IPCC Report ಹಿಂದೂಕುಶ್ ಹಿಮಾಲಯ ಮತ್ತು ಹಿಂದೂ ಮಹಾಸಾಗರದ ಮೇಲೆ ತಾಪಮಾನ ಏರಿಕೆ

ENSO-ಎಲ್ ನಿನೊ ಮತ್ತು ಲಾ ನಿನಾ ಕ್ರಮವಾಗಿ ಸಮಭಾಜಕ ಪೆಸಿಫಿಕ್ ಸಾಗರದ ಅಸಹಜ ತಾಪಮಾನ ಮತ್ತು ತಂಪಾಗಿಸುವಿಕೆ ಮತ್ತು ಭಾರತದ ಮೇಲೆ ಮಾನ್ಸೂನ್ ಮಳೆಯ ಮೇಲೆ ಪ್ರಭಾವ ಬೀರುತ್ತದೆ.

IPCC Report ಹಿಂದೂಕುಶ್ ಹಿಮಾಲಯ ಮತ್ತು ಹಿಂದೂ ಮಹಾಸಾಗರದ ಮೇಲೆ ತಾಪಮಾನ ಏರಿಕೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Aug 10, 2021 | 4:38 PM

ದೆಹಲಿ: 1970 ರ ದಶಕದಲ್ಲಿ ಹಿಂದೂಕುಶ್ ಹಿಮಾಲಯವು ವಿಶ್ವದ ಇತರ ಪರ್ವತ ಮತ್ತು ಎತ್ತರದ ಪ್ರದೇಶಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಬೆಚ್ಚಗಾಗುತ್ತಿದ್ದು ಅಪಾರ ಮಂಜುಗಡ್ಡೆ ಕರಗುತ್ತಿದೆ ಎಂದು ಹವಾಮಾನ ಬದಲಾವಣೆ ಬಗ್ಗೆ 6 ನೇ ಅಂತರ್ ಸರ್ಕಾರಿ ಸಮಿತಿಯ (IPCC) ವರದಿ ಹೇಳಿದೆ. ಹಿಂದೂಕುಶ್ ಹಿಮಾಲಯದಲ್ಲಿ ಹೆಚ್ಚಿನ ತಾಪಮಾನವು ಕಡಿಮೆಯಾಗುತ್ತಿದ್ದು, ಹಿಮದ ಹೊದಿಕೆ ಮತ್ತು ಹಿಮನದಿಗಳು ಹಿಂದಕ್ಕೆ ಸರಿಯುತ್ತಿದೆ ಎಂದು ಪುಣೆಯ ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಆರ್. ಕೃಷ್ಣನ್ ಹೇಳಿದ್ದಾರೆ. ಅವರು ನೀರಿನ ಚಕ್ರ ಮತ್ತು ಈ ವರದಿಯಲ್ಲಿನ ಬದಲಾವಣೆಗಳ ಅಧ್ಯಾಯದ ಪ್ರಮುಖ ಲೇಖಕರಾಗಿದ್ದಾರೆ. ಇದಕ್ಕೆ ವಿರುದ್ಧವಾಗಿ ಕರಕೋರಂ ಹಿಮಾಲಯದ ಉದ್ದಕ್ಕೂ ಹಿಮದ ಹೊದಿಕೆಯು ಟಿಬೆಟಿಯನ್ ಪ್ರಸ್ಥಭೂಮಿ ಪ್ರದೇಶದಲ್ಲೂ ಅದೇ ಅವಧಿಯಲ್ಲಿ ಸಮತೋಲಿತ ಸ್ಥಿತಿಯಲ್ಲಿರುವುದು ಕಂಡುಬಂದಿದೆ.  ಕರಕೋರಂ ಹಿಮಾಲಯದಲ್ಲಿನ ಹಿಮ ಹೊದಿಕೆ ಸ್ಥಿರವಾಗಿದೆ ಮತ್ತು ಹಿಮದ ದ್ರವ್ಯರಾಶಿಯನ್ನು ಕೂಡ ಪಡೆದುಕೊಂಡಿದೆ ಎಂದು ಕೃಷ್ಣನ್ ಹೇಳಿದರು.

