Amit Shah Cooperative Conference: ಹೊಸ ಸಹಕಾರ ನೀತಿ ತರಲು ಕೇಂದ್ರದ ನಿರ್ಧಾರ; ಅಮಿತ್ ಶಾ ಭಾಷಣದ ಮುಖ್ಯಾಂಶ ಇಲ್ಲಿದೆ
HM Amit Shah Address the National Co-operative Conference: ಇಂದು ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಮೆಗಾ ಸಹಕಾರ ಸಮ್ಮೇಳನ ಉದ್ದೇಶಿಸಿ ಮಾತನಾಡಿದ್ದಾರೆ. ಕಾರ್ಯಕ್ರಮದ ಸಂಪೂರ್ಣ ವರದಿ ಇಲ್ಲಿದೆ.
ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಇಂದು ಮೆಗಾ ಸಹಕಾರ ಸಮ್ಮೇಳನದಲ್ಲಿ ಭಾಗಿಯಾಗಿ ಮಾತನಾಡಿದ್ದಾರೆ. ವಿವಿಧ ಸಹಕಾರ ವಲಯದ ಸುಮಾರು 5.82 ಕೋಟಿ ಜನರನ್ನು ಉದ್ದೇಶಿಸಿ ಅವರು ಮಾತನಾಡಿದ್ದು, ಕೇಂದ್ರದ ಹೊಸ ಸಹಕಾರ ಇಲಾಖೆಯ ದೂರದೃಷ್ಟಿ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ದೆಹಲಿಯ ಇಂದಿರಾಗಾಂಧಿ ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೌತಿಕವಾಗಿ ಎರಡು ಸಾವಿರ ಜನರು ಭಾಗಿಯಾಗಿದ್ದರು. ವರ್ಚ್ಯುಯಲ್ ಆಗಿ ಸುಮಾರು 5.82 ಕೋಟಿ ಜನರು ಭಾಗಿಯಾಗಿದ್ದಾರೆ. ಕೇಂದ್ರದಲ್ಲಿ ಸಹಕಾರ ಇಲಾಖೆ ಸೃಷ್ಟಿಯಾದ ಬಳಿಕ ನಡೆದ ಮೊದಲ ಮೆಗಾ ಸಹಕಾರ ಸಮ್ಮೇಳನ ಇದಾಗಿದ್ದು, ಕೇಂದ್ರದ ಸಹಕಾರ ಇಲಾಖೆಯ ರೂಪುರೇಷೆ, ಕಾರ್ಯಕ್ರಮ, ವ್ಯಾಪ್ತಿ ಬಗ್ಗೆ ಮಾಹಿತಿ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಸಹಕಾರ ಇಲಾಖೆಯ ದೃಷ್ಟಿಕೋನವನ್ನು ಈ ಸಮಾರಂಭ ತೆರೆದಿಟ್ಟಿದೆ. ಈ ವರ್ಷದ ಆರಂಭದಲ್ಲಿ ಸಹಕಾರ ಇಲಾಖೆಯ ಜವಾಬ್ದಾರಿ ವಹಿಸಿಕೊಂಡಿದ್ದ ಕೇಂದ್ರ ಗೃಹ ಸಚಿವ ಹಾಗೂ ಸಹಕಾರ ಸಚಿವ ಅಮಿತ್ ಶಾ ಹಲವು ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಈವರೆಗೆ ಸಹಕಾರ ಇಲಾಖೆಯು ಕೃಷಿ ಇಲಾಖೆಯ ಅಧೀನದಲ್ಲಿಯೇ ಇದ್ದ ಸಹಕಾರ ಇಲಾಖೆ ಪ್ರತ್ಯೇಕವಾಗಿ ಏಕೆ ಅವಶ್ಯಕವಿದೆ ಎಂದು ಅಮಿತ್ ತಿಳಿಸಿದ್ದಾರೆ. ಇದೇ ವೇಳೆ ಅವರು ಸರ್ಕಾರದ ನೂತನ ನಿರ್ಧಾರಗಳ ಬಗ್ಗೆ ತಿಳಿಸಿದ್ದು, ಹೊಸ ಸಹಕಾರ ನೀತಿಯನ್ನು ಈ ವರ್ಷ ತರಲಾಗುವುದು ಎಂದು ತಿಳಿಸಿದ್ದಾರೆ.
ಜೊತೆಗೆ ರಾಜ್ಯಗಳೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸಲಾಗುವುದು. ಈ ಮೂಲಕ ಇಡೀ ದೇಶದ ಸಹಕಾರ ಕ್ಷಷೇ್ರದಲ್ಲಿ ಕ್ರಾಂತಿ ತರಲಾಗುವುದು ಎಂದು ಅವರು ನುಡಿದಿದ್ದಾರೆ. ಸಹಕಾರಿ ಅಧ್ಯಯನಕ್ಕಾಗಿ ಹೊಸ ವಿಶ್ವವಿದ್ಯಾಲಯ ಸ್ಥಾಪಿಸುವ ಯೋಜನೆಯನ್ನೂ ಅಮಿತ್ ಶಾ ತೆರೆದಿಟ್ಟಿದ್ದಾರೆ.
ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ.
LIVE NEWS & UPDATES
-
ಕೊರೊನಾ ಮಾರ್ಗಸೂಚಿಯೊಂದಿಗೆ ನಡೆದ ಸಮಾರಂಭದ ವಿಹಂಗಮ ನೋಟ
-
ಕಾರ್ಯಕ್ರಮದಲ್ಲಿ ಸಚಿವ ಅಮಿತ್ ಶಾ ಮಾತು
-
2021ರಲ್ಲಿ ನೂತನ ಸಹಕಾರಿ ನೀತಿ ಜಾರಿ: ಸಚಿವ ಅಮಿತ್ ಶಾ
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನೂತನ ಸಹಕಾರಿ ನೀತಿ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ಅಮಿತ್ ಶಾ ನುಡಿದಿದ್ದಾರೆ.
