Arvind Kejriwal: ಹೋಳಿ ಆಚರಣೆ ಬಿಟ್ಟು ಮನೀಶ್ ಸಿಸೋಡಿಯಾ ಬಂಧನ ವಿರೋಧಿಸಿ ಧ್ಯಾನಕ್ಕೆ ಕುಳಿತ ದೆಹಲಿ ಸಿಎಂ ಕೇಜ್ರಿವಾಲ್

ಮನೀಶ್ ಸಿಸೋಡಿಯಾ(Manish Sisodia) ಬಂಧನವನ್ನು ವಿರೋಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ಧ್ಯಾನಕ್ಕೆ ಕುಳಿತಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಧ್ಯಾನ ಪ್ರಾರಂಭಿಸಿದ್ದು, ಸಂಜೆ 5ರವರೆಗೂ ಧ್ಯಾನ ಮಾಡಲಿದ್ದಾರೆ

Arvind Kejriwal: ಹೋಳಿ ಆಚರಣೆ ಬಿಟ್ಟು ಮನೀಶ್ ಸಿಸೋಡಿಯಾ ಬಂಧನ ವಿರೋಧಿಸಿ ಧ್ಯಾನಕ್ಕೆ ಕುಳಿತ ದೆಹಲಿ ಸಿಎಂ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
Follow us
ನಯನಾ ರಾಜೀವ್
|

Updated on: Mar 08, 2023 | 11:43 AM

ಮನೀಶ್ ಸಿಸೋಡಿಯಾ(Manish Sisodia) ಬಂಧನವನ್ನು ವಿರೋಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ಧ್ಯಾನಕ್ಕೆ ಕುಳಿತಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಧ್ಯಾನ ಪ್ರಾರಂಭಿಸಿದ್ದು, ಸಂಜೆ 5ರವರೆಗೂ ಧ್ಯಾನ ಮಾಡಲಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಏಳು ಗಂಟೆಗಳ ಕಾಲ ನಿರಂತರವಾಗಿ ಪ್ರಾರ್ಥನೆ ಮತ್ತು ಧ್ಯಾನ ಮಾಡಲಿದ್ದಾರೆ. ಈ ವೇಳೆ ಕೇಜ್ರಿವಾಲ್ ದೇಶಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ. ಪಕ್ಷದ ನಾಯಕರಾದ ಸತ್ಯೇಂದ್ರ ಜೈನ್ ಮತ್ತು ಮನೀಶ್ ಸಿಸೋಡಿಯಾ ಅವರ ಬಂಧನವನ್ನು ವಿರೋಧಿಸಿ ಅವರು ಹೋಳಿ ಆಚರಿಸದೇ ಧ್ಯಾನ ಮಾಡಲು ನಿರ್ಧರಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್ ಇಂದು ಬೆಳಗ್ಗೆ ರಾಜ್‌ಘಾಟ್ ತಲುಪಿದ್ದಾರೆ. ರಾಜ್‌ಘಾಟ್‌ನಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಶ್ರದ್ಧಾಂಜಲಿ ಸಲ್ಲಿಸಿದರು. ಮತ್ತೊಂದೆಡೆ, ಆಮ್ ಆದ್ಮಿ ಪಕ್ಷದ ಶಾಲೆ-ಆಸ್ಪತ್ರೆ ಕಟ್ಟಿದವರನ್ನು ಪ್ರಧಾನಿ ಜೈಲಿಗೆ ಕಳುಹಿಸುತ್ತಿದ್ದಾರೆ, ಕೋಟಿ ಕೋಟಿ ಲೂಟಿ ಮಾಡಿದವರನ್ನು ಮೋದಿ ತಬ್ಬಿಕೊಳ್ಳುತ್ತಿದ್ದಾರೆ ಎಂದು ಬರೆದಿದ್ದಾರೆ. ದೇಶದ ಪರಿಸ್ಥಿತಿಯ ಬಗ್ಗೆ ನನಗೆ ಆತಂಕವಿದೆ.

