ರ‍್ಯಾಗಿಂಗ್, ಲೈಂಗಿಕ ಕಿರುಕುಳದಿಂದ ಹಿಮಾಚಲದ ವಿದ್ಯಾರ್ಥಿನಿ ಸಾವು; ಕಾಲೇಜು ಪ್ರಾಧ್ಯಾಪಕ, 3 ವಿದ್ಯಾರ್ಥಿಗಳ ವಿರುದ್ಧ ಕೇಸ್ ದಾಖಲು

ಹಿಮಾಚಲ ಪ್ರದೇಶದಲ್ಲಿ ರ‍್ಯಾಗಿಂಗ್, ಲೈಂಗಿಕ ಕಿರುಕುಳದಿಂದ ಕಾಲೇಜು ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ರ‍್ಯಾಗಿಂಗ್ ಮಾಡಿ, ಆಕೆಯ ಮೇಲೆ ದೌರ್ಜನ್ಯ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾಲೇಜು ಪ್ರಾಧ್ಯಾಪಕ, ಮೂವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿನಿ 2024ರಲ್ಲಿ ಕಾಲೇಜಿಗೆ ದಾಖಲಾಗಿದ್ದಳು. ಆಕೆ ಕೆಲವು ವಿದ್ಯಾರ್ಥಿಗಳಿಂದ ರ‍್ಯಾಕಿಂಗ್‌ಗೆ ಒಳಗಾಗಿದ್ದಳು. ಆಕೆ ಬಿಎ ಮೊದಲ ವರ್ಷದ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದಳು.

ರ‍್ಯಾಗಿಂಗ್, ಲೈಂಗಿಕ ಕಿರುಕುಳದಿಂದ ಹಿಮಾಚಲದ ವಿದ್ಯಾರ್ಥಿನಿ ಸಾವು; ಕಾಲೇಜು ಪ್ರಾಧ್ಯಾಪಕ, 3 ವಿದ್ಯಾರ್ಥಿಗಳ ವಿರುದ್ಧ ಕೇಸ್ ದಾಖಲು
Harassment

Updated on: Jan 02, 2026 | 8:39 PM

ಧರ್ಮಶಾಲಾ, ಜನವರಿ 2: ಹಿಮಾಚಲ ಪ್ರದೇಶದ ಕಾಲೇಜು ವಿದ್ಯಾರ್ಥಿನಿಯೊಬ್ಬಳ ಮೇಲೆ ಡಿಸೆಂಬರ್ 26ರಂದು ರ‍್ಯಾಗಿಂಗ್ (Ragging), ಲೈಂಗಿಕ ದೌರ್ಜನ್ಯ ನಡೆದಿದೆ. ಇದರಿಂದಾಗಿ ಆ ಯುವತಿ ಸಾವನ್ನಪ್ಪಿದ್ದಾಳೆ. ಈ ಹಿನ್ನೆಲೆಯಲ್ಲಿ ಕಾಲೇಜು ಪ್ರಾಧ್ಯಾಪಕ ಮತ್ತು ಮೂವರು ವಿದ್ಯಾರ್ಥಿನಿಯರ ವಿರುದ್ಧ ಕೇಸ್ ದಾಖಲಿಸಲಾಗಿದೆ. ಮೃತ ಬಾಲಕಿಯ ತಂದೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಾಧ್ಯಾಪಕ ಮತ್ತು ಇತರ ಮೂವರ ವಿರುದ್ಧ ರ‍್ಯಾಗಿಂಗ್ ಮತ್ತು ಲೈಂಗಿಕ ಕಿರುಕುಳದ ಆರೋಪದ ಮೇಲೆ ಕೇಸ್ ದಾಖಲಿಸಿದ್ದಾರೆ.

ದೂರಿನ ಪ್ರಕಾರ, ಮೃತ ಯುವತಿ ಕಾಲೇಜಿನಲ್ಲಿ ಎರಡನೇ ವರ್ಷದ ಡಿಗ್ರಿ ವಿದ್ಯಾರ್ಥಿನಿಯಾಗಿದ್ದಳು. ಸೆಪ್ಟೆಂಬರ್ 18ರಂದು ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಆಕೆಯನ್ನು ಥಳಿಸಿ ಬೆದರಿಕೆ ಹಾಕಿದ್ದರು. ಇದರಿಂದಾಗಿ ಆಕೆ ಮಾನಸಿಕವಾಗಿ ಕುಗ್ಗಿ ಹೋಗಿದ್ದಳು ಎಂದು ಆರೋಪಿಸಲಾಗಿದೆ. ಇದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಡಿಸೆಂಬರ್ 26ರಂದು ಲುಧಿಯಾನ ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಮಯದಲ್ಲಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಯುವತಿಯ ತಂದೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ರಾತ್ರಿ ಗಂಡನಿಲ್ಲದ ವೇಳೆ ಪ್ರೇಮಿಯನ್ನು ಮನೆಗೆ ಕರೆದು ಗುಪ್ತಾಂಗ ಕತ್ತರಿಸಿದ ಮಹಿಳೆ!

