ಅಭಿವೃದ್ಧಿಹೊಂದದ ರಾಜ್ಯಗಳ ಭಾಷೆ ಹಿಂದಿ, ರಾಜ್ಯದಲ್ಲಿ ಹಿಂದಿಗೆ ಅನುಮತಿ ನೀಡಿದರೆ ನಾವು ಗುಲಾಮ ಶೂದ್ರರಾಗುತ್ತೇವೆ: ತಮಿಳುನಾಡು ಸಂಸದ

ಹಿಂದಿ ಕಲಿಯುವ ಅಗತ್ಯವೇ ಇಲ್ಲ ಎಂದು ವಾದಿಸಿದ ಡಿಎಂಕೆ ನಾಯಕ, ಅಭಿವೃದ್ಧಿಹೊಂದಿದ ಕೆಲವು ರಾಜ್ಯಗಳಲ್ಲಿ ಹಿಂದಿ ಪ್ರಥಮ ಭಾಷೆಯೇ ಅಲ್ಲ. ಅಭಿವೃದ್ಧಿ ಹೊಂದದ ರಾಜ್ಯಗಳಾದ ಮಧ್ಯ ಪ್ರದೇಶ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನದಲ್ಲಿ ಹಿಂದಿ ಪ್ರಥಮ ಭಾಷೆಯಾಗಿ..

ಅಭಿವೃದ್ಧಿಹೊಂದದ ರಾಜ್ಯಗಳ ಭಾಷೆ ಹಿಂದಿ, ರಾಜ್ಯದಲ್ಲಿ ಹಿಂದಿಗೆ ಅನುಮತಿ ನೀಡಿದರೆ ನಾವು ಗುಲಾಮ ಶೂದ್ರರಾಗುತ್ತೇವೆ: ತಮಿಳುನಾಡು ಸಂಸದ
ಟಿಕೆಎಸ್ ಇಳಂಗೋವನ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jun 06, 2022 | 8:05 PM

ಚೆನ್ನೈ: ತಮಿಳುನಾಡಿನಲ್ಲಿ ಹಿಂದಿ ಹೇರಿಕೆ (Hindi imposition) ಪ್ರಯತ್ನಗಳ ವಿರುದ್ಧ ನಡೆದ ಸಾರ್ವಜನಿಕ ಸಭೆಯಲ್ಲಿ ದ್ರಾವಿಡ ಮುನ್ನೇಟ್ರ ಕಳಗಂ (DMK) ಸಂಸದ ಟಿಕೆಎಸ್ ಇಳಂಗೋವನ್ (TKS Elangovan) ಅವರು ಜಾತಿ ನಿಂದನೆ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಹಿಂದಿ ನಮ್ಮನ್ನು ಶೂದ್ರರನ್ನಾಗಿ ಮಾಡುತ್ತದೆ. ಇದರಿಂದ ನಮಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಅದು ನಮ್ಮ ನೆಲವನ್ನು ಪ್ರವೇಶಿಸಿದರೆ, ಅದು ಹಾನಿಯನ್ನುಂಟುಮಾಡುತ್ತದೆ. ಅದು ನಮ್ಮ ಶ್ರೀಮಂತ ಸಂಸ್ಕೃತಿಯನ್ನು ಹಾಳು ಮಾಡುತ್ತದೆ ಮತ್ತು ನಮ್ಮ ಅಸ್ತಿತ್ವದಲ್ಲಿರುವ ಸಹೋದರತ್ವವನ್ನು ನಾಶಪಡಿಸುತ್ತದೆ, ಎಂದು ಇಳಂಗೋವನ್ ಶನಿವಾರ ಹೇಳಿದ್ದಾರೆ. ಸ್ವಾತಂತ್ರ್ಯಕ್ಕೆ ಮೊದಲು ಉತ್ತರ ಭಾರತದಲ್ಲಿ ವ್ಯಕ್ತಿಯೊಬ್ಬ ರಾಜನಾಗಬೇಕಿದ್ದರೆ ವರ್ಣಾಶ್ರಮದ ಪ್ರಕಾರ ಆತ ಕ್ಷತ್ರಿಯನಾಗಿರಬೇಕು.ಆದರೆ ದಕ್ಷಿಣ ಭಾರತದಲ್ಲಿನ ಪರಿಸ್ಥಿತಿ ಅದಾಗಿರಲಿಲ್ಲ. ಜಗತ್ತಿನಲ್ಲಿ ಎಲ್ಲರನ್ನೂ ಸಮಾನವಲಾಗಿ ಕಾಣುವ ನಾಗರಿಕತೆ ಎಂದರೆ ಅದು ತಮಿಳು ಸಂಸ್ಕೃತಿ. ಈಗ ಅವರು ಅದನ್ನು ನಾಶ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿ ಮನುಧರ್ಮ ತರುವುದಕ್ಕಾಗಿ ಅವರು ಹಿಂದಿ ಹೇರಿಕೆ ಮಾಡುತ್ತಿದ್ದಾರೆ. ನಾವು ಅದಕ್ಕೆ ಅನುಮತಿಸಬಾರದು, ಹಾಗೆ ನಾವು ಅನುಮತಿಸಿದರೆ ನಾವು ಗುಲಾಮ ಶೂದ್ರರಾಗುತ್ತೇವೆ ಎಂದಿದ್ದಾರೆ.

