60 ವರ್ಷಗಳ ಹಿಂದೆ ನಾಶವಾದ ರಾಮೇಶ್ವರಂ-ಧನುಷ್ಕೋಡಿ ಮಾರ್ಗವನ್ನು ಪುನಃಸ್ಥಾಪಿಸಲಿದೆ ಭಾರತೀಯ ರೈಲ್ವೆ
ರೈಲ್ವೆಯು ಈ ನಿಲ್ದಾಣವನ್ನು ಪುನರಾಭಿವೃದ್ಧಿ ಮಾಡಲು ಮತ್ತು ಹೊಸ ಬ್ರಾಡ್ ಗೇಜ್ ಮತ್ತು ವಿದ್ಯುತ್ ಮಾರ್ಗಗಳೊಂದಿಗೆ ಸಂಪರ್ಕಿಸಲು ಯೋಜಿಸಿದೆ. ಇದು ರಾಮೇಶ್ವರಂನಿಂದ 18 ಕಿ.ಮೀ ಲೈನ್ ಆಗಿರುತ್ತದೆ ಮತ್ತು 3 ನಿಲುಗಡೆಗಳನ್ನು ಹೊಂದಿರುತ್ತದೆ.
ತಮಿಳುನಾಡಿನ (Tamil Nadu)ರಾಮೇಶ್ವರಂ-ಧನುಷ್ಕೋಡಿ (Rameswaram-Dhanushkodi) ರೈಲು ಸಂಪರ್ಕವನ್ನು ಪುನಃಸ್ಥಾಪಿಸಲು ಸರ್ಕಾರ ನಿರ್ಧರಿಸಿದ್ದು, ಇದು ಭಾರತೀಯ ರೈಲ್ವೆಯ (Indian Railways) ಇತಿಹಾಸದಲ್ಲಿನ ಪ್ರಮುಖ ಕ್ಷಣವಾಗಿದೆ. ಹಲವಾರು ಮಹತ್ವದ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಿದ ನಂತರ ದಕ್ಷಿಣ ರೈಲ್ವೆಯು ತಮಿಳುನಾಡಿನ ರಾಮೇಶ್ವರಂ ಮತ್ತು ಧನುಷ್ಕೋಡಿಯನ್ನು ರೈಲು ಸಂಪರ್ಕದೊಂದಿಗೆ ಸಂಪರ್ಕಿಸಲು ಸಿದ್ಧವಾಗಿದೆ. ಪಂಬನ್ ಸೇತುವೆಯನ್ನು ಲಿಫ್ಟ್ ವ್ಯವಸ್ಥೆಯನ್ನು ಬಳಸಿಕೊಂಡು ಟ್ರ್ಯಾಕ್ ಮಾಡಲಾಗುವುದು, ಅದರಲ್ಲಿ ರೈಲುಗಳು ಗಂಟೆಗೆ 80 ಕಿಮೀ ವೇಗದಲ್ಲಿ ಚಲಿಸುತ್ತವೆ. ರಾಮೇಶ್ವರಂ ಮತ್ತು ಧನುಷ್ಕೋಡಿಯನ್ನು ಮೊದಲು ರೈಲು ಮಾರ್ಗದಿಂದ ಸಂಪರ್ಕಿಸಲಾಗಿತ್ತು, ಆದರೆ 1964 ರ ಸುನಾಮಿಯು ಈ ಮಾರ್ಗವನ್ನು ಸಂಪೂರ್ಣವಾಗಿ ನಾಶಪಡಿಸಿತು. ಇಷ್ಟು ವರ್ಷಗಳಿಂದ ಈ ಮಾರ್ಗವನ್ನು ಪುನಃಸ್ಥಾಪಿಸಲು ಯಾವುದೇ ಪ್ರಯತ್ನಗಳು ಇಲ್ಲಿಯವರೆಗೆ ನಡೆದಿಲ್ಲ. “ರೈಲ್ವೆಯು ಈ ನಿಲ್ದಾಣವನ್ನು ಪುನರಾಭಿವೃದ್ಧಿ ಮಾಡಲು ಮತ್ತು ಹೊಸ ಬ್ರಾಡ್ ಗೇಜ್ ಮತ್ತು ವಿದ್ಯುತ್ ಮಾರ್ಗಗಳೊಂದಿಗೆ ಸಂಪರ್ಕಿಸಲು ಯೋಜಿಸಿದೆ. ಇದು ರಾಮೇಶ್ವರಂನಿಂದ 18 ಕಿ.