ಮೃತ ವಿದ್ಯಾರ್ಥಿನಿಯ ತಂದೆ ತಮ್ಮ ದೂರಿನಲ್ಲಿ ಮೂವರು ಹಿರಿಯ ವಿದ್ಯಾರ್ಥಿಗಳಾದ ಹರ್ಷಿತಾ, ಆಕೃತಿ ಮತ್ತು ಕೊಮೊಲಿಕಾ ಅವರು ಸೆಪ್ಟೆಂಬರ್ 18, 2025ರಂದು ತಮ್ಮ ಮಗಳನ್ನು ಥಳಿಸಿದ್ದರು. ಆ ಕಾಲೇಜು ಪ್ರಾಧ್ಯಾಪಕ ಅಶೋಕ್ ಕುಮಾರ್ ಅವರು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದರು ಎಂದು ಆರೋಪಿಸಿದ್ದಾರೆ. ಬಳಿಕ ಆ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ಸಮಯದಲ್ಲಿ ಆಕೆ ಸಾವನ್ನಪ್ಪಿದರು.

ಹೊಡೆತ ಮತ್ತು ಕಿರುಕುಳದಿಂದಾಗಿ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹಲ್ಲೆ, ಕಿರುಕುಳ, ಬೆದರಿಕೆಯ ನಂತರ ನಮ್ಮ ಮಗಳು ತೀವ್ರ ಮಾನಸಿಕ ಒತ್ತಡ ಮತ್ತು ಭಯಕ್ಕೆ ಒಳಗಾದಳು. ಇದರಿಂದಾಗಿ ಆಕೆಯ ಆರೋಗ್ಯವು ಶೀಘ್ರವಾಗಿ ಹದಗೆಟ್ಟಿತು ಎಂದು ಮೃತ ಯುವತಿಯ ತಂದೆ ಆರೋಪಿಸಿದ್ದಾರೆ.

ಇದನ್ನೂ ಓದಿ: ಮಗಳಿಗೆ ಟಾರ್ಚರ್ ಕೊಡ್ತಿದ್ದ ಅಳಿಯನಿಗೆ ಚಟ್ಟ ಕಟ್ಟಿದ ಮಾವ: ರಾಡ್​​ನಿಂದ ಹೊಡೆದು ಕೊಲೆ

ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೃತ ವಿದ್ಯಾರ್ಥಿನಿ 2024ರಲ್ಲಿ ಕಾಲೇಜಿಗೆ ದಾಖಲಾಗಿದ್ದಳು. ಆಕೆ ಕೆಲವು ವಿದ್ಯಾರ್ಥಿಗಳಿಂದ ರ‍್ಯಾಕಿಂಗ್‌ಗೆ ಒಳಗಾಗಿದ್ದಳು. ಆಕೆ ಬಿಎ ಮೊದಲ ವರ್ಷದ ಪರೀಕ್ಷೆಯಲ್ಲಿ ಅನುತ್ತೀರ್ಣಳಾಗಿದ್ದಳು ಎಂದು ಬೆಳಕಿಗೆ ಬಂದಿದೆ. ಇದರಿಂದಾಗಿ ಆಗಸ್ಟ್ 21, 2025ರಂದು ಅವಳ ಹೆಸರನ್ನು ಕಾಲೇಜು ಲಿಸ್ಟ್​​ನಿಂದ ತೆಗೆದುಹಾಕಲಾಯಿತು. ಅವಳು ಸೆಪ್ಟೆಂಬರ್‌ನಲ್ಲಿ ಮತ್ತೆ ಪ್ರವೇಶ ಕೋರಿ ಕಾಲೇಜಿಗೆ ಭೇಟಿ ನೀಡಿದ್ದಳು. ಆಗ ಆಕೆ ಮರುಮೌಲ್ಯಮಾಪನದಲ್ಲಿ ಉತ್ತೀರ್ಣಳಾದರೆ ಮಾತ್ರ ಎರಡನೇ ವರ್ಷಕ್ಕೆ ಸೇರಿಸಿಕೊಳ್ಳಲಾಗುವುದು ಮತ್ತು ವಿಫಲವಾದರೆ ಅವಳು ಮೊದಲ ವರ್ಷಕ್ಕೆ ಮರು ದಾಖಲಾಗಬೇಕಾಗುತ್ತದೆ ಎಂದು ತಿಳಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