हमने तय किया है कि कुछ समय के अंदर ही नई सहकारी नीति जो पहले 2002 में आदरणीय अटल जी लेकर आए थें और अब 2022 में मोदी जी लेकर आएंगे।
आजादी के अमृत महोत्सव में नई सहकारी नीति को बनाने की हम शुरुआत करेंगे- श्री @AmitShah जी #SahkarSeSamriddhi
— Office of Amit Shah (@AmitShahOffice) September 25, 2021
ಕಾರ್ಯಕ್ರಮವನ್ನು ವೀಕ್ಷಿಸಿದ 5.82 ಕೋಟಿ ಜನರು
ಮೆಗಾ ಸಹಕಾರ ಸಮ್ಮೇಳನವನ್ನು ವಿಶ್ವದಾದ್ಯಂತ ಸುಮಾರು 5.82 ಕೋಟಿ ಜನರು ವೀಕ್ಷಿಸಿದ್ದಾರೆ.
ನಿಮ್ಮ ಸಮಸ್ಯೆಯನ್ನು ನಮಗೆ ತಿಳಿಸಿ, ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ: ಅಮಿತ್ ಶಾ
ಗ್ರಾಮೀಣ ಸಹಕಾರಿ ಬ್ಯಾಂಕುಗಳ ಸಮಸ್ಯೆ, ತೆರಿಗೆ ಸಮಸ್ಯೆ ಇವುಗಳು ನನಗೆ ತಿಳಿದಿದೆ. ಯಾರಿಗೂ ಅನ್ಯಾಯವಾಗಲು ಬಿಡುವುದಿಲ್ಲ. ನಿಮ್ಮ ಸಮಸ್ಯೆಗಳ ಕುರಿತಂತೆ ಪತ್ರ ಬರೆದು ನಮಗೆ ಕಳುಹಿಸಿ. ನಾನೇ ಬಂದು ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಅಮಿತ್ ಶಾ ನುಡಿದಿದ್ದಾರೆ.
ಭಾರತೀಯ ಸಹಕಾರ ಕ್ಷೇತ್ರವು ಒಳ್ಳೆಯ ಬೆಳವಣಿಗೆಗೆ ವೇದಿಕೆಯಾಗಲಿದೆ. ಜಾಗತಿಕ ಸಹಕಾರಿ ಕ್ಷೇತ್ರಕ್ಕೆ ಕೊಡುಗೆ ನೀಡುವ ಸಂಸ್ಥೆಯನ್ನು ನೀವೂ ಪ್ರಾರಂಭಿಸಬಹುದು ಎಂದು ಅಮಿತ್ ಶಾ ಕರೆ ನೀಡಿದ್ದಾರೆ.
ಕಂಪ್ಯೂಟರೀಕರಣ, ಸಹಕಾರಿ ಅಧ್ಯಯನಕ್ಕೆ ಹೊಸ ವಿಶ್ವವಿದ್ಯಾಲಯ: ಅಮಿತ್ ಶಾ ಘೋಷಣೆ
ಕಂಪ್ಯೂಟರೀಕರಣ ಹಾಗೂ ಸಹಕಾರಿ ಅಧ್ಯಯನಕ್ಕಾಗಿ ಹೊಸ ವಿಶ್ವ ವಿದ್ಯಾನಿಲಯವನ್ನು ಸ್ಥಾಪಿಸಲಾಗುವುದು. ಇದಕ್ಕಾಗಿ ನಾಲ್ಕು ಸ್ಥಳಗಳು ಮುನ್ನೆಲೆಗೆ ಬಂದಿದೆ ಎಂದು ಅಮಿತ್ ಶಾ ಘೋಷಿಸಿದ್ದಾರೆ.
ಸಹಕಾರಿ ಸಂಘಗಳ ಚುನಾವಣೆಯಲ್ಲಿ ಪಾರದರ್ಶಕತೆ ತರಲಾಗುವುದು: ಅಮಿತ್ ಶಾ
ಸಣ್ಣ ಮೀನುಗಾರರಿಗೆ ತಾಂತ್ರಿಕ ಉಪಕರಣಗಳನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ಅವರಿಗೆ ಸಹಕಾರಿ ಸಂಘಗಳ ಮೂಲಕ ಸಹಾಯ ಮಾಡಲಾಗುವುದು. ಸಹಕಾರಿ ಸಂಘಗಳ ಚುನಾವಣೆಯಲ್ಲಿ ಪಾರದರ್ಶಕತೆ ತರಬೇಕು. ಈ ಕುರಿತು ಮೋದಿ ಉತ್ಸುಕರಾಗಿದ್ದಾರೆ. ನಾವು ಅವರಿಗೆ ಕೈಜೋಡಿಸೋಣ.
