ಪತಿಯನ್ನು ಕೊಲ್ಲುವುದಕ್ಕಾಗಿಯೇ ಹನಿಮೂನ್ ಟ್ರಿಪ್ ಪ್ಲ್ಯಾನ್ ಮಾಡಿದ್ದ ಸೋನಮ್

ಮದುವೆಯಾಗಿ ಕೆಲವೇ ದಿನಗಳಲ್ಲಿ ಸೋನಮ್ ತನ್ನ ಸಿಂಧೂರವನ್ನು ತಾನೇ ಅಳಿಸಿಕೊಂಡಿದ್ದಾಳೆ. ಬೇರೆಯೊಬ್ಬನ ಜತೆ ಅಕ್ರಮ ಸಂಬಂಧ ಹೊಂದಿದ್ದ ಸೋನಮ್ ಯಾರಿಗಾಗಿಯೋ ಗಂಡನನ್ನು ಬಲಿ ಪಡೆದಿದ್ದಾಳೆ. ಜೂನ್ 2 ರಂದು ಶಿಲ್ಲಾಂಗ್‌ನಲ್ಲಿರುವ ಅವರ ಹೋಂಸ್ಟೇಯಿಂದ 20 ಕಿಲೋಮೀಟರ್ ದೂರದಲ್ಲಿರುವ ಚಿರಾಪುಂಜಿ ಪ್ರದೇಶದಲ್ಲಿ ರಾಜಾ ಶವ ಪತ್ತೆಯಾಗಿತ್ತು. ಇನ್ನೂ ಕೊಲೆಯ ಬಗ್ಗೆ ಸಂಪುರ್ಣ ಮಾಹಿತಿ ಹೊರಬರಬೇಕಿದೆ.

ಪತಿಯನ್ನು ಕೊಲ್ಲುವುದಕ್ಕಾಗಿಯೇ ಹನಿಮೂನ್ ಟ್ರಿಪ್ ಪ್ಲ್ಯಾನ್ ಮಾಡಿದ್ದ ಸೋನಮ್
ಸೋನಮ್

Updated on: Jun 09, 2025 | 11:01 AM

ಉತ್ತರ ಪ್ರದೇಶ, ಜೂನ್ 09: ಹನಿಮೂನ್(Honeymoon)​​ಗೆಂದು ಮೇಘಾಲಯಕ್ಕೆ ಹೋದ ಇಂದೋರ್​ನ ದಂಪತಿ ಕಾಣೆಯಾಗಿದ್ದರು. ಎರಡು ದಿನಗಳ ಬಳಿಕ ಪತಿ ರಾಜಾ ರಘುವಂಶಿ ಶವ ಪತ್ತೆಯಾಗಿತ್ತು. ಅದು ಕ್ರಿಮಿನಲ್ಸ್​ಗಳಿರುವ ಪ್ರದೇಶ ಹೀಗಾಗಿ ಯಾರೋ ಇಬ್ಬರಿಗೂ ಏನೋ ಮಾಡಿರಬಹುದು ಎಂದು ಊಹಿಸಲಾಗಿತ್ತು. ಆದರೆ ಇದೆಲ್ಲವೂ ಪತ್ನಿ ಸೋನಮ್ ಪ್ಲ್ಯಾನ್ ಎಂಬುದು ಇದೀಗ ತಿಳಿದುಬಂದಿದೆ. ಸೋನಮ್ ತನ್ನ ಪತಿಯನ್ನು ಕೊಲೆ ಮಾಡಲು ಮೂವರನ್ನು ನೇಮಿಸಿಕೊಂಡಿದ್ದಳು ಎನ್ನುವ ಸತ್ಯ ಬಹಿರಂಗಗೊಂಡಿದೆ. ಸೋನಮ್ ಸೇರಿ ಮೂವರನ್ನು ಉತ್ತರ ಪ್ರದೇಶದ ಗಾಜಿಪುರದಲ್ಲಿ ಬಂಧಿಸಲಾಗಿದೆ.

ರಾಜಾ ರಘುವಂಶಿ ಹತ್ಯೆಗೆ ಕಾರಣವೇನು?
ಸೋನಮ್​​ಗೆ ಬೇರೆಯೊಬ್ಬರ ಜತೆ ಅಕ್ರಮ ಸಂಬಂಧವಿತ್ತು. ಹೀಗಾಗಿ ಪತಿಯನ್ನು ಕೊಲೆ ಮಾಡಲು ಬಯಸಿದ್ದಳು. ಈ ಹನಿಮೂನ್ ಟ್ರಿಪ್​​ನ್ನು ರಾಜಾನನ್ನು ಕೊಲ್ಲುವುದಕ್ಕಾಗಿಯೇ ಪ್ಲ್ಯಾನ್​ ಮಾಡಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ. ಸೋನಮ್ ಪೊಲೀಸರಿಗೆ ಶರಣಾಗಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಮೇಘಾಲಯದ ಉಪ ಪೊಲೀಸ್ ಮಹಾನಿರ್ದೇಶಕ ಡೇವಿಸ್ ಮರಕ್ ಇಂಡಿಯಾ ಟುಡೇಗೆ ಸಂದರ್ಶನ ನೀಡಿದ್ದಾರೆ ಅದರಲ್ಲಿ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದು ಒಂದು ನಿರ್ದಯ ಕೊಲೆಯಾಗಿದ್ದು, ರಾಜಾನನ್ನು ಕೊಲ್ಲಲು ಈ ಪ್ರವಾಸವನ್ನು ಯೋಜಿಸಲಾಗಿತ್ತು ಎಂದು ಹೇಳಿದ್ದಾರೆ. ಪ್ರಾಥಮಿಕ ತನಿಖೆಯ ನಂತರ, ವಿವಾಹೇತರ ಸಂಬಂಧವೇ ಪ್ರಾಥಮಿಕ ಉದ್ದೇಶವೆಂದು ತೋರುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ
ಇದು ಕ್ಯಾಬ್ ಓಯೋ ಅಲ್ಲ; ವೈರಲ್‌ ಆಯ್ತು ಕ್ಯಾಬ್‌ನ ವಾರ್ನಿಂಗ್‌ ಬೋರ್ಡ್‌
ಈ ಹಳ್ಳಿಯಲ್ಲಿ ಮದುವೆಯಾಗಿ 7 ದಿನಗಳವರೆಗೆ ಬೆತ್ತಲಾಗಿರಬೇಕಂತೆ ಮಹಿಳೆಯರು
ಮಗಳ ವಯಸ್ಸಿನ ಹುಡುಗಿ ಜತೆ ರಸ್ತೆಯಲ್ಲಿ ವ್ಯಕ್ತಿಯ ರೊಮ್ಯಾನ್ಸ್
ರಸ್ತೆಯಲ್ಲಿ ಹೋಗುತ್ತಿರುವಾಗ ಕುಸಿದು ಪ್ರಾಣಬಿಟ್ಟ ಯುವಕ

