆಯಲ್ಲಿ ನಿಲ್ಲಿಸಿದ್ದ ಕೆಲವು ವಾಹನಗಳ ಮೇಲೆ ಆ ಮರ ಬಿದ್ದು 6 ಜನರು ಸಾವನ್ನಪ್ಪಿದರು ಮತ್ತು ಇತರ ಮೂವರು ಗಾಯಗೊಂಡರು ಎಂದು ಅಧಿಕಾರಿಗಳು ಪಿಟಿಐಗೆ ತಿಳಿಸಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಜಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವೈದ್ಯಕೀಯ ತಂಡಗಳು, ಪೊಲೀಸ್ ಮತ್ತು ಕಂದಾಯ ಅಧಿಕಾರಿಗಳು ಸ್ಥಳದಲ್ಲಿದ್ದು, ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಮುನ್ನಡೆಸುತ್ತಿದ್ದಾರೆ.
Kullu, Himachal Pradesh: An accident occurred where a large tree fell near the Gurudwara, killing six people and injuring several others. The incident took place around 5 PM when debris from a hill caused the tree to collapse, trapping bystanders. Among the deceased are a… pic.twitter.com/Np9h8lVmvc
— IANS (@ians_india) March 30, 2025
ಇದನ್ನೂ ಓದಿ: ತಪ್ಪಿದ ಭಾರೀ ದುರಂತ; ಹಿಮಾಚಲ ಪ್ರದೇಶದ ಡಿಸಿಎಂ ಪ್ರಯಾಣಿಸುತ್ತಿದ್ದ ವಿಮಾನ ತುರ್ತು ಭೂಸ್ಪರ್ಶ
ಈ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಸಂತ್ರಸ್ತರಿಗೆ ಮತ್ತು ಅವರ ಕುಟುಂಬಗಳಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ ಜಿಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ವಿರೋಧ ಪಕ್ಷದ ನಾಯಕ ಜೈ ರಾಮ್ ಠಾಕೂರ್ ಕೂಡ ತಮ್ಮ ಸಂತಾಪ ಸೂಚಿಸಿದರು.
#WATCH | Himachal Pradesh | Six people died, and five were injured after trees were uprooted near Manikaran Gurudwara parking in Kullu. Police and rescue teams of the district administration have shifted five injured to the local community hospital at Jari: ADM Kullu, Ashwani… pic.twitter.com/Kt9VvtrC6j
— ANI (@ANI) March 30, 2025
ಈ ತಿಂಗಳ ಆರಂಭದಲ್ಲಿ ಹಿಮಾಚಲ ಪ್ರದೇಶದ ಹಲವಾರು ಭಾಗಗಳಲ್ಲಿ ಭಾರೀ ಮಳೆ ಮತ್ತು ಹಿಮಪಾತವು ಸಾಮಾನ್ಯ ಜೀವನವನ್ನು ಅಸ್ತವ್ಯಸ್ತಗೊಳಿಸಿತು. ಭೂಕುಸಿತಗಳು, ರಸ್ತೆಗಳು ಬಂದ್ ಆಯಿತು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