ಪ್ರಾದೇಶಿಕ ಭಾಷೆಗಳಲ್ಲಿ ಆಪ್: ಅಮಿತ್ ಶಾ
ಪ್ರೈಮರಿ ಸೊಸೈಟಿಗಳನ್ನು ರಾಜ್ಯವು ನಿರ್ವಹಿಸಬೇಕು. ಪಿಎಸಿ ಮತ್ತು ಕಂಪ್ಯೂಟರೈಸೇಷನ್ ಅನ್ನು ಕೇಂದ್ರ ನಿರ್ವಹಿಸಲಿದೆ. ನಬಾರ್ಡ್, ಪ್ರಾದೇಶಿಕ ಭಾಷೆಯ ಆಪ್ಗಳನ್ನು ತಯಾರಿಸಲಾಗುವುದು. ಸಹಕಾರಿ ಶಿಕ್ಷಣವನ್ನು ಉನ್ನತ ದರ್ಜೆಗೆ ಏರಿಸಬೇಕಾಗಿದ್ದು, ಎಲ್ಲಾ ಗ್ರಾಮಗಳನ್ನು ಒಳಗೊಳ್ಳಬೇಕಿದೆ ಎಂದು ಅಮಿತ್ ಶಾ ನುಡಿದಿದ್ದಾರೆ.
ಪ್ರಿಯಾರಿಟಿ ಸೆಕ್ಟರ್ ಲೆಂಡಿಂಗ್ನ್ನು(ಸಾಲ ನೀಡಿಕೆ) ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಗಳು ನಿರ್ವಹಿಸಲಿವೆ. ಬ್ಯಾಂಕುಗಳು 1000ರೂ ಕ್ರೆಡಿಟ್ ನೀಡುವುದಿಲ್ಲ, ಬದಲಾಗಿ ಕ್ರೆಡಿಟ್ ಸಹಕಾರಿ ಬ್ಯಾಂಕುಗಳು ನೀಡಲಿವೆ eಂದು ಅಮಿತ್ ಶಾ ತಿಳಿಸಿದ್ದಾರೆ.
2021ರಲ್ಲಿ ನೂತನ ಸಹಕಾರಿ ಮಸೂದೆ ಜಾರಿ: ಅಮಿತ್ ಶಾ
2021ರಲ್ಲಿ ನೂತನ ಸಹಕಾರಿ ಮಸೂದೆಯನ್ನು ಜಾರಿಗೆ ತರಲಾಗುವುದು ಎಂದು ಅಮಿತ್ ಶಾ ತಿಳಿಸಿದ್ದಾರೆ.
ಸಹಕಾರ ಕ್ಷೇತ್ರ ರಾಜ್ಯಕ್ಕೆ ಸಂಬಂಧಪಟ್ಟಿದ್ದು, ನಾವು ಅವರೊಂದಿಗೆ ಸಮನ್ವಯದಿಂದ ಕೆಲಸ ಮಾಡುತ್ತೇವೆ: ಅಮಿತ್ ಶಾ
ಸಹಕಾರ ಕ್ಷೇತ್ರ ರಾಜ್ಯಕ್ಕೆ ಸಂಬಂಧಪಟ್ಟಿದ್ದು, ನಾವು ಅವರೊಂದಿಗೆ ಸಮನ್ವಯದಿಂದ ಕೆಲಸ ಮಾಡುತ್ತೇವೆ ಎಂದು ಅಮಿತ್ ಶಾ ನುಡಿದಿದ್ದಾರೆ.
ಪರಿಶ್ರಮ, ಸಂಕಲ್ಪದಿಂದ ಸಹಕಾರ ಕ್ಷೇತ್ರದಲ್ಲಿ ಗುರಿ ಸಾಧಿಸಬಹುದು: ಅಮಿತ್ ಶಾ
ಪರಿಶ್ರಮ, ಸಂಕಲ್ಪದಿಂದ ಸಹಕಾರ ಕ್ಷೇತ್ರದಲ್ಲಿ ಗುರಿ ಸಾಧಿಸಬಹುದು. 2009-10ನೇ ಸಾಲಿನಲ್ಲಿ 12,000 ಕೋಟಿಯಿದ್ದದ್ದು, 2019-20ರಲ್ಲಿ 1,44,000 ಕೋಟಿಯಾಗಿದೆ. ಸ್ವಾಮಿನಾಥನ್ ಕಮಿಷನ್ ವರದಿಯ ಪ್ರಕಾರ, 1.58 ಲಕ್ಷ ಕೋಟಿಯನ್ನು ರೈತರ ಖಾತೆಗೆ ಜಮಾ ಮಾಡಲಾಗಿದೆ ಎಂದು ಅಮಿತ್ ಶಾ ತಿಳಿಸಿದ್ಧಾರೆ.
ಸಹಕಾರಿ ಕ್ಷೇತ್ರವನ್ನು ಆಧುನಿಕವಾಗಿ, ವೈಜ್ಞಾನಿಕವಾಗಿ ಬದಲಾಯಿಸಬೇಕಿದೆ: ಅಮಿತ್ ಶಾ
ಸಹಕಾರಿ ಕ್ಷೇತ್ರವನ್ನು ಆಧುನಿಕವಾಗಿ ಮತ್ತು ವೈಜ್ಞಾನಿಕವಾಗಿ ಬದಲಾಯಿಸಬೇಕಿದೆ. ಆದ್ದದರಿಂದಲೇ ಸಹಕಾರಿ ಸಚಿವಾಲಯವನ್ನು ಪ್ರಾರಂಭಿಸಲಾಗಿದೆ. 25 ಪ್ರತಿಶತ ರೈತರ ಸಾಲಗಳು ಸಹಕಾರಿ ಕ್ಷೇತ್ರದಲ್ಲೇ ನಿರ್ವಹಣೆಯಾಗುತ್ತದೆ. ಈ ಕ್ಷೇತ್ರದಿಂದ ಹಾಲು 20 ಪ್ರತಿಶತ, ಕಬ್ಬು, ಮೀನು ಸಹಕಾರ ಸಂಘಗಳಿಂದ 20 ಪ್ರತಿಶತ ಪೂರೈಕೆಯಾಗುತ್ತದೆ ಎಂದು ಅಮಿತ್ ಶಾ ನುಡಿದಿದ್ದಾರೆ.
