M Karunanidhi ರಾಜಕೀಯ, ಸಾಹಿತ್ಯದ ಮೂಲಕ ತಮಿಳುನಾಡಿನ ಜನನಾಯಕನಾದ ಕರುಣಾನಿಧಿ ಎಂಬ ದ್ರಾವಿಡ ಸೂರ್ಯ

ತಾನು ಪರಮ ನಾಸ್ತಿಕ ಎನುತ್ತಿದ್ದ ಕರುಣಾನಿಧಿ ಅವರ ಆರೋಗ್ಯ ಹದಗೆಟ್ಟಾಗ ಇಡೀ ತಮಿಳುನಾಡು ಅವರಿಗಾಗಿ ಪ್ರಾರ್ಥಿಸಿತು. ಪುರೈಟ್ಚಿ ತಲೈವಿ ಜಯಲಲಿತಾ ಅವರೊಂದಿಗೆ ಸೈದ್ಧಾಂತಿಕ ಮತ್ತು ವೈಯಕ್ತಿಕ ದ್ವೇಷವನ್ನು ಹೊಂದಿದ್ದ ಕರುಣಾನಿಧಿ, ಜೀವನದಲ್ಲಿ ತಾನು ಕಂಡ ಮಹಾನ್ ಹೋರಾಟಗಾರ್ತಿ ಜಯಲಲಿತಾ...

M Karunanidhi ರಾಜಕೀಯ, ಸಾಹಿತ್ಯದ ಮೂಲಕ ತಮಿಳುನಾಡಿನ ಜನನಾಯಕನಾದ ಕರುಣಾನಿಧಿ ಎಂಬ ದ್ರಾವಿಡ ಸೂರ್ಯ
ಕರುಣಾನಿಧಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jun 03, 2022 | 7:00 AM

‘ಎನ್ ಉಯಿರಿನುಂ ಮೇಲಾನ ಉಡನ್​​ಪ್ಪಿರಪ್ಪುಗಳೇ’ ಬಿಳಿ ಧೋತಿ, ಶರ್ಟ್ ಧರಿಸಿ, ಹಳದಿ ಶಾಲು ಹೊದ್ದು ದಪ್ಪದ ಕಪ್ಪು ಕನ್ನಡಕ ಧರಿಸಿದ ಕರುಣಾನಿಧಿ(Karunanidhi) ಭಾಷಣ ಆರಂಭಿಸುತ್ತಿದ್ದದ್ದೇ ಹೀಗೆ. ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದ ಡಿಎಂಕೆ (DMK) ನಾಯಕ, ಕಲೈಂಜರ್ ಕರುಣಾನಿಧಿ ರಾಜಕೀಯ, ಸಿನಿಮಾ, ಸಾಮಾಜಿಕ ಹೋರಾಟ ಮತ್ತು ಸಾಹಿತ್ಯದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ತಮಿಳುನಾಡಿನ ಜನಮನಸ್ಸನ್ನು ಗೆದ್ದವರು. ಕರುಣಾನಿಧಿಯವರ 98ನೇ ಜಯಂತಿ (M Karunanidhi Birth Anniversary )ಇಂದು. ವಯೋಸಹಜ ಕಾಯಿಲೆಗಳಿಂದಾಗಿ 2018 ರಲ್ಲಿ ನಿಧನರಾದಾಗ ಅವರಿಗೆ ತೊಂಬತ್ನಾಲ್ಕು ವರ್ಷ ವಯಸ್ಸಾಗಿತ್ತು. ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯ ತಿರುಕುವಲೈನ ಮುತ್ತುವೇಲರ್ ಮತ್ತು ಅಂಜುಕಮ್ ಅಮ್ಮಯ್ಯರ್ ಅವರ ಮಗ ಕರುಣಾನಿಧಿ (ಅವರ ಮೊದಲ ಹೆಸರು ದಕ್ಷಿಣಮೂರ್ತಿ) ತಮಿಳುನಾಡಿನ ಜನಪ್ರಿಯ ನಾಯಕ, ಹೋರಾಟಗಾರ, ಪರಮ ನಾಸ್ತಿಕ. ವಿಚಾರವಾದಿ ಚಳವಳಿಯತ್ತ ಆಕರ್ಷಿತರಾಗಿದ್ದರಿಂದ ಕರುಣಾನಿಧಿ ಎಂಬ ಹೆಸರು ನಿನಗೆ ಒಪ್ಪುತ್ತದೆ ಎಂದಿದ್ದರು ಅಣ್ಣಾದೊರೈ. ಕರುಣಾನಿಧಿಯವರ ಶಾಲಾ ದಿನಗಳಿಂದಲೂ ನಾಟಕ, ಕವನ, ಕಥೆಗಳನ್ನು ಬರೆಯುತ್ತಿದ್ದರು. ಹದಿಮೂರನೆಯ ವಯಸ್ಸಿನಲ್ಲಿ ಜಸ್ಟಿಸ್ ಪಕ್ಷದ ಕಾರ್ಯಕರ್ತ ಅಳಗಿರಿ ಸ್ವಾಮಿಯವರ ಭಾಷಣಗಳಿಂದ ಆಕರ್ಷಿತರಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡರು. ವಿದ್ಯಾರ್ಥಿಗಳ ಸಾಹಿತ್ಯ ಕಲೆಗಳನ್ನು ಉತ್ತೇಜಿಸಲು ಎಲೈನರ್ ಮರುಮಲರರ್ಚಿ ಎಂಬ ಸಂಘಟನೆ ರೂಪುಗೊಂಡಿದ್ದು ಕರುಣಾನಿಧಿ ಅವರ ನೇತೃತ್ವದಿಂದಾಗಿತ್ತು. ಇದೇ ನಂತರ ವಿದ್ಯಾರ್ಥಿ ಸಂಘಟನೆಯಾಗಿ ಮಾರ್ಪಟ್ಟಿತು.