ಹಿಂದಿ ಕಲಿಯುವ ಅಗತ್ಯವೇ ಇಲ್ಲ ಎಂದು ವಾದಿಸಿದ ಡಿಎಂಕೆ ನಾಯಕ, ಅಭಿವೃದ್ಧಿಹೊಂದಿದ ಕೆಲವು ರಾಜ್ಯಗಳಲ್ಲಿ ಹಿಂದಿ ಪ್ರಥಮ ಭಾಷೆಯೇ ಅಲ್ಲ. ಅಭಿವೃದ್ಧಿ ಹೊಂದದ ರಾಜ್ಯಗಳಾದ ಮಧ್ಯ ಪ್ರದೇಶ, ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನದಲ್ಲಿ ಹಿಂದಿ ಪ್ರಥಮ ಭಾಷೆಯಾಗಿದೆ. ಹೀಗಿರುವಾಗ ನಾವೇಕೆ ಹಿಂದಿಕಲಿಯಬೇಕು ಎಂದು ಸಚಿವರು ಕೇಳಿದ್ದಾರೆ. ಸಂಸದರ ಪ್ರಕಾರ ಪಶ್ಚಿಮ ಬಂಗಾಳ, ಒಡಿಶಾ, ಆಂಧ್ರ ಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ, ಮಹಾರಾಷ್ಟ್ರ , ಕರ್ನಾಟಕ,ಗುಜರಾತ್ ಮತ್ತು ಪಂಜಾಬ್ ಅಭಿವೃದ್ಧಿಹೊಂದಿದ ರಾಜ್ಯಗಳಾಗಿವೆ.

ಇದನ್ನೂ ಓದಿ
Image
60 ವರ್ಷಗಳ ಹಿಂದೆ ನಾಶವಾದ ರಾಮೇಶ್ವರಂ-ಧನುಷ್ಕೋಡಿ ಮಾರ್ಗವನ್ನು ಪುನಃಸ್ಥಾಪಿಸಲಿದೆ ಭಾರತೀಯ ರೈಲ್ವೆ
Image
M Karunanidhi ರಾಜಕೀಯ, ಸಾಹಿತ್ಯದ ಮೂಲಕ ತಮಿಳುನಾಡಿನ ಜನನಾಯಕನಾದ ಕರುಣಾನಿಧಿ ಎಂಬ ದ್ರಾವಿಡ ಸೂರ್ಯ
Image
PM Modi in Chennai ತಮಿಳು ಭಾಷೆಗೆ ಹಿಂದಿಯ ಸ್ಥಾನ ನೀಡಿ: ವೇದಿಕೆ ಮೇಲೆ ಪ್ರಧಾನಿ ಮೋದಿಗೆ ಮನವಿ ಮಾಡಿದ ಸ್ಟಾಲಿನ್

ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ

Published On - 8:04 pm, Mon, 6 June 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