ಆಹಾರ ಸಂಸ್ಕರಣೆ ಉದ್ಯಮದಲ್ಲಿ ನಾವು ಮತ್ತಷ್ಟು ಪ್ರಗತಿ ಕಾಣಬೇಕಿದೆ: ಅಮಿತ್ ಶಾ
ಇಫ್ಕೋ ಸಂಸ್ಥೆಯು 1966ರಲ್ಲಿ 77 ಸೊಸೈಟಿಗಳನ್ನು ಸೇರಿಸಿ ಪ್ರಾರಂಭಿಸಲಾಗಿತ್ತು. ಪ್ರಸ್ತುತ 3.5 ಕೋಟಿ ರೈತರು ಇದರ ಉಪಯೋಗ ಪಡೆಯುತ್ತಿದ್ದಾರೆ. ಕ್ರಿಭ್ಕೋ ಕೂಡ ಉತ್ತಮವಾಗಿ ಬೆಳವಣಿಗೆ ಹೊಂದಿದ್ದು, ಆಹಾರ ಸಂಸ್ಕರಣೆ ಉದ್ಯಮದಲ್ಲಿ ನಾವು ಮತ್ತಷ್ಟು ಪ್ರಗತಿ ಕಾಣಬೇಕಿದೆ. ಇದಕ್ಕೆ ರೈತರೂ ಕೈಜೋಡಿಸಿದರೆ ನಾವು ಉತ್ತಮ ಸಾಧನೆ ಮಾಡಬಹುದು ಎಂದು ಅಮಿತ್ ಶಾ ನುಡಿದಿದ್ದಾರೆ.
ಲಿಜ್ಜಟ್ ಪಾಪಡ್ ಯಶಸ್ವಿ ಕತೆ; ಮಹಿಳೆಯರಿಗೆ ಸ್ಫೂರ್ತಿ: ಅಮಿತ್ ಶಾ
ಲಿಜ್ಜಟ್ ಪಾಪಡ್ ಸಂಸ್ಥೆಯನ್ನು 80 ಮಹಿಳೆಯರು ಸೇರಿ ಪ್ರಾರಂಭಿಸಿದರು. ಪ್ರಸ್ತುತ ಈ ಸಂಸ್ಥೆ ₹ 1600 ಕೋಟಿಗೂ ಅಧಿಕ ವಹಿವಾಟು ನಡೆಸುತ್ತದೆ. ಇದು ಎಲ್ಲಾ ಮಹಿಳೆಯರಿಗೆ ಪ್ರೇರಣೆ ಎಂದು ಅವರು ನುಡಿದಿದ್ದಾರೆ.
ಅಮುಲ್ನ ಯಶಸ್ವಿ ಕತೆ ತೆರೆದಿಟ್ಟ ಅಮಿತ್ ಶಾ
1946ರಲ್ಲಿ ರೈತರು ಖಾಸಗಿ ಕಂಪನಿಗಳಿಗೆ ಹಾಲನ್ನು ಮಾರಾಟ ಮಾಡಬೇಕಿತ್ತು. ಆದರೆ ಸರ್ದಾರ್ ಪಟೇಲ್ ಅವರ ಆಶಯದಂತೆ ತ್ರಿಭುವನ್ ಪಟೇಲ್ 80 ಜನರನ್ನು ಬಳಸಿಕೊಂಡು ಸಂಸ್ಥೆಯೊಂದನ್ನು ಆರಂಭಿಸಿದರು. ಪ್ರಸ್ತುತ ₹ 53,000 ಕೋಟಿ ವಹಿವಾಟನ್ನು ಈ ಸಂಸ್ಥೆ ನಡೆಸುತ್ತದೆ. 36 ಲಕ್ಷ ರೈತರು ಇದರಲ್ಲಿ ಭಾಗಿಯಾಗಿದ್ದಾರೆ. 49 ಮಿಲಿಯನ್ ಲೀಟರ್ ಹಾಲನ್ನು ಅಮುಲ್ ಸಂಸ್ಕರಣೆ ಮಾಡುತ್ತದೆ ಎಂದು ಅಮಿತ್ ಶಾ ಅಮುಲ್ ಯಶಸ್ವಿ ಕತೆಯನ್ನು ತೆರೆದಿಟ್ಟಿದ್ದಾರೆ.
ಸಹಕಾರಿ ವಲಯದ ಅಗತ್ಯತೆ ಪ್ರಶ್ನಿಸಿದ ಖಾಸಗಿ ವಲಯ ಹಾಗೂ ರಾಜಕಾರಣಿಗಳಿಗೆ ಉತ್ತರಿಸಿದ ಅಮಿತ್ ಶಾ
ನೈಸರ್ಗಿಕ ವಿಕೋಪಗಳಾದ ಸೈಕ್ಲೋನ್, ಚಂಡಮಾರುತ, ಪ್ರವಾಹದ ಸಂದರ್ಭದಲ್ಲಿ ಸಹಕಾರಿ ವಲಯ ಬಹಳಷ್ಟು ಕೊಡುಗಡೆ ನೀಡಿದೆ. 1947ರಿಂದ ನಮಗೆ ಏಳುಬೀಳುಗಳಾಗಿವೆ. ಖಾಸಗಿ ವಲಯ ಹಾಗೂ ರಾಜಕಾರಣಿಗಳು ಇದರ ಅಗತ್ಯತೆ ಪ್ರಶ್ನಿಸಿದ್ದಾರೆ. ಆದರೆ ನನ್ನ ಪ್ರಕಾರ ಸಹಕಾರಿ ವಲಯ ಒಳ್ಳೆಯ ಬೆಳವಣಿಗೆ ಎಂದು ಅಮಿತ್ ಶಾ ಹೇಳಿದ್ದಾರೆ.