ಮೀ ಲೈನ್ ಆಗಿರುತ್ತದೆ ಮತ್ತು 3 ನಿಲುಗಡೆಗಳನ್ನು ಹೊಂದಿರುತ್ತದೆ. ಈ ಬೆಳವಣಿಗೆಯ ನಂತರ ಪ್ರವಾಸಿಗರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ನಾವು ರಾಮೇಶ್ವರಂ ನಿಲ್ದಾಣವನ್ನು ಪುನರಾಭಿವೃದ್ಧಿ ಮಾಡುತ್ತಿದ್ದೇವೆ ಎಂದು ಮಧುರೈ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆನಂದ್ ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಪಂಬನ್ ಸೇತುವೆಯನ್ನು ಲಿಫ್ಟ್ ವ್ಯವಸ್ಥೆಯನ್ನು ಬಳಸಿಕೊಂಡು ಮರುನಿರ್ಮಾಣ ಮಾಡಲಾಗುತ್ತಿದೆ ಇದರಿಂದ ಹಡಗು ಬಂದಾಗ ಅದು ಸ್ವಯಂಚಾಲಿತವಾಗಿ ಮೇಲಕ್ಕೆತ್ತುತ್ತದೆ. ಇಲ್ಲಿ ಮೊದಲು ನಿರ್ಮಿಸಲಾದ ಸೇತುವೆಗಳು ಪ್ರತ್ಯೇಕ ಹಳಿಗಳನ್ನು ಹೊಂದಿದ್ದವು. ಹಡಗಿನ ನಿರ್ಗಮನದ ನಂತರ, ಅವರು ಮರುಸಂಪರ್ಕಿಸುತ್ತಿದ್ದು ಇಡೀ ಪ್ರಕ್ರಿಯೆಯು ಸುಮಾರು ಅರ್ಧ ಗಂಟೆ ತೆಗೆದುಕೊಳ್ಳುತ್ತಿತ್ತು. ಮುಂಬರುವ ಪ್ರಕ್ರಿಯೆಯು ಕೇವಲ 10 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಧನುಷ್ಕೋಡಿಯು ಪಂಬನ್ ದ್ವೀಪದ ನೈಋತ್ಯ ತುದಿಯಲ್ಲಿದೆ, ಮುಖ್ಯ ಭೂಭಾಗದಿಂದ ಪಾಲ್ಕ್ ಸ್ಟ್ರೈಟ್ ಜಲಸಂಧಿಯಿಂದ ಬೇರ್ಪಟ್ಟಿದೆ. ಧನುಷ್ಕೋಡಿ ಒಂದು ಪ್ರಮುಖ ನಿಲ್ದಾಣವಾಗಿದ್ದು, ಡಿಸೆಂಬರ್ 1964 ರವರೆಗೆ ತಮಿಳುನಾಡಿನ ಮಂಡಪಂ ನಿಲ್ದಾಣಕ್ಕೆ ನೇರವಾಗಿ ಸಂಪರ್ಕ ಹೊಂದಿತ್ತು.
ಧನುಷ್ಕೋಡಿ ನಿಲ್ದಾಣವು ಆ ಸಮಯದಲ್ಲಿ ಶ್ರೀಲಂಕಾ ಮತ್ತು ಭಾರತದ ನಡುವಿನ ಸಂಪರ್ಕದ ಪ್ರಮುಖ ಸ್ಥಳವಾಗಿತ್ತು, ಈ ವಿಭಾಗದಲ್ಲಿ ಬೋಟ್ ಮೇಲ್ ಎಂಬ ರೈಲ್ವೇ ರೈಲು ಕಾರ್ಯನಿರ್ವಹಿಸುತ್ತಿತ್ತು. ಆದಾಗ್ಯೂ, ಡಿಸೆಂಬರ್ 1964 ರ ಸುನಾಮಿ ಈ ರೈಲು ಸಂಪರ್ಕವನ್ನು ಸಂಪೂರ್ಣವಾಗಿ ನಾಶಪಡಿಸಿತು. ಭಾರತೀಯ ರೈಲ್ವೇ ಪ್ರಕಾರ ಈ ಯೋಜನೆಯು ರೂ 700 ಕೋಟಿ ವೆಚ್ಚದಲ್ಲಿ ಪೂರ್ಣಗೊಳ್ಳುತ್ತದೆ ಮತ್ತು 18 ಕಿಮೀಗಳಲ್ಲಿ 13 ಕಿಮೀ ರೈಲ್ವೇ ಹಳಿಯನ್ನು ಮೇಲಕ್ಕೇರಿಸಲಾಗುವುದು.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