ಆಹಾರ ವಿತರಕ ಸಂಸ್ಥೆ ಸ್ವಿಗ್ಗಿ ಹೋಳಿ ಹಬ್ಬಕ್ಕಾಗಿ ನೀಡಿದ್ದ ಮೊಟ್ಟೆಯ ಜಾಹೀರಾತು ಫಲಕಕ್ಕೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಜಾಹೀರಾತನ್ನು ಹಿಂಪಡೆದಿದ್ದಾರೆ. ಹೋಳಿ ಹಬ್ಬದ ಸಂದರ್ಭದಲ್ಲಿ ಮೊಟ್ಟೆಯನ್ನು ತಲೆಯ ಮೇಲೆ ಒಡೆಯದಿರಿ ಬದಲು ಅದನ್ನು ಆಮ್ಲೆಟ್ ಮಾಡಿಕೊಂಡು ತಿನ್ನಿ ಎಂದು ಸ್ವಿಗ್ಗಿ ನೀಡಿದ್ದ ಜಾಹೀರಾತಿನ ವಿರುದ್ಧ #ಹಿಂದೂಪೊಬಿಕ್‌ಸ್ವಿಗ್ಗಿ(#HinduPhobicSwiggy) ಹ್ಯಾಷ್ ಟ್ಯಾಗ್ ಟ್ವಿಟರ್‌ನಲ್ಲಿ ಟ್ರೆಂಡ್ ಆಗಿತ್ತು.
ಹೋಳಿ ಹಬ್ಬದ ಸಂದರ್ಭದಲ್ಲಿ ಮೊಟ್ಟೆಗಳನ್ನು ಹೊಡೆಯಬೇಡಿ ಎಂದಿರುವುದು ಅನಗತ್ಯವಾಗಿದೆ. ಇದು ಹಿಂದೂ ವಿರೋಧಿ ನಿಲುವು ಎಂದು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಲಾಗಿತ್ತು. ಸ್ವಿಗ್ಗಿ, ನಿಮ್ಮ ಈ ಜಾಹೀರಾತು ಲಕ್ಷಾಂತರ ಜನರ ಭಾವನೆಗಳಿಗೆ ಧಕ್ಕೆ ತಂದಿದೆ. ಎಲ್ಲಾ ಹಬ್ಬಗಳಿಗೆ ಒಂದೇ ರೀತಿಯ ಗೌರವವನ್ನು ತೋರಿಸಲು ಕಲಿಯಿರಿ ಮತ್ತು ಆಕ್ಷೇಪಾರ್ಹ ಜಾಹೀರಾತುಗಳನ್ನು ಹಾಕಬೇಬೇಡಿ, ಹಿಂದೂಯೇತರ ಹಬ್ಬಗಳಲ್ಲಿ ಇಂತಹದ್ದನ್ನು ಮಾಡುವುದಿಲ್ಲ, ಆದರೆ ನಮ್ಮ ಹಬ್ಬಗಳಲ್ಲೇಕೆ? ಎಂದು ಜನರು ಪ್ರಶ್ನಿಸಿದ್ದರು.
Hey @Swiggy, giving Gyan on Holi & trying to set a wrong perception by installing controversial billboards and posting reel, is not cool in any terms.
Apologize to Hindus & remove them. #HinduPhobicSwiggy pic.twitter.com/Zky64R8RvJ
— Aditya Tiwari (@Adityaatiwariii) March 8, 2023
ತಕ್ಷಣ ತಮ್ಮ ತಪ್ಪನ್ನು ಅರಿತ ಸ್ವಿಗ್ಗಿ, ದೆಹಲಿ-ಎನ್‌ಸಿಆರ್‌ನಲ್ಲಿ ಹಾಕಲಾಗಿದ್ದ ವಿವಾದಿತ ಜಾಹೀರಾತು ಫಲಕಗಳನ್ನು ತೆಗೆದುಹಾಕಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