ಸಹಕಾರಿ ಸಚಿವಾಲಯದ ಅಗತ್ಯತೆ ಪ್ರಶ್ನಿಸಿದವರಿಗೆ ಉತ್ತರಿಸಿದ ಅಮಿತ್ ಶಾ
ಬಹಳಷ್ಟು ಜನರು ಸಹಕಾರಿ ಮಂತ್ರಾಲಯದ ಕುರಿತು ಪ್ರಶ್ನೆ ಎತ್ತಿದ್ದಾರೆ. ಆದರೆ ಪ್ರಸ್ತುತ ಸಂದರ್ಭಕ್ಕೆ ಇದು ಅಗತ್ಯವಾಗಿ ಬೇಕು. 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನು ಹೊಂದಲು ಇದು ಸಹಕಾರಿ. ಗ್ರಾಮೀಣ ಭಾಗದ ಅಭಿವೃದ್ಧಿ ದೇಶದ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಅಮಿತ್ ಶಾ ನುಡಿದಿದ್ದಾರೆ.
ನಾವು ಸಹಕಾರಿ ಕ್ಷೇತ್ರವನ್ನು ಇತರ ಕ್ಷೇತ್ರಗಳಿಗೆ ಕೊಂಡೊಯ್ಯಬೇಕು. ಪಾರದರ್ಶಕವಾಗಿ, ನಾವು ನಮ್ಮ ವ್ಯಕ್ತಿತ್ವದ ಲಕ್ಷಣವಾಗಿ ಸಹಕಾರವನ್ನು ತರಬೇಕು ಎಂದು ಅಮಿತ್ ಶಾ ನುಡಿದಿದ್ದಾರೆ.
ನನ್ನ ಇಷ್ಟದ ವಿಷಯ- ಸಹಕಾರಿ ಕ್ಷೇತ್ರ: ಹೊಸ ಖಾತೆಯ ಜವಾಬ್ದಾರಿಯ ಕುರಿತು ಸಂತಸ ಹಂಚಿಕೊಂಡ ಅಮಿತ್ ಶಾ
ಸಹಕಾರಿ ವಿಷಯವು ನನ್ನಿಷ್ಟದ ಕ್ಷೇತ್ರವಾಗಿದ್ದು, ಈ ಜವಾಬ್ದಾರಿ ನೀಡಿದ್ದಕ್ಕೆ ಅಮಿತ್ ಶಾ ಸಂತಸ ವ್ಯಕ್ತಪಡಿಸಿದ್ದಾರೆ. ಸಹಕಾರಿ ಕ್ಷೇತ್ರವು ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ಹೊಂದಿದ್ದು, ಅದನ್ನು ತಿರಸ್ಕಾರದಿಂದ ಕಾಣುವುದನ್ನು ನಿಲ್ಲಿಸಬೇಕು ಎಂದು ಅವರು ನುಡಿದಿದ್ದಾರೆ.
‘ಸ್ವಾತಂತ್ರ್ಯಾ ಬಂದ 75 ವರ್ಷದ ನಂತರ ಸಹಕಾರಿ ಮಂತ್ರಾಲಯ ಹುಟ್ಟುಹಾಕಿದ ಪ್ರಧಾನಿಗೆ ಧನ್ಯವಾದ’
ಸಚಿವ ಅಮಿತ್ ಶಾ ನುಡಿ
75 ವರ್ಷದ ನಂತರ ಸಹಕಾರಿ ಮಂತ್ರಾಲಯ ಹುಟ್ಟುಹಾಕಿದ ಪ್ರಧಾನಿ ನರೇಂದ್ರ ಮೋದಿಗೆ ಎಲ್ಲರೂ ಎದ್ದು ನಿಂತು ಧನ್ಯವಾದ ಹೇಳೋಣ ಎಂದು ಅಮಿತ್ ಶಾ ನುಡಿದಿದ್ದಾರೆ.
ನಮ್ಮಂತ ಅನೇಕ ಕಾರ್ಯಕರ್ತರಿಗೆ ದೀನ ದಯಾಳ ಉಪಾಧ್ಯಾಯರೇ ಆದರ್ಶ : ಅಮಿತ್ ಶಾ
ಭಾಷಣ ಆರಂಭಿಸಿದ ಸಹಕಾರ ಸಚಿವ ಅಮಿತ್ ಶಾ
ನನ್ನಂತ ಅನೇಕ ಕಾರ್ಯಕರ್ತರ ಅನೇಕ ಕಾರ್ಯಕರ್ತರ ಆದರ್ಶ ದೀನ ದಯಾಳ ಉಪಾಧ್ಯಾಯರು. ಅವರ ಜನ್ಮದಿನದಂದು, ಅಂತ್ಯೋದಯ ಪರಿಕಲ್ಪನೆಯಂತೆ ಈ ಕಾರ್ಯಕ್ರಮ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಸಹಕಾರ ಸಚಿವ ಅಮಿತ್ ಶಾ ನುಡಿದಿದ್ದಾರೆ.