ಕರುಣಾನಿಧಿ ತಮಿಳುನಾಡಿನಲ್ಲಿ ಹಿಂದಿ ವಿರೋಧಿ ಚಳವಳಿಯ ಮುಂಚೂಣಿಯಲ್ಲಿದ್ದರು. ತಂದೈ ಪೆರಿಯಾರ್ ಅವರೊಂದಿಗೆ ಕೆಲಸ ಮಾಡಲು ಪ್ರಾರಂಭಿಸಿದ ಕರುಣಾನಿಧಿ ಈರೋಡ್‌ನಿಂದ ಪ್ರಕಟವಾದ ಕುಡಿಯರಶ್ ಪತ್ರಿಕೆಯಲ್ಲಿ ಕೆಲಸ ಮಾಡಿದರು. ನಂತರ ಅವರು ದ್ರಾವಿಡ ವಿಚಾರಗಳನ್ನು ಪ್ರಚಾರ ಮಾಡಲು ಮುರಸೋಲಿ ಪತ್ರಿಕೆಯನ್ನು ಸ್ಥಾಪಿಸಿದರು. ಈ ಸಮಯದಲ್ಲಿ ಕೊಯಮತ್ತೂರಿನ ಜುಪಿಟರ್ ಪಿಕ್ಚರ್ಸ್ ರಾಜಕುಮಾರಿ ಚಿತ್ರಕ್ಕೆ ಸಂಭಾಷಣೆ ಬರೆಯಲು ಅವರನ್ನು ಸಂಪರ್ಕಿಸಿತು. ಪೆರಿಯಾರ್ ಅವರಲ್ಲಿ ಅನುಮತಿ ಕೇಳಿದಾಗ ಅವರು ಯುವ ಕರುಣಾನಿಧಿಯನ್ನು ಪ್ರೋತ್ಸಾಹಿಸಲಿಲ್ಲ. ಕರುಣಾನಿಧಿ ಅವರ ಕಲಾಜೀವನದ ಮಹತ್ವದ ತಿರುವು ನೀಡಿದ್ದು ರಾಜಕುಮಾರಿ ಚಿತ್ರಕ್ಕೆ ಬರೆದ ಸಂಭಾಷಣೆ. ಅವರು ಆ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಎಂಜಿಆರ್ ಜತೆ  ಸ್ನೇಹ ಬೆಳೆಸಿದರು. ಗಾಂಧೀಜಿಯವರ ಅಭಿಮಾನಿಯಾಗಿದ್ದ ಎಂಜಿಆರ್ ಅವರನ್ನು ದ್ರಾವಿಡ ವಿಚಾರಗಳತ್ತ ಸೆಳೆದವರು ಕೂಡಾ ಕರುಣಾನಿಧಿಯೇ.

1969ರಲ್ಲಿ ಡಿಎಂಕೆಯ ಸಂಸ್ಥಾಪಕ ನಾಯಕ ಸಿ.ಎನ್. ಅಣ್ಣಾದೊರೈ ನಿಧನದ ನಂತರ ಪಕ್ಷದ ನಾಯಕತ್ವವನ್ನು ಕರುಣಾನಿಧಿ ವಹಿಸಿಕೊಂಡರು. ಎಂಜಿಆರ್ ಜೊತೆಗಿನ ವಿಚಾರಗಳ ಘರ್ಷಣೆಯಿಂದ ಇಬ್ಬರೂ ಬೇರೆಯಾದರು. ಎಂ.ಜಿ.ಆರ್ ಅವರು ಎಐಎಡಿಎಂಕೆ ರಚನೆ ಮಾಡಿದ್ದು ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಮತ್ತೊಂದು ಮೈಲುಗಲ್ಲು.