ಈ ಶತಮಾನದಲ್ಲಿ ಮುಂಬರುವ ವರ್ಷಗಳಲ್ಲಿ ಇತ್ತೀಚಿನ ಐಪಿಸಿಸಿ ವರದಿಗಳು ಹಿಂದೂಕುಶ್ ಹಿಮಾಲಯ ಮತ್ತು ಟಿಬೆಟಿಯನ್ ಪ್ರಸ್ಥಭೂಮಿಯ ಮೇಲೆ ಭಾರೀ ಮಳೆಯ ಘಟನೆಗಳ ಹೆಚ್ಚಳವನ್ನು ಸೂಚಿಸುತ್ತವೆ. ಇದು ಹಿಮದ ಎತ್ತರವನ್ನು ಮತ್ತಷ್ಟು ಹೆಚ್ಚಿಸಲು ಸಹಾಯ ಮಾಡುತ್ತದೆ. ಹಿಮಾಲಯವು ಭೂ-ಸಾಗರ ತಾಪಮಾನವನ್ನು ನಿಯಂತ್ರಿಸುವಲ್ಲಿ ಮಹತ್ವದ್ದಾಗಿದೆ. ಇದು ಮುಖ್ಯವಾಗಿ ಭಾರತದ ಮೇಲೆ ಋತುಗಳಲ್ಲಿನ ಮಳೆಗೆ ಸಹಕಾರಿಯಾಗಿದೆ.

ಮುಂಬರುವ ದಶಕಗಳಲ್ಲಿ, ಭಾರತ ಸೇರಿದಂತೆ ದಕ್ಷಿಣ ಏಷ್ಯಾ ಪ್ರದೇಶದಲ್ಲಿ, ಜೂನ್ ನಿಂದ ಸೆಪ್ಟೆಂಬರ್ ಋತುವಿನಲ್ಲಿ ಮಳೆಯ ಹೆಚ್ಚಳದೊಂದಿಗೆ ಹೆಚ್ಚಿನ ಅಂತರ-ವಾರ್ಷಿಕ ವ್ಯತ್ಯಾಸವನ್ನು ಪ್ರದರ್ಶಿಸಲಿದೆ. 21 ನೇ ಶತಮಾನದ ಅಂತ್ಯದ ವೇಳೆಗೆ ಎಲ್-ನಿನೊ ಸದರ್ನ್ ಆಸಿಲೇಷನ್ (ENSO) ಮತ್ತು ಹಿಂದೂ ಮಹಾಸಾಗರದ ಡೈಪೋಲ್ (Indian Ocean Dipol IOD) ನಂತಹ ದೊಡ್ಡ ಪ್ರಮಾಣದ ಜಾಗತಿಕ ಸಾಗರ ವಾತಾವರಣದ ವಿದ್ಯಮಾನವು 21 ನೇ ಶತಮಾನದ ಅಂತ್ಯದ ವೇಳೆಗೆ ತೀವ್ರ ಏರಿಕೆಯಾಗಲಿದೆ ಎಂದು ಹವಾಮಾನ ವಿಜ್ಞಾನಿಗಳು ಮತ್ತಷ್ಟು ಎಚ್ಚರಿಕೆ ನೀಡಿದ್ದಾರೆ.