‘ದೇಶದ ಕೊನೆಯ ಮನುಷ್ಯನಿಗೆ ಎಲ್ಲಾ ಸಿಗಬೇಕು ಎಂಬ ದೀನ ದಯಾಳರ ಕನಸು ನನಸು’
ಕೇಂದ್ರ ಸಹಕಾರಿ ರಾಜ್ಯ ಮಂತ್ರಿ ಬಿ.ಎಲ್ ವರ್ಮಾ ಸಂತಸ
ಕೇಂದ್ರ ಸಹಕಾರಿ ರಾಜ್ಯ ಮಂತ್ರಿ ಬಿ.ಎಲ್.ವರ್ಮಾ ತಮ್ಮ ಭಾಷಣದಲ್ಲಿ ದೇಶದ ಮೂಲೆ ಮೂಲೆಯಿಂದ ನೀವೆಲ್ಲ ಬಂದಿದ್ದೀರಿ. ನಮ್ಮ ಅದೃಷ್ಟ; ಹೊಸ ಸಹಕಾರ ಸಚಿವಾಲಯ ಬಂದಿದೆ. ಇಂದು ದೀನ್ ದಯಾಳ್ ಉಪಾಧ್ಯಾಯ ಅವರ ಹುಟ್ಟು ಹಬ್ಬ. ದೇಶದ ಕೊನೆಯ ಮನುಷ್ಯನಿಗೆ ಎಲ್ಲ ಸಿಗಬೇಕು ಎಂಬುದು ಅವರ ಕನಸಾಗಿತ್ತು ಎಂದು ನುಡಿದಿದ್ದಾರೆ.
ಪ್ರಸ್ತುತ ಸಮ್ಮೇಳನದಲ್ಲಿ 4 ಕೋಟಿಗೂ ಅಧಿಕ ಜನರು ಭಾಗಿ
ಕಾರ್ಯಕ್ರಮವನ್ನು ವಿಶ್ವಾದ್ಯಂತ ಸುಮಾರು 4 ಕೋಟಿಗೂ ಅಧಿಕ ಜನರು ವರ್ಚ್ಯುವಲ್ ಮಾಧ್ಯಮದ ಮುಖಾಂತರ ವೀಕ್ಷಿಸುತ್ತಿದ್ದಾರೆ.
ಸಹಕಾರದಿಂದ ಸಮೃದ್ಧಿ, ವಿಕಾಸ: ರಾಷ್ಟ್ರೀಯ ನಗರ ಸಹಕಾರ ಬ್ಯಾಂಕುಗಳ ಅಧ್ಯಕ್ಷ ಜ್ಯೋತೇಂದ್ರ ಭಾಯ್
ಸಹಕಾರ ಇಲಾಖೆಯ ಮುಖಾಂತರ ದೊಡ್ಡ ಉದ್ಯಮಿಗಳು ಮತ್ತು ಸಣ್ಣ ಉದ್ಯಮಿಗಳ ನಡುವಿನ ಅಂತರವನ್ನು ತೆಗೆದು ಹಾಕಲಾಗುತ್ತದೆ. ಅಮಿತ್ ಶಾ ಸಹಕಾರ ಇಲಾಖೆಯ ನೇತೃತ್ವ ವಹಿಸಿರುವುದು ಅದಕ್ಕೆ ಬಲ ತುಂಬಿದೆ ಎಂದು ರಾಷ್ಟ್ರೀಯ ನಗರ ಸಹಕಾರ ಬ್ಯಾಂಕುಗಳ ಅಧ್ಯಕ್ಷ ಜ್ಯೋತೇಂದ್ರ ಭಾಯ್ ಅಭಿಮತ ವ್ಯಕ್ತಪಡಿಸಿದ್ದಾರೆ.
‘ಸರ್ದಾರ್ ವಲ್ಲಭಬಾಯ್ ಪಟೇಲ್ ಸಾಧಿಸದೇ ಬಿಟ್ಟಿದ್ದನ್ನು ಸಹಕಾರ ಇಲಾಖೆಯ ರಚನೆಯ ಮೂಲಕ ಅಮಿತ್ ಶಾ ಸಾಧಿಸಿದ್ದಾರೆ’
ರಾಷ್ಟ್ರೀಯ ನಗರ ಸಹಕಾರ ಬ್ಯಾಂಕುಗಳ ಅಧ್ಯಕ್ಷ ಜ್ಯೋತೇಂದ್ರ ಭಾಯ್ ಅಭಿಮತ
ಸ್ವಾತಂತ್ರ್ಯಾ ಪೂರ್ವಕ್ಕೂ ಮೊದಲು ಗುಜರಾತ್ ಇಬ್ಬರು ರಾಷ್ಟ್ರೀಯ ನಾಯಕರನ್ನು ದೇಶಕ್ಕೆ ಕಳುಹಿಸಿತ್ತು. ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ಮಹಾತ್ಮಾ ಗಾಂಧೀಜಿ ದೇಶವನ್ನು ಮುನ್ನಡೆಸಿದ್ದರು. 65 ವರ್ಷಗಳ ನಂತರ ದೇಶಕ್ಕೆ ಮತ್ತಿಬ್ಬರು ನಾಯಕರನ್ನು (ನರೇಂದ್ರ ಮೋದಿ ಹಾಗೂ ಅಮಿತ್ ಶಾ) ಗುಜರಾತ್ ಕಳುಹಿಸಿದೆ. ಸರ್ದಾರ್ ಪಟೇಲ್ ಸಾಧಿಸದೇ ಉಳಿದ ಪ್ರತ್ಯೇಕ ಸಹಕಾರ ಇಲಾಖೆಯನ್ನು ರಚಿಸಿ ಅಮಿತ್ ಶಾ ರಚಿಸಿದ್ಧಾರೆ ಎಂದು ರಾಷ್ಟ್ರೀಯ ನಗರ ಸಹಕಾರ ಬ್ಯಾಂಕುಗಳ ಅಧ್ಯಕ್ಷ ಜ್ಯೋತೇಂದ್ರ ಭಾಯ್ ಅಭಿಪ್ರಾಯಪಟ್ಟಿದ್ದಾರೆ.
