ಹಾಂಗ್‌ಕಾಂಗ್‌ ಮಾದರಿ v/s ಚೀನಾದ ಲಾಕ್‌ಡೌನ್! ಭಾರತಕ್ಕೆ ಯಾವುದು ಮಾದರಿ?

ಬೆಂಗಳೂರು: ಕೊರೊನಾ ಸೋಂಕು ತಡೆಗಟ್ಟಲು ದೇಶಾದ್ಯಂತ ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಇನ್ನೇನು ಮೂರೇ ದಿನದಲ್ಲಿ ಅಂದ್ರೆ ಮೇ 3ಕ್ಕೆ 2ನೇ ಹಂತದ ಲಾಕ್​ಡೌನ್ ಅಂತ್ಯಗೊಳ್ಳುತ್ತೆ. ಆದ್ರೆ ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಕೊರೊನಾ ಕ್ರಿಮಿಯನ್ನು ಕಟ್ಟಿಹಾಕಿ ಚೀನಾ ಮಾದರಿ ಲಾಕ್​ಡೌನ್ ಮಾಡುವುದಾ? ಅಥವಾ ಹಾಂಗ್‌ಕಾಂಗ್‌ ಮಾದರಿ ಅನುಸರಿಸುವುದಾ? ಎಂದು ತಜ್ಞರ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ ಭಾರತಕ್ಕೆ ಯಾವುದು ಮಾದರಿ? ಇಂಗ್ಲೆಂಡ್ ಪತ್ರಿಕೆಯ ಮೂಲಕ ಜಗತ್ತಿಗೆ ಹಾಂಗ್‌ಕಾಂಗ್‌ ಮಾದರಿ ಪರಿಚಯವಾಯಿತು. ಸರ್ಕಾರದ ಆದೇಶಕ್ಕೆ […]

ಹಾಂಗ್‌ಕಾಂಗ್‌ ಮಾದರಿ v/s ಚೀನಾದ ಲಾಕ್‌ಡೌನ್! ಭಾರತಕ್ಕೆ ಯಾವುದು ಮಾದರಿ?
ಸಾಧು ಶ್ರೀನಾಥ್​

Updated on: Apr 30, 2020 | 12:52 PM

ಬೆಂಗಳೂರು: ಕೊರೊನಾ ಸೋಂಕು ತಡೆಗಟ್ಟಲು ದೇಶಾದ್ಯಂತ ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಇನ್ನೇನು ಮೂರೇ ದಿನದಲ್ಲಿ ಅಂದ್ರೆ ಮೇ 3ಕ್ಕೆ 2ನೇ ಹಂತದ ಲಾಕ್​ಡೌನ್ ಅಂತ್ಯಗೊಳ್ಳುತ್ತೆ. ಆದ್ರೆ ದೇಶದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಕೊರೊನಾ ಕ್ರಿಮಿಯನ್ನು ಕಟ್ಟಿಹಾಕಿ ಚೀನಾ ಮಾದರಿ ಲಾಕ್​ಡೌನ್ ಮಾಡುವುದಾ? ಅಥವಾ ಹಾಂಗ್‌ಕಾಂಗ್‌ ಮಾದರಿ ಅನುಸರಿಸುವುದಾ? ಎಂದು ತಜ್ಞರ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ

ಭಾರತಕ್ಕೆ ಯಾವುದು ಮಾದರಿ?
ಇಂಗ್ಲೆಂಡ್ ಪತ್ರಿಕೆಯ ಮೂಲಕ ಜಗತ್ತಿಗೆ ಹಾಂಗ್‌ಕಾಂಗ್‌ ಮಾದರಿ ಪರಿಚಯವಾಯಿತು. ಸರ್ಕಾರದ ಆದೇಶಕ್ಕೆ ಅಲ್ಲಿನ ಸಾರ್ವಜನಿಕರೇ ಶಿಸ್ತುಬದ್ಧವಾಗಿ ಸ್ಪಂದಿಸಿದ್ರು. ಸ್ವಯಂಪ್ರೇರಣೆಯಿಂದ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡಿದ್ರು. ಸಾರ್ವಜನಿಕರ ಬೆಂಬಲವೇ ಮಾದರಿ ಯಶಸ್ವಿಯಾಗಲು ಪ್ರಮುಖ ಕಾರಣ. ಹಾಂಗ್‌ಕಾಂಗ್‌ನ ಶೇ. 99 ಜನ ಮಾಸ್ಕ್ ಧರಿಸಿ ಕೆಲಸ ಮಾಡಿದ್ರು. ಶೇ. 88 ಮಂದಿ ಸಾಮಾಜಿಕ ಅಂತರದ ನಿಯಮ ಪಾಲಿಸಿದ್ರು. ಹೀಗಾಗಿ ಕೊರೊನಾ ನಿಯಂತ್ರಣ ಹಾಂಕ್ ಕಾಂಗ್ ನಲ್ಲಿ ಯಶಸ್ವಿಯಾಯ್ತು.

ಪ್ರಸ್ತುತ ಹಾಂಗ್‌ಕಾಂಗ್‌ ಮಾದರಿ ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಭಾರತ ಮಾತ್ರವಲ್ಲದೆ, ಅಮೇರಿಕಾ, ಯುರೋಪ್‌ ರಾಷ್ಟ್ರಗಳು ಹಾಂಕ್ ಕಾಂಗ್ ಮಾದರಿ ಅನುಸರಿಸಲು ಚಿಂತನೆ ನಡೆಸಿವೆ. ಭಾರತ ಲಾಕ್‌ಡೌನ್‌ ಜಾರಿಗೊಳಿಸುವ ಮೂಲಕ ಚೀನಾದ ನಡೆ ಅನುಸರಿಸಿತ್ತು. ಹಾಂಗ್‌ಕಾಂಗ್‌ ಮಾತ್ರ ಲಾಕ್‌ಡೌನ್‌ ಜಾರಿ ಮಾಡಲಿಲ್ಲ. ಆದರೂ ಪರಿಣಾಮಕಾರಿಯಾಗಿ ಕೊರೊನಾ ಕಟ್ಟಿಹಾಕಲಾಯಿತು. ಹಾಂಗ್ ಕಾಂಗ್ ನಲ್ಲಿ 1038 ಸೋಂಕಿತರಿದ್ದು, 4 ಸಾವನ್ನಪ್ಪಿದ್ದಾರೆ. ಆದರೆ ಭಾರತದಲ್ಲಿ ಲಾಕ್‌ಡೌನ್‌ ಜಾರಿ ಮಾಡಿದ್ರೂ ಸೊಂಕಿತರ ಸಂಖ್ಯೆ 30 ಸಾವಿರ ದಾಟಿದೆ. ಸಾವಿನ ಸಂಖ್ಯೆ ಸಾವಿರ ದಾಟಿದೆ ಎಂಬುದು ಗಮನಾರ್ಹ.

Published On - 12:06 pm, Thu, 30 April 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us