ಶಂಕಿತ ವ್ಯಕ್ತಿಗಳ ಮೇಲೆ ನಿಗಾ ಇರಿಸಿ ಯೋಜನೆ ರೂಪಿಸಿದರು; ಜಮ್ಮು ಕಾಶ್ಮೀರದಲ್ಲಿ ಲಷ್ಕರ್ ಉಗ್ರರನ್ನು ಸೆರೆ ಹಿಡಿಯಲು ಗ್ರಾಮಸ್ಥರು ಮಾಡಿದ ಪ್ಲಾನ್ ಹೀಗಿತ್ತು

| Updated By: ರಶ್ಮಿ ಕಲ್ಲಕಟ್ಟ

Updated on: Jul 05, 2022 | 2:14 PM

ಮುಂಜಾನೆ 5 ಗಂಟೆ ವೇಳೆ ನಾವು ಕಿಟಕಿ ಮೂಲಕ ಧೋಕ್ ಒಳಗೆ ಪ್ರವೇಶಿಸಿದೆವು. ಆಗ ಉಗ್ರರು ನಿದ್ರಿಸುತ್ತಿದ್ದರು. ನಮ್ಮಲ್ಲಿಬ್ಬರು ಉಗ್ರರ ಬಳಿ ಇದ್ದ ಬ್ಯಾಗ್ ಗಳನ್ನು ತೆಗೆದುಕೊಂಡರು. ಇನ್ನುಳಿದವರು ಅವರನ್ನು ಸುತ್ತುವರಿದರು. ಫೈಜಲ್ ಧಾರ್ ಉಗ್ರರಲ್ಲಿ ಹೊಸಬ, ಹಾಗಾಗಿ ಅವನನ್ನು ಸೆರೆ ಹಿಡಿಯುವುದು ಸುಲಭವಾಗಿತ್ತು

ಶಂಕಿತ ವ್ಯಕ್ತಿಗಳ ಮೇಲೆ ನಿಗಾ ಇರಿಸಿ ಯೋಜನೆ ರೂಪಿಸಿದರು; ಜಮ್ಮು ಕಾಶ್ಮೀರದಲ್ಲಿ ಲಷ್ಕರ್ ಉಗ್ರರನ್ನು ಸೆರೆ ಹಿಡಿಯಲು ಗ್ರಾಮಸ್ಥರು ಮಾಡಿದ ಪ್ಲಾನ್ ಹೀಗಿತ್ತು
ಲಷ್ಕರೆ ಉಗ್ರರು
Follow us on

ಜಮ್ಮು ಮತ್ತು ಕಾಶ್ಮೀರದ (Jammu and Kashmir) ರಾಯ್ಸಿ ಜಿಲ್ಲೆಯ ಮಹೋರ್ ಪ್ರದೇಶದ ತುಕ್ಸನ್ ಗ್ರಾಮದಲ್ಲಿ ಭಾರೀ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಇಬ್ಬರು ಉಗ್ರರನ್ನು (LeT militants) ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ. ಗ್ರಾಮಸ್ಥರ ಈ ಕಾರ್ಯಾಚರಣೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ (Lt Governor Manoj Sinha) ಅವರು ₹5 ಲಕ್ಷ ಬಹುಮಾನ ಘೋಷಿಸಿದ್ದಾರೆ.ತುಕ್ಸನ್ ಗ್ರಾಮದಲ್ಲಿ ಸುಮಾರು 300-350 ಮನೆಗಳಿವೆ. ಹೆಚ್ಚಿನವರು ಕಾಶ್ಮೀರಿ ಮುಸ್ಲಿಮರು. ಸುಮಾರು 50 ವರ್ಷಗಳ ಹಿಂದೆ ಅವರು ಕಾಶ್ಮೀರಿ ಕಣಿವೆ ಬಂದು ನೆಲೆಸಿದವರಾಗಿದ್ದಾರೆ. ಪೊಲೀಸರ ಪ್ರಕಾರ ಇಬ್ಬರು ಉಗ್ರರಾದ ತಾಲಿಬ್ ಹುಸೇನ್ ಶಾ ಮತ್ತು ಫೈಜಲ್ ಅಹ್ಮದ್ ಧಾರ್ ನ್ನು ಧೋಕ್ಸ್ ನಿಂದ( ಎತ್ತರದ ಪ್ರದೇಶದಲ್ಲಿರುವ ಪುಟ್ಟ ಮನೆ) ಗ್ರಾಮದ ಜನರು ಸೆರೆ ಹಿಡಿದಿದ್ದಾರೆ.