ಗ್ರಾಮೀಣ ಪ್ರದೇಶಗಳನ್ನು ಸುಧಾರಿಸಿದರೆ 5 ಟ್ರಿಲಿಯನ್ ಆರ್ಥಿಕತೆ ಸಾಧಿಸಬಹುದು: ಕ್ರಿಭ್ಕೋ ಅಧ್ಯಕ್ಷ ಚಂದ್ರಪಾಲ್ ಸಿಂಗ್
ಯೂರಿಯಾ ಉತ್ಪಾದನೆ, ಡಿಎಪಿ ಉತ್ಪಾದನೆ, ಉತ್ತಮ ಬೀಜ ವಿತರಣೆಯಲ್ಲಿ ನಾವು ಉತ್ತಮ ಕೆಲಸ ಮಾಡುತ್ತಿದ್ದೇವೆ. ಪ್ರಾಥಮಿಕ ಸಹಕಾರ ಸಂಘಗಳನ್ನು ಸಬಲೀಕರಣಗೊಳಿಸುವುದು ಮುಖ್ಯ. ಈ ಸಹಕಾರ ಸಂಘಗಳು ರೈತರ ಜೀವನವನ್ನು ಸುಧಾರಿಸುವಲ್ಲಿ ಆರ್ಥಿಕ ಕೇಂದ್ರಬಿಂದುವಾಗಿರಬಹುದು. ನಾವು ಗ್ರಾಮೀಣ ಪ್ರದೇಶಗಳನ್ನು ಸುಧಾರಿಸಿದರೆ, 5 ಟ್ರಿಲಿಯನ್ ಆರ್ಥಿಕತೆಯನ್ನು ಸಾಧಿಸಲು ಸಾಧ್ಯವಿದೆ ಎಂದು ಚಂದ್ರಪಾಲ್ ಸಿಂಗ್ ತಿಳಿಸಿದ್ದಾರೆ.
ಸಹಕಾರಿ ಸಂಸ್ಥೆಗಳಿಗೆ ತೆರಿಗೆ ವಿನಾಯ್ತಿ ನೀಡಿ: ಕ್ರಿಭ್ಕೋ ಅಧ್ಯಕ್ಷ ಚಂದ್ರಪಾಲ್ ಸಿಂಗ್ ಮನವಿ
ಸಹಕಾರಿ ಬ್ಯಾಂಕ್ಗಳು ಉತ್ತಮ ಕಾರ್ಯವನ್ನು ನಿರ್ವಹಿಸುತ್ತಿವೆ. ಆದರೆ ಅವುಗಳು ಹೆಚ್ಚು ಆದಾಯ ತೆರಿಗೆ ಪಾವತಿಸುತ್ತಿವೆ. ಆದ್ದರಿಂದ ಅವುಗಳಿಗೆ ಆದಾಯ ತೆರಿಗೆ ವಿನಾಯಿತಿ ನೀಡಬೇಕು ಎಂದು ಕ್ರಿಭ್ಕೊ ಚಂದ್ರಪಾಲ್ ಸಿಂಗ್ ಮನವಿ ಮಾಡಿದ್ದಾರೆ.
ಅಮಿತ್ ಶಾ ನಾಯಕತ್ವ ಸಹಕಾರಿ ಕ್ಷೇತ್ರಕ್ಕೆ ಹೊಸ ಉತ್ಸಾಹ ನೀಡಿದೆ: ಕ್ರಿಭ್ಕೋ ಅಧ್ಯಕ್ಷ ಚಂದ್ರಪಾಲ್ ಸಿಂಗ್
ಸಹಕಾರಿ ಕ್ಷೇತ್ರವು ಬಹಳ ಉತ್ಸುಕವಾಗಿದ್ದು, ಅಮಿತ್ ಶಾ ನೇತೃತ್ವವು ಕ್ಷೇತ್ರಕ್ಕೆ ಹೊಸ ಜೀವನ ನೀಡಿದೆ ಎಂದು ಕ್ರಿಭ್ಕೋ ಅಧ್ಯಕ್ಷ ಚಂದ್ರಪಾಲ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.ಉತ್ಪಾದನೆಯನ್ನು ಹೆಚ್ಚಿಸಿ ಆ ಮೂಲಕ ರೈತರ ಆದಾಯವನ್ನು ಹೆಚ್ಚಿಸಬಹುದು. ಮೌಲ್ಯವರ್ಧನೆಯ ಮುಖಾಂತರ ಮತ್ತು ಆಹಾರ ಸಂಸ್ಕರಣೆಯಿಂದ ನಾವು ರೈತರ ಆದಾಯವನ್ನು ಹೆಚ್ಚಿಸಬಹುದು ಎಂದು ಅವರು ನುಡಿದಿದ್ದಾರೆ.