ENSO – ಎಲ್ ನಿನೊ ಮತ್ತು ಲಾ ನಿನಾ ಕ್ರಮವಾಗಿ ಸಮಭಾಜಕ ಪೆಸಿಫಿಕ್ ಸಾಗರದ ಅಸಹಜ ತಾಪಮಾನ ಮತ್ತು ತಂಪಾಗಿಸುವಿಕೆ ಮತ್ತು ಭಾರತದ ಮೇಲೆ ಮಾನ್ಸೂನ್ ಮಳೆಯ ಮೇಲೆ ಪ್ರಭಾವ ಬೀರುತ್ತದೆ. ಸಾಮಾನ್ಯವಾಗಿ  ಎಲ್ ನಿನೊ ವರ್ಷಗಳಲ್ಲಿ, ಇತ್ತೀಚಿನ ವರ್ಷಗಳಲ್ಲಿ 2014 ಮತ್ತು 2015 ರ ಸಮಯದಲ್ಲಿ ದಾಖಲಾದಂತೆ ಭಾರತದ ಮೇಲೆ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

ಅಂತೆಯೇ, ಹಿಂದೂ ಮಹಾಸಾಗರದ ಉದ್ದಕ್ಕೂ ಐಒಡಿ ತಾಪಮಾನವು ದಾಖಲಾಗುತ್ತಿದ್ದು, ಭಾರತದ ಮುಂಗಾರು ಮಳೆಗೆ ಪ್ರಭಾವ ಬೀರುವ ಅಂಶವಾಗಿದೆ.

“ತಕ್ಷಣದ 20 ಅಥವಾ 30 ವರ್ಷಗಳಲ್ಲಿ ಇಎನ್ಎಸ್ಒ ಮತ್ತು ಐಒಡಿಗಳ ಯಾವುದೇ ಮಹತ್ವದ ಪರಿಣಾಮವಿಲ್ಲ. ನೈಸರ್ಗಿಕ ವ್ಯತ್ಯಾಸದ ಚಾಲಕರಾಗಿರುವುದರಿಂದ ಇವುಗಳ ಏರುತ್ತಿರುವ ತಾಪಮಾನಗಳಿಗೆ ಪ್ರತಿಕ್ರಿಯಿಸುತ್ತವೆ. ಇದು ಪೆಸಿಫಿಕ್ ಸಾಗರದ ಸರಾಸರಿ ತಾಪಮಾನ ಮೌಲ್ಯಗಳ ಮೇಲೆ ಪರಿಣಾಮ ಬೀರುತ್ತದೆ. 21 ನೇ ಶತಮಾನದ ಅಂತ್ಯದ ವೇಳೆಗೆ ENSO ಮತ್ತು IOD ಒಟ್ಟಾರೆ ಮಳೆಯ ಹೆಚ್ಚಳವನ್ನು ಪ್ರಚೋದಿಸುವ ತೀವ್ರ ಮೌಲ್ಯಗಳನ್ನು ತಲುಪುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು 6 ನೇ IPCC ವರದಿಯಲ್ಲಿ ‘ಭವಿಷ್ಯದ ಜಾಗತಿಕ ಹವಾಮಾನ’ ಎಂಬ ಅಧ್ಯಾಯದ ಪ್ರಮುಖ ಲೇಖಕಿ ಸ್ವಪ್ನಾ ಪಣಿಕ್ಕಲ್ ಹೇಳಿದರು. ಇತರ ಮೂರು ಸಾಗರಗಳಿಗಿಂತ ಗಣನೀಯವಾಗಿ ಹೆಚ್ಚಿನ ಪ್ರಮಾಣದಲ್ಲಿ ಬಿಸಿಯಾಗುತ್ತಿರುವುದು ಹಿಂದೂ ಮಹಾಸಾಗರ ಎಂದು ಪಣಿಕ್ಕಲ್ ಸೂಚಿಸಿದರು.

ಇದನ್ನೂ ಓದಿ: 2100ರ ವೇಳೆಗೆ ಜಾಗತಿಕ ತಾಪಮಾನವು 2 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾಗಲಿದೆ: ಐಪಿಸಿಸಿ ವರದಿ

(Hindu kush Himalayas have undergone warming at a higher rate than other mountainous says IPCC report)

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