ಕರುಣಾನಿಧಿ ಅವರು 1969-71, 1971-74, 1989-91, 1996-2001 ಮತ್ತು 2006-2011ರಲ್ಲಿ ಐದು ಬಾರಿ ತಮಿಳುನಾಡಿನ ಮುಖ್ಯಮಂತ್ರಿಯಾಗಿದ್ದರು. ವಿಶೇಷವೆಂದರೆ  ವೃದ್ದಾಪ್ಯದ ದಿನಗಳಲ್ಲಿ ಕರುಣಾನಿಧಿ ಅವರು ಸಾರ್ವಜನಿಕರಿಂದ ದೂರವಿದ್ದು ಸಾಹಿತ್ಯದಲ್ಲಿ ತೊಡಗಿದ್ದರು. ಸಿನಿಮಾಗಳಿಗೆ ಸಂಭಾಷಣೆ ಬರೆಯುವುದು, ಕವಿತೆಗಳನ್ನು ಬರೆಯುವುದರಲ್ಲಿ ಅವರು ಮಗ್ನರಾಗಿದ್ದರು.

ತಾನು ಪರಮ ನಾಸ್ತಿಕ ಎನುತ್ತಿದ್ದ ಕರುಣಾನಿಧಿ ಅವರ ಆರೋಗ್ಯ ಹದಗೆಟ್ಟಾಗ ಇಡೀ ತಮಿಳುನಾಡು ಅವರಿಗಾಗಿ ಪ್ರಾರ್ಥಿಸಿತು. ಪುರೈಟ್ಚಿ ತಲೈವಿ ಜಯಲಲಿತಾ ಅವರೊಂದಿಗೆ ಸೈದ್ಧಾಂತಿಕ ಮತ್ತು ವೈಯಕ್ತಿಕ ದ್ವೇಷವನ್ನು ಹೊಂದಿದ್ದ ಕರುಣಾನಿಧಿ, ಜೀವನದಲ್ಲಿ ತಾನು ಕಂಡ ಮಹಾನ್ ಹೋರಾಟಗಾರ್ತಿ ಜಯಲಲಿತಾ ಎಂದು ಹೇಳಿದ್ದರು.

ರಾಮಸೇತು ಕುರಿತು ಕರುಣಾನಿಧಿ ಅವರ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಶ್ರೀರಾಮನ ಅಸ್ತಿತ್ವವನ್ನು ಪ್ರಶ್ನಿಸಿದ್ದ ಕರುಣಾನಿಧಿ ರಾಮ ಯಾವ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ? ಎಂದು ಕೇಳಿದ್ದರು.

ಮ್ಯಾಕ್ಸಿಂ ಗಾರ್ಕಿ ಅವರು ಬರೆದ ‘ದಿ ಮದರ್’ನ ತಮಿಳು ಅನುವಾದ ಸೇರಿದಂತೆ 200 ಕ್ಕೂ ಹೆಚ್ಚು ಪುಸ್ತಕಗಳನ್ನು ಕರುಣಾನಿಧಿ ಬರೆದಿದ್ದಾರೆ. 60 ಕ್ಕೂ ಹೆಚ್ಚು ಚಿತ್ರಕಥೆಗಳು, ಜೀವನಚರಿತ್ರೆಗಳು, ಕಾದಂಬರಿಗಳು, ಐತಿಹಾಸಿಕ ಕಾದಂಬರಿಗಳು, ನಾಟಕಗಳು, ಚಲನಚಿತ್ರ ಗೀತೆಗಳು ಹೀಗೆ ಕಲೈಂಜರ್ ಕೈಯಾಡಿಸದ ತಮಿಳು ಸಾಹಿತ್ಯದ ಪ್ರಕಾರವೇ ಇಲ್ಲ. ಕಲೆ ಮತ್ತು ಸಾಹಿತ್ಯಕ್ಕೆ ಅವರ ಕೊಡುಗೆಯನ್ನು ಗುರುತಿಸಿ ಅಣ್ಣಾಮಲೈ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. 2018 ಅಗಸ್ಟ್ 7ರಂದು ಮುತ್ತುವೇಲ್ ಕರುಣಾನಿಧಿ ಎಂಬ ಎಂ.ಕರುಣಾನಿಧಿ ಇಹಲೋಕ ತ್ಯಜಿಸಿದರು.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್