ಕೊರೊನಾ ಕಾಲದಲ್ಲೂ ಅಮುಲ್ ಸುಮ್ಮನೆ ಕೂರಲಿಲ್ಲ: ಶಾಮಲ್ ಭಾಯ್ ಪಟೇಲ್
ಎಲ್ಲಾ ರಾಜ್ಯಗಳು ಆತ್ಮನಿರ್ಭರವಾಗುವತ್ತ ಮುನ್ನಡೆಯುತ್ತಿವೆ. 36 ಲಕ್ಷ ಕುಟುಂಬ, 18,000 ಹಾಲು ಉತ್ಪಾದಕ ಸಹಕಾರಿ ಸಂಘದ ಮೂಲಕ ಗುಜರಾತ್ ಬೆಳವಣಿಗೆ ಸಾಧ್ಯ. ಕೊರೊನಾ ಬಂದಾಗಲೂ ಅಮುಲ್ ಪರಿಹಾರ ಸುಮ್ಮನೆ ಕೂರಲಿಲ್ಲ. ಇದು ಹಾಲು ಉತ್ಪಾದನೆ ಹಾಗೂ ಇನ್ನಿತರ ಉತ್ಪನ್ನಗಳ ಮುಖಾಂತರ ರೈತರಿಗೆ ಬೆನ್ನೆಲುಬಾಗಿದೆ ಎಂದು ಶಾಮಲ್ ಭಾಯ್ ಪಟಏಲ್ ನುಡಿದಿದ್ದಾರೆ.
ಸಮುದಾಯ ಅಭಿವೃದ್ಧಿಗೆ ಸಹಕಾರಿ ಚಳುವಳಿ ಅನುಕೂಲ ಎಂದ ಅಮುಲ್ ಅಧ್ಯಕ್ಷ ಶಾಮಲ್ ಭಾಯಿ ಪಟೇಲ್
ಸಣ್ಣ ರೈತರು ಮತ್ತು ಸಣ್ಣ ಉದ್ಯಮಿಗಳಿಗೆ ಸಹಕಾರಿ ಚಳುವಳಿ ಅನುಕೂಲವಾಗಿದ್ದು, ಸಮುದಾಯದ ಅಭಿವೃದ್ಧಿಗೆ ಇದು ಸಹಾಯ ಮಾಡಲಿದೆ ಎಂದು ಅಮುಲ್ ಅಧ್ಯಕ್ಷ ಶಾಮಲ್ ಭಾಯ್ ಪಟೇಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಭಾರತ ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ಅಮುಲ್ ಮಾದರಿಯಲ್ಲಿ ಸಹಕಾರಿ ಕ್ಷೇತ್ರದಲ್ಲಿ ಬದಲಾವಣೆ ತರಬಹುದು ಎಂದು ಶಾಮಲ್ ಭಾಯ್ ಹೇಳಿದ್ದಾರೆ.
ಅಮಿತ್ ಶಾರನ್ನು ಶ್ಲಾಘಿಸಿದ ದಿಲೀಪ್ ಸಂಘಾನಿ
ಸಹಕಾರ ಸಚಿವಾಲಯ ನಿರ್ಮಿಸಿ ಅಮಿತ್ ಶಾ ಅವರು ಒಳ್ಳೆಯ ಕಾರ್ಯಕ್ಕೆ ಮುಂದಡಿ ಇಟ್ಟಿದ್ದಾರೆ ಎಂದು ರಾಷ್ಟ್ರೀಯ ಸಹಕಾರ ಸಂಘಟನೆಯ ದಿಲೀಪ್ ಸಂಘಾನಿ ಶ್ಲಾಘಿಸಿದರು.
ಅಮಿತ್ ಶಾ ಬದುಕಿನ ಕುರಿತ ವಿಶೇಷ ಡಾಕ್ಯುಮೆಂಟರಿ ಪ್ರದರ್ಶನ
ಕಾರ್ಯಕ್ರಮದಲ್ಲಿ ಸಚಿವ ಅಮಿತ್ ಶಾ ಅವರ ಬದುಕಿನ ಕುರಿತು ಚಿತ್ರೀಕರಿಸಿದ ಒಂದು ಸಣ್ಣ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು.
ಅಂತಾರಾಷ್ಟ್ರೀಯ ಸಹಕಾರಿ ಒಕ್ಕೂಟದ (ಜಾಗತಿಕ) ಅಧ್ಯಕ್ಷ ಡಾ. ಏರಿಯಲ್ ಗ್ವಾರ್ಕೊ ಉಪಸ್ಥಿತಿ
ಭಾರತದ ಮೊದಲ ಸಹಕಾರಿ ಸಮ್ಮೇಳನವನ್ನು ಭಾರತದ ಪ್ರಮುಖ ಸಹಕಾರಿ ಸಂಸ್ಥೆ IFFCO, ನ್ಯಾಷನಲ್ ಕೋ ಆಪರೇಟಿವ್ ಫೆಡರೇಶನ್ ಆಫ್ ಇಂಡಿಯಾ, ಅಮುಲ್, ಸಹಕಾರ ಭಾರತಿ, NAFED, KRIBHCO ಮತ್ತು ಎಲ್ಲಾ ಸಹಕಾರಿ ಕುಟುಂಬಗಳು ಆಯೋಜಿಸಿವೆ. ದೇಶದಾದ್ಯಂತ ವಿವಿಧ ರಾಜ್ಯಗಳು ಮತ್ತು ವಿವಿಧ ಸಹಕಾರಿ ಕ್ಷೇತ್ರಗಳ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಅಂತಾರಾಷ್ಟ್ರೀಯ ಸಹಕಾರಿ ಒಕ್ಕೂಟದ (ಜಾಗತಿಕ) ಅಧ್ಯಕ್ಷ ಡಾ. ಏರಿಯಲ್ ಗ್ವಾರ್ಕೊ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ.
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಚಿವ ಅಮಿತ್ ಶಾ
ಸಹಕಾರಿಗಳ ಮಹಾ ಸಮ್ಮೇಳನಕ್ಕೆ ಚಾಲನೆ
ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಭಾಷಣವು ಕೆಳಗಿನ ಲಿಂಕ್ನಲ್ಲಿ ಲಭ್ಯವಾಗಲಿದೆ.
Published On - Sep 25,2021 10:51 AM