ಮತ್ತಷ್ಟು ಓದಿ: Liquor Policy Case: ಮದ್ಯ ನೀತಿ ಹಗರಣ ವಿಚಾರಣೆ, ಸಿಬಿಐನಿಂದ ಸಮಯ ಕೋರಿದ ಮನೀಶ್ ಸಿಸೋಡಿಯಾ

ಸತ್ಯೇಂದ್ರ ಜೈನ್ ದೆಹಲಿಯಲ್ಲಿ ಉತ್ತಮ ಶಿಕ್ಷಣ ಮತ್ತು ಚಿಕಿತ್ಸೆಗೆ ವ್ಯವಸ್ಥೆ ಮಾಡಿದವರು, ಆದರೆ ಪ್ರಧಾನಿ ದೇಶವನ್ನು ಲೂಟಿ ಮಾಡುವವರನ್ನು ಬೆಂಬಲಿಸಿದ್ದಾರೆ. ಪ್ರಧಾನಿ ತೆಗೆದುಕೊಂಡಿರುವ ನಿರ್ಧಾರ ಸರಿ ಇಲ್ಲ  ಎಂದು ನಿಮಗನಿಸಿದರೆ ನೀವೂ ದೇಶಕ್ಕಾಗಿ ಪ್ರಾರ್ಥಿಸಬೇಕು ಎಂದು ಕೇಜ್ರಿವಾಲ್ ದೇಶವಾಸಿಗಳಲ್ಲಿ ಮನವಿ ಮಾಡಿದರು.

ಭಾರತದ ಜನರ ರಕ್ತ ಮತ್ತು ಬೆವರುಗಳಿಂದ ಗಳಿಸಿದ ಕೋಟ್ಯಂತರ ರೂಪಾಯಿಗಳನ್ನು ಲೂಟಿ ಮಾಡಿದ ವ್ಯಕ್ತಿಯೂ ದೇಶದಲ್ಲಿದ್ದಾರೆ. ಬ್ಯಾಂಕ್ ಮತ್ತು ಎಲ್‌ಐಸಿಯ ಹಣವನ್ನು ಮುಳುಗಿಸಿದ್ದಾರೆ. ಪ್ರಧಾನಿ ಸಿಸೋಡಿಯಾ, ಸತ್ಯೇಂದ್ರ ಜೈನ್ ಅವರಂತಹ ದೇಶಭಕ್ತರ ಮೇಲೆ ಸುಳ್ಳು ಕೇಸುಗಳನ್ನು ಹಾಕಿ ಜೈಲಿಗೆ ತಳ್ಳಿ ದೇಶವನ್ನು ಲೂಟಿ ಮಾಡಿದ ವ್ಯಕ್ತಿಯನ್ನು ಅಪ್ಪಿಕೊಂಡರು. ಇಂತಹ ಪರಿಸ್ಥಿತಿಯಲ್ಲಿ ಜನಸಾಮಾನ್ಯರ ಪರ ಕೆಲಸ ಮಾಡುವ, ಅವರ ಮಾತು ಕೇಳುವವರೇ ಇಲ್ಲದಂತಾಗಿದೆ ಎಂದು ಹೇಳಿದ್ದಾರೆ.

ಜೈನ್ ಹಾಗೂ ಸಿಸೋಡಿಯಾರನ್ನು ಜೈಲಿಗೆ ಕಳುಹಿಸಿರುವ ಬಗ್ಗೆ ನನಗೆ ಆತಂಕವಿಲ್ಲ, ಅವರು ಧೈರ್ಯಶಾಲಿಗಳು ಹಾಗೂ ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಲು ಸಿದ್ಧರಿದ್ದಾರೆ. ಆದರೆ ದೇಶದ ದುರದೃಷ್ಟಕರ ಸ್ಥಿತಿಯು ನನ್ನನ್ನು ಚಿಂತೆಗೀಡು ಮಾಡಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಸತ್ಯೇಂದ್ರ ಜೈನ್ ಅವರನ್ನು ಕಳೆದ ವರ್ಷ ಮೇ ತಿಂಗಳಿನಲ್ಲಿ ಬಂಧಿಸಲಾಗಿತ್ತು ಮತ್ತು ಮನೀಶ್ ಸಿಸೋಡಿಯಾರನ್ನು ಫೆಬ್ರವರಿ 26 ರಂದು ಸಿಬಿಐ ಬಂಧಿಸಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