ಮತ್ತಷ್ಟು ಓದಿ: ಹನಿಮೂನ್​ಗೆ ಹೋದವ ಹೆಣವಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​, ಕೊಲೆ ಹಿಂದೆ ಪತ್ನಿ ಕೈವಾಡ, ಮೂವರ ಬಂಧನ

ಪೊಲೀಸ್ ಮೂಲಗಳ ಪ್ರಕಾರ, ಬೆಳಗಿನ ಜಾವ 3 ರಿಂದ 4 ಗಂಟೆಯ ನಡುವೆ ಸೋನಂ ಘಾಜಿಪುರದ ನಂದಗಂಜ್‌ನಲ್ಲಿರುವ ರಸ್ತೆ ಬದಿಯ ಹೋಟೆಲ್ ಬಳಿ ತಲುಪಿ, ತನ್ನ ಸಹೋದರನಿಗೆ ಆ ಉಪಾಹಾರ ಗೃಹದ ಮಾಲೀಕರ ಸಂಖ್ಯೆಯಿಂದ ಕಾಲ್ ಮಾಡಿದ್ದಳು.ಆಕೆಯ ಸಹೋದರ ಕೂಡಲೇ ಇಂದೋರ್ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಜತೆಗೆ ಹೋಟೆಲ್ ಮಾಲೀಕರು ಕೂಡ 112ಗೆ ಕರೆ ಮಾಡಿದ್ದರು. ಸ್ಥಳಕ್ಕೆ ಪೊಲೀಸರ ತಂಡ ಧಾವಿಸಿತ್ತು.ಬಳಿಕ ಅವರನ್ನು ಬಂಧಿಸಿತ್ತು.

ಬಂಧನದ ನಂತರ, ಸೋನಮ್ ರಘುವಂಶಿ ಅವರ ಮೊದಲ ಚಿತ್ರ ಹೊರಬಿದ್ದಿದೆ. ಅದರಲ್ಲಿ ಅವರು ಅಸಹಾಯಕರಾಗಿರುವಂತೆ ಕಾಣುತ್ತಿದ್ದಾರೆ. ಸೋನಮ್ ಕಪ್ಪು ಟಿ-ಶರ್ಟ್ ಮತ್ತು ಜೀನ್ಸ್ ಧರಿಸಿದ್ದಾರೆ. ಸೋನಮ್ ಅವರ ಮುಖದಲ್ಲಿ ಅಸಹಾಯಕತೆ ಗೋಚರಿಸುತ್ತಿದೆ. ಸೋನಮ್ ಅವರನ್ನು ಮರಳಿ ಕರೆತರಲು ಕುಟುಂಬವು ಘಾಜಿಪುರಕ್ಕೆ ತೆರಳಿದೆ.

ಮೇ 22 ರಂದು ದಂಪತಿ ಕಾಣೆಯಾಗುವ ಒಂದು ದಿನ ಮೊದಲು ಸಿಸಿಟಿವಿ ದೃಶ್ಯಗಳನ್ನು ವೀಕ್ಷಿಸಲಾಗಿತ್ತು . ಅಲ್ಲಿ ಪತಿ ಮತ್ತು ಪತ್ನಿ ಇಬ್ಬರೂ ಶಿಲ್ಲಾಂಗ್‌ನಲ್ಲಿ ಸಾಮಾನ್ಯವಾಗಿ ಪರಸ್ಪರ ಮಾತನಾಡುತ್ತಿರುವುದನ್ನು ಕಾಣಬಹುದು.ಜೂನ್ 2 ರಂದು ಶಿಲ್ಲಾಂಗ್‌ನಲ್ಲಿರುವ ಅವರ ಹೋಂಸ್ಟೇಯಿಂದ 20 ಕಿಲೋಮೀಟರ್ ದೂರದಲ್ಲಿರುವ ಚಿರಾಪುಂಜಿ ಪ್ರದೇಶದಲ್ಲಿ ರಾಜಾ ಶವ ಪತ್ತೆಯಾಗಿತ್ತು. ಇನ್ನೂ ಕೊಲೆಯ ಬಗ್ಗೆ ಸಂಪುರ್ಣ ಮಾಹಿತಿ ಹೊರಬರಬೇಕಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