ಉಗ್ರರನ್ನು ಸೆರೆ ಹಿಡಿದದ್ದು ಹೇಗೆ?

ಈ ಬಗ್ಗೆ ದಿ ಇಂಡಿಯನ್ ಎಕ್ಸ್ ಪ್ರೆಸ್ ಗೆ ಫೋನ್ ಮೂಲಕ ವಿವರಿಸಿದ ಬಿಎ ವಿದ್ಯಾರ್ಥಿ ಆಗಿರುವ ಅಲ್ಲಿನ ಗ್ರಾಮದ ಯುವಕ, ಶನಿವಾರ ಸಂಜೆ 7.45ಕ್ಕೆ ವ್ಯಾಪಾರಿಗಳ ಸೋಗಿನಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಅಲ್ಲಿನ ಧೋಕ್ ಒಂದಕ್ಕೆ ಬಂದಿದ್ದರು. ಆ ಧೋಕ್​​​ನಲ್ಲಿ  50ರ ಹರೆಯದ ವ್ಯಕ್ತಿಯೊಬ್ಬರು ಪತ್ನಿ, 9ನೇ ತರಗತಿಯಲ್ಲಿ ಕಲಿಯುವ ಮಗಳಿದ್ದಾಳೆ. ಆ ವ್ಯಕ್ತಿಗಳು ಫೋನ್ ಸ್ವಿಚ್ ಆಫ್ ಮಾಡಿ ಎಂದಾಗ ಸಂದೇಹ ಮೂಡಿತ್ತು ಎಂದು ವಿದ್ಯಾರ್ಥಿ ಹೇಳಿದ್ದಾರೆ. ರಾತ್ರಿ ಸುಮಾರು 10-10.15ರ ವೇಳೆಗೆ ಧೋಕ್​​​ನಲ್ಲಿದ್ದ ವ್ಯಕ್ತಿ ಹೊರಗೆ ಮೂತ್ರ ವಿಸರ್ಜನೆ ಮಾಡಲು ಬಂದಾಗ ಆತನ ಸಹೋದರ, ತುಕ್ಸನ್​​ನಲ್ಲಿರುವ ಟ್ರಕ್ ಚಾಲಕನಿಗೆ ಕರೆ ಮಾಡಿದ್ದಾರೆ. ಇಬ್ಬರು ಅಪರಿಚಿತ ವ್ಯಕ್ತಿಗಳು ಮನೆಗೆ ನುಗ್ಗಿದ್ದಾರೆ. ಜೀವಕ್ಕೆ ಅಪಾಯವಿದೆ ಎಂದು ಅವರು ಸಂದೇಶ ರವಾನೆ ಮಾಡಿದ್ದರು
ಟ್ರಕ್ ಚಾಲಕನಾದ ಅವರ ಸಹೋದರ ಶಾಲಾ ಶಿಕ್ಷಕರು, 12ನೇ ತರಗತಿಯ ಇಬ್ಬರು ವಿದ್ಯಾರ್ಥಿಗಳು ಮತ್ತು ಇನ್ನೊಂದು ಚಾಲಕನಿಗೆ ಈ ಸಂಗತಿ ತಿಳಿಸಿದ್ದಾರೆ. ತಕ್ಷಣವೇ ಏಳು ಮಂದಿಯ ತಂಡ ರಾತ್ರಿ 11.30ಕ್ಕೆ ಧೋಕ್ ಸುತ್ತುವರಿದಿದ್ದಾರೆ ಎಂದು ಮತ್ತೊಬ್ಬ ನಿವಾಸಿ ಹೇಳಿದ್ದಾರೆ.

ಇದನ್ನೂ ಓದಿ
ಬಂಧಿತ ಎಲ್​ಇಟಿ ಉಗ್ರರ ಪೈಕಿ ಓರ್ವ ಮಾಜಿ ಬಿಜೆಪಿ ವ್ಯಕ್ತಿ, ಜಮ್ಮು ಕಾಶ್ಮೀರದ ರಾಜಕೀಯ ವಲಯಗಳಲ್ಲಿ ಗದ್ದಲ
ಜಮ್ಮು ಮತ್ತು ಕಾಶ್ಮೀರದಲ್ಲಿಇಬ್ಬರು ಲಷ್ಕರ್ ಉಗ್ರರನ್ನು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ ಗ್ರಾಮಸ್ಥರು
ಮಂಗಳೂರಿನಲ್ಲಿ ಕೋಮುಗಲಭೆ ಸೃಷ್ಠಿಸಲು ಯತ್ನಿಸಿದ ಹದಿಮೂರರ ಬಾಲಕ? ಪೊಲೀಸ್ ತನಿಖೆಯಿಂದ ಬಯಲಾಯಿತು ಬಾಲಕನ ಅಸಲಿಯತ್ತು

ಮುಂಜಾನೆ 5 ಗಂಟೆ ವೇಳೆ ನಾವು ಕಿಟಕಿ ಮೂಲಕ ಧೋಕ್ ಒಳಗೆ ಪ್ರವೇಶಿಸಿದೆವು. ಆಗ ಉಗ್ರರು ನಿದ್ರಿಸುತ್ತಿದ್ದರು. ನಮ್ಮಲ್ಲಿಬ್ಬರು ಉಗ್ರರ ಬಳಿ ಇದ್ದ ಬ್ಯಾಗ್ ಗಳನ್ನು ತೆಗೆದುಕೊಂಡರು. ಇನ್ನುಳಿದವರು ಅವರನ್ನು ಸುತ್ತುವರಿದರು. ಫೈಜಲ್ ಧಾರ್ ಉಗ್ರರಲ್ಲಿ ಹೊಸಬ, ಹಾಗಾಗಿ ಅವನನ್ನು ಸೆರೆ ಹಿಡಿಯುವುದು ಸುಲಭವಾಗಿತ್ತು. ಆದರೆ ತಾಲಿಬ್ ತಪ್ಪಿಸಿಕೊಳ್ಳಲು ನೋಡಿದಾಗ ನಾವು ಆತನ ಕೈಗಳನ್ನು ಹಗ್ಗದಿಂದ ಕಟ್ಟಿ ಹಾಕಿದೆವು. ಆಮೇಲೆ ಸ್ಥಳೀಯ ಪೊಲೀಸರಿಗೆ ಮಾಹಿತಿ ತಿಳಿಸಿದ್ದು ಅವರು ಬಂದು ಉಗ್ರರನ್ನು ವಶಕ್ಕೆ ತೆಗೆದುಕೊಂಡರು.

ಪೊಲೀಸರ ಪ್ರಕಾರ ತಾಲಿಬ್ ಶಾ ಎರಡ್ಮೂರು ವರ್ಷಗಳ ಹಿಂದೆ ಪಿರ್ ಪಂಜಾಲ್ ಪ್ರದೇಶದಲ್ಲಿ ನಡೆದ ಉಗ್ರ ಕೃತ್ಯಗಳು, ರಜೌರಿಯ ಕೊಟ್ರಂಕರ್ ಪ್ರದೇಶದಲ್ಲಿ ನಡೆದ ಸ್ಫೋಟದ ಮಾಸ್ಟರ್ ಮೈಂಡ್ ಆಗಿದ್ದ. ಉಗ್ರರು ದಾರಿ ತಪ್ಪಿ ತಕ್ಸನ್ ಗೆ ಬಂದಿದ್ದಾರೆ ಎಂದು ಇನ್ನೊಬ್ಬ ನಿವಾಸಿ ಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.